ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಲಿಲ್ ಚಾಂಪ್ಸ್ ನಲ್ಲಿ ಸ್ಪರ್ಧಿಗಳ ಕನ್ನಡಮ್ಮನ ಗುಣಗಾನ ಮಾಡುವ ಹಾಡುಗಳು ಬಹಳ ಚಂದ ಇತ್ತು.ಪ್ರತಿಯೊಂದು ಪ್ರತಿಭೆಯು ಆಹಾ ! ಎನ್ನುವಂತೆ ಹಾಡಿದ್ದು ಉತ್ಪ್ರೇಕ್ಷೆಯಲ್ಲ. ಕನ್ನಡ ರಾಜ್ಯೋತ್ಸವದ ಮೆರಗು ಹೆಚ್ಚಿಸಿದ್ದ ಕಾರ್ಯಕ್ರಮ ಅದು. ಅದರಲ್ಲಿ ತೀರ್ಪುಗಾರರಾದ ರಾಜೇಶ್, ವಿಜಯ್ ಪ್ರಕಾಶ್, ಅರ್ಜುನ್ ಬಗ್ಗೆ ಹೇಳುವಷ್ಟಿಲ್ಲ, ಮುಖ್ಯವಾಗಿ ವಿಜಯ್ ಪ್ರಕಾಶ್ ಕನ್ನಡ ಮಾತನಾಡುವ ಪ್ರಯತ್ನ ಅಮೋಘ ಹಾಗೂ ಶ್ಲಾಘನೀಯ..
ವಿಜಯ್ ಪ್ರಕಾಶ್ ಅವರೇ ಕಾರ್ಯಕ್ರಮದಲ್ಲಿ ಕನ್ನಡದಲ್ಲಿ ಎಷ್ಟು ಸಾಧ್ಯವೋ ಅಷ್ಟು ಮಾತನಾಡಿದ ನಿಮ್ಮ ಪ್ರಯತ್ನ ಅನನ್ಯ. ಅದಕ್ಕೆ ಕಾರಣವಿದೆ ನೆರೆಯ ರಾಜ್ಯವಾದ ಮಹಾರಾಷ್ಟ್ರದ ರಾಜಧಾನಿಯಾದ ಮುಂಬೈ ನಗರದಲ್ಲಿ ತಾವು ನೆಲೆ ಕಂಡದ್ದು. ಅಲ್ಲಿ ಕನ್ನಡ ಬಿಡಿ ಮೂಲ ಭಾಷೆ ಮರಾಠಿಯನ್ನು ಮಾತನಾಡದ ಪರಿಸ್ಥಿತಿ. ಆದರೆ ಚಲನಚಿತ್ರರಂಗದ ದೊಡ್ಡಮ್ಮನ ಸ್ಥಾನ ಗಳಿಸಿರುವ ಆ ಸ್ಥಳದಲ್ಲಿ ನೀವು ನೀವಾಗಿ ಗೆದ್ದು ಬಂದ ಪ್ರತಿಭೆ. ಆಂಗ್ಲ -ಹಿಂದಿ ಭಾಷೆಯ ರಾತ್ರಿ ರಾಣಿಯ ಘಮದಲ್ಲಿ ನೀವು ಮೈಸೂರು ಮಲ್ಲಿಗೆಯ ಸುವಾಸನೆಯನ್ನು ಹರಡಿದ್ದು, ನಮ್ಮಂತಹ ಅಪಾರ ಕನ್ನಡಿಗರಿಗೆ ಸದಾ ಸರ್ವದಾ ಹೆಮ್ಮೆ ನೀಡುವ ಸಂಗತಿಯಾಗಿದೆ. ಹಿಂದಿಯನ್ನು ಒಪ್ಪಿ ಕನ್ನಡವನ್ನು ಅಪ್ಪಿ ಬೇರೆ ಭಾಷೆಗಳನ್ನು ಸ್ವೀಕರಿಸಿ ಗೆದ್ದ ನಿಮ್ಮ ಬಗ್ಗೆ ನಾವು ಇನ್ನೇನು ಹೇಳುವುದಿದೆ.. ಕನ್ನಡ ಕನ್ನಡ .. ಆಹಾ ಸವಿಗನ್ನಡ...
:-) ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟ ಬೇಕು.. ಹೆಚ್ಚು ಖುಷಿ ಕೊಡ್ತು ಅದರ ಬಗ್ಗೆ ಹೆಚ್ಚು ಪ್ರತಿಕ್ರಿಯೆ ಇಲ್ಲ ವಿಜಯ್ ಪ್ರಕಾಶ್.
@ ಕನ್ನಡ ರಾಜ್ಯೋತ್ಸವದ ದಿನದಂದು ಕಸ್ತೂರಿ ವಾಹಿನಿಯಲ್ಲಿ ಸಂಪೂರ್ಣವಾಗಿ ಕನ್ನಡ ಗಾನಸುಧೆ ಇತ್ತು. ಕಾರ್ಯಕ್ರಮವೊಂದರ ಮುದ್ರಿತ ಕಾರ್ಯಕ್ರಮ. ಕಸ್ತೂರಿ ವಾಹಿನಿ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದ ಕನ್ನಡಿಗರಿಗೆ ನಿರಾಶೆ ಮಾಡಿದ ವಾಹಿನಿ ಅದು. ಅದರಲ್ಲಿ ಪ್ರಸಾರವಾದ ಅನೇಕ ಕಾರ್ಯಕ್ರಮಗಳನ್ನು ಆಸ್ಥೆಯಿಂದ ನೋಡಿವ ಅನೇಕ ವೀಕ್ಷಕರಲ್ಲಿ ನಾನು ಒಬ್ಬಾಕಿ. ಆದರೆ ಕನ್ನಡತಿ ಆರಂಭಿಸಿದ ಆ ಚಾನೆಲ್ ನಿರೀಕ್ಷಿಸಿದ ಮಟ್ಟ ತಲುಪದೇ ಇರುವುದು ಅತ್ಯಂತ ಬೇಸರದ ಸಂಗತಿ.
ಉತ್ತಮ ಹಾಸ್ಯ ಕಾರ್ಯಕ್ರಮಗಳು, ಹೆಣ್ಣುಮಕ್ಕಳು ಇಷ್ಟ ಪಡುವ ಧಾರಾವಾಹಿಗಳು, ತಲೆಗೆ ಹೆಚ್ಚು ಬುದ್ಧಿ ಕೊಡದೆ ಸುಮ್ಮನೆ ನೋಡುವಂತೆ ಮಾಡುವ ರಿಯಾಲಿಟಿ ಶೋಗಳು ಎಲ್ಲವು ನೀಡಿ ಕೊನೆಗೆ ಈ ಚಾನೆಲ್ ಒಂದಿದೆ ಎನ್ನುವುದನ್ನು ಜನರ ಮನಃಪಟಲದಿಂದ ಮರೆಯುವಂತೆ ಮಾಡಿದ ಚಾನೆಲ್ . ಯಾಕೋ ಕಸ್ತೂರಿ ಕನ್ನಡ ನೋಡಿದಾಗ ಇವೆಲ್ಲಾ ಅನ್ನಿಸಿತು.
No comments:
Post a Comment