ಒಬ್ಬರ ಜೊತೆ ಕೆಲವು ಗಂಟೆಗಳು ಕಳೆದರೆ ಸಾಕು ಅವರ ಬಗ್ಗೆ ತಿಳಿದು ಹೋಗುತ್ತದೆ ಎನ್ನುವ ಮಾತು ಅರಿತವರು ಹೇಳುತ್ತಾರೆ. ಅದು ಸತ್ಯ. ಅದೇ ರೀತಿ ಒಂದಷ್ಟು ಅಪರಿಚಿತರ ನಡುವೆ ನಾವಿದ್ದು, ಇರಲೇ ಬೇಕಾದಾಗ , ಇದ್ದು ಒಂದು ಕೈ ನೋಡೇ ಬಿಡುವ ಎಂದು ಕೊಂಡಾಗ ಆ ವ್ಯಕ್ತಿತ್ವಗಳ ಪರಿಚಯ ಆಗುತ್ತದೆ, ಇಷ್ಟವಾಗುತ್ತದೆ, ಕಷ್ಟವಾಗುತ್ತದೆ, ಹೀಗೆ ಹತ್ತು ಹಲವಾರು ಭಾವಗಳು. ಈ ಟೀವಿ ಕನ್ನಡ ನ್ಯೂಸ್ ಮುಖ್ಯಸ್ಥರಾಗಿರುವ ಜಿ ಎನ್ ಮೋಹನ್ ಅವರು ತಮ್ಮ ಗೆಳೆಯ-ಗೆಳತಿಯರ ವಲಯದ ಒಂದಷ್ಟು ಮಂದಿಯನ್ನು ವಾಟ್ಸ್ ಆಪ್ ನಲ್ಲಿ ಒಟ್ಟು ಮಾಡಿದ್ದಾರೆ. ನಾನು ಇದ್ದೇನೆ ಅದರಲ್ಲಿ. ಅಲ್ಲಿ ಇರುವವರಲ್ಲಿ ಜಿನ್ ಬಿಟ್ರೆ ನನಗೆ ಯಾರೂ ಗೊತ್ತಿಲ್ಲ, ಆದರೆ ಒಂದಿಬ್ಬರು ವಾಟ್ ಆಪ್ ಪರಿಚಿತರಾಗಿದ್ದಾರೆ. ಆದರೆ ಬಹಳಷ್ಟು ಜನರಿಗೆ ನಾವು ಈ ಗ್ರೂಪ್ ನಲ್ಲಿ ಇದ್ದೇವೆ ಸೊ ಇದ್ದೇವೆ ಎನ್ನುವ ಭಾವ. ಯಾರ ಬಗ್ಗೆಯೂ ನಾನು ಹೇಳುತ್ತಿಲ್ಲ, ಮನುಷ್ಯ ಸಂಘಜೀವಿ ಅನ್ನೋದು ನಿಜನಾ ಎನ್ನುವ ಸಂಗತಿ ಇಂತಹ ಅಂಶಗಳನ್ನು ಕಂಡಾಗ ಸಂಶಯ ಕಾಡುತ್ತದೆ ನನಗೆ.
@ನನ್ನನ್ನು ಹೆಚ್ಚು ಆಶ್ಚರ್ಯ ಗೊಳಿಸುವುದು ಈ ರಿಯಾಲಿಟಿ ಶೋಗಳು. ಅದರಲ್ಲಿನ ಸ್ಪರ್ಧಿಗಳು. ಅದರಲ್ಲಿ ಎಲ್ಲಿಂದಲೋ ಬಂದಿರುತ್ತಾರೆ. ಅನೇಕ ಸ್ತರಗಳು, ಜೀವನ ಶೈಲಿಗಳು. ಒಟ್ಟಾರೆ ಅವರ ಗುರಿ ಗೆಲುವು. ಆ ಗೆಲುವು ಭಿನ್ನವಾಗಿ ಇರಬೇಕು ಎನ್ನುವ ಮನಸ್ಥಿತಿ. ಅಂತಹ ಗೆಲುವಿಗಾಗಿ ಜೀ ಹಿಂದಿಯ ಡಿಐಡಿ ಸ್ಪರ್ಧಿಗಳು, ಝಲಕ್ ದಿಕ್ಲಾಜ ಸ್ಪರ್ಧಿಗಳು ಕಾದಿದ್ದಾರೆ. ಬೇರೆ ಬೇರೆ ವಾಹಿನಿ ಆದರೂ ನನ್ನನ್ನು ಅತಿ ಹೆಚ್ಚು ಆಕರ್ಷಿಸಿರುವುದು ಜೀ ಯ ಡಿಐಡಿ, ಸ್ಟಾರ್ ಪ್ಲಸ್ ನಲ್ಲಿರುವ ಪ್ಲಸ್ ಕಾರ್ಯಕ್ರಮ. ಇಲ್ಲಿ ಇರುವವರು ಯಾರೂ ಸೆಲೆಬ್ರಿಟಿ ಹಿನ್ನೆಲೆ ಇರುವವರಲ್ಲ.
ಅಂತಹ ಎಲೆಮರೆಯ ಕಾಯಿ ಜಗತ್ತಿನ ಮುಂದೆ ಬರೋದು ಖುಷಿಯ ಸಂಗತಿ. ಡಿಐಡಿ ಇನ್ನೇನು ಮುಗೀತಾ ಇದೆ, ಮಿಥುನ್ ದಾ, ಜಾಯ್, ಪುನೀತ್, ಗೇತಿ, ಮುದಸ್ಸರ್ ಜೊತೆಗೆ ಆ ಪ್ರತಿಭೆಗಳನ್ನು ಮಿಸ್ ಮಾಡಿಕೊಳ್ಳುವ ದಿನಗಳು ಹತ್ತಿರ ಬರ್ತಾ ಇದೆ. ಒಟ್ಟಾರೆ , ಇಷ್ಟ ಪಟ್ಟು ನೋಡುವಂತೆ ಹೊಸತನ ನೀಡಿದ ಸ್ಪರ್ಧಿಗಳು.
@ಉದಯ ವಾಹಿನಿಯಲ್ಲಿ ಫ್ಯಾಮಿಲಿ ನಂಬರ್ 1 ಎನ್ನುವ ಧಾರವಾಹಿ ಬರ್ತಾ ಇದೆ. ಅದರಲ್ಲಿ ಕಲಾವಿದರು ಅತಿ ಅಬ್ಬರದವರಲ್ಲ. ಅದರಲ್ಲಿ ಮಂಜುಳಾ ಎನ್ನುವ ಕಲಾವಿದೆ ಇದ್ದಾರೆ. ಆಕೆ ಎತ್ತರ ಕಡಿಮೆ ಇರುವ ಕಲಾವಿದೆ. ಸಾಮಾನ್ಯವಾಗಿ ಸಿನಿಮಾಗಳಲ್ಲಿ ಹೀರೋಯಿನ್ ಜೊತೆಗೆ ಇರುವ ಸಾಧಾರಣ ಮೊಗದ ಗೆಳತಿಯ ಪಾತ್ರಗಳನ್ನೂ ಮಾಡುತ್ತಾ ಬದುಕನ್ನು ನಡೆಸಿದ್ದಾಕೆ.ಈಗ ಫ್ಯಾಮಿಲಿ ನಂಬರ್ 1 ಇದ್ದಾರೆ. ಯಾವುದೋ ಒಂದು ಧಾರಾವಾಹಿಯಲ್ಲಿ ಕ್ರೂರವಾದ ಪಾತ್ರ ಸಹ ಮಾಡಿದ್ದ ನೆನಪು. ಒಟ್ಟಾರೆ ಈಕೆಗೆ ಕನ್ನಡದ ಧಾರವಾಹಿ ಲೋಕ ಅವಕಾಶ ನೀಡುತ್ತಿದೆ. ಅದೇ ಖುಷಿಯ ಸಂಗತಿ. ಇದೆ ಧಾರಾವಾಹಿಯಲ್ಲಿ ನನ್ನ ಎಫ್ ಬಿ ಮಿತ್ರ ಪ್ರಸಾದ್ ಅವರ ಮಗಳು ಪ್ರಕೃತಿ ಸಹ ಇದ್ದಾಳೆ. ಈ ಮುದ್ದಾದ ಬಾಲಿಕೆ ಮುಂದೊಂದು ದಿನ ಸೂಪರ್ ಹೀರೋಯಿನ್ ಆಗೋದ್ರದಲ್ಲಿ ಸಂಶಯವೇ ಇಲ್ಲ. ಆಗೋದ್ರದಲ್ಲಿ ಸಂಶಯ ಇಲ್ಲ. ಉತ್ತಮ ಅಭಿನೇತ್ರಿ ಪ್ರಕೃತಿ .
ಒಳ್ಳೆ ಭವಿಷ್ಯ ಕಾದಿದೆ ಎನ್ನುವುದು ಮಾತ್ರ ಸುಸ್ಪಷ್ಟ .
@ಶಂಕರ ವಾಹಿನಿಯಲ್ಲಿ ಭಜನ್ ಸಾಮ್ರಾಟ್ ಎನ್ನುವ ಕಾರ್ಯಕ್ರಮ ಪ್ರಸಾರವಾಗುತ್ತದೆ. ಇಲ್ಲಿ ತಮಿಳು ಹಾಗೂ ಕನ್ನಡದ ತೀರ್ಪುಗಾರರು ಇರ್ತಾರೆ. ಅದರ ಮುಖ್ಯ ಸಂಗತಿ ಅಂದರೆ ಆ ರಿದಂ. ಭಜನೆಯ ಸವಿ ಹೆಚ್ಚಿಸುವ ಶೈಲಿ, ತುಂಬಾ ಇಷ್ಟ ಆಗುವ ಆ ಸಂಯೋಜನೆ. ಸಂಗೀತಕ್ಕೆ ಯಾವುದೇ ಗಡಿ ಇರಲ್ಲ ಅನ್ನೋದು ಇಂತಹ ಕಾರ್ಯಕ್ರಮಗಳಿಂದ ಸ್ಪಷ್ಟವಾಗುತ್ತದೆ.
@ ನನ್ನನ್ನು ಅತಿ ಹೆಚ್ಚು ಸೆಳೆಯುವ ವಿದೇಶಿ ಚಾನೆಲ್ ಗಳಲ್ಲಿ Al Jazeera ಸಹ ಒಂದು.ಜೀವಪರತೆ ಇರುವ ಕಾರ್ಯಕ್ರಮಗಳು ಪ್ರಸಾರ ಆಗುವ ಈ ವಾಹಿನಿಯಲ್ಲಿ ಸಮಾಜದ ವಸ್ತುಸ್ಥಿತಿ ತೋರುವ ವಿಷಯಗಳನ್ನು ಸಹ ಜನರು ನೋಡ ಬಹುದು. ಕೆಲವು ದಿನಗಳ ಹಿಂದೆ ಆ ವಾಹಿನಿಯಲ್ಲಿ ವಿಶ್ವದ ಅತಿ ದೊಡ್ಡ ಮರುಭೂಮಿ ಸಹಾರ ಬಗ್ಗೆ, ಅಲ್ಲಿ ವಾಸಿಸುವ ಜನರು, ಅಲ್ಲಿನ ಚಳಿ, ಬಿಸಿಲು, ನೀರಿನ ಕೊರತೆ ಎಲ್ಲದರ ಬಗ್ಗೆ ಇರುವ ಕಾರ್ಯಕ್ರಮ ನೋಡಿದೆ. ತುಂಬಾ ವಿಶೇಷ ಅನ್ನಿಸಿದ್ದು ಅಲ್ಲಿನ ಗುರುಕುಲ. ಬೆಂಕಿಯನ್ನು ಹಚ್ಚಿ ಆ ಚಳಿಯಲ್ಲಿ ಮಕ್ಕಳು ಸ್ಲೇಟ್ ಹಿಡಿದು ಆಂಗ್ಲ ಭಾಷೆ ಸೇರಿದಂತೆ ಇನ್ನು ಅನೇಕ ಸಂಗತಿಗಳನ್ನು ಕಲಿಯುತ್ತಿದ್ದರು. ಓದು ಕಂಡು ಹಿಡಿದ ಮನುಷ್ಯ ಹೀಗೆ ಜಗತ್ತನ್ನು ಒಂದು ಮಾಡಿದ್ದಾನೆ. ತುಂಬಾ ಆಸಕ್ತಿ ನೀಡಿದ ಸಂಗತಿಗಳು ಆ ಕಾರ್ಯಕ್ರಮದಲ್ಲಿತ್ತು.
No comments:
Post a Comment