ನಮ್ಮ ಮನೆಯಲ್ಲಿ ಈಗ ರಾಜ್ ನ್ಯೂಸ್, ಬಿಟಿವಿ ಸಹ ಪ್ರಸಾರ ಆಗುತ್ತೆ. ಯಾಕೆ ಈ ಮಾತು ಹೇಳ್ತಾ ಇದ್ದೀನಿ ಅಂದ್ರೆ ಈ ಕೊಡೆ ಸಿಸ್ಟಂ ಬಂದ ಬಳಿಕ ಎಷ್ಟೇ ಚಾನೆಲ್ಗಳು ಆರಂಭವಾದರೂ ಸಹ ನಾವು ನೋಡೋದು ತುಂಬಾ ಅವಧಿ ಕರಗಿ ಕಳೆದು ಹೋದ ಬಳಿಕವಷ್ಟೇ . ಈಗ ಈ ಚಾನೆಲ್ಗಳು ನಮ್ಮ ಟೀವಿ ಪರದ ಮೇಲೆ ರಾರಾಜಿಸಿ ಒಂದಷ್ಟು ಸಮಯ ಮಾತ್ರ ಕಳೆದಿದೆ..
ರಾಜ್ ನ್ಯೂಸ್ ನಲ್ಲಿ ಇವತ್ತು ಸಂಜೆ ಒಂದು ಸುದ್ದಿ ವೀಕ್ಷಿಸಿದೆ.. ಸಕತ್ ಖುಷಿ ಆಯ್ತು.. ಸ್ವಚ್ ಭಾರತ ಮಾಡಲು ಬಿಡುಗಡೆ ಮಾಡಿದ ಹಣವನ್ನು ಗುಳುಂ ಎಂದು ಸ್ವಚಗೊಳಿಸಿದ ವ್ಯಕ್ತಿಗೆ ಸಂಬಂಧಿತ ಅಧಿಕಾರಿ ಅದರಲ್ಲೂ ಮಹಿಳಾಧಿಕಾರಿ ಬಸ್ಕಿ ಹೊಡೆಸಿದ ಸುದ್ದಿ ಪ್ರಸಾರ ಆಗೋದು ಕಂಡು ಸಂತೋಷ ಆಯ್ತು ರೀ.. ಹೆಣ್ಣುಮಕ್ಕಳೇ ಸ್ಟ್ರಾಂಗು ಗುರು ಅಂತ ಹಾಡು ಹೇಳದೆ ಇದ್ರೂ..ಇಂತಹ ದಕ್ಷ ಅಧಿಕಾರಿಗಳು ಬಂದ್ರೆ ಸರ್ಕಾರ ಏನು ಮಾಡಬೇಕು ಅಂತ ನಿರ್ಧಾರ ಮಾಡಿರುತ್ತೋ ಅದನ್ನು ಮಾಡಬಹುದು.. ಆದರೆ ಎಲ್ಲಾ ಸರ್ಕಾರಗಳು ಇಂತಹ ಅಧಿಕಾರಿಗಳ ಪರ ಇರುತ್ತೆ ಅನ್ನೋಕೆ ಆಗಲ್ಲ.. ಹಾಗೆ ಮಾಡೋಕೆ ಹೊರಟ ಅಧಿಕಾರಿಗಳು ಬೇಗ ಶಿವನಪಾದ ಸೇರಿ ಬಿಡ್ತಾರೆ. ಆದರೆ ಪಾಪ ಆ ಹೆತ್ತಕರುಳುಗಳು ಬದುಕಿರುವ ತನಕ ..........
@ಈ ಟೀವಿ ಕನ್ನಡ ಸುದ್ದಿವಾಹಿನಿಯಲ್ಲಿ ಈಗ ಬದುಕು ಕಂಡುಕೊಂಡಿರುವ ನನ್ನ ಮೆಚ್ಚಿನ ನಿರೂಪಕರಲ್ಲಿ ಒಬ್ಬರಾದ ರಮಾಕಾಂತ್ ಬರ್ ಬರ್ತಾ ಜಾಸ್ತಿ ಸ್ಮಾರ್ಟ್ ಆಗ್ತಾ ಇದ್ದಾರೆ.. ಕ್ಯಾ ಬಾತ್ ಹೈ :-) ...
@ಪ್ಲಸ್ ಸುವರ್ಣ ಚಾನೆಲ್ ಸಿನಿಮಾಗಳನ್ನು ಪ್ರಸಾರಿಸುವ ವಾಹಿನಿ... ಇವತ್ತು ಗುಣಸಾಗರಿ ನೋಡಿ ಖುಷಿ ಆಯ್ತು. ಅದಕ್ಕೆ ಕಾರಣ ಆ ಚಿತ್ರ ಕಪ್ಪುಬಿಳುಪು.. ಅದಕ್ಕಿಂತಲೂ ಹೆಚ್ಚು ಖುಷಿ ಕೊಟ್ಟಿದ್ದು ಆ ಫ್ಯಾಂಟಸಿ, ಅದಕ್ಕಿಂತಲೂ ಹೆಚ್ಚು ಆನಂದ ನೀಡಿದ್ದು ಪಂಡರಿಭಾಯಿ ಅವರ ಅಭಿನಯ.. ನನಗೆ ಹಳೆಯ ಚಿತ್ರಗಳು ಹೆಚ್ಚು ಮಾನಸೋಲ್ಲಾಸ ನೀಡುತ್ತದೆ..
No comments:
Post a Comment