ಬಿಗ್ ಬಾಸ್ ಕಲರ್ ವಾಹಿನಿಯಲ್ಲಿ ತನ್ನತ್ತ ವೀಕ್ಷಕರನ್ನು ಆಕರ್ಷಿಸುತ್ತಿರುವ ಕಾರ್ಯಕ್ರಮ. ಒಂದಷ್ಟು ಜನ ಇದೊಂದು ಕಾರ್ಯಕ್ರಮವೇ ಎಂದು ಮೂಗು ಮುರಿದವರು ಅವರಿಗೆ ಬೇಕಾದವರು ಈಗ ಇದ್ದಾರೆ ಅಂತ ಆ ಕಾರ್ಯಕ್ರಮ ನೋಡುತ್ತಿದ್ದಾರೆ. ಕಲರ್ ವಾಹಿನಿಯ ಬಹಳಷ್ಟು ಕಾರ್ಯಕ್ರಮಗಳನ್ನು ಬಿಗ್ ಬಾಸ್ ಕಾರ್ಯಕ್ರಮ ಒಂದೇ ತಿಂದು ಬಿಡುವ ಸಾಧ್ಯತೆಗಳು ನಿಚ್ಚಳವಾಗಿದ್ದರೂ ಕಲರ್ ವಾಹಿನಿಯವರು ಧೈರ್ಯವಾಗಿ ಈ ಒಂದು ಕಾರ್ಯಕ್ರಮ ಪ್ರಸಾರ ಮಾಡ್ತಾ ಇದ್ದಾರೆ .. ಯಾಕೆ ಈ ಮಾತು ಹೇಳ್ತಾ ಇದ್ದೀನಿ ಅಂದ್ರೆ ಸಾಮಾನ್ಯವಾಗಿ ಇಂತಹ ರಿಯಾಲಿಟಿ ಶೋಗಳು ಪ್ರಸಾರ ಆಗುವಾಗ ಬೇರೆ ಸುದ್ದಿ ವಾಹಿನಿಗಳು ಸೇರಿದಂತೆ ಖುದ್ದು ಕಲರ್ ವಾಹಿನಿಯು ಸಹಿತ ಪ್ರಸಾರಿಸಲು ಹೆಚ್ಚಿನ ಆದ್ಯತೆ ನೀಡುತ್ತದೆ. ವೀಕ್ಷಕ ಬೇಡಾ ನೋಡಲ್ಲ ಅಂತ ಅನ್ನುತ್ತಾ ವೀಕ್ಷಿಸುವ ವಾತಾವರಣ ಬಹಳಷ್ಟಿದೆ.
.... ಕನ್ನಡದಲ್ಲಿ ಕಿಚ್ಚ ಸುದೀಪ್ ಬಿಟ್ರೆ ಮತ್ಯಾರಿಗೂ ಬಿಗ್ ಬಾಸ್ ಪ್ರೆಸೆಂಟರ್ ಸ್ಥಾನ ತುಂಬಲು ಸಾಧ್ಯವಿಲ್ಲವೇನೋ ಎನ್ನುವಷ್ಟು ಚಂದದ ಹಿಡಿತ ಇದೆ. ಯಾಕೆಂದ್ರೆ ಕೇವಲ ಮಾತಿನ ಶೈಲಿ ಅಲ್ಲದೆ ಅವರ ಉಡುಗೆತೊಡುಗೆ, ಬಾಡಿ ಲಾಂಗ್ವೇಜ್ ಏನೇ ಇರಲಿ ಅತ್ಯಂತ ಇಷ್ಟ ಆಗುವಂತೆ ಇದೆ ಅಂಬೋದನ್ನು ಸಾಕಷ್ಟು ಸರ್ತಿ ನಾನು ಬರದೆ ಇದ್ದೀನಿ.ನಮ್ಮ ಅಮ್ಮನಿಗೆ ಕಿಚ್ಚನ ಮಾತಿನಶೈಲಿ, ಹೋಲ್ಡಿಂಗ್ ಕ್ಯಪಾಸಿಟಿ ಬಹಳ ಇಷ್ಟ. ಅವರು ಜಂಟಲ್ಮನ್ ಅಂತ ಹೊಗಳುತ್ತಾರೆ ಪ್ರತಿಬಾರಿ ಕಿಚ್ಚನ ಕಾರ್ಯಕ್ರಮ ವೀಕ್ಷಿಸುವಾಗಲು ಸಹ .. ಆದರೆ ಸುದೀಪ್ ಮಾತ್ರ ಪ್ರತಿ ಬಾರಿಯೂ ಅಂದ್ರೆ ಪ್ರತಿ ಸೀಸನ್ ನಲ್ಲೂ ನನ್ನನ್ನು ಕಿಚ್ಚ, ಹುಚ್ಚ, ಲುಚ್ಚ ಅಂದ್ರುನೂ....! ಎನ್ನುವ ಮಾತು ಹೇಳ್ತಾನೆ ಇರ್ತಾರೆ.. ನಾವು ಯಾವುದನ್ನು ಸ್ವೀಕರಿಸಬೇಕೋ ನಮಗೆ ಗೊತ್ತಾಗ್ತಾ ಇಲ್ಲ ... :-)
ಬಿಗ್ ಬಾಸ್ ಮನೆ ಅಂದ್ರ ಅನೇಕ ಕಲಿಕೆಗಳ ಒಂದು ಶಾಲೆ. ಒಂದು ಆಫೀಸ್, ಒಂದು ಜಾಗ, ಒಂದು ಬಸ್, ಎಲ್ಲೇ ಆಗಿರಲಿ ನಾವು ಸಹ ಕೆಲವರ ಜೊತೆ ಸ್ವಲ್ಪ ಕಾಲವು ಇರಲಾರದಂತಹ ಅಸಹನೆಯನ್ನು ಹೊಂದಿರುತ್ತೇವೆ. ಆದರೆ ಅನಿವಾರ್ಯವಾಗಿ ಬೇರೆ ಬೇರೆ ಬ್ಯಾಕ್ ಗ್ರೌಂಡ್ನಿಂದ ಬಂದಿರುವವರು, ಅವರೆಲ್ಲ ಈಗೋ ಮತ್ತು ಜೀವನ ಶೈಲಿ ಬದಿಗೊತ್ತಿ ಒಟ್ಟಿಗೆ ಬಾಳ್ವೆ ನಡೆಸ ಬೇಕಾದ ರೀತಿ ಇದೆಯಲ್ಲ ಅದು ಮಾತ್ರ ಸುಲಭದ್ದಲ್ಲ.
ಸುನಾಮಿ ಕಿಟ್ಟಿಯಂತಹ ಹುಡುಗರ ಹಿನ್ನೆಲೆ ಬೇರೆಯದ್ದು. ಥಳುಕು,ಬಳುಕಿನ ನಡುವೆ ತಮ್ಮನ್ನು ತಾವು ಗುರುತಿಸಿಕೊಳ್ಳುವುದಿದೆಯಲ್ಲ ಅದು ಬಹಳ ಮುಖ್ಯ. ಅಂತಹವರು ಇಂತಹ ಒಂದು ಕಾರ್ಯಕ್ರಮದ ಮೂಲಕ ಮತ್ತೊಂದಷ್ಟು ಕಲಿಯಲು ಹೆಚ್ಚು ಸಹಾಯಕಾರಿ. ಮುಖ್ಯವಾಗಿ ಹುಚ್ಚ ವೆಂಕಟೇಶ್ ಅವರು ಆರಂಭಿಕ ದಿನಗಳಲ್ಲಿ ತೋರಿದ್ದ ವಿರಾಟ ರೂಪ, ಈಗ ಅವರು ಇರುವ ರೀತಿ ನೋಡಿದ್ರೆ ಅವರ ಯು ಟ್ಯೂಬ್ ಡೌವ್ ಕಚ್ಚೋದಕ್ಕಿಂತ ಇದೇ ವಾಸಿಯಾಗಿದೆ. ಒಂದರ್ಥದಲ್ಲಿ ವೆಂಕಟ್ ಅವರಿಗೆ ಅತ್ಯುತ್ತಮವಾದ ವೇದಿಕೆಯಾಗಿದೆ ಇದು. ನಿಜ ಹೇಳ ಬೇಕೆಂದರೆ ವೆಂಕಟ್ ಬಗ್ಗೆ ಇದ್ದ ಇಮೇಜ್ ಹಾಗೂ ಅವರ ಮಾತಿನಶೈಲಿ , ಕಿರಿಕಿರಿ ಉಂಟು ಮಾಡಿದ್ರು ಸಹಿತ ಅವರ ಆ ಭಾರವಾದ ಮನಸ್ಸು ಹೆಣ್ಣುಮಕ್ಕಳು ಅದಕ್ಕಿಂತ ಸಹೋದರಿಯರು ಎಂದು ಗೌರವಿಸುವ ಹೆಣ್ಣುಮಕ್ಕಳ ಒಡನಾಟದಿಂದ ತಿಳಿಯಾಗಿದೆ ಎನ್ನುವುದು ಸ್ಪಷ್ಟ. ಒಟ್ಟಾರೆ ವೆಂಕಟ್ ಅವರ ಸಂಕಟ್ ದೂರ ಮಾಡಲು ಬಿಗ್ ಬಾಸ್ ಜಾಸ್ತಿ ಕಷ್ಟದ, ಓಡುವ, ಭಾರ ಎತ್ತುವ ಟಾಸ್ಕ್ ಕೊಟ್ಟರೆ ಚಂದ, ಅವರ ದೇಹ ಮತ್ತು ಮನಸ್ಸಿನ ಆರೋಗ್ಯ ತಿಳಿಯಾಗುತ್ತೆ..
.. ನೇತ್ರ ನಿರ್ಧಾರದ ಬಗ್ಗೆ ಅಯ್ಯಪ್ಪ ಕೋಪ ಮಾಡಿಕೊಂಡದ್ದು ನಗು ಬರೋಹಂಗೆ ಆಯ್ತು. ಆರಂಭಿಕ ಎಪಿಸೋಡ್ನಲ್ಲಿ ಇದೆ ಅಯ್ಯಪ್ಪ ಸುನಾಮಿ ಕಿಟ್ಟಿ ಬಳಿ ಯಾರನ್ನು ನಂಬಬಾರದು ಇದು ಗೇಂ, ಇವತ್ತು ನಿನ್ನ ಜೊತೆ ನಾನಿದ್ರು ನಾಳೆ ಗೆಲ್ಲುವ ಕಡೆ ಎನ್ನುವ ಅರ್ಥದಲ್ಲಿ ಪಾಪ ಹುಡುಗನ ಬಳಿ ಹೇಳಿದ್ದ ನೆನಪು !. ಅದೇ ತಾನೇ ನೇತ್ರ ಮಾಡಿದ್ದು. ಆಕೆ ಸಹ ಸ್ಪರ್ಧಿಯಾಗಿ ಗೆಲ್ಲುವ ಕಡೆಗೆ ಆದ್ಯತೆ ನೀಡಿದ್ದು ಎಲ್ಲರೀತಿಯಿಂದಲೂ ಸರಿ. ಅಯ್ಯಪ್ಪ ಆ ಜಾಗದಲ್ಲಿ ಇದ್ದಿದ್ದರೂ ಅದೇ ಮಾಡ್ತಾ ಇದ್ದದ್ದು.. ಯಾಕೇಂದ್ರೆ ಬೇಡ ಅಂತ ಅಂದ್ರು ಬಿಗ್ ಬಾಸ್ ಮನೆ ಬೇಕು ಅನ್ನುವಂತೆ ಮಾಡುತ್ತದೆ ಸ್ಪರ್ಧಿಗಳಿಗೆ.. ಬಿಗ್ ಬಾಸ್ ಅಂದ್ರೆ ಸುಮ್ನೆ ಅಲ್ಲ ... ಹೌದು ಸ್ವಾಮಿ
No comments:
Post a Comment