ಸಾಮಾನ್ಯವಾಗಿ ಬ್ಲಾಗ್ ಬರೆಯುವ ವಿಷಯದಲ್ಲಿ ನನಗೆ ಸ್ವಲ್ಪ ಸೋಮಾರಿತನ ಇದ್ದೆ ಇದೆ. ಟೀವಿ ಬ್ಲಾಗ್ ತಾನೇ ನಾನು ಬರೆದದ್ದು ಓದುವವರು ತುಂಬಾ ಕಡಿಮೆ ಓದಿದರೂ ಅದರಲ್ಲಿ ಹೇಳಿಕೊಳ್ಳುವಂತಹ ವಿಶೇಷ ಅಂಶಗಳು ಇರುವುದಿಲ್ಲ ಆದಕಾರಣ ಅದಕ್ಕೆ ಹೆಚ್ಚು ಬೇಡಿಕೆ ಇಲ್ಲ ಅಂತ ಸಾಕಷ್ಟು ಕಾಲದಿಂದ ನನಗೆ ನಾನೇ ನಿರ್ಧಾರ ಮಾಡಿಕೊಂಡು ಬಿಟ್ಟಿದ್ದೆ. ಅದಕ್ಕೆ ಪೂರಕವಾಗಿ ಆರಂಭಿಕ ಹಂತದಲ್ಲಿ ನಾನು ಯಾರು ಎನ್ನುವುದನ್ನು ತಿಳಿಸದೇ ಗುಪ್ತವಾಗಿದ್ದುಕೊಂಡೆ ಇದನ್ನು ಬರೆಯಲು ಆರಂಭ ಮಾಡಿದ್ದೆ. ಆದರೆ ಇಬ್ಬರು ಹೆಣ್ಣುಮಕ್ಕಳ ಚೂಪಾದ ನಾಲಿಗೆಯ ಮುಳ್ಳು ತೀವ್ರವಾದ ಘಾಸಿ ಮಾಡಿದ ಕಾರಣ ನಾನು ನಾನೇ ಎಂದು ಹೇಳುವಂತಾಯಿತು. ಅನಾಮಿಕವಾಗಿ ಬರೆಯುವ ಕ್ರೇಜ್ ಇಲ್ಲದೆ ಇದ್ರೂ, ನನ್ನ ಬರವಣಿಗೆಯನ್ನು ಜನರು ಯಾವರೀತಿ ಇಷ್ಟ ಪಡುತ್ತಾರೆ ಎನ್ನುವ ಕುತೂಹಲ, ಮಾಧ್ಯಮಗಳ ವಿಷಯದಲ್ಲಿ ಬರೆಯುವ ಖುಷಿಯಲ್ಲಿ ಹೊಸದಾಗಿರುವುದೇನೋ ಮಾಡುತ್ತಿರುವ ಉತ್ಸಾಹ ಹೀಗೆ ಹಲವಾರು ಸಂಗತಿಗಳು.
ಆದರೆ ನಾನು ಬರೆಯದೆ ಇದ್ದಾಗ, ಸ್ವಲ್ಪ ದಿನಗಳು ಬರೆಯದೆ ಇದ್ದಾಗ ಮತ್ತೆ ಬರಿತಾ ಇಲ್ಲ ಯಾಕೆ ಎನ್ನುವ ಪ್ರಶ್ನೆ ಓದುಗ ದೇವರಿಂದ ..ಅದರಲ್ಲೂ ಎಫ್ ಬಿಯಲ್ಲಿ ಅನೇಕ ಸ್ನೇಹಿತರು ಮೇಡಂ ಯಾಕೆ ಬರೆಯುತ್ತಿಲ್ಲ, ವಾರಕ್ಕೆ ಎರಡು ಬಾರಿಯಾದರೂ ಬರೆಯಿರಿ ಎನ್ನುವ ಒತ್ತಾಯ..ಇಂತಹವೆಲ್ಲ ನೋಡಿದಾಗ ಯಾವರೀತಿ ಪ್ರತಿಕ್ರಿಯೆ ನೀಡಬೇಕೋ ಗೊತ್ತಾಗಲ್ಲ. ಆದರೂ ಅಂತಹ ಎಲ್ಲರಿಗೂ, ನನ್ನ ಬ್ಲಾಗ್ ಓದುವ ಪ್ರತಿಯೊಬ್ಬರಿಗೂ ಥ್ಯಾಂಕ್ಸ್ ..
@ ಬಿಗ್ ಬಾಸ್ ಹಿಂದಿಯ ಬಗ್ಗೆ ನಾನು ಬ್ಲಾಗ್ ನಲ್ಲಿ ಬರೆಯಲು ಆರಂಭ ಮಾಡಿದ್ದ ದಿನಗಳು. ನಾನು ಬರೆದಿರುವುದನ್ನು ಎಫ್ ಬಿ ಯಲ್ಲಿ ಶೇರ್ ಮಾಡ್ತಾ ಇದ್ದ ದಿನಗಳು ಅವು. ಆಗ ನನ್ನ ಬರ ಓದಿದ್ದ ಮಿತ್ರರೊಬ್ಬರು ಕನ್ನಡದಲ್ಲಿ ಇಂತಹ ಕಾರ್ಯಕ್ರಮ ಯಾಕೆ ಪ್ರಸಾರ ಆಗಲ್ಲ ಜಯಕ್ಕ ಅಂತ ಕೇಳಿದ್ದರು. ಆದರೆ ಆಗ ಕಲರ್ ವಾಹಿನಿಯ ಕಾಲವಲ್ಲ .. ನೋಡುವಾ ತಮ್ಮಯ್ಯ ಮುಂದೊದು ದಿನ ಅದು ಸಾಧ್ಯ ಆಗ ಬಹುದು ಎಂದಿದ್ದೆ. ಅದು ಸಾಧ್ಯವಾಗಿ ಈಗ ಮೂರನೇ ಸೀಸನ್.
ಬಿಗ್ ಬಾಸ್ ಹಿಂದಿಯಲ್ಲಿ ಸಲ್ಮಾನ್ boy ಬಗ್ಗೆ ಸಕತ್ ಖುಷಿ ಬರೆಯೋಕೆ. ಮೊದಲಿಂದಲೂ ನಾನು ಆಸ್ಥೆಯಿಂದ ಸಲ್ಮಾನ್ ಕಾರ್ಯಕ್ರಮ ವೀಕ್ಷಿಸುತ್ತಾ ಬಂದಿದ್ದೇನೆ. ಯಾರು ಏನೇ ಹೇಳಿದ್ರೂ ಈ ಬಿಗ್ ಬಾಸ್ ಬಗ್ಗೆ ನನಗೆ ಕುತೂಹಲ, ಆಸಕ್ತಿ ಇದ್ದೆ ಇದೆ.
ಈ ಬಾರಿ ಅಮನ್ ವರ್ಮ .. ಆತನನ್ನು ಕಂಡಾಗ ಹಳೆಯ ಸಂಗತಿ ನೆನಪಿಗೆ ಬರುತ್ತದೆ. ಆಗ ಖುಲ್ಜಾ ಸಿಮ್ ಸಿಮ್ ನಡೆಸಿಕೊಡುತ್ತಿದ್ದ ಕಾಲ. ಅಮನ್ ವರ್ಮ ಸೆಲೆಬ್ರಿಟಿಗಳ ನ್ನು ಕರೆಸಿ ಖುಲ್ಜಾ ಸಿಮ್ ಸಿಮ್ ಅಂತ ಅಡಿಸೋರು. ಮೂರು ಬಾಗಿಲು ಅದರಲ್ಲಿ ಒಂದರಲ್ಲಿ ಟೌಯ್ ಟೌಯ್ ಫಿಶ್ ಅಂತ ಹೇಳುವ ಮಡಕೆ ಇರ್ತಾ ಇತ್ತು. ಒಮ್ಮೆ ಹೀಗೆ ಓರ್ವ ಸೆಲೆಬ್ರಿಟಿ ಹೆಣ್ಣುಮಗಳು ಬಂದಿದ್ದಳು. ಬಾಗಿಲು ತೆರೆದಾಗ ಅಲ್ಲಿ ಮಡಕೆ ಇತ್ತು. ಪಾಪ ಆಕೆಗೆ ಮಡಕೆಯು ತನಗೆ ಬಹುಮಾನವಾಗಿ ಬಂದಿದ್ದು ಕಂಡು ಐ ಲವ್ ಮಟಕಾ ಅಂತ ಕುಣಿದಾಡಿ ಬಿಟ್ಟಿದ್ದಳು.. :-) ಆದರೆ ಅದು ಟೌಯ್ ಟೌಯ್ ಫಿಶ್ ಅನ್ನೋದು ಗೊತ್ತಿರಲಿಲ್ಲ.. ಅಮನ್ ವರ್ಮ ರನ್ನ ಯಾವಾಗ ನೋಡಿದರು ನನಗೆ ಆಕೆಯ ಮಡಕೆ ಕಥೆನೇ ನೆನಪಿಗೆ ಬರುತ್ತೆ..
ಸಾಮಾನ್ಯವಾಗಿ ಬಿಗ್ ಬಾಸ್ ಮನೆಯಿನ ಹೊರ ಬಂದ ಸ್ಪರ್ಧಿಗಳು ತಮಗೆ ಇಷ್ಟ ಬಂದಂಗೆ ಹೇಳಿಕೆ ಕೊಡ್ತಾ ಇದ್ರೂ. ನನ್ನ ಅಮ್ಮ ಹಿಂದಿ ಪೇಪರ್ ನಲ್ಲಿ ಬಂದ ಈ ಸಂಗತಿಗಳನ್ನು ನನಗೆ ಸಾಮಾನ್ಯವಾಗಿ ಹೇಳುತ್ತಿದ್ದರು. ಅದೆಲ್ಲವೂ ಬೇಡ ಅಂತ ಈಗ ಮೀಡಿಯಾದವರನ್ನೇ ಕರೆಸಿರೋದು ಮತ್ತು ಈ ಎಲ್ಲ ಸ್ಪರ್ಧಿಗಳ ಮನೆಯವರನ್ನು ಕರೆಸಿ ಅವರ ಅಭಿಪ್ರಾಯ ಕೇಳೋದು ತುಂಬಾ ವಿಶೇಷ ಅನ್ನಿಸಿದೆ.. ಆದ್ರೂ ಕನ್ನಡ ಹಾಗೂ ಹಿಂದಿ ಒಟ್ಟೊಟ್ಟಿಗೆ ಪ್ರಸಾರ ಆಗ್ತಾ ಇರೋದು ಮಾತ್ರ ಅಯ್ಯೋ ಅನ್ನುವಂತಾಗಿದೆ..
No comments:
Post a Comment