ಪಾಕ ಕೆಡಿಸ್ತಾರೋ

ದೀಪದ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು .. ಬದುಕಲ್ಲಿ ಕತ್ತಲೆಗೆ ಜಾಗ ಇಲ್ಲದಷ್ಟು ಗೆಲ್ಲುವ ಹುಮ್ಮಸಿನ ಬೆಳಕು ಸದಾ ಪ್ರಕಾಶಮಾನವಾಗಿರಲಿ...ನಿಮ್ಮ ಬಾಳಲ್ಲಿ ಕತ್ತಲು ಕರಗಿ ಬೆಳಕಿನ ಪ್ರಭಾವ ಸದಾ ಇರಲಿ ಎನ್ನುವ ಶುಭ ಹಾರೈಕೆ..



ಹಿಂದಿ   ಜನ ದೀಪಾವಳಿಯನ್ನು ದಿವಾಳಿ ಮಾಡಿ ಒದ್ದಾಡುತ್ತಾರೆ..ನಾವು ದೀಪಾವಳಿ ಅಂತ ಹೇಳ್ತಿವಿ. ನನ್ನ ಎಫ್ಬಿ ಮಿತ್ರ ರೋಹಿತ್ ರಾಮಚಂದ್ರಯ್ಯ ದೀಪಾವಳಿ ಬದಲಾಗಿ  ದಿವಾಳಿ(ಲಿ) ಅಂತ ಬರೆದರೆ ನಾನು ಅನ್ ಫ್ರೆಂಡ್ ಮಾಡ್ತೀನಿ ಅಂತ ಕೋಪ ತೋರಿದ್ದಾರೆ. ಆದರು ನನಗೆ ದಿವಾಳಿ(ಲಿ) ಅನ್ನೋದು ನನಗೆ ಗೂಗಲ್ ನಲ್ಲಿ ಸಿಕ್ಕ ಕಾರಣ ಅದನ್ನೇ ಹಾಕಿದ್ದೇನೆ...ದಿವಾಳಿ ಅನ್ನೋ ಪದ ನಿಮ್ಮ ಬದುಕಲ್ಲಿ ಪ್ರಭಾವ ಬೀರದಿರಲಿ ಎನ್ನುವ ಹಾರೈಕೆ ನನ್ನದು :-)

ಇವತ್ತು ದೀಪಾವಳಿ  ಹಬ್ಬಕ್ಕಿಂತ ಚಿನ್ನದ ಚೀಟಿ ಗೀಟಿ ಇತ್ಯಾದಿ ಬಗ್ಗೆ ಒಂದು ಕಾರ್ಯಕ್ರಮ ಇತ್ತು ಟೀವಿ ನೈನ್ ವಾಹಿನಿಯಲ್ಲಿ. ಹರಿಪ್ರಸಾದ್ ಅವರು ಈ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಚಿನ್ನದ ಬಗ್ಗೆ ಭಾರತೀಯರಿಗೆ ಮೋಹ. ಅದನ್ನೇ ಮುಂದಿಟ್ಟುಕೊಂಡು ದುಡ್ಡು ಮಾಡುವ ಮಂದಿ ಬಹಳಷ್ಟು ಮಂದಿ! ನಾನು ಅನೇಕ ಬಾರಿ ಚಿನ್ನ ಖರೀದಿ ಮಾಡಿದ್ದೇನೆ . ಆದರೇ,  ಒಂದು ಅಂಗಡಿಯಲ್ಲಿ ಕೊಂಡಾಗ ಕೊಟ್ಟ ಭರವಸೆ ಅದನ್ನು ಬದಲಾಯಿಸುವಾಗ  ಬೇರೆ ಆಗಿರುತ್ತದೆ. ಅದರಲ್ಲೂ ಈ ಚಿನ್ನದ ಒಡವೆ ಆರ್ಡರ್ ಮಾಡಿದಾಗ ಇರುವ ಪರಿಸ್ಥಿತಿ , ಅದು ನಮ್ಮ ಕೈಗೆ ಬಂದಾಗ  ??  ಬಿಡಿ ..ಇಂತಹ ವರ್ತನೆ ಸಾಕಷ್ಟು ಬಾರಿ ಆಶ್ಚರ್ಯ ಉಂಟು ಮಾಡಿದೆ ನನಗೆ..  ಚಿನ್ನದ ಮೋಸಕ್ಕೆ ಕಡಿವಾಣ ಇಲ್ಲ. ಅದೇ ಬೇಸರದ ಸಂಗತಿ !


ಅಜೀಬ್ ದಾಸ್ತಾನ್ ಹೈ ಏ ಅನ್ನುವ ಧಾರವಾಹಿ ಲೈಫ್ ಓಕೆ ವಾಹಿನಿಯಲ್ಲಿ  ಪ್ರಸಾರ ಆಗ್ತಾ ಇದೆ.  ಸುಂದರಿ ಸೊನಾಲಿ ಬೇಂದ್ರೆ  ಈ ಧಾರವಾಹಿ ಮುಖ್ಯ ಪಾತ್ರಧಾರಿ. ಬಿಗ್ ಬಾಸ್ 7ರ  ಸ್ಪರ್ಧಿಯಾಗಿದ್ದ ಅಪೂರ್ವ ಅಗ್ನಿಹೋತ್ರಿ  ಸಹ ಮುಖ್ಯ ಪಾತ್ರಧಾರಿ. ಕಥೆ ಸಕತ್ ಆಸಕ್ತಿಕರವಾಗಿದೆ. ವಿಷಯ ಸಾಮಾನ್ಯ ಅಂತ ಅನ್ನಿಸಿದರು ಸೊನಾಲಿ ಮತ್ತು ಅಪೂರ್ವ ಇಬ್ಬರು ತುಂಬಾ ಚಂದ ಅಭಿನಯಿಸಿದ್ದಾರೆ. ಸಧ್ಯಕ್ಕೆ ಅದಾಗ ತಪ್ಪದೆ ನೋಡ್ತಾ ಇರೋ ಧಾರವಾಹಿ ಇದು. ಈ ಧಾರವಾಹಿ ಆರಂಭ ಆಗುವ ಮುನ್ನ ಸೊನಾಲಿ ತನ್ನ ಪತಿ ಈ ಧಾರಾವಾಹಿಯಲ್ಲಿ ಅಭಿನಯಿಸುವಾಗ ತುಂಬಾ ಕೊ ಆಪರೇಟ್ ಮಾಡ್ತಾರೆ ಎಂದು ಹೇಳಿದ್ದರು. ಅದೇ ರೀತಿ ಸೊನಾಲಿ ಬಗ್ಗೆ ಅಪೂರ್ವ ಸಹ ಒಳ್ಳೆ ಮಾತಾಡಿದ್ದರು.ಸಾಕಷ್ಟು ಕುತೂಹಲ ಇತ್ತು ನನಗೆ ಈ ಧಾರವಾಹಿ ಬಗ್ಗೆ.. ಚಂದ ಇದೆ..ಯಾವಾಗ ನಿರ್ದೇಶಕರು ಪಾಕ ಕೆಡಿಸ್ತಾರೋ ಆಗ ನೋಡೋದು ಬಿಟ್ರಾಯ್ತು :-)



ತಪ್ಪದೆ ವೀಕ್ಷಿಸುವ ಕಾರ್ಯಕ್ರಮ ಜೀ ವಾಹಿನಿಯಲ್ಲಿ  ಪ್ರಸಾರ ಆಗುವ  ವೀಕೆಂಡ್ ವಿತ್ ರಮೇಶ್. ನಿಜಕ್ಕೂ ಅತ್ಯಂತ ಸುಂದರ ಕಾರ್ಯಕ್ರಮ. ಉಮಾಶ್ರೀ ಮತ್ತು  ಮುಖ್ಯ ಮಂತ್ರಿ ಚಂದ್ರು ಅವರ ಜೊತೆಗಿನ ಮಾತುಕತೆ ಇಷ್ಟ ಆಯ್ತು. ಚಂದ್ರು ಅವರ ಪತ್ನಿಯ ನೇರ ನುಡಿ .. ಮನದ ಭಾವ ಸಹ ಇಷ್ಟ ಆಯ್ತು.ಒಮ್ಮೆ ಹೀಗೆ ಕಾರ್ಯಕ್ರಮ ಒಂದರಲ್ಲಿ ಚಂದ್ರು ಪತ್ನಿ ಅವರನ್ನು ಭೇಟಿ ಆಗಿದ್ದೆ.. ಅವರ ಜೊತೆ ನಾನು ಜಯನಗರದ ತನಕ ಬಂದಿದ್ದೆ ಅವರ ಕಾರ್ ನಲ್ಲಿ.. ಆಗ ಎಷ್ಟು ಮಾತಾಡಿದ್ವಿ   ಗೊತ್ತೇ. ! ಜಾಣೆ.. ಸಾಮಾನ್ಯವಾಗಿ ಟಿ ಎನ್ ಸೀತಾರಾಮ್ ಅವರ ಧಾರಾವಾಹಿಯಲ್ಲಿ ಮುಖ್ಯಮಂತ್ರಿ ಪಾತ್ರಧಾರಿ ಆಗಿದ್ದರು ಈಕೆ :-) ಒಂದೇ ಮನೆಯಲ್ಲಿ ಗಂಡ-ಹೆಂಡ್ತಿ ಇಬ್ರೂ ಮುಖ್ಯಮಂತ್ರಿಗಳು.

1 comment:

Badarinath Palavalli said...

ತಮಗೂ ತಮ್ಮ ಬ್ಲಾಗಿಗೂ ದೀಪಾವಳಿ ಶುಭಾಷಯಗಳು.
ಏನ್ಮಾಡೋದು ಪಟಾಕಿ ಬೆಲೆ ಗಗನಕ್ಕೇರಿ ನಮ್ಮ ಹಬ್ಬ ದಿವಾಳಿ! ನೇ?

§ಚಿನ್ನದ ಮೋಸಕ್ಕೆ ಕಡಿವಾಣ ಇಲ್ಲ§ ಈ ವಿಚಾರದ್ಲಿ ನಾವು ಅಮಾಯಕರೇ!

ಅಜೀಬ್ ದಾಸ್ತಾನ್ ಹೈ ಏ ನಾನು ನೋಡಿ ಮತ್ತೆ ಕಮೆಂಟಿಸುತ್ತೇನೆ.

ಮು.ಮ. ಚಂದ್ರು ಅವರ ಪತ್ನಿ ಉತ್ತಮ ಅಡುಗೆ ಮಾಡುತ್ತಾರೆ.
ರಮೇಶ್ ಅವರು ಉತ್ತಮ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ.