ಬಿಗ್ ಬಾಸ್ ಬಂದ ಕನ್ನಡದ ಪ್ರಸಿದ್ಧ ಸಂಖ್ಯಾ ಶಾಸ್ತ್ರಜ್ಞ ಜಯ ಶ್ರೀನಿವಾಸನ್ ಅವರ ಸಂದರ್ಶನ- ನೇರ ಫೋನ್ ಇನ್ ಕಾರ್ಯಕ್ರಮ ಪಬ್ಲಿಕ್ ವಾಹಿನಿಯಲ್ಲಿ ಪ್ರಸಾರವಾಯ್ತು . ಅರವಿಂದ್ ಅವರು ಗುರೂಜಿಯವರನ್ನು ಸಂದರ್ಶಿಸಿದ್ದು. ಒಳ್ಳೆಯ ಮಾತುಗಾರರು ಜಯಶ್ರಿಯಿನಿವಾಸನ್ . ಒಟ್ಟಾರೆ ನನಗೆ ಆ ಸಂದರ್ಶನ ನೋಡಿದ ಬಳಿಕ ಗುರೂಜಿಗೆ ಒಂದೆರಡು ಮಾತು ಹೇಳಬೇಕು ಅಂತ ಅನ್ನಿಸಿದೆ.
ನ್ಯೂಮರಾಲಜಿ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿರುವ ನಿಮಗೆ ನಿಮ್ಮ ಪ್ರತಿಭೆಯೇ ಸಾಟಿ ವಿನಃ ಮತ್ಯಾವುದೂ ಅಲ್ಲ, ಆದರೂ ಸಹಿತ ನೀವು ಬಿಗ್ ಬಾಸ್ ಮನೆಯಲ್ಲಿ ನಿಮಗೇ ಅರಿಯದಂತೆ ಕೀಳಿರಿಮೆ, ಹೋಲಿಕೆಯ ವಿಷವರ್ತುಲಕ್ಕೆ ಸಿಕ್ಕಿ ಹಾಕಿಕೊಂಡ್ರಿ. ಆ ಮೂಲಕ ನಿಮ್ಮ ಸಂಖ್ಯೆಗಳು ನಿಮಗೆ ಕೈಕೊಡ್ತು. ದಿವಾಕರ್ ರಂತಹ ಅತಿ ಸಾಧಾರಣ ವ್ಯಕ್ತಿತ್ವದವರಿಗೆ ತಾವೇನು ಮಾತನಾಡುತ್ತಿದ್ದೇವೆ ಎನ್ನುವುದರ ಅರಿವು ಇರುವುದಿಲ್ಲ. ಮಾತು ಮುಗಿಸಿದ ಬಳಿಕ ಅಮಾಯಾಕತ್ವದ ಮುಖವಾಡ ಹಾಕಿಕೊಂಡು ತಮಗೆ ಗೊತ್ತೇ ಆಗಲಿಲ್ಲ, ತಾವು ಬೇಕೂಂತ ಹೀಗೆ ಹೇಳಲಿಲ್ಲ ಅಂತ ತಿಪ್ಪೆ ಸಾರಿಸಿದ ಕೆಲಸ ಮಾಡಿಬಿಡ್ತಾರೆ. ಆದರೆ ಇಷ್ಟೆಲ್ಲಾ ಅನುಭವ, ನಿಮ್ಮ ಪಾಂಡಿತ್ಯ ಈ ಅಂಶದ ಅರಿವು ಮಾಡಲಿಲ್ಲವೇಕೆ?ಅದಕ್ಕೆ ಕಾರಣ ನಿಮ್ಮ ದ್ವಂದ್ವ ಗುಣ ಅಷ್ಟೇ. ಗುರೂಜಿ ಒಂದು ಸಂಗತಿ ತಿಳಿದುಕೊಳ್ಳಿ ನಿಮ್ಮನ್ನು ಹೆಚ್ಚು ಇಷ್ಟ ಪಡುವ ಮಂದಿ ಎಂದಿಗೂ ನಿಮ್ಮ ಗೌರವ ಹೊಂದೇ ಇರ್ತಾರೆ. ನಿಮಗ್ಯಾಕೆ ಆ ಅಂಶ ಬಿಬಾಮನೆಯಲ್ಲಿ ನೆನಪಿಗೆ ಬರಲಿಲ್ಲ?
ಗುರೂಜಿ ನಿಮ್ಮ ಹೆಸರು ಬದಲಾವಣೆ ಮಾಡಿದರ್ಯಾರಿಗೂ ನಿಮ್ಮ ವ್ಯಕ್ತಿತ್ವ- ಪಾಂಡಿತ್ಯ ಬದಲಾಯಿಸೋಕೆ ಸಾಧ್ಯವಿಲ್ಲವಲ್ಲ..ತಾನೆ ?!
ನಿಮಗಾಗಿ ಅಪಾರ ಸಂಖ್ಯೆಯ ಜನರು ಕಾದಿದ್ದಾರೆ. ಅದೇ ಅಲ್ವೇ ನಿಮ್ಮ ಬದುಕಿನ ಸಂತೋಷ :-)
No comments:
Post a Comment