ರಾಜ ಬೀದಿ ಒಳಗಿಂದ ಕಸ್ತೂರಿ ರಂಗ ಆಹಾ ಎಷ್ಟು ಚಂದದ ಹಾಡು, ಅದೇ ರೀತಿ ಕಲೊನಿಯಲ್ ಕಸಿನ್ಸ್ ಹಾಡಿರುವ ಕೃಷ್ಣ ನೀ ಬೇಗನೆ ಬಾರೋ ಎಷ್ಟು ಖುಷಿ ಕೊಡುತ್ತದೆ...
ನಾನು ಅನೇಕ ಬಗೆಯ ಹಾಡಿನ ಪ್ರಕಾರಗಳನ್ನು ಕೇಳುತ್ತಾ ಇರ್ತೀನಿ. ಭಕ್ತಿ ಗೀತೆಗಳು ಹೊರತು ಪಟ್ಟಿಲ್ಲ. ಐ ಲವ್ ಮ್ಯೂಸಿಕ್. ಯಾವ ವಿಷಯದಲ್ಲಿ ಆಗಲಿ ಚರ್ಚೆಗೆ ಕೂತರೆ ಅದು ಬೇರೆ ಬೇರೆ ರೂಪ ಪಡೆಯುತ್ತದೆ. ಅದು ನಾನು ಅರಿತ ಅನುಭವದ ಸಂಗತಿ.
ಬಿಡಿ ಆ ಸಂಗತಿ..ಜೀ ಕನ್ನಡ ವಾಹಿನಿಯಲ್ಲಿ ಸ ರೆ ಗ ಮ ಪ ಲಿಲ್ ಚಾಂಪ್ಸ್ ಮತ್ತೆ ಆರಂಭವಾಗಿದೆ, ಅರ್ಜುನ್ ಜನ್ಯ, ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್. ಮತ್ತಷ್ಟು ಹೊಸ ಪ್ರತಿಭೆಗಳ ಆಗಮನ. ಇದೇ ವೇದಿಕೆಯಲ್ಲಿ ಹಾಡಿ ಗೆದ್ದು, ಈಗ ದೊಡ್ಡ ಹುಡುಗರಾಗಿ ಕಾಲೇಜು ಮೆಟ್ಟಿಲು, ವೃತ್ತಿ ನಿರತ ಕೋರ್ಸುಗಳಿಗೆ ಸೇರಿದ್ದಾರೆ. ಅವರಲ್ಲಿ ಒಬ್ಬರಾದ ಸಚಿನ್ ಸಿಕ್ಕಿದ್ದ. ರಾಯರ ಆರಾಧನಾ ಮಹೋತ್ಸವದ ಸಮಯದಲ್ಲಿ ಒಂದು ದಿನದ ಸಚಿನ್ ತನ್ನ ತಾಯಿ ತಂದೆ ಜೊತೆ ಬಂದಿದ್ದ. ಸಂಪೂರ್ಣವಾಗಿ ಮಠಕ್ಕೆ ತಕ್ಕಂತೆ. ಖುಷಿ ಅನ್ನಿಸಿತು ಆ ಹುಡುಗನನ್ನು ಕಂಡು. ಪುಟ್ಟ ಬಾಲಕ ಈಗ ಮೆಕ್ಯಾನಿಕಲ್ ಇಂಜಿನಿಯರ್ . ಅವರ ತಾಯಿ ಜೊತೆ ಹರಟಿದಾಗ ತನ್ನ ಮಗ ಈಗ ಆರ್ ಕೆ ಪದ್ಮನಾಭನ್ ಅವರ ಬಳಿ ಕ್ಲಾಸಿಕಲ್ ಸಂಗೀತ ಕಲಿತಾ ಇದ್ದಾನೆ ಅಂದ್ರು. ಹಾಗೆ ಈ ಟೀವಿ ಕನ್ನಡದಲ್ಲಿ, ಜೀ ಕನ್ನಡದಲ್ಲಿ ತಮ್ಮ ಮಗನ ಹಾಡುಗಳು ಯು ಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿದ್ದೇನೆ ಎಂದು ಸಹ ಹೇಳಿದರು ಆ ತಾಯಿ. ಮಾತಿನ ನಡುವೆ ನಿಮ್ಮ ಮಗನಿಗೆ ಕಷ್ಟ ಆಗಲಿಲ್ಲ ಶಾಲೆ, ನಿಮಗೆ ರಜೆ ಇವೆಲ್ಲ... ಎಂದಾಗ ಆಕೆ ಚಾನೆಲ್ ನವರು ಪ್ರತಿ ಶನಿವಾರ ಹಾಗೂ ಭಾನುವಾರ ಈ ಕಾರ್ಯಕ್ರಮ ಶೂಟ್ ಮಾಡ್ತಾ ಇದ್ರೂ ಎಂದು ಬಹಳ ಮೆಚ್ಚಿ ಹೇಳಿದರು.
ಹೀಗೆ ಹಲವಾರು ಪ್ರತಿಭೆಗಳು ಈಗ ಏನ್ ಮಾಡ್ತಾ ಇದ್ದರೋ.ಅವರು ಮತ್ತೆ ಭಾಗವಹಿಸುವ ಕಾರ್ಯಕ್ರಮಗಳು ಚಾನೆಲ್ ನವರು ಮಾಡಿದ್ರೆ ಚಂದ ಅಲ್ವ.. ಆ ವೀಕ್ಷಕರು ಆಹಾ ಆ ಹುಡ್ಗಾ ಆಗಾ ಇದ್ದ, ಈ ಹುಡುಗಿ ಹೀಗೆ ಹಾಡಿದ್ದಳು ಎಂದುಕೊಳ್ತಾ ಮಾತಾಡ್ತಾ ... ? :-)
@ ಬಹಳ ದಿನಗಳ ನಂತರ ಟೀವಿ ನೈನ್ ವಾರ್ತೆಗಳನ್ನು ವೀಕ್ಷಿಸಿದೆ. ನಿಮಗೆ ಗೊತ್ತು ಕರ್ನಾಟಕದಲ್ಲಿ ಕರೆಂಟ್ ಇಲ್ಲ ಎನ್ನುವ ಸುದ್ದಿ ನಿಜ ಸಾಕಷ್ಟು ಸದ್ದು ಮಾಡಿದೆ. ಇನ್ನೇನು ಬೇಕು ಎನ್ನುವಾಗ ಕರೆಂಟ್ ಇರ್ತಾ ಇರಲಿಲ್ಲ. ಹೋಗ್ಲಿ ಬೇರೆ ಸಮಯದಲ್ಲಿ ಬರೆಯೋಣ ಅಂದ್ರೆ ನನಗೆ ಸಮಯ ಇರುತ್ತಿರಲಿಲ್ಲ :-)
ರಹಮಾನ್ ಅವರು ವಾರ್ತೆ ಓದುತ್ತಿದ್ದರು. ಕನ್ನಡದ ಉತ್ತಮ ಆಂಕರ್ ಗಳಲ್ಲಿ ರಹಮಾನ್ ಸಹ ಒಬ್ಬರು , ಅದರ ಬಗ್ಗೆ ಸಂಶಯ ಇಲ್ಲ. ಮೊದಲ ಸುದ್ದಿ ನೋಡಿದ ಬಳಿಕ ಮತ್ತೆ ಬಂದ ಸುದ್ದಿ ವೀಕ್ಷಿಸದೆ ಹಾಯಾಗಿ ಆರಿಸಿ ಕುಳಿತೆ,
ಇಂದು ಟೀವಿ ನೈನ್ ವಾಹಿನಿಯಲ್ಲಿ ರಾಧಿಕ ತಿರುಪತಿಯಲ್ಲಿ ವಿಶೇಷವಾದ ಬೆಳಕು ಕಂಡ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಸ್ವಲ್ಪ ಮಾತ್ರ ವೀಕ್ಷಿಸಿದೆ. ಯಾರು ದೇವರನ್ನು ಯಾವ ರೀತಿ ಕಾಣ್ತಾರೋ ಹಾಗೆ ಕಾಣುವುದು ಆತನ ವಿಶೇಷತೆ.ಶ್ರೀನಿವಾಸ ದೇವರಲ್ಲಿ ಬೆಳಕು ಕಂಡಿದೆ ಎಂದು ಅವರು ಹೇಳಿದರೆ ಅದು ಅವರ ನಂಬಿಕೆ. ದೇವರಿದ್ದಾನ ಎಂದು ಕೇಳುವ ಬಹುತೇಕರು ತಮ್ಮ ಧರ್ಮದ ದೇವರನ್ನು ಹೊರೆತು ಪಡಿಸಿ ಈ ಪ್ರಶ್ನೆ ಉದ್ಭವ ಮಾಡುತ್ತಾರೆ. ದೇವರಿದ್ದಾನೋ ಇಲ್ಲವೋ ಗೊತ್ತಿಲ್ಲ ಆದರೆ ಸಾಮಾನ್ಯನ ಭಾವನೆಗಳಿಗೆ ಧಕ್ಕೆ ತರುವುದು ಮಾತ್ರ ತಪ್ಪು. ಅವರ ನಂಬಿಕೆ ಅವರದ್ದು.ಇನ್ನು ಬೆಳಕಿನ ವಿಷಯಕ್ಕೆ ಬರುವುದಾದರೆ ನನ್ನ ಕಸಿನ್ ಆಂಧ್ರದ ಮಾಧ್ಯಮದಲ್ಲಿ ಉತ್ತಮ ಹುದ್ದೆಯಲ್ಲಿದ್ದಾರೆ. ಅವರುತಿರುಪತಿಯ ಬ್ರಹ್ಮೋತ್ಸವದ ಎಲ್ಲ ಚಿತ್ರಗಳನ್ನು ಫೇಸ್ ಬುಕ್ ಮತ್ತು ವಾಟ್ಸ್ ಆಪ್ ನಲ್ಲಿ ಶೇರ್ ಮಾಡಿದ್ದಾರೆ. ಆದರೆ ಎಲ್ಲೋ ಬೆಳಕಿನ ಬಗ್ಗೆ ಹೇಳಿಲ್ಲ ! ಕ್ಷಮಿಸಿ ಇದು ನನ್ನ ಪ್ರಶ್ನೆ ಅಷ್ಟೇ. ಯಾಕೇಂದ್ರೆ ಅವರವರ ನಂಬಿಕೆ ಅವರವರದ್ದು ಅಲ್ವೇ.! ಯಾರ ಭಾವನೆಗಳಿಗೂ ಧಕ್ಕೆ ತರುವ ಕೆಲಸ ಎಂದಿಗೂ ಮಾಡ ಬಾರದು. ನಾನು ನನ್ನ ಧರ್ಮವನ್ನು ತುಂಬಾ ನಂಬುತ್ತೇನೆ.
No comments:
Post a Comment