ನಿನ್ನೆ ಎರಡು ಕಾರಣಗಳಿಂದ ಮನಕ್ಕೆ ಬೇಸರವಾಗಿತ್ತು ( ಈಗ ಸಹಿತ ನೆನಪಿಸಿಕೊಂಡರೆ ಹೆಚ್ಚು ದುಃಖವಾಗುತ್ತದೆ). ದುರುಳರಿಂದ ಅತ್ಯಾಚಾರಕ್ಕೆ ಒಳಗಾಗಿ ಬದುಕು ಮುರುಟಿಕೊಂಡ ದಾನಮ್ಮ ಮತ್ತು ಮಾಜಿ ಮುಖ್ಯಮಂತ್ರಿ-ತಮಿಳುನಾಡಿನ ಅಮ್ಮ ಜಯಲಲಿತಾ ಅವರ ಬದುಕಿನ ಕೊನೆಯ ಕಾಲದಲ್ಲಿನ ವಿಡಿಯೋ ಕ್ಲಿಪ್ಪಿಂಗ್ ವೀಕ್ಷಣೆ.ಜಯಲಲಿತಾ ಎನ್ನುವ ಶಕ್ತಿ ಅಂತ್ಯ ಹೀಗಾಯ್ತಲ್ಲ ಎನ್ನುವ ಬೇಸರದ ಜೊತೆಗೆ ಮುಗ್ಧ ಹುಡುಗಿ ದಾನಮ್ಮನ ಅಂತ್ಯ ಈ ರೀತಿ ಆದ ಬಗ್ಗೆಯೂಹೆಚ್ಚು ನೋವಾಯಿತು.ದಾನಮ್ಮ ಆತ್ಮಕ್ಕೆ ಶಾಂತಿ ಹಾಗೂ ಮನೆಯವರಿಗೆ ದುಃಖ ಭರಿಸುವ ಶಕ್ತಿ ಆ ಭಗವಂತನು ನೀಡಲಿ.
ನಿನ್ನೆ ಮಧ್ಯಾನ್ಹ ದಿಗ್ವಿಜಯ ಕನ್ನಡವಾಹಿನಿಯಲ್ಲಿ ಮುಂಬೈನ ದುಡಿಯುವ ಮಂದಿಯ ಜೀವದಾತರಾದ ಡಬ್ಬಿವಾಲಗಳ ಬಗ್ಗೆ ಕಾರ್ಯಕ್ರಮ ಪ್ರಸಾರವಾಯ್ತು. ಅವರರವರ ಊಟದ ಡಬ್ಬಿ ಅವರವರಿಗೆ ತಲುಪಿಸುವ ಚಾಕಚಕ್ಯತೆ ಬಗ್ಗೆ, ಡಬ್ಬಿವಾಲಗಳ ಈ ಕೆಲಸ ಆರಂಭವಾದ ಇಸವಿ ಎಲ್ಲದರ ಬಗೆಗಿನ ಮಾಹಿತಿ ಚೆನ್ನಾಗಿತ್ತು. ವಿಶ್ವವಾಣಿ ಪತ್ರಿಕೆಯ ಪ್ರಧಾನ ಸಂಪಾದಕರಾದ ವಿಶ್ವೇಶ್ವರ್ ಭಟ್ ಡಬ್ಬಿವಾಲಗಳ ಬಗ್ಗೆ ಬರೆದ ಲೇಖನ ಬಹಳ ಹಿಂದೆ ಓದಿದ್ದೆ. ಆಗ ಅದು ಸಕತ್ ಇಷ್ಟವಾಗಿತ್ತು. ಅದೇರೀತಿ ನಿನ್ನೆ ಕಾರ್ಯಕ್ರಮ ವೀಕ್ಷಿಸಿದಾಗಲೂ ಸಹಿತ :-)
@@ ಇಂದು 3 ಗಂಟೆಯ ನ್ಯೂಸ್ ವಾಚನ ಮಾಡಿದ ಈಟೀವಿ -ನ್ಯೂಸ್ 18 ವಾಹಿನಿಯ ವಾರ್ತಾವಾಚಕಿ ಹೆಚ್ಚು ಇಷ್ಟವಾದರು. ಅವರ ಹೆಸರು ಗೊತ್ತಿಲ್ಲ.
ಓದುವ ಶೈಲಿ , ವಿಷಯ ತಿಳಿಸುವ ವಿಧಾನ ಪ್ಲೆಸೆಂಟಾಗಿತ್ತು. ಕೊಚಕೊಚ ಎಂದು ಓದುವವರ ಸಂಖ್ಯೆ ಹೆಚ್ಚಾಗಿರುವವರ ಈ ಕಾಲದಲ್ಲಿ ಹೀಗೆ ಅರ್ಥವಾಗುವ ರೀತಿಯಲ್ಲಿ ಓದುವ ರೀತಿ ಇಂಪ್ರೆಸ್ ಮಾಡಿತು.

No comments:
Post a Comment