ಬ್ಲಾಗ್ ಬರಹಗಳು ಇನ್ನು ಸಧ್ಯಕ್ಕೆ ನಿರಂತರವಾಗಿ ಬರೆಯಲಾರೆ. ಆದರೆ ಸಮಯ ಆದಾಗ ಅದನ್ನು ಬರೆಯುವ ಪ್ರಯತ್ನ ಮಾಡುತ್ತಿರುತ್ತೇನೆ ಅಷ್ಟೇ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಾ ಇರುವ ಬಿಗ್ ಬಾಸ್ ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ. ಯಾಕೇಂದ್ರೆ ಬಹಳಷ್ಟು ಜನರಿಗೆ ಇಷ್ಟ ಹಾಗೂ ಬಹಳಷ್ಟು ಜನರಿಗೆ ಇಷ್ಟ ಇಲ್ಲ. ಆದರೂ ಸಹ ನೋಡುವವರ ಸಂಖ್ಯೆ ಕಡಿಮೆ ಇಲ್ಲ ಅಂತ ಹೇಳ ಬಲ್ಲೆ. ಯಾಕೆ ಅಂದ್ರೆ ಸಾಮಾಜಿಕ ಜಾಲತಾಣದಲ್ಲಿ ಇದರ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸುತ್ತಲೇ ಇರುತ್ತಾರೆ ಮಂದಿ.
ಕಿಚ್ಚ ಸುದೀಪಾ ಅವರ ನಿರೂಪಣೆ ಹೆಚ್ಚು ಆಕರ್ಷಕ ಅದಕ್ಕಿಂತಲೂ ಅವರ ಉಡುಗೆ ತೊಡುಗೆಗಳು. ಅದಕ್ಕಿಂತಲೂ ಈ ಬಾರಿ ಹೆಚ್ಚು ಗಮನ ಸೆಳೆದಿರುವುದು ಅವರ ಹೇರ್ ಸ್ಟೈಲ್...
ಯಾರ ಬಳಿಯಲ್ಲಾದ್ರೂ ಅವರು ಬೆಟ್ಸ್ ಕಟ್ಟಿದ್ದಾರಾ ಎನ್ನುವ ಸಂಶಯ ಕಾಡ್ತಾ ಇದೆ .. ಗೆದ್ರೆ ಮಾತ್ರ ಜುಟ್ಟು ಬಿಚ್ಚೋದು ಅಂತ ;-). ಏನೇ ಇರಲಿ ಆ ಕಾಲದಲ್ಲಿ ಅದೂ ಒಂದಾನೊಂದು ಕಾಲದಲ್ಲಿ ಶಂಕರ ಈಗ ಸುದೀಪಾ ಮಧ್ಯದಲ್ಲಿ ಉಪೇಂದ್ರ ಅವರು ಈ ಹೇರ್ ಸ್ಟೈಲ್ ಅತಿ ವಿಖ್ಯಾತ ಮಾಡಿದ್ದಾರೆ.. ;-)
ಈ ಬಾರಿ ಬಿಗ್ ಬಾಸ್ ನಲ್ಲಿ ಒಂದು ಸಂಗತಿ ಸಾಕಷ್ಟು ನಗು ಹಾಗೂ ವಿಸ್ಮಯ ಮೂಡಿಸಿದೆ ನನಗೆ. ಅದೆಂದರೆ, ಎಲ್ಲರೂ ಸ್ಪರ್ಧಿ ಕೀರ್ತಿ ಅವರನ್ನು ಫೈನಲಿಸ್ಟ್ ಅಂತ ಹೊಗಳಿ ಹೊಗಳಿ.... !
ಆಟದಲ್ಲಿ ಸ್ವಲ್ಪ ವ್ಯತ್ಯಾಸವಾದೆ, ಸೋತರೆ, ಹೀಗೆ ಹಲವಾರು ಸಂಗತಿಗಳನ್ನು ಎದುರಿಸಲಾರದೆ ಅಳುವ ಕೀರ್ತಿ ಇಂತಹ ಸ್ಪರ್ಧೆಯ ಫೈನಲಿಸ್ಟ್ ?
ಪ್ರಥಮ್ ಮಾಡುವ ಕೆಟ್ಟ ಗಲಾಟೆಗಿಂತ ಇದು ಕಿರಿಕಿರಿ ತರುವ ಸಂಗತಿ. ಕೀರ್ತಿ ಅವರು ನಿಜಕ್ಕೂ ಆ ಹಂತ ತಲಪುವ ಅರ್ಹತೆ ಹೊಂದಿದ್ದಾರಾ ಎನ್ನುವ ಪ್ರಶ್ನೆ ಮೂಡಿ ಬರುತ್ತದೆ.ಒಂದಂತೂ ಸತ್ಯ ಕಿರಿಕ್ ಅಂತ ಹೊರ ಪ್ರಪಂಚದಲ್ಲಿ ಮಾಡಿದ ಬಿಲ್ಡ್ ಅಪ್ ಮನೆಯಲ್ಲಿ ಮಾಡೋಕೆ ಸಾಧ್ಯವಿಲ್ಲ.
ಪ್ರಥಮ್ ಕಿರಿಕಿರಿ ಮಾಡುವ ಸ್ಪರ್ಧಿಯಾದರೂ ಅನೇಕ ಕೋನಗಳಲ್ಲಿ ನೋಡಿದರೆ ಆತ ಅತ್ಯಂತ ಸೃಜನಶೀಲ ಎನ್ನುವುದು ಕಂಡು ಬರುತ್ತದೆ. ಆತನ ಕೈಲಿ ಒಂದು ಕೆಲಸ ಕೊಟ್ಟು ಸ್ವಲ್ಪ ವಿನೂತನವಾಗಿ ಮಾಡು ಅಂತ ಹೇಳಿದ್ರೆ ವಿಶೇಷ ರೀತಿಯಲ್ಲಿ ಅದನ್ನು ಪೂರೈಸಿ ಜನಮನ ಸೆಳೆಯುತ್ತಾರೆ. ಕೆಲಸ ಕೊಟ್ಟು ನೋಡಿ ಬೇಕಾದ್ರೆ !!ಐಡೆಂಟಿಟಿ ಕ್ರೈಸಿಸ್ ನಿಂದ ಬಳಲುತ್ತಿರುವ ಈ ಪ್ರತಿಭೆಯನ್ನು ಸ್ವಲ್ಪ ಟ್ಯೂನ್ ಅಪ್ ಮಾಡಿದ್ರೆ ಸಿನಿರಂಗಕ್ಕೆ ಆತ ಒಳ್ಳೆಯ ಆಸ್ತಿ ಆಗಬಲ್ಲ, ಅದರ ಬಗ್ಗೆ ಯಾವುದೇ ಸಂಶಯ ಬೇಡ !
ಹಾಗೆ ನೋಡಿದ್ರೆ ನಟ- ನಿರ್ದೇಶಕ ಮೋಹನ್ ತುಂಬಾ ಯೂನಿಕ್. ಅವರು ಮಾಡುವ ಕೆಲಸಗಳು ವಿನೂತನ. ಕಳೆದ ಬಾರಿ ಅವರು ನಿರಂಜನ್ ಅವರ ಕ್ಯಾಪ್ಟನ್ಸಿ ಬಗ್ಗೆ ತಮ್ಮ ಅಭಿಪ್ರಾಯವನ್ನು ಅಂಕಗಳ ಮೂಲಕ ಹೇಳಿದ ರೀತಿ ವಿಶೇಷವಾಗಿತ್ತು. ಆ ಬಳಿಕ ಎಲ್ಲರೂ ಕಾಪಿಕ್ಯಾಟ್ ಆಗಿದ್ದು .. ಅದರ ಬಗ್ಗೆ ಹೇಳ ಬೇಕಿಲ್ಲ.ಆಗ ಹೆಚ್ಚು ಗಮನ ಸೆಳೆದದ್ದು ಓಂ ಪ್ರಕಾಶ್ ರಾವ್. ಸೊನ್ನೆ ಹಾಕಿ ನಂತರ ಎಡಗಡೆ ಒಂದು ಬರೆದು ಹತ್ತು ಅಂಕ ನೀಡಿದರು. ಅವರ ಚಿತ್ರಗಳ ಹಾಗೆ. ಕೆಲವು ಬಾರಿ ಹತ್ತಕ್ಕೆ ಹತ್ತು, ಕೆಲವು ಬಾರಿ ಸೊನ್ನೆ :-)
ಮಾಳವಿಕಾ ಅದ್ಭುತ ಪ್ರತಿಭಾವಂತೆ ಮತ್ತು ಜಾಣೆ ಆದರೆ ಅವರು ಒಂದಷ್ಟು ಕೋಟೆ ಕಟ್ಟಿಕೊಂಡಿದ್ದಾರೆ ಅದರಿಂದ ಹೊರ ಬಂದ್ರೆ ....!
ನನಗೆ ಭುವನ್ ಸಹ ಇಷ್ಟ ಆದರು.. ಶೀತಲ್ ಶೆಟ್ಟಿ ಅವರು ಹೇಳಿದಂತೆ ಫೇಕ್ ಅಂತ ಅನ್ನಿಸಲ್ಲಾ...ಅವಕಾಶ ಇದ್ರೂ ಫ್ಲರ್ಟ್ ಮಾಡುವ ಮನಸ್ಥಿತಿ ಹೊಂದಿಲ್ಲ..ಸುದೀಪಾ ಮಾತಿಗೆ,ಸಹ ಸ್ಪರ್ಧಿಗಳ ಮಾತಿಗೆ ನಾಚುವ ಈ ಹುಡುಗ ಫೇಕ್ ಅಂತ ಅನ್ನಿಸಲ್ಲ ...
No comments:
Post a Comment