ಇತ್ತೀಚೆಗೆ ಸಣ್ಣ ಪುಟ್ಟ ವೀಡಿಯೋಗಳನ್ನು ವೀಕ್ಷಿಸುವ ಕೆಲಸ.ಮಾನವೀಯತೆ, ಪ್ರೀತಿ, ಬುದ್ಧಿ ಹೇಳೋದು, ಪ್ರಾಣಿ ಪಕ್ಷಿಗಳು, ಹೀಗೆ ಹತ್ತು ಹಲವಾರು ವೀಡಿಯೋಗಳು. ಅದೆಷ್ಟೋ ವೀಡಿಯೋಗಳು ಫನ್ನಿ ಅನ್ನಿಸಿದರೂ ಪೂರ್ತಿ ನೋಡಿರುತ್ತೇವೆ. ಇರಲಿ ಈಗ ವೀಡಿಯೋ ಕಾಲ ಎಂದು ಹೇಳ ಬಹುದು. ಅದರ ನಡುವೆ ತಲೆ ಕೆಟ್ಟು ಕೆರ ಹಿಡಿಯ ಬೇಕಾದರೆ ಸಾಮಾಜಿಕ ಜಾಲತಾಣದಲ್ಲಿ ನಮ್ಮನ್ನು ನಾವು ತೊಡಗಿಸಿ ಕೊಳ್ಳಬೇಕು. ನನಗೆ ಆಶ್ಚರ್ಯ ತಂದ ಅನೇಕ ಸಂಗತಿಗಳು ಅಂದೇ. ಕೆಲವು ವರ್ಷಗಳ ಹಿಂದೆ ಮುಸ್ಲೀಮ್ ಬಾಂಧವರನ್ನು ಪಾಕಿಸ್ತಾನಿಗಳು ಎಂದು ಇನ್ನು ಬೇರೆ ರೀತಿಯಲ್ಲಿ ಕರೆಯುತ್ತಿದ್ದ ಹೆಣ್ಣುಮಗಳಿಗೆ ಇದ್ದಕ್ಕಿದ್ದಂತೆ ಎಲ್ಲ ಧರ್ಮಗಳನ್ನು, ಅದರಲ್ಲೂ ಇಸ್ಲಾಂ ಧರ್ಮದ ಬಗ್ಗೆ ಅಪಾರವಾದ ಪ್ರೀತಿ..! ನೀವು ಅನ್ನಬಹುದು ಬದಲಾವಣೆಯಿಂದ ಅಂತ, ಇಲ್ಲ ಬಿಡಿ ಕೆಲವು ಹೇಳೋಕೆ ಆಗದ ಸತ್ಯಗಳು ಇವೆ.. ಆದರೆ ತನ್ನ ಯಶಸ್ಸಿಗೆ ಧರ್ಮವನ್ನು ಮೆಟ್ಟಿಲು ಮಾಡಿಕೊಳ್ಳುವ ಮಂದಿ ಇದ್ದಾರೆಂಬೋದು ಸತ್ಯವಾದ ಸಂಗತಿ ಎನ್ನುವುದಷ್ಟೇ ನಾನು ಹೇಳ್ತಾ ಇರೋದು. ನನ್ನ ಮನೆಯಲ್ಲಿ ಮುಸ್ಲಿಂರ ಜೊತೆಗಿನ ಒಡನಾಟ ಜಾಸ್ತಿ ಇದೆ. ಅವರ ಇಫ್ತಾರ್ ನಷ್ಟೇ ನಮ್ಮ ಮನೆಯ ಗಣೇಶ ಹಬ್ಬವು ಪ್ರಾಮುಖ್ಯತೆ ಪಡೆದಿರುತ್ತದೆ.
@ಟೀವಿ ನೈನ್ ವಾಹಿನಿಯಲ್ಲಿ ಹರಿಪ್ರಸಾದ್ ಅವರು ಮಕ್ಕಳ ಕಳುವಿನ ಬಗ್ಗೆ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಅತ್ಯಂತ ಖೇದ ತರುವ ಸಂಗತಿ ಇದು. ಸರ್ಕಾರಿ ಆಸ್ಪತ್ರೆಯನ್ನು ಅವಲಂಬಿಸಿರುವ ಸಾಮಾನ್ಯರು ಹೆರಿಗೆ ನೋವು ಕೊನೆಗೆ ಮಗುವನ್ನು ಕಳೆದುಕೊಂಡ ನೋವು ಎರಡನ್ನು ಉಣ್ಣಬೇಕು. ಅಂತಹ ಕಾರ್ಯಕ್ರಮಗಳು ಮನಕ್ಕೆ ಬೇಸರ ಮೂಡಿಸಿದರು, ಈ ವಾಸ್ತವ ಸತ್ಯವನ್ನು ಅರಿಯಲೇ ಬೇಕು. ಇಂತಹ ಕೆಟ್ಟ ಸಮಸ್ಯಗಳಿಗೆ ಪರಿಹಾರವೇ ಇಲ್ಲವೇ ?
@ ಜೀ ಕನ್ನಡ ವಾಹಿನಿಯಲ್ಲಿ ಲಿಲ್ ಚಾಂಪ್ ಅತಿ ಚಂದದ ಕಾರ್ಯಕ್ರಮ. ಮುದ್ದು ಮಕ್ಕಳು ಸಿಕ್ಕಾಪಟ್ಟೆ ಚೆನ್ನಾಗಿ ಹಾಡ್ತಾ ಇದ್ದಾರೆ. ಇವರ ನಡುವೆ ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್, ಅರ್ಜುನ್ ಜನ್ಯ ತೀರ್ಪು ..ಎಲ್ಲವು ಚಂದ.
ಆದರೆ ಫನ್ ಹೆಸರಲ್ಲಿ ನಿರೂಪಕಿ ಮತ್ತು ಅರ್ಜುನ್ ಜನ್ಯ ಅವರ ಸಂಭಾಷಣೆ ಸ್ವಲ್ಪ ಮುಜುಗರ ತರುತ್ತೆ ಅನ್ನೋದು ಬಹಳಷ್ಟು ಜನರ .. ವೀಕ್ಷಕರ ಬೇಸರ. ನಿಜ ಅಂತಹ ಮಾತು, ಆ ರೀತಿಯ ಕವನ ಕೇಳುವಾಗ ಈ ಮೊದಲು ಕೇಳಿದ್ದ ಮಗುವಿನ ಹಾಡಿನ ಸವಿಯನ್ನು ದೂರ ಮಾಡುತ್ತದೆ. ಆದರೆ , ಅಂತಹ ಸಂಗತಿ ಬಗ್ಗೆ ಏನೂ ಹೇಳೋಕೆ ಆಗಲ್ಲ, ನಿರೂಪಕಿಗೆ ವಹಿಸಿದ ಕೆಲಸ ಆಕೆ ಮಾಡಲೇ ಬೇಕು. ಇಂತಹ ಅಂಶಗಳು ಎಲ್ಲಾ ಭಾಷೆಯ ವಾಹಿನಿಗಳಲ್ಲೂ ಕಂಡು ಬರುತ್ತದೆ. ಕೆಲವು ಸರ್ತಿ ಮುಜುಗರ ಅನ್ನಿಸುವಷ್ಟು. ಅದು ಆ ಗಳಿಗೆಯ ಸಂಗತಿ ಎಂದು ವೀಕ್ಷಕರು ಮರೆಯುತ್ತಾರೆ. ಸುಮ್ಮನಾಗುತ್ತಾರೆ. ಆದರೂ ಅತಿ ಆದ್ರೆ ...!
No comments:
Post a Comment