ಶುಭಾಷಯ

Image result for orange flower
ನನಗೆ ಹೆಚ್ಚು ಇಷ್ಟ ಆಗುವ ಕಾರ್ಯಕ್ರಮಗಳಲ್ಲಿ ಅಡುಗೆ ಕಾರ್ಯಕ್ರಮಗಳು ಸೇರಿವೆ. ಅದರಲ್ಲೂ ಜೀ ಕನ್ನಡ ವಾಹಿನಿಯಲ್ಲಿ ಮುರಳಿ ಅವರ ನೇತೃತ್ವದ ಅಡುಗೆ ಮುಖ್ಯವಾಗಿ ವೆಜ್ ಫುಡ್  ಕಾರ್ಯಕ್ರಮ ಅಂದ್ರೆ ಸಕತ್ ಇಷ್ಟ. ತಕ್ಕಮಟ್ಟಿಗೆ ಅಡುಗೆ ಮಾಡುವ ವಿಷಯದಲ್ಲಿ ನಾನು ಒಳ್ಳೆಯ ಹೆಸರು ಪಡೆದಿದ್ದೇನೆ.ಅದಕ್ಕೆ ಅಡುಗೆ ಕಾರ್ಯಕ್ರಮಗಳಲ್ಲಿ ಪ್ರಸಾರ ಆಗುವ ಟಿಪ್ಸ್, ಬಳಸ ಬಹುದಾದ ಪದಾರ್ಥಗಳ ಬಗ್ಗೆ ತಿಳಿಯುತ್ತಾ ಆದಷ್ಟು ಉತ್ತಮ ರೀತಿಯ ಪದಾರ್ಥ ತಯಾರಿಸುವ ಉತ್ಸಾಹ ನನ್ನದು.
ಮುರಳಿ ಕಾರ್ಯಕ್ರಮದಲ್ಲಿ ಅವರು ಆಹಾರವನ್ನು ಸವಿಯುವ ವಿಧಾನ, ಮುಖ್ಯವಾಗಿ ಕನ್ನಡದಲ್ಲಿಯೇ ತಮ್ಮ  ಭಾವನೆಗಳನ್ನು  ವ್ಯಕ್ತ ಪಡಿಸುತ್ತಾ ಮನಕ್ಕಾನಂದ ನೀಡುವ ಗುಣ ಕಾರ್ಯಕ್ರಮ ನೋಡಲೇ ಬೇಕು ಅನ್ನುವಂತೆ ಮಾಡುತ್ತದೆ . ಮುಖ್ಯವಾಗಿ ಬಂದ ಸ್ಪರ್ಧಿಯನ್ನು ಅವರು ಆರಾಮವಾಗಿ ಕೆಲಸ ಮಾಡುವಂತೆ ಮಾಡುವ ವಿಧಾನ ಇದೆಯಲ್ಲ, ಜೊತೆಗೆ ತಿಳಿ ಹಾಸ್ಯ, ಪಾಕ ಪ್ರಾವೀಣ್ಯತೆ, ಆಹಾರ ಪದಾರ್ಥಗಳ ಬಗೆಗಿನ ಮಾಹಿತಿ ಎಲ್ಲವು ಇಷ್ಟ ಆಗುತ್ತದೆ .ಸೋಮವಾರ ಮತ್ತು ಗುರುವಾರ ವೆಜ್ ಅಡುಗೆಗಳನ್ನು ಜನರ ಮುಂದಿಡುವ ಮುರಳಿ ಟೀಮ್ ಮಧ್ಯಾಹ್ನ ಎರಡು ಗಂಟೆ ಬಳಿಕ     ಮಿಲಿಟರಿ ಹೋಟೆಲ್   ಮೂಲಕ ಪ್ರತಿದಿನ ನಾನ್ ವೆಜ್ ಅಡುಗೆ ತೋರಿಸುತ್ತಾರೆ. ಪ್ರತಿದಿನ ಮುರಳಿ ಮಿಲಿಟರಿಯಲ್ಲೂ  ನಾನ್ ವೆಜ್ ಹಾಗೂ ವಾರದಲ್ಲಿ ಬಹುತೇಕ ದಿನ ( ಮಧ್ಯಾಹ್ನ 1 -2 ಪ್ರೈಮ್ ಟೈಮ್ ) ಸಹ ನಾನ್ ವೆಜ್ ಯಾಕೆ ಎನ್ನುವುದು ವೆಜ್ ಪ್ರಿಯರ ಬೇಸರ.. ಮುರಳಿ ಅವರೇ ... ವೆಜ್ ಪ್ರಿಯ ವೀಕ್ಷಕ ಬೇಜಾರು ನಿಮ್ಮ ಬಳಿಗೆ ತಲುಪಿಸಿದ್ದೇವೆ.. ಮುಂದಿನ ಕ್ರಮ- ಯೋಜನೆ  ಎಲ್ಲವೂ ನಿಮ್ಮ ಕೈಲಿದೆ.
Image result for orange flower
@ ಕನ್ನಡ ರಾಜ್ಯೋತ್ಸವದ ದಿನ ಮಾತ್ರ ಕನ್ನಡ ಮಾತಾಡ ಬೇಡಿ ನವೆಂಬರ್ ತಿಂಗಳಲ್ಲಿ ಮಾತ್ರ ಕನ್ನಡಕ್ಕೆ ಪ್ರಾಮುಖ್ಯತೆ ಕೊಡದೆ ಸದಾ ಕನ್ನಡ ಅನುಕ್ಷಣವೂ ಕನ್ನಡವಿರಲಿ ಎನ್ನುವುದು ಕನ್ನಡ ಮನಗಳು ಬಯಸುವುದು.. ಅದೇ ರೀತಿ ಕನ್ನಡ ಬರೆಯುವ ಬಗ್ಗೆ ಸಹ ಸಾಕಷ್ಟು ಬೇಸರ ಇದೆ, ಕೆಲವೊಂದು ಪದ ಅದೆಷ್ಟರಮಟ್ಟಿಗೆ ಬಹುತೇಕರಿಗೆ ಗೊಂದಲ ಉಂಟು ಮಾಡಿದೆ ಅಂದ್ರೆ ವರ್ಣಿಸೋಕೆ ಆಗಲ್ಲ ಬಿಡಿ !ಆ ಪದ ಶುಭಾಶಯ...
ಆದರೆ ಬಹುತೇಕ ಹುಟ್ಟು ಹಬ್ಬದ ಶುಭಾಷಯಗಳು ಅಂತ ಬರೀತಾರೆ , ಹಬ್ಬಕ್ಕೂ ಅದೇ ಶುಭಾಷಯ... ಅದು ತಪ್ಪು ರೀ ಆಶಯ.... ಶುಭಾಶಯ  ಅಂದ್ರೂ ಬಿಡದೆ ಶುಭಾಷಯ ಅಂತಲೇ ಬರೆದು ತಮ್ಮ ಜ್ಞಾನವನ್ನು ತೋರುತ್ತಾರೆ. ಬೇರೆ ದಿನ ಹೇಗೋ ಸಹಿಸ ಬಹುದು ಆದರೆ ಕನ್ನಡ - ಕರ್ನಾಟಕ ರಾಜ್ಯೋತ್ಸವದ ದಿನವೂ ಹೀಗೆ ಬರೆದರೆ ?ಅದೂ ಜನಪ್ರಿಯ ವಾಹಿನಿ  ಉದಯದಲ್ಲೂ (ಉದಯ ಕಾಮಿಡಿಯಲ್ಲೂ ಕಂಡು ಬಂದಿತ್ತು ) ಕನ್ನಡ ರಾಜ್ಯೋತ್ಸವದ ಶುಭಾಷಯಗಳು ಅಂತ ಕಣ್ಣಿಗೆ ರಾಚ್ತಾ ಇದ್ರೆ ಏನ್ ಹೇಳೋಣ ??

No comments: