ಕಲರ್ ಹಿಂದಿ ವಾಹಿನಿಯಲ್ಲಿ ಪ್ರಸಾರವಾಗುವ ಕೆಲವು ಧಾರವಾಹಿಗಳನ್ನು ವೀಕ್ಷಿಸುತ್ತಿದ್ದೆ-ಆ ಪರಂಪರೆ ಹಾಗೆ ನಡೆದು ಬಂದಿದೆ. ಕೆಲವು ಧಾರವಾಹಿಗಳು ಆರಂಭದಲ್ಲಿ ಆಸಕ್ತಿ ಉಳಿಸಿದರೂ ಕ್ರಮೇಣ ಅವುಗಳು ತಮ್ಮ ಸ್ವಾದ ಕಳೆದುಕೊಂಡಿದ್ದಲ್ಲದೇ ನೋಡುವ ಆಸಕ್ತಿ ದೂರ ಮಾಡಿದೆ. ನಾನು ನೋಡುತ್ತಿದ್ದ ಧಾರವಾಹಿಗಳಲ್ಲಿ ಒಂದಷ್ಟು ಮುಗಿದೇ ಹೋಗಿದೆ.ಕೆಲವು ಧಾರವಾಹಿಗಳು ಅನೇಕ ವರ್ಷಗಳಿಂದ ಪ್ರಸಾರವಾಗುತ್ತಲೇ ಬಂದಿದೆ. ಅವುಗಳ ಮುಖ್ಯಪಾತ್ರಧಾರಿಗಳು ಬದಲಾದರೂ ಸಹಿತ ಅವುಗಳ ಪ್ರಸಾರದ ಸಂಭ್ರಮ ಮುಂದುವರಿದಿದೆ. ಸಸುರಾಲ್ ಸಿಮರ್ ಕ ಧಾರವಾಹಿ ಈ ಲಿಸ್ಟ್ ನಲ್ಲಿ ಸೇರ್ಪಡೆಯಾಗಿದೆ.
ನಾನು ಈ ಧಾರವಾಹಿಯನ್ನು ಅದರ ಆರಂಭಕಾಲದಲ್ಲಿ ವೀಕ್ಷಿಸಿದ್ದೆ. ಪ್ರಾಯಶಃ 2011ರಲ್ಲಿ ಆರಂಭವಾದ ಈ ಧಾರವಾಹಿ ಪ್ರಸಾರ ಹಾಗೆ ಇದೆ.. ಇಂತಹ ಧಾರವಾಹಿಗಳು ಅನೇಕ ಕಥೆಗಳನ್ನು ತನ್ನಲ್ಲಿ ಹೀರಿಕೊಂಡು ಬಿಡುತ್ತದೆ. ಟೀಆರ್ಪಿಯು ಮೂಲಕಥೆಯ ಸ್ವಾದವನ್ನೇ ಬದಲಾಯಿಸಿಬಿಡುವಂತೆ ಮಾಡಿಬಿಡುತ್ತದೆ. ಏನೇ ಹೇಳಿ ಈ ರೀತಿಯ ದೀರ್ಘಾವಧಿಯಿಂದ ಕಲಾವಿದರು, ತಂತ್ರಜ್ಞರಿಗೆ ಹೆಚ್ಚು ಉಪಯೋಗ..
@@ ಒಂದು ವಾರ ಹೆಚ್ಚಿಸಿ ಹ್ಯಾಪಿ ಬರ್ತಡೇ ಸಲ್ಮಾನ್ BOY :-)
ಹಿಂದಿ ಬಿಗ್ ಬಾಸ್ ವೀಕ್ಷಣೆಗೆ ಮುಖ್ಯ ಕಾರಣ 1.ಸಲ್ಮಾನ್,2. ವಿಭಿನ್ನ ಟಾಸ್ಕ್ ಗಳು ಮತ್ತು 3.ಸ್ಫರ್ಧಿ ಶಿಲ್ಪ ಶಿಂಧೆ.
ನನಗೆ ಸಲ್ಮಾನ್ BOY ನಿರೂಪಣೆ ಎಷ್ಟು ಇಷ್ಟವೋ ಅದೇರೀತಿ ಭಿನ್ನ ಟಾಸ್ಕ್ ಗಳು ಸಹಿತ ಇಷ್ಟ. ಕೆಲವು ಬಾರಿ ಕೆಲವು ಸ್ಫರ್ಧಿಗಳು ಇಷ್ಟವಾಗ್ತಾರೆ.ಈ ಬಾರಿ ಶಿಲ್ಪ.
ಸಾಮಾನ್ಯವಾಗಿ ಆಕೆಯನ್ನು ನಾಮಿನೇಟ್ ಮಾಡಿದ ಮಂದಿಯೇ ಹೆಚ್ಚು. ನೀವ್ ಬಿಡಿ ಜಾಸ್ತಿ ಫ್ಯಾನ್ ಗಳನ್ನು ಹೊಂದಿದ್ದೀರಿ ಎನ್ನುವ ಪ್ರತಿಸ್ಫರ್ಧಿಗಳ ಸಣ್ಣ ಕಹಿಮಾತುಗಳು,.................. ! ಇಂತಹ ಅನೇಕ ಬೇಸರಗಳನ್ನು ಯಶಸ್ವಿಯಾಗಿ ಎದುರಿಸಿ -ಎಲ್ಲವನ್ನೂ ಸಹಿಸಿಕೊಂಡು ಬಿಬಾ ಮನೆಯಲ್ಲಿ ಇರುವ ಹೆಣ್ಣುಮಗಳು.
ತಾನು ಸುಲಭವಾಗಿ ಗೆಲ್ಲಬಹುದಾದ ಕ್ಯಾಪ್ಟನ್ ಶಿಪ್ ನ್ನು ಹೀನಾಗೆ ಬಿಟ್ಟುಕೊಡುವುದು, ಆರ್ಸಿಯಂತಹ ಲೂಸ್ ಟಾಕ್ ಹೆಣ್ಣುಮಗಳಿಂದ ತೆಗಳಿಕೆ.... ಇವೆಲ್ಲದರ ನಡುವೆ ಮಾಸ್ಟರ್ ಮೈಂಡ್ ವಿಕಾಸ್ ಗುಪ್ತ ಎನ್ನುವ ಅಲೆಯನ್ನು ಯಶಸ್ವಿಯಾಗಿ ಎದುರಿಸುತ್ತಿರುವ ದಿಟ್ಟ ಹೆಣ್ಣುಮಗಳು ಅಂತಿಮವಾಗಿ ಗೆಲುವು ಸಾಧಿಸಬೇಕು ಎಂಬ ಹಾರೈಕೆ ನನ್ನ ಕಡೆಯಿಂದ...
No comments:
Post a Comment