ಸಾಕಷ್ಟು ಕಾರಣಗಳಿಂದ ಬ್ಲಾಗ್ ಕಡೆ ಬರೋದಿಕ್ಕೆ ಆಗ್ತಾ ಇಲ್ಲ ಅದು ಒಂದು ಸಂಗತಿ. ಬ್ಲಾಗ್ ಬರೆಯೋದೇ ಬೇಡ ಅಂತ ನಿರ್ಧಾರ ಮಾಡಿದ್ದು ಸಹ ಮತ್ತೊಂದು ಸಂಗತಿ. ಕೆಲವು ಬಾರಿ ನಮ್ಮ ನಿರ್ಧಾರ ನಿಶ್ಚಲವಾಗಿರಲ್ಲ ಅಲ್ವೇ . ನನ್ನ ಫೇಸ್ ಬುಕ್ ಮಿತ್ರರು ಮತ್ತು ಸಹೋದರ ಸಮಾನರಾದ ಅಲ್ಲದೆ ಜೊತೆಗೆ ಬ್ಲಾಗ್ ಬರಹವನ್ನು ತಪ್ಪದೆ ಓದುತ್ತಿರುವ ಗುರುಮೂರ್ತಿ (ಗುರು ಮಲ್ನಾಡ್ ) ಅವರು ಯಾಕೆ ನೀವು ಬ್ಲಾಗ್ ಕಡೆ ಬಂದಿಲ್ಲ ಅಂತ ಹಠಕ್ಕೆ ಕುಳಿತ ಕಾರಣ ಬರೆಯುವ ನಿರ್ಧಾರ ಮಾಡಿದ್ದೇನೆ. ಸ್ವಲ್ಪ ಆದರೂ ಸ್ವಲ್ಪ ದಿನಗಳು ಪೂರ್ಣವಾದ ಬಳಿಕ ನಾನು ಬ್ಲಾಗ್ ಬರಹ ಮತ್ತೆ ಮುಂದುವರೆಸುತ್ತೇನೆ. ಆದರೆ ಈ ಎರಡು ದಿನಗಳು ತಪ್ಪದೆ ಬರೆಯುವೆ. ಅದಾದ ಬಳಿಕ ಸ್ವಲ್ಪ ದಿನಗಳು ಬ್ರೇಕ್... ಮತ್ತೊಂದು ಸಂಗತಿ ಅಂದ್ರೆ ಬ್ಲಾಗ್ ಬರೆಯದೆ ಇದ್ದರು ಸಹಿತ ಟಿವಿ ನೋಡುವುದು ಬಿಟ್ಟಿಲ್ಲ ಬಿಟ್ಟಿಲ್ಲ. .
ಮತ್ತೊಂದು ಬಿಗ್ ಬಾಸ್ ಆರಂಭವಾಗಿದೆ. . ಅತ್ಯಂತ ನಿರಾಸಕ್ತಿಯ ನಿರಾಸಕ್ತಿಯಿಂದ ಕೂಡಿದ ಸೀಸನ್ ಅಂತ ಅನಿಸಿದೆ. ಆದರೆ ಆ ಆಕರ್ಷಣೆ ಕಿಚ್ಚ ಸುದೀಪ್ ಅವರ ಮಾತಿನ ಶೈಲಿ, ಆ ಸ್ಟೈಲು ಆ ಪಂಚಾಯಿತಿ.. ಆ ನಾರದ ಕೆಲಸ ;- )
ಈ ಬಾರಿ ರಾಜ್ಯಆಡಳಿತದ ಅದರಲ್ಲೂ ಸರ್ವಾಧಿಕಾರದ ಕಾನ್ಸೆಪ್ಟ್ ಅಷ್ಟು ಕೆಟ್ಟದಾಗಿ ಮಾಡ್ತಾರೆ ಎನ್ನುವ ಅಂಶವನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ . ಸಾಕಷ್ಟು.. ಬಹಳಷ್ಟು ಉತ್ತಮ ನಟಿ, ಬರಹಗಾರ್ತಿ..ಬರಹಗಾರ, ನಟ ಹೀಗೆ ಹಲವಾರು +, + ಗಳನ್ನೂ ಹೊಂದಿರುವ ಮೋಹನ್, ಮಾಳವಿಕಾ ಅವರು ಇಷ್ಟೊಂದು ಖರಾಬಾಗಿ.. ನಿರೀಕ್ಷೆ ಮಾಡಿರಲಿಲ್ಲ ಬಿಡಿ :-)
ಪ್ರಾಯಶಃ ಅತಿಯಾಗಿತ್ತು ಅಂತ ಕಾಣುತ್ತೆ.. ಅದಕ್ಕೆ ಅತೀವ ನಿರಾಸೆ ಆಗಿದೆ.
ಅಧಿಕಾರ,ಪ್ರಚಾರ ಮಾಳವಿಕಾ ಅವರಿಗೆ ಹೊಸದಲ್ಲ. ಆದರೆ ಕ್ಯಾಪ್ಟನ್ ಆದ ಬಳಿಕ ಅವರ ವರ್ತನೆ ಕಂಡಾಗ ಮಾಳವಿಕಾ ಇಷ್ಟೊಂದು ಬಾಲಿಶವಾಗಿ ಆಡ್ತಾರಲ್ಲ ಅಂತ ಅನ್ನಿಸಿತ್ತು.
ಸರ್ವಾಧಿಕಾರಿ ಕಾನ್ಸೆಪ್ಟ್ ನಲ್ಲಿ ಆಕೆ ಸಿಂಹಾಸನವನ್ನು ರೆಸ್ಟ್ ಸೀಟ್ ರೀತಿ ಬಳಸಿಕೊಂಡರು. ಸಂಜನಾ ಜೊತೆ ,ಅವರ ಸೇವಕರು, ಪ್ರಜೆಗಳ ಜೊತೆ ತುಂಬಾ ಸಾಫ್ಟ್ ಆಗಿ ವರ್ತಿಸಿ ನಾಟಕದ ಹದ ಕೆಡಿಸಿ ಅವರು ಕೇವಲ ನಿರ್ದೇಶಕರು ಹೇಳಿದ್ದು ಮಾಡುವ ಮತ್ತು ಸ್ವಂತಿಕೆ ಇಲ್ಲದ ಜಾಣೆ ಅಂತ ಅನ್ನಿಸಿದ್ದು ಸತ್ಯ.
ಸಾಕಷ್ಟು ದೊಡ್ಡವರಿಂದ ಹೊಗಳಿಸಿಕೊಂಡ ಪ್ರತಿಭಾವಂತೆ ಈಕೇನೇನಾ ಅಂತ ಅನ್ನಿಸಿದ್ದು ಸತ್ಯ...ಈ ಸೀಸನ್ ನಲ್ಲಿ ಸ್ಪರ್ಶ ರೇಖ ಇಷ್ಟ ಆಗ್ತಾ ಇದ್ದಾರೆ..
ಬಿಗ್ ಬಾಸ್ -3 ರಲ್ಲಿ ಶ್ರುತಿ, ಆನಂದ್, ಪೂಜಾ, ಕೋಟ್ಲೆ ಯಾರೇ ಆಗಲಿ ಸಿಕ್ಕ ಅವಕಾಶ ಸಮರ್ಥವಾಗಿ ಬಳಸಿಕೊಂಡು ಆ ರೀತಿ ಓಪನ್ ಅಪ್ ಆಗಿದ್ದರು. ಆದರೆ ಈ ಬಾರಿ ಹೀಗೆ ಉಂಟಲ್ಲ.... ಹೀಗಾಯ್ತಲ್ಲ ಸ್ವಾಮಿ !
No comments:
Post a Comment