ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ 'ಶ್ರೀ ರಸ್ತು ಶುಭಮಸ್ತು' ಸಧ್ಯಕ್ಕಂತೂ ಬೋರ್ ಹೊಡಿಸದೆ ಮುನ್ನಡೆಯುತ್ತಿರುವ ಧಾರಾವಾಹಿ . ಜೊತೆಜೊತೆಯಲಿ ಪ್ರಸಾರ ಆಗುತ್ತಿದ್ದ ಸಮಯದಲ್ಲಿ ಇದು ಆರಂಭ ಆಗಿದ್ದಕ್ಕೆ ಮೊದಲಿನಿಂದಲೂ ನೋಡುವ ಮನಸ್ಸು ಆಯಿತು . ಕತೆ ಮಾಮೂಲಿನೆ ಆಗಿದ್ದರು ತುಂಬಾ ತಲೆ ಕೆಡುವಂತಹ ಪಾತ್ರಗಳು, ಬೋರ್ ಹುಟ್ಟಿಸುವ ಅಂಶಗಳು ಸಧ್ಯಕ್ಕೆ ಇಲ್ಲ ಬಿಡಿ ! ಮುದ್ದಾದ ನಟಿ ಸುಧಾರಾಣಿ ,ಅಜಿತ್ ಹಂಡೆ ಮಾತ್ರವಲ್ಲ ತುಳಸಿಯ ಸೊಸೆ , ಮಗ ಮಗಳು ,ಬೀಗರುಗಳು , ನೈಬರ್ರ್ ಗಳು .. ಎಲ್ಲರ ಅಭಿನಯ ಚನ್ನಾಗಿದೆ. ಸುಧಾರಾಣಿ ಪಾತ್ರದಷ್ಟೇ ಇಷ್ಟ ಆಗೋದು ಮಾಧವ್ ಮತ್ತು ತುಳಸಿ ಮಾವನವರ ಪಾತ್ರ.ಅದರಲ್ಲೂ ಮಾವನ ಡೈಲಾಗ್ ಗಳು ಖುಷಿ ಕೊಡುತ್ತೆ ..
ಸಧ್ಯಕ್ಕೆ ಇಷ್ಟೇ ಈ ಸೀರಿಯಲ್ ವಿಷ್ಯ ಹೇಳೋಕೆ ಇರೋದು ಮತ್ತೇನು ಇಲ್ಲ ಬಿಡಿ!
😅😁
No comments:
Post a Comment