ಇತ್ತೀಚೆಗೆ ನ್ಯೂಸ್ 18 ನಲ್ಲಿ ಶಿರಡಿ ಸಾಯಿ ಬಾಬಾ ಅವರ ಬಗ್ಗೆ ಒಂದು ಕಾರ್ಯಕ್ರಮ ವೀಕ್ಷಿಸಿದೆ. ವಿಶ್ವದ ಅಪಾರವಾದ ಭಕ್ತವೃಂದದಲ್ಲಿ ನಾನೂ ಸಹ ಒಬ್ಬಳು. ಬಾಬಾ ಅವರ ಜನ್ಮ, ಪವಾಡ, ಅವರ ಸಹವರ್ತಿಗಳ ಬಗೆಗಿನ ಮಾಹಿತಿ ಎಲ್ಲವೂ ಸಹ ಸರಳವಾಗಿ ಕಡಿಮೆ ಸಮಯದಲ್ಲಿ ಮನಮುಟ್ಟುವಂತೆ ಉತ್ತಮ ಭಾಷೆಯ ಮೂಲಕ ಆ ಕಾರ್ಯಕ್ರಮದ ನಿರೂಪಕಿ ತಿಳಿಸುತ್ತಿದ್ದರು.ಇದರ ಹಿನ್ನೆಲೆ ಧ್ವನಿಯ ನಿರೂಪಕಿ ಸಹ ಅತ್ಯುತ್ತಮ ರೀತಿಯಲ್ಲಿ ವಿವರಣೆ ನೀಡುತ್ತಿದ್ದರು. ಈ ವಾಹಿನಿಯಲ್ಲಿ ನನ್ನನ್ನು ಸೆಳೆದ ಅಂಶ ಇದಾಗಿದೆ. ವಾರ್ತೆ ಓದುವುದಿರಲಿ ಅಥವಾ ಬೇರಿನ್ಯಾವುದೇ ಕಾರ್ಯಕ್ರಮವಾಗಿರಲಿ ತಿಳಿಸುವ- ಪ್ರಸ್ತುತ ಪಡಿಸುವ ಸಂಗತಿಗಳು ಅರ್ಥವಾಗಬೇಕು, ಮನ ಸೆಳೆಯಬೇಕು. ಬಹಳಷ್ಟು ವಾಹಿನಿಗಳು ಈ ಪ್ರಮುಖ ಅಂಶವನ್ನೇ ಮರೆತು ಬಿಡುತ್ತದೆ.
ನಿನ್ನೆ ಇದೇ ವಾಹಿನಿಯಲ್ಲಿ ವಾರ್ತೆಗಳನ್ನು ವೀಕ್ಷಿಸುವಾಗ ಒಂದು ಸುದ್ದಿ ಗಮನ ಸೆಳೆಯಿತು. ಮಂಗಳೂರಿನಲ್ಲಿ ಸಮಾಜಸೇವರೊಬ್ಬರು ಅಂಗಡಿಯವರು- ಮನೆಯವರುಗಳು ರಸ್ತೆಯಲ್ಲಿ ಕಸ ಬಿಸಾಡಿದರೆ ಅವರ ಕಸವನ್ನು ಅವರ ಮನೆ- ಸುರಿಯುವ ಅಭಿಯಾನದಲ್ಲಿ ಇದ್ದಾರಂತೆ. ಒಳ್ಳೆ ಸಂಗತಿ . ಬಡಿಗೆ ಪೆಟ್ಟು ಬೀಳುವ ತನಕ ಬದಲಾಗಲ್ಲ ಎನ್ನುವ ಮನಸ್ಥಿತಿಯವರನ್ನು ದಾರಿಗೆ ತರಲು ಇದು ಸರಿಯಾದ ಮಾರ್ಗವಾಗಿದೆ.
No comments:
Post a Comment