ಛೆ!! ನೋವಾಗಲ್ವ

Image result for red flowers
ದಕ್ಷ ಅಧಿಕಾರಿ ರವಿ ಅವರ ಸಾವು ಬುದ್ಧಿಯನ್ನು ತಣ್ಣಗೆ ಮಾಡಿ ಬಿಟ್ಟಿದೆ...!

ಅಂದು ಟೀವಿ ನೈನ್ ವಾಹಿನಿಯಲ್ಲಿ ಒಂದು ಧ್ವನಿ ಕೇಳಿ  ಬರುತ್ತಿತ್ತು, ಆಸಕ್ತಿಯಿಂದ ಆಲಿಸಿದೆ  ಚಂದ ಅಂತ ಅನ್ನಿಸಿತು. ಯಾಕೆ ಈ ಮಾತು ಹೇಳ್ತಾ ಇದ್ದೀನಿ ಅಂದ್ರೆ ಸಾಮಾನ್ಯವಾಗಿ ಟೀವಿ ನೈನ್ ಮಾತ್ರವಲ್ಲ ಯಾವುದೇ ಕನ್ನಡ ಸುದ್ದಿ ವಾಹಿನಿ ಆಗಿರಲಿ ಅದರಲ್ಲಿ  ವಾಯ್ಸ್ ಓವರ್ ಎಷ್ಟು ಖರಾಬ್ ಆಗಿರುತ್ತೆ ಅಂದ್ರೆ ಅದರಲ್ಲೂ ಹೆಣ್ಣುಮಕ್ಕಳು ಚ್ಯೂಯಿಂಗ್ ಗಂ ಅಗಿಯುತ್ತಾ  ಮಾತಾಡ್ತಾ ಇರ್ತಾರೆ ಎಂದು ಅನ್ನಿಸುತ್ತೆ. ಸಾಮಾನ್ಯವಾಗಿ ಪದಗಳನ್ನು ನುಂಗಿ ಅಥವಾ, ಎಲ್ಲೋ ಪಾಸ್, ಎಲ್ಲೋ ಫುಲ್ ಸ್ಟಾಪ್ , ಛೆ ನ್ಯೂಸ್ ನೋಡೋಕೆ ಭಯ ಆಗಿರುತ್ತೆ ಅಂತಹುದರಲ್ಲಿ ಆ ಧ್ವನಿಗಳು ಕೇಳೋಕೂ ಹೆದರಿಕೆ ಉಂಟು ಮಾಡಿ ಬಿಡುತ್ತದೆ. ಆದರೆ ಅಂದು ಆ ಧ್ವನಿ ಇಷ್ಟ ಆಯ್ತು, ಕಾದೆ ಯಾರು ಸುದ್ದಿ ಓದ್ತಾ ಇರೋದು ಅಂತ. ಅದು ಸುಕನ್ಯ. ಚಂದದ ಹೆಣ್ಣುಮಗಳು ಆಕೆ. ಅದೇರೀತಿ ಚಂದದ ಧ್ವನಿ . ಮನಸ್ಸು, ಕಣ್ಣು, ತಲೆ, ಬುದ್ಧಿ ತಂಪಾಗುತ್ತೆ ಇಂತಹವರ ಧ್ವನಿ ಆಲಿಸಿದಾಗ. ಅದೇರೀತಿ ಆ ವಾಹಿನಿಯಲ್ಲಿ ಉಷಾ ಸಹ ಇಷ್ಟ ಆಗ್ತಾರೆ.

Image result for purple flowers

ಜೀ ಹಿಂದಿ  ವಾಹಿನಿಯಲ್ಲಿ  ಸರೆಗಮಪ ಲಿಲ್ ಚಾಂಪ್ಸ್  ಕಾರ್ಯಕ್ರಮ ಅಂತಿಮ ಸುತ್ತು. ಹಿಂದಿ ವಾಹಿನಿಯ ಪ್ರಖ್ಯಾತಿ  ಹಾಗೆನ್ನುವುದಕ್ಕಿಂತ ಇದು ಅತ್ಯಂತ ಪ್ರತಿಷ್ಠಾತ್ಮಕ   ಕಾರ್ಯಕ್ರಮ ಆಗಿದೆ ಎಂದೇ ಹೇಳ ಬಹುದಾಗಿದೆ.  ಮುಖ್ಯವಾಗಿ ಅತ್ಯಂತ ಖುಷಿ ಕೊಡುವ ಕಾರ್ಯಕ್ರಮ.ಶನಿವಾರ ಮತ್ತು  ಭಾನುವಾರದ ಖುಷಿಯನ್ನು ಹೆಚ್ಚು ಮಾಡುವ ಕಾರ್ಯಕ್ರಮ. ಅದರ ನಿರೂಪಕ ಆದಿತ್ಯ ನಾರಾಯಣ್ . ಎಷ್ಟು ಬೆಳೆದು ಬಿಟ್ಟಿದೆ ಈ ಮಗು.. !! ತು ಮೇರ ದಿಲ್ ತು ಮೇರಿ ಜಾನ್  ಓ ಐ ಲವ್ ಯೂ ಪಾಪ ಹುಡುಗ . ಚಂದದ ನಿರೂಪಣೆ. ಅದರಂತೆ ಶಾನ್  ಹಾಗೂ   ಮನೋಲಿ ಮತ್ತು ಮಹಾಗುರು ಅಲಕಾ  ಅವರ ಬಗ್ಗೆ ಹೇಳುವಷ್ಟಿಲ್ಲ . ಬೇಜಾರಿನ ಸಂಗತಿ ಅಂದ್ರೆ ಅದು ಆಗಲೇ ಈ ಸೀಸನ್ ಮುಗಿಸಿ ಬಿಡ್ತಾ ಇರೋದು. ಗಗನ್ ಗಾವ್ಕರ್  ವಾರೆವ್ವ ನಮ್ಮ ಗುಲ್ಬರ್ಗದ ಮೂಲದ ಹುಡುಗ.. ಆತನಿಗೆ ಛಾಯ್ ವಾಲ   ವಿಶ್ ಮಾಡಿದ್ದು ಅದರಲ್ಲೂ ಕನ್ನಡದಲ್ಲಿ ಹಾರೈಸಿದ್ದು  ಹೆಚ್ಚು ಖುಷಿ ಕೊಡ್ತು. ಈ ವಾರ ಅಂತಿಮ ಸುತ್ತು. ಗಗನ್ ಮಾತ್ರವಲ್ಲ ಆದಿತ್ಯ :-) ಸೇರಿದಂತೆ ಕೇಶವ್, ಐಶು ಎಲ್ಲರು ತುಂಬಾ ಚೆನ್ನಾಗಿ ಹಾಡಿ ಖುಷಿ ಕೊಟ್ಟಿದ್ದಾರೆ.  
ಆದರೆ ಒಂದು ಖುಷಿಯ ಸಂಗತಿ ಅಂದ್ರೆ  ಇದೆ ವಾಹಿನಿಯಲ್ಲಿ ಗೀತ, ಟೆರೆನ್ಸ್ ಮತ್ತು ಗೋವಿಂದ ಡ್ಯಾನ್ಸ್ ಅಮ್ಮಂದಿರ ಕಾರ್ಯಕ್ರಮ ಆರಂಭ ಆಗೋ ಖುಷಿ ಇದೆ. ಗೋವಿಂದ ನನ್ನ ಮೆಚ್ಚಿನ ನಟರಲ್ಲಿ ಒಬ್ಬರು. ಅವರ ಡ್ಯಾನ್ಸಿಂಗ್ ಸ್ಟೈಲ್ಸ್ ವಾವ್ ಸೋನಿ  ವಾಹಿನಿಯಲ್ಲಿ  ಬೂಗಿ ವೂಗಿ ಕಾರ್ಯಕ್ರಮದಲ್ಲಿ ಅವರು ಸ್ಪರ್ಧಿ ಒಬ್ಬನ (ಳ) ಜೊತೆ ಕನ್ನಡದಲ್ಲಿ ಮಾತಾಡಿದ್ದರು... !!
@ಕಲರ್ ವಾಹಿನಿಯ ಅತ್ಯಂತ ಸುಂದರ ಹಾಗೂ ಸದಾ ಖುಷಿ ಕೊಡುವ ಕಾರ್ಯಕ್ರಮ ಕಾಮಿಡಿ ವಿತ್ ಕಪಿಲ್. ಅದರಲ್ಲೂ ಗುತ್ತಿ ವಿವಿಧ ರೂಪಗಳು, ಪಲಕ್ ಭಿನ್ನ ರೂಪ ಮತ್ತು ದಾದಿಯದ್ದು ಆಲ್ ಟೈಮ್ ಫೇವರೆಟ್. ಮಸ್ತ್ ಖುಷಿ ನೀಡುವ ಆ ಕಲಾವಿದರು ಅದೆಷ್ಟು ಪ್ರತಿಭಾವಂತರು ಎನ್ನುವುದನ್ನು ಬಿಡಿಸಿ ಹೇಳ ಬೇಕಿಲ್ಲ. ಕಪಿಲ್ ಶರ್ಮ , ಸಿದ್ದುಜೀ ಅವರನ್ನು ನೋಡಲು ಸಹ ಕಾಯುವಂತಾಗುತ್ತೆ :-)


Image result for blue and black flowers

ತುಂಬಾ ಇಷ್ಟ ಪಟ್ಟು ವೀಕ್ಷಿಸುವ ಹಾಗೂ ಅತಿಯಾದ ಆಪ್ತವಾದ ಕಾರ್ಯಕ್ರಮ ಮಾಸ್ಟರ್ ಶಫ್. ಸಾಮಾನ್ಯವಾಗಿ ಅಡುಗೆ ಬಗ್ಗೆ ಇರುವ ಕಾರ್ಯಕ್ರಮ ಅಂದ್ರೆ ನಗು ಬರೋದು  ಬಹಳಷ್ಟು ಮಂದಿಗೆ. ಆದರೆ ತಮಾಷೆ ಅಂದ್ರೆ ನಕ್ಕವರಿಗೆ ಮಾತ್ರ ಮನೆ , ಹೋಟೆಲ್ ಎಲ್ಲೇ ಆಗಲಿ ಒಳ್ಳೆ ಊಟ ಬೇಕು. ಬಿಡಿ.. 

ಸ್ಟಾರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಕಾರ್ಯಕ್ರಮ  ಮಾಸ್ಟರ್ ಶಫ್.  ಮಾಸ್ಟರ್  ಗಳಾದ ಸಂಜೀವ್ ಜೀ, ವಿಕಾಸ್, ರಣವೀರ್ ಅವರುಗಳನ್ನು ಕಂಡಾಗ  ಸ್ಮಾರ್ಟ್ ಫೆಲ್ಲಾಸ್ !! ಅಂತ ಅನ್ನಿಸುತ್ತೆ. ಸಂಜೀವ್ ಕಪೂರ್ , ವಿಕಾಸ್ ಮತ್ತು ರಣವೀರ್ ಅವರು ಫುಡ್ ಫುಡ್ , ಖಾನ ಖಜಾನ ಅಲ್ಲದೆ ಫೇಸ್ಬುಕ್ ಲೋಕದಲ್ಲೂ ಓಡಾಡುತ್ತಿರುತ್ತಾರೆ. ಸ್ಟೈಲಿಶ್ ರಣವೀರ್ ಮೆಂತ್ಯ ಸೊಪ್ಪು  ಮೇಲೆ ಎಸೆದು ತೆಗೆಸಿಕೊಂಡ ಫೋಟೋ ಅವರ ಕವರ್ ಪೇಜ್ ಆಗಿದೆ. ಅದೆಷ್ಟು ಹುಡುಗೀರು ಅದನ್ನು ಕೊಳ್ಳಲು ಒದ್ದಾಡಿದ್ದಾರೆ ಗೊತ್ತೇ ;-) ಕ್ಯಾ ಮೇಥಿ ಹೈ :-). 

ನಾನು ಕನ್ನಡ ಪೋರ್ಟಲ್ ಒಂದರಲ್ಲಿ ಸಿನಿಮಾ ಬಗ್ಗೆ ಬರೀತೀನಿ. ಆದರೆ ಮ್ಯಾಗಜೈನ್ ನಲ್ಲಿ ನಾನು ಆರೋಗ್ಯ, ಊಟ, ಒಟ್ಟಾರೆ ಒಂದು ಕುಟುಂಬಕ್ಕೆ ಸಂಬಂಧಪಟ್ಟ ಎಲ್ಲ ರೀತಿಯ ಸಂಗತಿಗಳನ್ನು ಕವರ್ ಮಾಡ್ತಾ ಇರ್ತೀನಿ. ಆರೋಗ್ಯ ಅನ್ನುವಾಗ ನೀರಿನ ಬಗ್ಗೆ ಬರಿತಾನೆ ಇರ್ತೀನಿ. ಈವರೆಗೂ ನಾನು ನೀರಿನ ಉಪಯೋಗದ ಬಗ್ಗೆ ಎಷ್ಟೇ ಹೇಳಿದ್ರು ಕಿವಿಗೆ ಹಾಕಿಕೊಳ್ಳದವರು ವಿಕಾಸ್ ಫುಡ್ ಫುಡ್  ವಾಹಿನಿಯಲ್ಲಿ ನೀರು ಕುಡಿದರೆ ಆಗುವ ಪ್ರಯೋಜನಗಳ ಬಗ್ಗೆ ಹೇಳಿದ ಬಳಿಕ ಅದನ್ನು ಅನುಸರಿಸುತ್ತಿದ್ದಾರೆ ಅಕ್ಕ ಮತ್ತು ಅಣ್ಣನ ಮಕ್ಕಳು :-) ಛೆ!! ನೋವಾಗಲ್ವ ನನಗೆ. 


2 comments:

Vinod Kumar Bangalore said...

ಚೆಂದದ ಲೇಖನ. ಇಷ್ಟ ಆಯ್ತು

Badarinath Palavalli said...

ಸುಕನ್ಯ ಅವರು ಟೀವಿ ೯ - ಕಸ್ತೂರಿ - ಸುವರ್ಣ - ಪಬ್ಲಿಕ್ - ವಾಪಸ್ ಟೀವಿ ೯ :-)
ಹಿನ್ನಲೆ ದನಿ ಹೇಗಿರಬೇಕೆಂದರೆ ಅದು ಮುನ್ನಲೆಯ ದೃಶ್ಯವನ್ನು ಇಮ್ಮಡಿಸುವಂತಿರಬೇಕು ನಿಜ.

ಸರೆಗಮಪ ಲಿಲ್ ಚಾಂಪ್ಸ್ ಒಂದು ಉತ್ತಮ ಕಾರ್ಯಕ್ರಮ.
ಹಿಂದಿ ವಾಹಿನಿಯಲ್ಲಿ ಕನ್ನಡ ಮಾತೇ! ಅಲಲಾ!!!

ಕಪಿಲ್ ನೋಡಿದ ಕೂಡಲೇ ನಗುವೇ ನಗು.

ಚೆನ್ನಾಗಿ ಹೇಳಿದಿರಿ, ನಾವು ದಿನ ಪೂರ ಬೊಂಬಡ ಬಜಾಯಿಸಿದರೂ ಮನೆಯಲ್ಲಿರುವವರು ಕಿವಿಗೆ ಹಾಕಿ ಕೊಳ್ಳಿಒಲ್ಲ, ಆದರೆ ಒಮ್ಮೇ ಟೀವಿ ಉಪದೇಶ ಶುರೂ ಮಾಡಿದರೆ, ಅದೇ ಅವರಿಗೆ ಪಥ್ಯ!