ಸೂಪರ್ ಕಲರ್ ವಾಹಿನಿಯ್ಲಲಿ ಪ್ರಸಾರವಾಗುತ್ತಿರುವ ಕನ್ನಡ ಬಿಗ್ ಬಾಸ್ ಕೊನೆಯ ಹಂತದ ದಿನಗಳು ಹೆಚ್ಚು ಸಮೀಪದಲ್ಲಿದೆ. ಆದಕಾರಣ ಅದರ ಬಗ್ಗೆ ಹೆಚ್ಚು ಆಸಕ್ತಿ - ಕುತೂಹಲ ವೀಕ್ಷಕರಲ್ಲಿ ಒಡಮೂಡಿದೆ.
ಸ್ಫರ್ಧಿಗಳ ಸಂಖ್ಯೆ ಪ್ರಮಾಣ ಕಡಿಮೆ ಆದಷ್ಟು ಆಟದ ಒಂದು ವೇಗ ಹೆಚ್ಚಾಗುತ್ತಾ ಸಾಗುತ್ತದೆ.ನಿಜ ಪ್ರತಿಯೊಬ್ಬರಿಗೂ ಗೆಲ್ಲ ಬೇಕೆಂಬ ಹಂಬಲ ಇದ್ದೇ ಇರುತ್ತದೆ. ಅದಕ್ಕಾಗಿ ಅವರು ಅವರದ್ದೇ ರೀತಿಯಲ್ಲಿ ತಮ್ಮ ಗೇಂ ಪ್ಲಾನ್ ಮಾಡಿಕೊಳ್ಳುತ್ತಾ ಸಾಗುತ್ತಾರೆ. ಆದರೆ ಒಂದಷ್ಟು ಜನ ಹೆಚ್ಚು ಬುದ್ಧಿವಂತರಾಗಿ ಎಡವಟ್ಟು ಮಾಡಿಕೊಂಡು ವೀಕ್ಷಕರ ಕಣ್ಣಲ್ಲಿ ಸಣ್ಣಗಾಗುತ್ತಾರೆ.
ಈ ಬಾರಿ ಮುಖ್ಯವಾಗಿ ರಿಯಾಜ್ ಅವರ ನಡೆಯು ತೀರಾ ಕೆಟ್ಟಾದಾಗಿತ್ತು. ಕಪ್ಪು ಬಳಿಯುವ ಟಾಸ್ಕ್ ನಲ್ಲಿ ಆತ ಸಮೀರನಿಗೆ ಕಪ್ಪು ಬಳಿದು ಅನುಪಮಾಗೆ ಹಾರ ಹಾಕಿ ಸೇಫ್ ಗೇಂ ಪ್ಲೇಯರ್ ಅನ್ನುವುದನ್ನು ಸಾಬೀತು ಮಾಡಿದ್ರು. ಆಕೆಗೆ ಹಾರ ಹಾಕಿದರೆ ತಾನು ನಾಮಿನೇಟ್ ಆಗಲ್ಲ ಮತ್ತು ಕಳಪೆ ಬೋರ್ಡ್ ತನಗೆ ಬರಲ್ಲ ಎನ್ನುವ ಪ್ಲಾನ್ ಮಾತ್ರ ನಿಚ್ಚಳವಾಗಿ ಕಂಡು ಬರ್ತಾ ಇತ್ತು. ಗೆಲ್ಲುವ ಗುರಿ ಎಲ್ಲರಿಗೂ ಇದ್ದೆ ಇರುತ್ತದೆ, ಹಾಗಂತ ಸಮೀರನಿಗೆ ಕಪ್ಪು ಬಳಿಯುವಂತಹ ಮನಸ್ಥಿತಿ ಹೊಂದಬಾರದಿತ್ತು.
ತನಗೆ ಹಾರ ಬಂದಾಗ ಅದನ್ನು ಸ್ವೀಕರಿಸಿ ಸಂತೋಷ ಪಡುವುದಕ್ಕಿಂತ ತಾನೆಷ್ಟು ಪರ್ಫೆಕ್ಟ್ ಅನ್ನುವ ಹುಂಬತನದಿಂದ ಕಪ್ಪು ಹಚ್ಚಿದವರ ಮೇಲೆ ಜಗಳಕ್ಕೆ ಬಿದ್ದ ರಿಯಾಜ್, ತಾನು ಮಾಡಿದ್ದೇ ಸರಿ, ತಾನೇ ಅಂತಿಮವಾಗಿ ಗೆಲ್ಲುವ ಸ್ಫರ್ಧಿ ಎನ್ನುವ ಮಾತಿನ ಧಾಟಿ ಎಲ್ಲವೂ ಸಹಿತ ರಿಯಾಜ್ ಅವರ ಮನಸ್ಥಿತಿ ಅನಾವರಣ ಮಾಡಿತು.
ಸಮೀರನ ಜೊತೆ ಮಾತನಾಡುವಾಗ ಸಾಮಾನ್ಯವಾಗಿ -- ನಿನ್ನಜ್ಜಿ ನಾನು ಮಾತಾಡ್ತಾ ಇದ್ದೀನಿ ನಿನ್ನ ಜೊತೆ, ನಾನು ಇಲ್ವಾ ಎನ್ನುವ ಧೋರಣೆ ಆತ ತಾನೆಷ್ಟು ದೊಡ್ಡ ಮನುಷ್ಯ, ಫಿನಾಲೆ ಕಿರೀಟ ನಂಗೆ ಗ್ಯಾರೆಂಟಿ ಅಂತಹ ಉದಾತ್ತ ಉತ್ತಮ ವ್ಯಕ್ತಿ ನಿನ್ನ ಜೊತೆ ಮಾತಾಡ್ತಾ ನಿನ್ನ ತಪ್ಪುಗಳನ್ನು ಕ್ಷಮಿಸ್ತಾ ಇಲ್ವಾ ಎನ್ನುವಂತೆ ಇರುತ್ತದೆ.
ಇಲ್ಲಿ ಪರ್ಫೆಕ್ಟ್ ಗೇಂ ನಡೀತಾ ಇದೆ ಹೇಗೆ ಅಂದ್ರೆ (ನನ್ನ ಅಭಿಪ್ರಾಯದ ಪ್ರಕಾರ ) ಸಮೀರಾ ರಿಯಾಜ್ ಆಟದ ದಾಳವಾಗಿದ್ದಾರೆ, ಅದೇರೀತಿ ಚಂದನ್ ಶೆಟ್ಟಿಯ ದಾಳ ದಿವಾಕರ- ನಿವೇದಿತಾ , ದಿವಾಕರ ದಾಳ ಅಮಾಯಕತೆಯ ಸೋಗಿನ ಹುಂಬತನ, ಜೆಕೆ ದಾಳ ಶ್ರುತಿ - ಅನುಪಮಾ, ಇವರಿಬ್ಬರ ದಾಳ ಜೆಕೆ, ನಿವೇದಿತಾ ದಾಳ ಮುಗ್ಧತೆ-ಪ್ರಬುದ್ಧತೆ , ಸಮೀರನ ದಾಳ ಟಾಸ್ಕ್, ತನ್ನ ಜೊತೆಗಾರರಿಗೆ ಬೆನ್ನೆಲುಬಾಗಿ ನಿಂತಿರುವುದು.ಮಾಡುವ ಕೆಲಸದಲ್ಲಿ ಪ್ರಾಮಾಣಿಕತೆ.
ತನ್ನ ಮುಖಕ್ಕೆ ಕಪ್ಪು ಬಳೆದಾಗ ಯಾವುದೇ ರೀತಿಯ ವ್ಯಗ್ರತೆ ತೋರದೆ ಸಮಚಿತ್ತದಿಂದ ಸ್ವೀಕರಿಸಿದ್ದು ಮತ್ತು ನಾಮಿನೇಟ್ ಮಾಡುವಾಗ ಹೇಳಿದ ಕಾರಣಗಳು ಸಮೀರನ ವ್ಯಕ್ತಿತ್ವ ವೀಕ್ಷಕರಿಗೆ ತೋರಿಸಿಕೊಟ್ಟಿತು .
ಜೆಕೆ ಅಪ್ಪ ಬಂದು ಸಮೀರನ ಬಗ್ಗೆ ಹೇಳಿದ ಒಳ್ಳೆ ಮಾತುಗಳು ಅವರ ದೊಡ್ಡತನದ ಪ್ರತಿರೂಪವಾಗಿತ್ತು. ಹೊರ ಬಂದಾಗ ತಾನೆಂದಿಗೂ ಸಮೀರನನ್ನು ಭೇಟಿ ಮಾಡಲು ಇಚ್ಛಿಸುವುದಿಲ್ಲ ಎಂದು ಅಪಾರ ಸಂಖ್ಯೆಯ ವೀಕ್ಷಕರ ಮುಂದೆ ಹೇಳಿ ಸಣ್ಣತನ ತೋರಿದ್ದ ಜೆಕೆ ಒಂದು ಸಂಗತಿ ನೆನಪಲ್ಲಿ ಇಟ್ಟುಕೊಳ್ಳ ಬೇಕು, ಡಾ. ರಾಜ್ ಕುಮಾರ್ ಸದಾ ಒಂದು ಮಾತನ್ನು ಹೇಳ್ತಾ ಇದ್ರೂ, ಕಲಾವಿದರಿಗೆ ವಿನಯ ಇರಬೇಕು ಅಂತ.ಅಣ್ಣಾವರು ಯಾಕೆ ಜಗನ್ಮಾನ್ಯರಾಗಿದ್ದು ಎನ್ನುವುದಕ್ಕೆ ಇದೆ ಸಾಕ್ಷಿ.
ಸಮೀರಾ ಅವರಿಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಬರಲ್ಲ ಎನ್ನುವ ಕಾರಣ ಕೊಟ್ಟು ( ಸದಾ ಆತನ ಬಗ್ಗೆ ಇಂತಹ ಅನೇಕಾನೇಕ ಉರಿದು ಬೀಳುವ ಹೆಣ್ಣುಮಗಳೀಕೆ ) ಸಿಟ್ಟಾದ ಅನುಪಮಾ ಅದ್ಯಾಕೆ ಕಳೆದ ಬಾರಿ ನಡೆದ ಟಾಸ್ಕ್ ಗಳಲ್ಲಿ ಕೆಟ್ಟ ನಿರ್ಧಾರ ತೆಗೆದುಕೊಂಡು ಕನ್ನಡ ಓದಲು - ಬರೆಯಲು ಸರಿಯಾಗಿ ಮಾತನಾಡಲು ಬಾರದ ಶ್ರುತಿಯನ್ನು ಬಾಲ್ ಜೋಡಿಸುವ ಟಾಸ್ಕ್ ನಲ್ಲಿ ಬಿಟ್ಟಿದ್ದು? ಸಾಕಷ್ಟು ವಿಷಯಗಳಲ್ಲಿ ಆಕೆಯ ನಿರ್ಧಾರ ತುಂಬಾ ಕೆಟ್ಟದಾಗಿದ್ದರೂ ಸಹಿತ ಅದನ್ನು ಮರೆತು ಪೂರ್ವಾಗ್ರಹಪೀಡಿತರಾಗಿದ್ದು ??
ಬಿಬಾ ಷೋ ಗೆಲ್ಲುವವರು ಯಾರೋ, ಸೆಟ್ಲ್ ಆಗೋದು ಯಾರದ್ದೋ ಬದುಕು ಆದರೂ ಸಹಿತ ವೀಕ್ಷಕರಾದ ನಾವು ಅದೆಷ್ಟು ಪ್ರಾಮಾಣಿಕವಾಗಿ ನಮ್ಮ ಅಭಿಪ್ರಾಯ ತಿಳಿಸುತ್ತೇವೆ :-)
--- ಮೊದಲಿನಿಂದ ಹೇಳ್ತಾನೆ ಬಂದಿದ್ದೇನೆ ಅಡುಗೆ ಮಾಡುವ ಹವ್ಯಾಸ -ಅಭ್ಯಾಸ ಅತ್ಯಂತ ಗೌರವಾನಿತ್ವವಾದುದು. ಅದರ ಬಗ್ಗೆ ಕಿಚ್ಚ ಸುದೀಪಾ ಅವರಿಗಿರುವ ಆಸಕ್ತಿ ಖುಷಿ ಕೊಡುತ್ತದೆ,ಅಡುಗೆ ಮಾಡುವುದು ಒಂದು ತಪಸ್ಸು, ಅದ್ರಿಂದ ನಾವು ಕಲಿಯುವ ತಾಳ್ಮೆ-ಜಾಣ್ಮೆ ನಮ್ಮ ಜೀವನದ ಅನೇಕ ಟಾಸ್ಕ್ಗಳಿಗೆ ಉತ್ತಮ ಪರಿಹಾರ ಕಂಡುಕೊಳ್ಳಲು ಸಹಾಯಕಾರಿ ಅಲ್ವ ಮಿತ್ರ :-)
No comments:
Post a Comment