ಸಂಪೂರ್ಣವಾಗಿ ಆಧ್ಯಾತ್ಮ ಅಂಶಗಳಿಗೆ ಆದ್ಯತೆ ನೀಡಿರುವ ಚಾನೆಲ್ ಗಳಲ್ಲಿ ಶ್ರೀ ಶಂಕರ ವಾಹಿನಿ ಸಹ ಒಂದು. ಅತಿ ಹೆಚ್ಚಿನ ಕನ್ನಡ ಹಾಗೂ ತಮಿಳು ವೀಕ್ಷಕರನ್ನು ಹೊಂದಿರುವ ಈ ವಾಹಿನಿಯಲ್ಲಿ ಅನೇಕ ವಿಶೇಷವಾದ ದೇಗುಲಗಳನ್ನು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸಾರಿಸುತ್ತಿರುತ್ತಾರೆ. ಈ ವಾಹಿನಿಯಲ್ಲಿ ಸದಾ ಇಷ್ಟ ಆಗುವ ಕಾರ್ಯಕ್ರಮ ಅಂದ್ರೆ ಭಜನ್ ಸಾಮ್ರಾಟ್. ಈಗ ಇದು ನಾಲ್ಕನೆಯ ಸರಣಿಯ ಮೂಲಕ ಮತ್ತೊಮ್ಮೆ ವೀಕ್ಷಕರ ಮುಂದೆ ಬಂದಿದೆ. ಭಜನೆ ಅತ್ಯಂತ ಇಷ್ಟವಾದ ಸಂಗೀತ ಪ್ರಕಾರ. ಗ್ರಾಮೀಣ ಜನತೆಗೆ ಮಾತ್ರವಲ್ಲ ನಗರದಲ್ಲಿ ವಾಸಿಸುವ ಪ್ರತಿಯೊಬ್ಬರೂ ಸಹಿತ ಇಷ್ಟ ಪಡುತ್ತಾರೆ. ಈ ಕಾರ್ಯಕ್ರಮದಲ್ಲಿ ತಮಿಳು ಸ್ಪರ್ಧಿಗಳು ಹಾಗೂ ಕನ್ನಡ ಸ್ಪರ್ಧಿಗಳು ಜೊತೆಗೆ ತಮಿಳು -ಕನ್ನಡ ತೀರ್ಪುಗಾರರು ಸಹ ಇದರ ಮೈನ್ ಹೈ ಲೈಟ್. ನನಗೆ ತುಂಬಾ ಇಷ್ಟ ಆಗುವ ಕಾರ್ಯಕ್ರಮಗಳಲ್ಲಿ ಇದು ಒಂದು.
@ ಥಟ್ ಅಂತ ಹೇಳಿ.... ಅಂತ ಡಾ. ನಾ ಸೋಮೇಶ್ವರ್ ಅವರು ಪ್ರತಿದಿನ ಹೇಳ್ತಾ ಇರ್ತಾರೆ ಚಂದನ ವಾಹಿನಿಯಲ್ಲಿ, ಆದರೆ ಬಹಳಷ್ಟು ಸ್ಪರ್ಧಿಗಳು ಥಟ್ ಅಂತ ತಪ್ಪು ಉತ್ತರಗಳನ್ನು ನೀಡ್ತಾ ಇರುತ್ತಾರೆ ಅವರು ಕೇಳುವ ಪ್ರಶ್ನೆಗಳಿಗೆ. ಏನೇ ಹೇಳಿ ಅತ್ಯಂತ ಸದಭಿರುಚಿಯ ಕಾರ್ಯಕ್ರಮಗಳಲ್ಲಿ ಮೇಷ್ಟ್ರ ಈ ಥಟ್ ಅಂತ ಹೇಳಿ ಸಹ ಒಂದು. ಕನ್ನಡ ರಾಜ್ಯೋತ್ಸವದಲ್ಲಿ ವಿಶೇಷ ಅತಿಥಿಗಳು ಕಾಣಸಿಗಲಿಲ್ಲ. ಯಾಕ್ ಸರ್ ?.. ಒಟ್ಟಾರೆ ಬಹಳಷ್ಟು, ಇನ್ನಷ್ಟು, ಬೇಕಾದಷ್ಟು ಎಪಿಸೋಡ್ ಗಳಾಗಿದ್ದರೂ ಬೇಸರ ಇಲ್ಲದೆ ಪ್ರತಿದಿನ ನೋಡಲು ಇಷ್ಟ ಆಗುವ ಕಾರ್ಯಕ್ರಮ ಇದು.
No comments:
Post a Comment