ಗೆದ್ದವರ ಬದುಕನ್ನು ಕೂಲಂಕಷವಾಗಿ ನೋಡಿದಾಗ ಬಹುತೇಕರು ಅಪಮಾನದ ಮೂಸೆಯಲ್ಲಿ ಕರಗಿ ಸುಂದರ ಆಕೃತಿ ಪಡೆದಿರುತ್ತಾರೆ. ವಿಷಾದ , ವಿಡಂಬನೆ, ತಮಾಷೆ ಅಂದ್ರೆ ಆ ರೀತಿ ಅಪಮಾನದ ನೋವು ಅನುಭವಿಸಿ ಬೆಳೆದ ದೊಡ್ಡವರು ಅಪಮಾನ ಮಾಡುವ ಕಾಯಕದಲ್ಲಿ ನಿರತರಾಗಿರುತ್ತಾರೆ.
ಕೆಲವು ತಿಂಗಳ ಹಿಂದೆ ನಾನು ಆನ್ ಲೈನ್ ಪತ್ರಿಕೆಯಲ್ಲಿ ಸಿನಿಮಾ ಬಗ್ಗೆ ಬರೀತಾ ಇದ್ದೆ. ಈಗ ಬರೀತಾ ಇಲ್ಲ. ಅದಕ್ಕೂ ಮುನ್ನ ಕನ್ನಡದ ಪ್ರತಿಷ್ಠಿತ ಸಿನಿಮಾ ಮಾಸ ಪತ್ರಿಕೆಯಲ್ಲಿ ಸಹ ಲೇಖನ ಬರೀತಾ ಇದ್ದೆ, ಸೊ ಈಗ ಬರೀತಾ ಇಲ್ಲ. ಯಾಕೆ ಈ ಸಂಗತಿ ಹೇಳ್ತಾ ಇದ್ದೀನಿ ಅಂದ್ರೆ, ನಮ್ಮ ಬಗ್ಗೆ ನಾವು ಬಹಳಷ್ಟು, ಇಲ್ಲ ಸಲ್ಲದ ಒಂದು ಬಿಲ್ಡ್ ಅಪ್ ಹೊಂದಿರುತ್ತೇವೆ. ಅದು ನಾವು ಅಂದು ಕೊಂಡಂತೆ ಅಲ್ಲ ಎನ್ನುವ ಸತ್ಯ ಗೊತ್ತಾದಾಗ ಆಗುವಂತಹ ಪರಿಣಾಮವೇ ಬೇರೆ. ಆದರೂ ಬದುಕಲ್ಲಿ ಹೀಗೆ ಆಗಾಗ ನಡೆಯುತ್ತಿರ ಬೇಕು. ಆಗ ಮಾತ್ರ ನಮ್ಮಲ್ಲಿರುವ ನಾವು ಮತ್ತಷ್ಟು ಗಟ್ಟಿ ಆಗುತ್ತೇವೆ.
@ ಚಂದನ ವಾಹಿನಿಯಲ್ಲಿ ಪ್ರಸಾರ ಆಗುವ ಥಟ್ ಅಂತ ಹೇಳಿ ಕಾರ್ಯಕ್ರಮದ ವಿಶೇಷ ಎಪಿಸೋಡ್ ಗಳು ಹಬ್ಬಗಳು, ರಾಷ್ಟ್ರೀಯ ಹಬ್ಬಗಳು, ವಿಶೇಷ ಸಮಯದಲ್ಲಿ ಅಲ್ಲದೆ ಪ್ರತಿ ಶುಕ್ರವಾರ ವಿಶೇಷವಾಗಿರುತ್ತದೆ. ಅಂದು ಯಾರು ಬರ್ತಾರೆ ಎನ್ನುವ ಕುತೂಹಲ ಇದ್ದೆ ಇರುತ್ತದೆ ನನಗೆ.ಜೊತೆಗೆ ನಾ. ಸೋಮೇಶ್ವರ್ ಮೇಷ್ಟ್ರ ಶೈಲಿ ಸದಾ ಇಷ್ಟ ನನಗೆ. ಈ ಬಾರಿ ಥಟ್ ಅಂತ ಹೇಳಿಯಲ್ಲಿ ನೆರೆಯ ರಾಜ್ಯವಾದ ಆಂಧ್ರದ ಇತಿಹಾಸದ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದು ಕಂಡು ಹೆಚ್ಚು ಆಶ್ಚರ್ಯ ಆಗಲಿಲ್ಲ. ಯಾಕೇಂದ್ರೆ ಇತಿಹಾಸ ಯಾವ ಪ್ರಾಂತ್ಯದ್ದಾದರೂ ತಿಳಿಯುವುದು ಹೆಚ್ಚು ಒಳ್ಳೆಯದು. ಅದರಲ್ಲೂ ಸಾಧಕ ಜೀವಗಳ ಬಗ್ಗೆ ಅರಿಯುವುದು ಒಳ್ಳೆಯದು. ಇಂತಹ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ಮುನ್ನಡೆಯುತ್ತದೆ. ಸಿನಿಮಾಗಳಲ್ಲಿ ತೆಲುಗು ತುರುಕಿ ಆ ಭಾಷೆ ಅರ್ಥ ಆಗದೆ, ಆ ಚಿತ್ರ ತೋಪೆದ್ದು ಹೋಗುವಂತಹದ್ದಲ್ಲ ಇಂತಹ ಸಂಗತಿಗಳು.
ಇತ್ತೀಚಿಗೆ ಅತಿಯಾದ ಕರೆಂಟ್ ಹೋಗುವುದು, ಅತಿಯಾಗಿ ಇಂಟರ್ ನೆಟ್ ಸರ್ವರ್ ಡೌನ್ ಆಗುವ ಕಾರಣದಿಂದ ವೀಕ್ಷಣೆ, ಬರೆಯುವ ಕೆಲಸ ಕಡಿಮೆ ಆಗಿದೆ. ಆದರೆ ಏನು ಮಾಡೋಕೆ ಆಗಲ್ಲ ಅಂತ ಸುಮ್ಮನಾಗುವ ಕೆಲಸ ಮಾಡ್ತಾ ಇದ್ದೀನಿ.
@ ಹಿಂದಿ ಜೀ ವಾಹಿನಿಯಲ್ಲಿ ಎ ವಾದಾ ರಹ ಧಾರಾವಾಹಿಯು ಪ್ರಸಾರ ಆಗ್ತಾ ಇದೆ. ಹೊಸದಾಗಿ ಪ್ರಸಾರ ಆಗುವ ಸ್ವಳಪ್ ದಿನ ತಪ್ಪದೆ ನೋಡ್ತೀನಿ, ಆಮೇಲೆ ಕಥೆ ಕಾಲು ಬಾಲ ಇರಲ್ಲವಲ್ಲ ಅದು ಹೇಗ್ ಹೇಗೋ ಮುಂದುವರೆದಾಗ ಆ ಕಾರಣದಿಂದ ನೋಡದೆ ದೂರ ಸರಿಯುವುದು ಸಾಮಾನ್ಯ. ಅದರಲ್ಲಿನ ಹೀರೋ - ಹೀರೋಯಿನ್ ( ಚಿಕ್ಕವರು ಇಬ್ಬರು ) , ಅವರ ನಟನೆಯಲ್ಲಿರುವ ಫ್ರೆಶ್ನೆಸ್ , ತಾಯಿ ಪಾತ್ರಧಾರಿ, ಗಣಪತಿ ಬಪ್ಪ ಎಲ್ಲ ಇಷ್ಟ ಆಗಿದೆ. ಬಪ್ಪ ಭಕ್ತಳಾದ ನನಗೆ ಬಪ್ಪ ಇರುವ ಕಡೆ ಇಷ್ಟ ಆಗೋದು ಸಹಜ ಆದರು, ಧಾರವಾಹಿ ಹಳ್ಳ ಹಿಡಿದಾಗ ಮಾತ್ರ ಬಪ್ಪ ಸಾರಿ ಬಪ್ಪ ಅಂತ ನೋಡದೆ ಇರುವುದು ಸಾಮಾನ್ಯ.
@ ಜೀ ಕನ್ನಡ ವಾಹಿನಿಯಲ್ಲಿ ಲಿಲ್ ಚಾಂಪ್ ಹಾಡಿನ ರಿಯಾಲಿಟಿ ಷೋ ಬಗ್ಗೆ ಹೇಳಿದ್ದೆ. ಅದರಲ್ಲಿ ನಿರೂಪಕಿಯ ಆ ವರ್ತನೆ ಬಗ್ಗೆ ಬರೆದಾಗ ಅದನ್ನು ಓದಿದವರ ಪ್ರತಿಕ್ರಿಯೆ ಇಲ್ಲಿ ಹಾಕ್ತಾ ಇದ್ದೀನಿ.ಅದಕ್ಕೂ ಮುನ್ನ ಈ ಒಂದು ಹಾಡಿನ ಸ್ಪರ್ಧೆಯಲ್ಲಿ ಸುಪ್ರಿಯಾ ಜೋಷಿ ಎನ್ನುವ ಸ್ಪರ್ಧಿ ಇದ್ದಾಳೆ. ಅಬ್ಬಾ ಎಂಥ ಸ್ವೀಟ್ ಇದೆ ಗೊತ್ತ ಆಕೆಯ ಧ್ವನಿ. ತುಂಬಾ ಖುಷಿ ಕೊಡುತ್ತದೆ ಆಕೆಯ ಹಾಡಿನ ಶೈಲಿ.
ಎಸ್ ಪಿ ಬಾಲಸುಬ್ರಮಣ್ಯಂ ಧ್ವನಿ ಆಹಾ.. ತುಂಬಾ ಇಷ್ಟ ಪಟ್ಟು ಕೇಳುವ ಶಾರೀರ ಅವರದ್ದು. ಆನಂತರ ಆ ರೀತಿಯ ಖುಷಿ ಸಿಕ್ಕೋದು ರಾಜೇಶ್ ಕೃಷ್ಣನ್ ಅವರಿಂದ, ವಿಜಯ್ ಪ್ರಕಾಶ್ ಅವರ ಧ್ವನಿಯಲ್ಲಿ ಸಿಗುವ ಮಾಧುರ್ಯ ವಿಭಿನ್ನ..ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆ ಅಪರೂಪ..
ಆದರೆ ಹೊಸ ಪ್ರತಿಭೆಗಳಿಂದ ಪ್ರತಿಯೊಂದು ಸೀಸನ್ ಸಿಗುವ ಆನಂದ ಅಪಾರ.
ನಿರೂಪಕಿ ಬಗ್ಗೆ ಹೊಂದಿರುವ ಅಭಿಪ್ರಾಯಗಳಲ್ಲಿ ಒಂದಷ್ಟು...
ಆದರೆ ಇಲ್ಲಿ ನಾನು ಹಾಕಿರುವ ಕಾಮೆಂಟ್ ಗಳು ಆ ನಿರೂಪಕಿಯನ್ನು ನೋಯಿಸುವ ಉದ್ದೇಶದಿಂದ ಅಲ್ಲ.. ಜನರ ಅಭಿಪ್ರಾಯ ಹೀಗಿರುತ್ತದೆ. ಈ ಕಾರ್ಯಕ್ರಮ ಆರಂಭವಾದ ದಿನದಿಂದ ಇಂತಹ ಪ್ರತಿಕ್ರಿಯೆ ಬರ್ತಾನೆ ಇದೆ. ಬೇರೆ ಭಾಷೆಯಲ್ಲಿ ಇಂತಹ ಅಂಶಗಳು ಬಹಳ ಸಾಮಾನ್ಯ, ಆದರೆ ಕನ್ನಡ ವೀಕ್ಷಕರಿಗೆ ಕನ್ನಡದ ಚಾನೆಲ್ ನಲ್ಲಿ ಇಂತಹ ವೈಖರಿ ಅದ್ಯಾಕೋ ಲೈಕ್ ಆಗ್ತಾ ಇಲ್ಲ. ಅದನ್ನು ಗಮನದಲ್ಲಿಟ್ಟು ಕೊಳ್ಳುವುದು ಬಹಳ ಮುಖ್ಯ. ವೀಕ್ಷಕನ ಕೈಲಿ ರಿಮೋಟ್ ಇರುತ್ತದೆ.. ಈಗಂತೂ ಸಿಕ್ಕಾಪಟ್ಟೆ ಚಾನೆಲ್ ಗಳು ಸಹ ಇವೆ ಅಲ್ಲವೇ ?
Arkalgud Jayakumar ಅಕುಲ್ ಬಾಲಾಜಿ ಸಹಜವಾಗಿ ನಿರೂಪಣೆ ಮಾಡುತ್ತಾ ಪ್ರಿಯಾಮಣಿಯನ್ನು ಕಾಲೆಳೆಯಲು ಯತ್ನಿಸುವ ರೀತಿ ಮನಸ್ಸಿಗೆ ಮುದ ನೀಡುತ್ತೆ ಅದನ್ನೆ ಲಿಟ್ಲ್ ಚಾಂಪ್ ನಲ್ಲಿ ಅನುಕರಣೆ ಮಾಡಲೆತ್ನಿಸುವ ನಿರೂಪಕಿ ಅನುಶ್ರೀ ಶೋ ನಲ್ಲಿ ಪೇಲವವಾಗಿ ಬಿಡುತ್ತಾರೆ, ಮತ್ತು ಅವರ ಫನ್ ಅತೀ ಎನಿಸಿ ಬಿಡುತ್ತೆ. ನು ಕಾರ್ಯಕ್ರಮ ಸಂಘಟಕರು ಇದನ್ನು ಗಮನಿಸ ಬೇಕು
No comments:
Post a Comment