ಚಂದದ ವಾಹಿನಿ ಚಂದನ ವಾಹಿನಿ ಅಂತ ಹೇಳ ಬಹುದು. ಯಾವುದೇ ಅಳುಕಿಲ್ಲದೆ ಧೈರ್ಯವಾಗಿ ಎಲ್ಲಾ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾದ ಏಕೈಕ ವಾಹಿನಿ ಇದು.ಯಾಕೇಂದ್ರೆ ಯಾವುದೇ ವಾಹಿನಿಗಳಾಗಿರಲಿ ಅದರಲ್ಲಿ ಒಂದಲ್ಲ ಒಂದು ರೀತಿಯ ಮನಕ್ಕೆ ಆಹ್ಲಾದ ನೀಡದ ಕಾರ್ಯಕ್ರಮ ಇದ್ದೇ ಇರುತ್ತದೆ. ಮನೆಮಂದಿ ಎಲ್ಲರೂ ಕುಳಿತು ನೋಡಲು ಸಾಧ್ಯವಾಗದೆ ಇರುವಂತಹ ಪ್ರೋಗ್ರಾಮ್ಗಳಿರುತ್ತವೆ. ಆದರೆ ಚಂದನ ವಾಹಿನಿ ಈ ಎಲ್ಲ ಅಂಶಗಳಿಂದ ಭಯಮುಕ್ತವಾಗಿದೆ. ಅನೇಕ ರೀತಿಯ ಉತ್ತಮ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ.ಅವುಗಳಲ್ಲಿ ಶುಭೋದಯ ಕರ್ನಾಟಕ ಸಹಿತ ಒಂದಾಗಿದೆ.
ಮುಂಜಾನೆ ಸುಮಾರು ಎಂಟರಿಂದ ಒಂಬತ್ತು ಗಂಟೆಗೆ ಸರಿಯಾಗಿ ಪ್ರಸಾರವಾಗುವ ಸಾಧಕರ ಸಂದರ್ಶನದ ಕಾರ್ಯಕ್ರಮ ಇದಾಗಿದೆ. ನಾನು ಇತ್ತೀಚೆಗೆ ನಟಿ ಅನುಪ್ರಭಾಕರ್ ಅವರ ಸಂದರ್ಶನ ನೋಡಿದೆ.. ಚಂದವಿತ್ತು. ಶುಭೋದಯ ಕರ್ನಾಟಕದಲ್ಲಿ ಸಂದರ್ಶನ ಮಾಡುವವರ ಭಾಷೆ, ನಿರೂಪಣೆ, ಮಾತಿನ ಶೈಲಿ ಎಲ್ಲವೂ ಚಂದ.
ಬೆಳಿಗ್ಗೆ ಪ್ರಸಾರವಾಗುವ ಕಾರ್ಯಕ್ರಮವಾದ ಕಾರಣ ಮಧ್ಯಾಹ್ನ ರೀ ಟೆಲಿಕಾಸ್ಟ್ ಮಾಡ್ತಾರಾ ಎನ್ನುವ ಬಗ್ಗೆ ಗೊಂದಲವಿದೆ. ಆದರೆ ಅದರಲ್ಲಿ ಬರುವ -ಬಂದಿರುವ ಸಂದರ್ಶಕರ ಅನುಭವದ ಮಾತುಗಳನ್ನು ಕೇಳುವಾಗ ಇದು ಪುನರ್ ಪ್ರಸಾರವಾದರೆ ಒಳ್ಳೆಯದು . ಸಾಕಷ್ಟು ವೀಕ್ಷಕರಿಗೆ ಮುಂಜಾನೆಯು ಅತ್ಯಂತ ಗಡಿಬಿಡಿಯ ಸಮಯವಾಗಿರುತ್ತದೆ..
@@ ಈ ವಾಹಿನಿಯ ಮತ್ತೊಂದು ಆಕರ್ಷಣೆ ಅಂದ್ರೆ ಮಧುರಮಧುರವೀ ಮಂಜುಳಗಾನ. ಹಳೆಯ ಚಿತ್ರಗೀತೆಗಳ, ದೇಶಭಕ್ತಿ,ಭಾವ ಗೀತೆ,ದೇವರನಾಮಗಳು ಹೀಗೆ ಸಿನಿಮಾಗಳ ಜನಪ್ರಿಯ ಗೀತೆಗಳ ಅಪರೂಪದ ಸಂಗಮ, ಸಿನಿಸಂಗೀತ ಪ್ರಿಯರಿಗೆ ಸಂತಸದ ಕ್ಷಣ. ಈ ಕಾರ್ಯಕ್ರಮದಲ್ಲಿ ದೂರದರ್ಶನದ ಹೆಡ್ಡು ಮಹೇಶ್ ಜೋಶಿ ಅವರ ಗಾನ ಸುಧೆ ಇರಲೇ ಬೇಕು. ಈ ಬಗ್ಗೆ ವೀಕ್ಷಕರು ಭಿನ್ನ ಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಏನು ಅಂತ ನಾನು ಹೇಳಲ್ಲ ಸರ್ ..ನಿಮ್ಮ ಉತ್ಸಾಹಕ್ಕೆ ನಮ್ಮ ನಮೋ ನಮಃ
No comments:
Post a Comment