ತುಂಬಾ ಗಂಭೀರವಾದ ಚರ್ಚೆಗಳಿಗಿಂತ ತಲೆ ಬಾಲ ಇಲ್ಲದ ಕಥಾ ಹಂದರಗಳನ್ನು ಹೊಂದಿರುವ ಧಾರಾವಾಹಿಗಳು, ರಿಯಾಲಿಟಿ ಶೋಗಳು ತುಂಬಾ ಇಷ್ಟವಾಗುತ್ತದೆ. ಯಾಕೇಂದ್ರೆ ಅದರ ವೀಕ್ಷಣೆಯಿಂದ ಮನೋರಂಜನೆ ಸಿಗುತ್ತದೆ, ನಮ್ಮ ಮನಸ್ಸುಗಳು ಯಾವುದೋ ಆತಂಕಕ್ಕೆ ಒಳಗಾಗದೆ ಹಾಯಾಗಿರುತ್ತದೆ.ಯಾಕೆ ಈ ವಿಷಯ ಹೇಳ್ತಾ ಇದ್ದೀನಿ ಅಂದ್ರೆ ಉದಯ ವಾಹಿನಿಯಲ್ಲಿ ಪ್ರಸಾರ ಆಗುವ ಧಾರವಾಹಿಗಳು ಅಂದ್ರೆ ಅದರಲ್ಲಿ ಫ್ಯಾ0ಟಿಸಿಗಳು, ಊಹೆಗಳು, ಕಲ್ಪನೆಗಳು ಜಾಸ್ತಿ ಜಾಸ್ತಿ ...
ಉದಯವಾಹಿನಿಯಲ್ಲಿ ಈಗ ಅಂತಹದ್ದೇ ಒಂದು ಧಾರವಾಹಿ ಆರಂಭವಾಗಿ ಕೆಲವು ತಿಂಗಳುಗಳು ಪೂರ್ಣವಾಗಿದೆ.ಆನಂದಭೈರವಿ ಅಂತ ಅದ್ರ ಹೆಸರು. ಅದು ಆರಂಭ ಆದ ದಿನದಿಂದ ವೀಕ್ಷಿಸುತ್ತಾ ಬಂದಿದ್ದೇನೆ. ಅದರ ವಿಶೇಷ ಅಂದ್ರೆ ಹೀಗೆ ಬಾಲ ತಲೆ ಇಲ್ಲದ ಕಥೆ. ಆದರೆ ಮಜಾ ಕೊಡುತ್ತೆ. ಪಾತ್ರಧಾರಿಗಳು ಸಹ ಸಕತ್ತಾಗಿ ಅಭಿನಯಿಸಿದ್ದಾರೆ. ಸ್ವಾತಿ ಅವರನ್ನು ಮೊಟ್ಟಮೊದಲ ಬಾರಿಗೆ ಖಳನಾಯಕಿ ಆಗಿ ನೋಡುವ ಅವಕಾಶ. ಎಂ ಎನ್ ಲಕ್ಷ್ಮೀದೇವಮ್ಮ ಅವರ ಮೊಮ್ಮಗಳು ಸಹ ಸ್ವಾತಿ ಜೊತೆಯಲ್ಲಿ ಖಳನಾಯಕಿಯರಾಗಿ ಅಭಿನಯಿಸುತ್ತಿದ್ದಾರೆ.ಅವರುಗಳನ್ನು ಒಳ್ಳೆಯವರಾಗಿ ನೋಡುತ್ತಿದ್ದ ನಮಗೆ ಈಗ ಕೆಟ್ಟವರಾಗಿ ನೋಡುವ ಅವಕಾಶ..ಭೂಮಿ, ಅಗ್ನಿ ಪಾತ್ರಧಾರಿಗಳು ಸಹ ತುಂಬಾ ಚೆನ್ನಾಗಿ ನಟಿಸಿದ್ದಾರೆ. ಭೂಮಿ ಪಾತ್ರಧಾರಿಯ ಚೀಕಮ್ಮ (ಚಿಕ್ಕಮ್ಮ ) , ಅಗ್ನಿ ಪಾತ್ರಧಾರಿಯ ಭೂಉಉಉಮೀ ಅನ್ನುವ ಪದಗಳು ಕೇಳೋಕೆ ನನಗಂತೂ ಸಕತ್ ಮಜಾ ಕೊಡುತ್ತೆ.
@ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಾ ಇದ್ದ ಡ್ರಾಮಾ ಜೂನಿಯರ್ ಅತ್ಯಂತ ಇಷ್ಟದ ಕಾರ್ಯಕ್ರಮಗಳಲ್ಲಿ ಒಂದಾಗಿತ್ತು. ಅದರ ಬಗ್ಗೆ ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ಈಗ ಕಾಮಿಡಿ ಕಿಲಾಡಿಗಳು ಪ್ರಸಾರ ಆಗ್ತಾ ಇದೆ. ನನ್ನ ಎನಿಟೈಮ್ ಫೆವರಿಟ್ ಕಲಾವಿದರಾದ ಜಗ್ಗೇಶ್ ಅವರ ಜೊತೆಗೆ ಭಟ್ರು ಮತ್ತು ರಕ್ಷಿತಾ ತೀರ್ಪುಗಾರರಾಗಿದ್ದಾರೆ. ಅದು ನಿಮಗೆ ಗೊತ್ತೇ ಇದೆ. ಹಾಸ್ಯಪ್ರಧಾನ ಕಾರ್ಯಕ್ರಮ ಆದ ಕಾರಣ ಮತ್ತೊಂದಷ್ಟು ಉತ್ತಮ ಕಲಾವಿದರು, ಹಾಸ್ಯ ಕಲಾವಿದರು ಕನ್ನಡ ಕಲಾರಸಿಕರಿಗೆ ದೊರಕುತ್ತಾರೆ ಅನ್ನೋದು ಸತ್ಯವಾದ ಸಂಗತಿ. ತಮ್ಮ ಅದ್ಭುತ ನಿರೂಪಣೆ, ಸೌಜನ್ಯ, ವಿನಯದ ಮೂಲಕ ಮನಗೆದ್ದಿರುವ ಆನಂದ್ ಇದರ ನಿರೂಪಣೆ ನಿಜಕ್ಕೂ ಅತ್ಯುತ್ತಮ.
No comments:
Post a Comment