ಯಾವುದೇ ರೀತಿಯ ಸದ್ದುಗದ್ದಲ ಇಲ್ಲದೆ ತಮ್ಮ ಪಾಡಿಗೆ ತಾವು ಕೆಲಸ ನಿರ್ವಹಿಸುತ್ತಾ ಸಾಗುತ್ತಾರೆ ಕೆಲವರು. ಅದೇರೀತಿ ಸದ್ದುಗದ್ದಲ ಇಲ್ಲದೆ ತನ್ನ ಪಾಡಿಗೆ ತಾನು ಇರುವ ಆದರೆ ಬಹಳಷ್ಟು ಮಂದಿಯ ಆಸಕ್ತಿ ಹೆಚ್ಚಿಸಿ ವೀಕ್ಷಿಸುವಂತೆ ಮಾಡುತ್ತಿರುವ ಕಾರ್ಯಕ್ರಮಗಳಲ್ಲಿ ಮಾಸ್ಟರ್ ಶೆಫ್ ಸಹ ಒಂದು. ಸ್ಟಾರ್ ವಾಹಿನಿಯಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಪ್ರಸಾರ ಆಗುವ ಈ ಕಾರ್ಯಕ್ರಮದಲ್ಲಿ ಯಾವುದೇ ರೀತಿಯಲ್ಲೂ ಮನುಷ್ಯರ ಬಣ್ಣಗಳ ಬದಲಾವಣೆ ಗೊಡವೆ ಕಾಣಲ್ಲ. ಕಂಡು ಬರುವುದು ಕೇವಲ ಅಡುಗೆಯ ಬಣ್ಣಗಳು. ಅದಕ್ಕಾಗಿ ಬಳಸುವ ಸಾಂಬಾರ ಪದಾರ್ಥಗಳ ಬಣ್ಣಗಳು, ತರಕಾರಿ ಬಣ್ಣಗಳು..
ಶೆಫ್ ಈಗ ಅತ್ಯಂತ ಗೌರವಾನ್ವಿತ ಹುದ್ದೆಗಳಲ್ಲಿ ಒಂದು. ಸ್ಟಾರ್ ಹೋಟೆಲ್ ಗಳಿರಲಿ, ಚಿತ್ರಾನ್ನದ ಹೋಟೆಲ್ ಆಗಿರಲಿ, ಮನೆಯಲ್ಲಿ ಶ್ರದ್ಧೆಯಿಂದ ಮನೆಯಲ್ಲಿ ಇರುವ ಅಡುಗೆ ಸಾಮಾನು ಬಳಸಿ ಮಾಡುವ ಗೃಹಿಣಿ, ಅಡುಗೆಯಾಸಕ್ತರುಗಳಾಗಲಿ ಒಟ್ಟಾರೆ ಎಲ್ಲರೂ ಮಾಸ್ಟರ್ ಶೆಫ್ ಗಳೆ.
ಮಾಸ್ಟರ್ ಶೆಫ್ ಅನೇಕ ಸೀಸನ್ ಗಳನ್ನು ಕಂಡಿವೆ. ಈ ಬಾರಿ ಸರಣಿಯಲ್ಲೂ ಅನೇಕ ಸ್ಪರ್ಧಿಗಳು ದೇಶ ವಿದೇಶದಿಂದ ಬಂದಿದ್ದಾರೆ. ಅಡುಗೆಯ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ. ಹೊಸ ಹೊಸ ಅಡುಗೆ, ಚಾಲೆಂಜ್ ಗಳು ಎಲ್ಲವನ್ನು ಎದುರಿಸುತ್ತಾ ಅಡುಗೆಯ ಕಾರ್ಯಕ್ರಮವನ್ನು ಅದ್ಭುತವಾಗಿ ಮುನ್ನಡೆಸುತ್ತಿದ್ದಾರೆ. ವಿಕಾಸ್ ಖನ್ನಾ , ಕುನಾಲ್ ಕಪೂರ್ ಮತ್ತು ಝೋರಾವಾರ್ ಕಾರ್ಲ ಈ ಬಾರಿ ನೇತೃತ್ವ ಹೊಂದಿರುವ ಮಾಸ್ಟರ್ ಗಳು .
@ ಸೋನಿ ವಾಹಿನಿಯಲ್ಲಿ ಪ್ರಸಾರ ಆಗುವ ಸೂಪರ್ ಡ್ಯಾನ್ಸರ್ಸ್ ಕಾರ್ಯಕ್ರಮದ ಬಗ್ಗೆ ಹೇಳಲೇ ಬೇಕು. ಶಿಲ್ಪ ಶೆಟ್ಟಿ, ಗೀತಾ ಕಪೂರ್ ಮತ್ತು ಅನುರಾಗ್ ಬಸು ಅವರ ಮಾಸ್ಟರ್ ಗಿರಿಯಲ್ಲಿ ಪ್ರಸಾರ ಆಗ್ತಾ ಇರುವ ಈ ಕಾರ್ಯಕ್ರಮ ಅತ್ಯಂತ ಲವಲವಿಕೆಯಿಂದ ಕೂಡಿದೆ. ಈ ಕಾರ್ಯಕ್ರಮದ ಸ್ಪರ್ಧಿಗಳ ಜೊತೆಗೆ ಅದರ ಜಡ್ಜ್ಗಳು ಸಹ ತುಂಬಾ ಲವಲವಿಕೆಯಿಂದ ಇರೋದರಿಂದ ವೀಕ್ಷಕರಿಗೆ ತುಂಬಾ ಆಪ್ತ ಅನ್ನಿಸುತ್ತೆ.
1 comment:
ಈ ಸೀಸನ್ನಿನ ಮಾಸ್ಟರ್ ಷೆಫ್ DOP ನನ್ನ ತಮ್ಮ (ಚಿಕ್ಕಪ್ಪನ ಮಗ) ಸುಧೀರ್ ಕೌಶಿಕ್ ಅನ್ನೋದು ನಮಗೆ ಖುಷಿಯ ವಿಷಯ
Post a Comment