ನಿನ್ನೆ ಮೇಕೆ ಕಥೆ ಮೊನ್ನೆ ಸಿಕ್ಕಿ ಬಿದ್ದ ಪ್ರಶ್ನಪತ್ರಿಕೆ ತೋಳನ ಕಥೆಯ ಮುಂದೆ ಏನೇನೇನು ಮುಖ್ಯವಾಗಿಲ್ಲದೇ ಇದ್ದರು ತೋಳನ ಕಥೆ ಬಿಟ್ಟು ಮೇಕೆಗಳ ಕಡೆಗೆ ಕ್ಯಾಮರ ಲೈಟು, ಪೇಪರ್,ಇಂಕು ಚೆಲ್ಲಿದ್ದು ಮಾತ್ರ ಖೇದ ಅನ್ನಿಸಿತು. ಆದರೆ ಒಂದು ಜಾತಿ ಮಾತ್ರ ಸದಾ ಚರ್ಚಿತ ಅಂದ್ರೆ ಅದೆಷ್ಟು ಸ್ಟ್ರಾಂಗ್ ನೋಡಿ ನಮ್ಮ ಭಾರತೀಯ ಸಮಾಜದ ಜಾಸ್ತಿ ಬುದ್ಧಿವಂತರು, ಜಾಸ್ತಿ ತಿಳಿದವರ ಕಣ್ಣಲ್ಲಿ, ಬರಹದಲ್ಲಿ.
ಇಡೀ ಸಮುದಾಯವೇ ಮೇಕೆತಿಂದಂಗೆ ಮಾತಾಡಿದ ಮಂದಿ ಕಡಿಮೆ ಇಲ್ಲ ಬಿಡಿ. ಒಂದು ಹನಿ ನೀರು ಕುಡಿಯದೆ ಏಕಾದಶಿ ಉಪವಾಸ ಮಾಡುವ ಕರ್ಮಠರ ಬಗ್ಗೆ ಅರಿಯದೆ, ಒಟ್ಟೊಟ್ಟಿಗೆ ಎರಡು ಏಕಾದಶಿ ಬಂದರೆ ಎರಡೂ ದಿನಗಳು ಒಂದು ಉದ್ಧರಣೆ ತೀರ್ಥ ಸೇವಿಸಿ ಸದಾ ತಮ್ಮ ಆಚಾರಗಳ ಬಗ್ಗೆ ಶ್ರದ್ಧೆ ಇತ್ತು ಬದುಕುವ ಬಹುತೇಕ ಬ್ರಾಹ್ಮಣರಿಗೆ ನಿನ್ನೆ ಮೇಕೆ ಮಾಂಸ ತಿನ್ನಿಸಿ ಬಿಟ್ರು ಬಿಡಿ ಚರ್ಚೆ, ಬರಹ, ಸೋಶಿಯಲ್ ಮೀಡಿಯಾಗಳ ಮೂಲಕ ! ಒಂದು ಸತ್ಯ ಯಾವುದನ್ನು ಹಣಿಯೋಕೆ ಹೋಗ್ತೀರೋ ಅದು ಮಣಿಯಲ್ಲ!!
@ ಅತ್ಯಂತ ಸುಂದರ , ವಿಶೇಷವಾದ ಧಾರವಾಹಿ ಸ್ಟಾರ್ ವಾಹಿನಿಯಲ್ಲಿ ಪ್ರಸಾರವಾಗುವ ತಮನ್ನಾ. ಎರಡು ಬಲಿಷ್ಠ ಕೋಮಿನ ಹುಡುಗರನ್ನು ಆಟದ ಮೂಲಕ ಒಂದು ಮಾಡಿ ಅವರಲ್ಲಿರುವ ಉತ್ತಮಿಕೆಗಳು, ಬಾಲ್ಯದ ಮುಗ್ಧತೆ , ಪ್ರತಿಭೆ ಎಲ್ಲವನ್ನು ಹೊರ ತರುವಂತೆ ಮಾಡುವ ಪ್ರಯತ್ನ ಪ್ರತಿಯೊಂದು ಅದ್ಭುತ ರೀತಿಯಲ್ಲಿ ಹಣೆದಿದ್ದಾರೆ ಕಥೆಗಾರರು. ಎರಡು ಕೋಮಿನವರ ಬಗ್ಗೆ ಕೆಟ್ಟದಾಗಿ, ವಿಚಿತ್ರವಾಗಿ ತೋರಿಸುವ ಕಥೆಗಳು, ಧಾರಾವಾಹಿಗಳು, ಸಿನಿಮಾಗಳ ಮುಂದೆ ಈ ಕಥೆ - ಸೀರಿಯಲ್ ವಾವ್ ವಿಶಿಷ್ಟವಾಗಿದೆ.
No comments:
Post a Comment