ಅತ್ಯಂತ ಭಿನ್ನ ಸಂಗತಿ ಅಲ್ಲದೆ ಇದ್ದರು ಈಗಿನ ಬಹುಚರ್ಚಿತ ಸಂಗತಿ ಅವಾರ್ಡ್ ಹಿಂತಿರಿಗಿಸೋದು. ಕೊಡೋದು, ಇಸ್ಕೊಳ್ಳುವುದರ ಜೊತೆಗೆ ಅದನ್ನು ವಾಪಸಾತಿ ಮಾಡುವ ಈ ಕೂಗಾಟದ ಸಂಗತಿಯ ಜೊತೆಗೆ ಬಹಳ ಕಾಲದ ಅತ್ಯಂತ ಖೇದಕರ ಸಂಗತಿ ಕಾಶ್ಮೀರ್ ಪಂಡಿತರ ಮಾರಣಹೋಮ ಮುಂತಾದ ಸಂಗತಿಗಳನ್ನು ಒಳಗೊಂಡ ಚರ್ಚೆಯನ್ನು ಜೀ ಹಿಂದಿ ನ್ಯೂಸ್ ನಲ್ಲಿ ಮಾಡಿದ್ದರು ಪತ್ರಕರ್ತ-ನಿರೂಪಕ. ಅವಾರ್ಡ್ ಹಿಂತಿರುಗಿಸುತ್ತಿರುವವರ ಬಳಿ ನಿರೂಪಕ ಕಾಶ್ಮೀರ್ ಪಂಡಿತರ ಸಮಸ್ಯೆ, ಅವರು ಅವ್ರ ನೆಲದಲ್ಲೇ ಇರಲಾಗದಂತಹ ಖೇದಕರ ಸಂಗತಿ, ಅವರು ಮಾರಣಹೋಮ ಹೀಗೆ ಸಂಪೂರ್ಣವಾಗಿ ಅ ಅಂಶಗಳ ಅಡಿಯಲ್ಲಿ ಚರ್ಚೆ ನಡೆಸುತ್ತಾ ಅಂತಹ ದುರಂತದ ಬಗ್ಗೆ ಏನು ಅನ್ನಿಸದ ಪ್ರಶಸ್ತಿ ಪಡೆದವರಿಗೆ ಈಗ ಏಕಾಏಕಿ ಸಿಟ್ಟು ಬಂದು, ಬೇಸರ ಆಗಿ ದುಃಖಕ್ಕೆ ಈಡಾಗಿ ವಾಪಸಾತಿಗೆ ನಿಂತಿರುವ ಬಗ್ಗೆ ತುಂಬಾ ಚಂದದ ರೀತಿಯಲ್ಲಿ ಕಾಲೆಳೆಯುತ್ತಾ, ವಸ್ತುಸ್ಥಿತಿಯಲ್ಲಿನ ದ್ವಿಮುಖ ಪದ್ಧತಿಯ ವರ್ತನೆಯ ಬಗ್ಗೆ ಜರ್ನಲಿಸ್ಟ್ ಜಗತ್ತಿನ ಮುಂದೆ ಅನಾವರಣ ಮಾಡುತ್ತಿದ್ದರು. ವಾರ್ತಾವಾಹಿನಿಗಳಲ್ಲಿ ಇಂತಹ ಕಾರ್ಯಕ್ರಮಗಳು ಬಹಳಮುಖ್ಯ. ಅವಾರ್ಡ್ ಕೊಡಿಸುವ ತರಾತುರಿ, ಹಿಂತಿರುಗಿಸುವ ಒದ್ದಾಟ ಇವೆಲ್ಲಕ್ಕಿಂತ ತಮ್ಮ ಮನೆಯಲ್ಲಿಯಲ್ಲಿ ಇರಲಾಗದ ಆ ತಲ್ಲಣ , ಅದರ ಬಗ್ಗೆ ನೋವು ಎದುರಿಸುತ್ತಿರುವವರ ಬಗ್ಗೆ ಒಂದು ಸ್ವಲ್ಪವಾದರೂ ಕಾಳಜಿ ಇದ್ದಿದ್ದರೆ ಸುಖಾಸುಮ್ಮನೆ ವ್ಯರ್ಥವಾಗಿ ಚರ್ಚೆಗೆ ಇಳಿಯುವ, ಇಲ್ಲವೇ ಕೊಡುವ ಗಲಾಟೆಯ ಮೂಲಕ ಮಾಧ್ಯಮಗಳ ಮುಂದೆ ಸುದ್ದಿ ಆಗುತ್ತಿರಲಿಲ್ಲ.
ಜೀ ಹಿಂದಿ ನ್ಯೂಸ್ ನಲ್ಲಿ ಈ ಕಾರ್ಯಕ್ರಮನ್ನು ನಿರೂಪಕ ಅತ್ಯಂತ ಎಚ್ಚರವಾಗಿ , ಸುಂದರವಾಗಿ ಮುನ್ನಡೆಸಿಕೊಂಡು ಹೋದರು. ರೀ ಟೆಲಿಕಾಸ್ಟ್ ಮಾಡಿದ್ರೆ ನೋಡಿ. ಪ್ರಾಯಶಃ ಶನಿವಾರ ಸಂಜೆ ನಾನು ನೋಡಿದ್ದು.
@ ಪಬ್ಲಿಕ್ ಟೀವಿಯಲ್ಲಿ ರಂಗಣ್ಣನ ಬೆಳಕು ಕಾರ್ಯಕ್ರಮ, ಸಮಾಜಮುಖಿ ಕಾರ್ಯಕ್ರಮ. ಆದರೆ ಅಂತಹ ಕಾರ್ಯಕ್ರಮಗಳ ಬಗ್ಗೆ ವೀಕ್ಷಕರಿಗೆ ಹೆಚ್ಚು ಆಸಕ್ತಿ ಇರಲ್ಲ. ಸಮಾಜಕ್ಕೆ ಒಳ್ಳೆಯದನ್ನು ಮಾಡುವುದಕ್ಕೆ , ಪರೋಪಕಾರ ಮಾಡುವುದಕ್ಕೆ ಜನರಿಗೆ ಇಷ್ಟ ಇದ್ದರೂ ಕಾರ್ಯಕ್ರಮಗಳ ಮೂಲಕ ಸಮಾಜ ಸೇವೆ ಮಾಡೋಕೆ ಹೆದರುತ್ತಾರೆ, ಸುಮ್ಮನೆ ಕೋಡಂಗಿಗಳಾಗಿ ಬಿಡ್ತೀವಿ ಅಂತ. ಒಂದು ಒಳ್ಳೆಯ ಕಾರ್ಯಕ್ರಮ, ಅದರಲ್ಲಿ ಕಲಾವಿದ ಅರುಣ್ ಸಾಗರ್ ಬಂದಿದ್ದರು ನಾನು ನೋಡಿದ ಎಪಿಸೋಡ್ ನಲ್ಲಿ.
@ ಅರುಣ್ ಸಾಗರ್ ಅವರ ಮತ್ತೊಂದು ಕಾರ್ಯಕ್ರಮ ಅಂದೇ ನಾನು ಸುವರ್ಣವಾಹಿನಿಯಲ್ಲಿ ವೀಕ್ಷಿಸಿದ್ದೆ. ರಚಿತ ರಾಮ್ ಅವರು ಆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು. ಅರುಣ್ ಸಾಗರ್ ಥೇಟ್ ಅಣ್ಣಾವರ ರೀತಿ ಸಿದ್ಧವಾಗಿದ್ದರು, ನಿರ್ಮಾಪಕನ ಪಾತ್ರಧಾರಿ ಆಗಿದ್ದರು. ತುಂಬಾ ಸುಂದರ ಕಾರ್ಯಕ್ರಮ ಅದಾಗಿತ್ತು. ಎಂತಹ ಅದ್ಭುತವಾದ ಪ್ರತಿಭೆ ಅರುಣ್ ಸಾಗರ್ ಅನ್ನುವುದು ಪ್ರತಿಯೊಂದು ಕಾರ್ಯಕ್ರಮದ ಮೂಲಕವೂ ಸ್ಪಷ್ಟಪಡಿಸುತ್ತದೆ. ಟೈಮಿಂಗ್, ಬಾಡಿ ಲಾಂಗ್ವೇಜ್ ಎಲ್ಲವೂ ಅದ್ಭುತ. ಯಾರೇ ಆಗಲಿ ಒಮ್ಮೆ ಬಣ್ಣ ಹಚ್ಚಿದರೆ ಹಿಂಗೆ ರೆಡಿ ಆಗಿ ಬರಬೇಕು . ಅದ್ಭುತ ...
No comments:
Post a Comment