ದೀಪವು ನಿನ್ನದೇ ಗಾಳಿಯು ನಿನ್ನದೇ ಆರದಿರಲಿ ಬೆಳಕು...
ಸಮಸ್ತರಿಗೂ ದೀವಳಿಗೆಯ ಹಾರ್ದಿಕ ಶುಭಾಶಯಗಳು..
ಸಕತ್ ಮಳೆ, ಸಕತ್ ಹಬ್ಬಗಳು,ಸಕತ್ ಸ್ವೀಟ್ಸ್ ಆದರೆ ನಮಗೆ ಮಾತ್ರ ರಜೆ ಇಲ್ಲ ಛೇ! ಎಷ್ಟು ಬೇಸರದ ಸಂಗತಿ.. :-).. ತಿಂಗಳ ಪೂರ್ತಿ ದೀಪ ಮನೆ ಮುಂದೆ ಇದುವ ಖುಷಿ. ನನ್ನ ಬ್ಲಾಗ್ ನಲ್ಲೂ ತಿಂಗಳ ಪೂರ್ತಿ ದೀಪ ಇರುತ್ತೆ.. ಖುಷಿಯಾಗಿ ನಗುನಗುತ್ತಾ..
ಕನ್ನಡದ ಮಂದಿ ಬಿಗ್ ಬಾಸ್ ನೋಡೋದು ಕಡಿಮೆ ಮಾಡಿಲ್ಲ ಆದರೆ ನೋಡಿದವರು ಪ್ರತಿಬಾರಿ ತಮ್ಮ ಅಭಿಪ್ರಾಯಗಳನ್ನು ಸಹಿತ ಹೇಳುವುದನ್ನು ಬಿಟ್ಟಿಲ್ಲ. ಅದನ್ನು ನಾನು ಕೊನೆಯಲ್ಲಿ ಹಾಕುತ್ತೇನೆ..
ಸಾಮಾನ್ಯವಾಗಿ ವಾರದ ಕೊನೆಯಲ್ಲಿ ಕಲರ್ ಕನ್ನಡ- ಹಿಂದಿ ಬಿಗ್ ಬಾಸ್ ಕಿಚ್ಚ ಸುದೀಪ್ , ಸಲ್ಮಾನ್ boy ಕಾರ್ಯಕ್ರಮ ನೋಡುವ ಒಂದು ಅಭ್ಯಾಸ ಬಿಗ್ ಬಾಸ್ ಸೀಸನ್ ಇರುವ ತನಕ ಇದ್ದೆ ಇರುತ್ತದೆ.
ಕಳೆದವಾರ ಇಬ್ಬರೂ ಪ್ರಸೆಂಟರ್ಸ್ ಸ್ಪರ್ಧಿಗಳಿಗೆ ಮಾಡಿದ ಕೌನ್ಸಿಲಿಂಗ್ ಅದ್ಭುತವಾಗಿತ್ತು..
ಸಲ್ಮಾನ್ ಖಾನ್ ಅವರು ನಾಮಿನೇಟ್ ಆಗಿದ್ದ ಮಂದನಾಗೆ ಬುದ್ಧಿ ಹೇಳುತ್ತಾ ಜನರು ಸ್ಪರ್ಧಿಯನ್ನು ಉಳಿಸ ಬೇಕಾದರೆ ಅವರಿಗೆ ಇಷ್ಟವಾಗಿದ್ದಾಗ ಮಾತ್ರ ಇವೆಲ್ಲ ಸಾಧ್ಯ, ಅಲ್ಲದೆ ಮತ್ತೊಬ್ಬ ಸ್ಪರ್ಧಿ ರಿಮಿ ಸೇನ್ ಗೆ ಸರಿಯಾಗಿ ಕೌನ್ಸಿಲಿಂಗ್ ಮಾಡಿದ್ರು ಇನ್ ಡೈರೆಕ್ಟ್ ಆಗಿ , ಇನ್ನು ಸ್ಪಷ್ಟ ಕನ್ನಡದಲ್ಲಿ ಹೇಳುವುದಾದರೆ ಮುಖಕ್ಕೆ ಮಂಗಳಾರತಿ ಎತ್ತುವುದು ಅಂತಾರಲ್ಲ ಹಾಗೆ. ಯಾವುದೇ ಸ್ಪರ್ಧಿ ಬಿಗ್ ಬಾಸ್ ಗೆ ಬರುವ ಮುನ್ನ ಅವರ ಇಚ್ಚೆಯಂತೆ ಬಂದಿರುತ್ತಾರೆ ವಿನಃ ಬಿಗ್ ಬಾಸ್ ಹಟಕ್ಕೆ ಬಿದ್ದು ಅವರನ್ನು ಕರೆಸಿಕೊಳ್ಳುವುದಿಲ್ಲ. ಇದು ಪ್ರತಿಯೊಬ್ಬ ಸ್ಪರ್ಧಿಗೂ ಗೊತ್ತಿರುತ್ತದೆ. ಈ ಮಾತನ್ನು ಮಂದನಾ ಬಳಿ ಸಲ್ಮಾನ್ ಹೇಳಿದರು. ಅದು ಸತ್ಯ ಅಲ್ವೇ !ಆದರೆ ಯಾವುದೇ ಸೀಸನ್ ಆಗಿರಲಿ ಹೋಗ್ತೀನಿ,ನಾನು ಹೋಗ್ತೀನಿ ಅಂತ ಅಳ್ತಾರೆ ಬಂದವರು.... ಅಂತಹವರ ಬಳಿ ಒಳ್ಳೆಯ ಆಪ್ತ ಸಮಾಲೋಚಕ ಹೇಗೆ ಮಾತಾಡ್ತಾರೆ, ದಾರಿಗೆ ತರುತ್ತಾರೆ ಅನ್ನೋದು ಮುಖ್ಯ. ಆ ವಿಷಯದಲ್ಲಿ ...ಹೇಯ್ ಸಲ್ಮಾನ್ ಲೈಕ್ ಇಟ್ಟಾ ...
@ಇತ್ತೀಚೆಗೆ ನಾನು ಅದೇ ಬಿಹಾರದ ಎಲೆಕ್ಷನ್ ಮುಗಿದ ಬಳಿಕ ಬರುತ್ತಿದ್ದ ಅನಾಲಿಸಿಸ್ ಕನ್ನಡದ ಜೊತೆಗೆ ಬೇರೆ ಭಾಷೆಯ ನ್ಯೂಸ್ ಚಾನೆಲ್ ಗಳನ್ನೂ ನೋಡ್ತಾ ಇದ್ದೆ. ರಾತ್ರಿ ಒಂಬತ್ತೂವರೆ ಸುಮಾರಿಗೆ ಜೀ ಹಿಂದಿ ವಾಹಿನಿಯ ಸುಧೀರ್ ಚೌಧರಿ ಅವರು ವಾರ್ತೆ ಓದುವುದನ್ನು ಕೇಳಿ ಖುಷಿ ಅನ್ನಿಸಿತು. ಅನಾಲಿಸಿಸ್ ರೂಪದಲ್ಲಿ ಭಿನ್ನವಾಗಿ ವಿಷಯ ಮಂಡನೆ ಮಾಡುತ್ತಿದ್ದರು. . ತುಂಬಾ ವಿಶೇಷ ಅನ್ನಿಸಿತು. ಅವರೇ ಅದನ್ನು ಬರೆದದ್ದು ಅಂದ್ರೆ ವಾವ್ ! ಬರೆದವರು ಬೇರೆಯವರಾಗಿದ್ದರೆ, ವಾವ್ ವಾವ್..! ಆದರೆ ಓದಿದ ಶೈಲಿಗೆ ವಾರೆವ್ವಾ ! ಮುಖ್ಯವಾಗಿ ಅವರು ಓದುವ ರೀತಿ ಅಥ್ವಾ ಹೇಳುವ ರೀತಿ ಇಷ್ಟ ಆಯ್ತು.. ವಾರ್ತೆಯನ್ನು ನೋಡುವ ಆಸಕ್ತಿ ಇಂತಹ ಪತ್ರಕರ್ತರಿಂದ ಉಂಟಾಗುತ್ತೆ ವೀಕ್ಷಕರಿಗೆ..
@ ಕನ್ನಡ ಬಿಗ್ ಬಾಸ್ ನಲ್ಲಿ ಕಿಚ್ಚ ಸುದೀಪ್ ಮಾತುಗಾರಿಕೆ ಬಗ್ಗೆ, ಅವರು ಸ್ಪರ್ಧಿಗಳಿಗೆ ಕೌನ್ಸಿಲಿಂಗ್ ಮಾಡುವ ಬಗ್ಗೆ ವಿಶೇಷವಾಗಿ ಹೇಳುವಷ್ಟಿಲ್ಲಾ. ಹುಚ್ಚ ವೆಂಕಟ್ ಅವರ ಬಳಿ ತಮ್ಮ ವೃತ್ತಿ ಬದುಕಿನ ಆರಂಭಿಕ ಕ್ಷಣವನ್ನು ಯಾವರೀತಿ ಸ್ವೀಕರಿಸಿದರು ಎನ್ನುವ ಸಂಗತಿ ಹೇಳಿದಾಗ ಸುದೀಪ್ ಅವರು ತಮ್ಮ ವೃತ್ತಿ ಬದುಕಿನ ಆರಂಭಿಕ ಹಂತದ ಬಗ್ಗೆ ತಿಳಿಸುತ್ತಾ ತಮಗಾದ ಅನುಭವವನ್ನು ಅಪಮಾನ ಎಂದು ತಿಳಿಯದೆ ಅದನ್ನು ಚಾಲೆಂಜ್ ಆಗಿ ತೆಗೆದುಕೊಂಡ ರೀತಿ ಅದ್ಭುತ..
ಬದುಕಲ್ಲಿ ಇಂತಹ ಅಂಶ ಎದುರಾಗುತ್ತಲೇ ಇರುತ್ತದೆ, ಅದರಿಂದ ನಾವು ಹೇಗೆ ಹೊರ ಬಂದು ಗೆಲ್ಲುತ್ತೇವೆ ಎನ್ನುವುದು ಬಹಳ ಮುಖ್ಯ.. ಕಿಚ್ಚ ಅಂದ್ರೆ ಸುಮ್ಮನೆ ಅಲ್ಲ.. ಸುದೀಪ್ ಲೈಕ್ ಇಟ್.ನಾನು ಟ್ವಿಟ್ಟರ್ ನಲ್ಲಿ ಇದ್ದರು ಹೆಚ್ಚು ಫಾಲೋ ಮಾಡೋದು ನ್ಯೂಸ್ ಗುಂಪನ್ನ..ಆದರೆ ಫೇಸ್ ಬುಕ್ ನಲ್ಲಿ ಆಗಾಗ ಬರೀತೀನಿ..
ಮೊನ್ನೆಯಿಂದ ಒಂದು ಟಾಸ್ಕ್ ಪ್ರಸಾರ ಆಗ್ತಾ ಇದೆ. ಅದರಲ್ಲಿ ನ ಅಂಶಗಳು ಕನ್ನಡಿಗರಿಗೆ ಅಷ್ಟೊಂದು ಇಷ್ಟವಾಗಿಲ್ಲ. ಯಾವರೀತಿ ಬೇಸರ ಉಂಟು ಮಾಡಿದೆ ಎನ್ನುವುದನ್ನು ನನ್ನ ಮಿತ್ರ ಶಿವ ಪ್ರಸಾದ್ ತಮ್ಮ ಎಫ್ ಬಿ ವಾಲ್ ನಲ್ಲಿ ಹಂಚಿಕೊಂಡಿದ್ದಾರೆ. ಅವರಿಗೆ ಬಂದ ಪ್ರತಿಕ್ರಿಯೆಗಳು ಇಲ್ಲಿವೆ..
"ಬಿಗ್ ಬಾಸ್ ಅಸಹ್ಯ ಮತ್ತು ಹಳೆ ಚಪ್ಪಲಿ "
******************************************
ಇಂದಿನ ಬಿಗ್ಗ್ ಬಾಸ್ ಮನೆಯ ಟಾಸ್ಕ್ ನಲ್ಲಿ ಜಮೀನದಾರ ಮತ್ತು ಗುಲಾಮ ಟಾಸ್ಕ್ ಕೊಟ್ಟು ಮನುಷ್ಯತ್ವ ಮತ್ತು ಮಾನವೀಯತೆಯನ್ನ ಕೊಲೆ ಮಾಡಿದ್ದಾರೆ ಶೃತಿ ಯಂತ ಹಿರಿಯ ಕಲಾವಿದೆ ಯಾರೊ ಹಾಕಿರುವ ಹಳೆ ಚಪ್ಪಲಿಯನ್ನ ಸೆರಗಿನಿಂದ ಹೊರಸುತ್ತಿದ್ದರೆ ಬಹಳ ಹಿಂಸೆ ಯಾಗುತ್ತಿತ್ತು . ಹುಚ್ಚ ವೆಂಕಟ್ ರೆಹಮಾನ್ ಕೈಯಲ್ಲಿ ಚಪ್ಪಲಿ ಹಳತೆ ನೋಡಿಸಿದರೆ ,ಸುನಾಮಿ ಕಿಟ್ಟಿ ಕೃತಿಕಾ ಎಂಬ ಹೆಣ್ಣು ಮಗಳ ಕೈಯಲ್ಲಿ ತಲೆಗೆ ಮಸಾಜ್ ಮಾಡಿಸಿ ಊಟ ಮಾಡಿಸಿ ಕೊಳ್ಳುವ ನೆಪದಲ್ಲಿ ಕೈ ಕಚ್ಚಿ ಅಸಹ್ಯ ಮಾಡಿದ . ದಿನ ಪೂರ್ತಿ ` ಇಂತಹುದೆ . ಈ ರೀತಿ ಗುಲಾಮ ಮನಸ್ಥಿತಿಗೆ ಧಿಕ್ಕಾರವಿರಲಿ .
******************************************
ಇಂದಿನ ಬಿಗ್ಗ್ ಬಾಸ್ ಮನೆಯ ಟಾಸ್ಕ್ ನಲ್ಲಿ ಜಮೀನದಾರ ಮತ್ತು ಗುಲಾಮ ಟಾಸ್ಕ್ ಕೊಟ್ಟು ಮನುಷ್ಯತ್ವ ಮತ್ತು ಮಾನವೀಯತೆಯನ್ನ ಕೊಲೆ ಮಾಡಿದ್ದಾರೆ ಶೃತಿ ಯಂತ ಹಿರಿಯ ಕಲಾವಿದೆ ಯಾರೊ ಹಾಕಿರುವ ಹಳೆ ಚಪ್ಪಲಿಯನ್ನ ಸೆರಗಿನಿಂದ ಹೊರಸುತ್ತಿದ್ದರೆ ಬಹಳ ಹಿಂಸೆ ಯಾಗುತ್ತಿತ್ತು . ಹುಚ್ಚ ವೆಂಕಟ್ ರೆಹಮಾನ್ ಕೈಯಲ್ಲಿ ಚಪ್ಪಲಿ ಹಳತೆ ನೋಡಿಸಿದರೆ ,ಸುನಾಮಿ ಕಿಟ್ಟಿ ಕೃತಿಕಾ ಎಂಬ ಹೆಣ್ಣು ಮಗಳ ಕೈಯಲ್ಲಿ ತಲೆಗೆ ಮಸಾಜ್ ಮಾಡಿಸಿ ಊಟ ಮಾಡಿಸಿ ಕೊಳ್ಳುವ ನೆಪದಲ್ಲಿ ಕೈ ಕಚ್ಚಿ ಅಸಹ್ಯ ಮಾಡಿದ . ದಿನ ಪೂರ್ತಿ ` ಇಂತಹುದೆ . ಈ ರೀತಿ ಗುಲಾಮ ಮನಸ್ಥಿತಿಗೆ ಧಿಕ್ಕಾರವಿರಲಿ .
No comments:
Post a Comment