ನಿಬ್ಬೆರಗು


Image result for deepam

Image result for green color flowers
ವಿಜಯಲಕ್ಷ್ಮಿ ಶಿಬರೂರು ಅವರ ಕವರ್ ಸ್ಟೋರಿ ಅತ್ಯಂತ ಇಷ್ಟವಾಗುವ ಕಾರ್ಯಕ್ರಮಗಳಲ್ಲಿ ಒಂದು. ಹೆಣ್ಣು ಎಂದರೆ ಹೀಗಿರಬೇಕು ಎಂದು ಹೇಳುವಂತಹ ವಿಶೇಷ ಪತ್ರಕರ್ತೆ ಆ ಹೆಣ್ಣುಮಗಳು. ಥೇಟ್ ಸಿನಿಮಾಗಳಲ್ಲಿ ಇರುವ  ಸಾಹಸಮಯಿ ಹೀರೋಯಿನ್ ರಂತೆ. ಆಕೆಯ ಸಾಧನೆ ಬಗ್ಗೆ ಹೆಚ್ಚು ಖುಷಿ ಆಗುತ್ತದೆ. ಆಕೆಯ ತಂಡ, ಸುವರ್ಣ ನ್ಯೂಸ್  ಎಲ್ಲರಿಗೂ ಇಂತಹ ಒಬ್ಬಾಕಿ ಅವರ ಗುಂಪಲ್ಲಿ ಇರುವುದು ಹೆಮ್ಮೆ ಆಗುತ್ತೆ. ನಮಗೂ ಸಹ.. ಡಿಯರ್ ವಿಜಯಲಕ್ಷ್ಮಿ ಸಾಹಸದ ಭರದಲ್ಲಿ ಹಾದಿಯಲ್ಲಿ ಹೆಜ್ಜೆ ಜಾಗ್ರತವಾಗಿಡಿ  ಅದಷ್ಟೇ ನಮ್ಮ ಕಳಕಳಿ .
Image result for green color flowers
@ ಕಲರ್ ಕನ್ನಡ ವಾಹಿನಿಯಲ್ಲಿ ಮಜಾ ಟಾಕೀಸ್ ನಲ್ಲಿ  ಕಲಾವಿದ ಮಂಡ್ಯ ರಮೇಶ್ ಅವರ ಬಗ್ಗೆ ವಿಶೇಷವಾಗಿ ಹೇಳ ಬೇಕಿಲ್ಲ. ಏಕೆಂದರೆ ಅವರ ನಟನೆಯನ್ನು ನೋಡಿದರೆ ಸಾಕು.. ಅದೆಷ್ಟು ಜೀವಂತಿಕೆ. ಸಾಮಾನ್ಯವಾಗಿ ಮಂಡ್ಯ ಕನ್ನಡದ ಜೊತೆಗೆ ತಪ್ಪು ಆಂಗ್ಲ ಪದ ಅಂದ್ರೆ  ಅಂಪೈರ್ ಗೆ ಸಪ್ಲೈರ್ ಅನ್ನೋದು, ಹೀಗೆ ಹತ್ತು ಹಲವಾರು ರೀತಿಯಲ್ಲಿ ಅವರು ಜನರನ್ನು ನಗಿಸುತ್ತಾರೆ. ವಿಶೇಷ ಏನೆಂದರೆ ಆ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದೆ ಅಪರ್ಣ ಅದ್ಯಾಕೋ ತೀರಾ ಕಂಠಪಾಠ  ಮಾಡಿದಂತೆ ಮಾತಾಡ್ತಾರೆ. ಇಂತಹ ಕಾರ್ಯಕ್ರಮದಲ್ಲಿ ಎಷ್ಟು ನ್ಯಾಚುರಲ್ ಆಗಿದ್ರೆ ಅಷ್ಟು ಒಳ್ಳೇದಲ್ವ ? ಇದು ನನ್ನ ಅಭಿಪ್ರಾಯ ಅಷ್ಟೇ !
@ ಚಂದನವಾಹಿನಿ  ಅಚ್ಚ ಮಧ್ಯಮ ವರ್ಗದ  ಹೆಣ್ಣು ಮಗಳಂತೆ  .  ಸಾಂಪ್ರದಾಯಿಕ ಕಾರ್ಯಕ್ರಮಗಳಿಗೆ ಆದ್ಯತೆ ನೀಡುವ ಒಂದು ವಾಹಿನಿ. ಅದರಲ್ಲಿ  ಬಹಳಷ್ಟು  ವಿಶೇಷ ಕಾರ್ಯಕ್ರಮಗಳು ಪ್ರಸಾರವಾಗುತ್ತದೆ. ಅದರಲ್ಲಿ ಒಂದು ಸಾಧಕ ದಂಪತಿಗಳು  ಮತ್ತೊಬ್ಬ ಸಾಧಕ ದಂಪತಿಗಳನ್ನು ಸಂದರ್ಶಿಸುವುದು, ಮಾತನಾಡುವುದು , ಹರಟುವುದು ಏನು ಬೇಕಾದರೂ ಹೇಳ ಬಹುದು. ಅತ್ಯಂತ ಸರಳ ಹಾಗೂ ಸುಂದರ ಕಾನ್ಸೆಪ್ಟ್ ಅದು. ತೀರ ಅಬ್ಬರದ, ಅತಿಯಾದ ಯಾವುದೇ ಇಂತಹ ಅಂಶಗಳಿಗೆ ಆದ್ಯತೆ ನೀಡದೆ ಸರಳ ರೀತಿಯಲ್ಲಿ ಇರುತ್ತದೆ. ನನಗೆ ಅದರ ಹೆಸರು ಗೊತ್ತಿಲ್ಲ ಮತ್ತು ಅದು ಸಾಮಾನ್ಯವಾಗಿ ರಾತ್ರಿ ಎಂಟೂವರೆ ಆ ಸಮಯದಲ್ಲಿ ನೋಡಿದ್ದೇನೆ. ವಾರಕ್ಕೆಷ್ಟು ಬಾರಿ ಬರುತ್ತದೆ ಎನ್ನುವುದುಅರ ಅರಿವಿಲ್ಲ. ಸಾಧ್ಯವಾದರೆ ನೋಡಿ, ಅತ್ಯುತ್ತಮ ಕಾರ್ಯಕ್ರಮಗಳಲ್ಲಿ ಅದೂ ಒಂದು...
Image result for green color flowers
@ ಜೀ ಕನ್ನಡ ವಾಹಿನಿಯಲ್ಲಿ ಲಿಲ್  ಚಾಂಪ್ಸ್ ಅಂತಿಮ ಹಣಾಹಣಿ ಸಿದ್ಧವಾಗ್ತಾ ಇದೆ.. ರಾಜೇಶ್, ಅರ್ಜುನ್, ವಿಜಯ್ ಪ್ರಕಾಶ್ ಮೂರು ಅತಿರಥ ಮಹಾರಥರ ಸಮ್ಮುಖದಲ್ಲಿ ಮುದ್ದು ಮಕ್ಕಳು ತಮ್ಮ ಪ್ರತಿಭೆ ತೋರುತ್ತಿದ್ದಾರೆ. ಅದರಲ್ಲಿ  ಅಭಿನವ್ ಚಂದ್ರಕಾಂತ್ ಭಟ್ ಮತ್ತು ಅಧೀಶ್ ಎನ್ನುವ ಇಬ್ಬರು ಪುಟಾಣಿ   ಮಕ್ಕಳು ಇದ್ದಾರೆ. ಆದರೆ ಅವರ ಪ್ರತಿಭೆ ದೈತ್ಯ. ಮೇಷ್ಟ್ರು ಹೇಳಿಕೊಟ್ಟ ಹಾಡು ಹಾಡಬೇಕು ಹಾಡ್ತ್ವಿ  ಎಂದು ಕಲಿತ ಹಾಡನ್ನು ಹೇಳಿಕೊಟ್ಟಂತೆ ಹಾದಿ ನಿಬ್ಬೆರಗು ಉಂಟು ಮಾಡ್ತಾರೆ.  ಅದೇರೀತಿ ಮಕ್ಕಳು ನಂತಹ ಆಡುವ ಮಾತುಗಳು ಸಹಿತ ಇಷ್ಟ ಆಗುತ್ತೆ.. ಗುರುಗಳು ಕೇಳಿದ ಪ್ರಶ್ನೆಗೆ ಉತ್ತರಿಸುವ ವಿಧಾನವೂ ಆಪ್ಯಾಯ.. 

No comments: