ಸಕತ್ ಇದೆ

 ಕಲರ್ ವಾಹಿನಿಯಲ್ಲಿ ತಪ್ಪದೆ ನೋಡುವ ಷೋ ಬಿಗ್ ಬಾಸ್ .ಕಿಚ್ಚ ಸುದೀಪ್ ನಿರೂಪಣೆ ನನಗೆ  ಹೆಚ್ಚು ಆಸಕ್ತಿದಾಯಕ ಅಂಶ . ಜೊತೆಗೆ ಕೆಲವೊಬ್ಬರು ಸ್ಪರ್ಧಿಗಳು  , ಅದರಲ್ಲಿ ನೀಡುವ  ಟಾಸ್ಕ್ ಗಳು ಹೀಗೆ ಒಂದಲ್ಲ ಒಂದು ಅಂಶವು ಆಕರ್ಷಿಸುತ್ತದೆ .ಈಸರ್ತಿಯಂತೂ  ಸಕತ್  ಇದೆ ಟಾಸ್ಕ್ ಗಳು . ಈ ಬಾರಿ ನಾನು  ಬಿಗ್ ಬಾಸ್ ವೀಕ್ಷಿಸುವುದು ಸ್ವಲ್ಪ   ತಡವೇ  ಆಯ್ತು . ಕಾಶಿ ಪ್ರವಾಸಕ್ಕೆ ಹೋಗಿದ್ದೆ . ಕಾರಿಡಾರ್ ನೋಡುವ ಆಸೆ ಇತ್ತು .. ಅದು ನೆರವೇರಿತು . ನಾನು ಹೋದಂತಹ ಸಮಯದಲ್ಲಿ ಸಿಕ್ಕಾಪಟ್ಟೆ ಮಳೆ , ಮಳೆಯಲ್ಲಿ ಬೋಟಿನಲ್ಲಿ ಕುಳಿತು ಗಂಗೆ ನದಿಯಲ್ಲಿ ಬೀಟ್ ಹೊಡೆದಿದ್ದು ಒಂದು ಚಂದದ  ಅನುಭವ .
ಬಿಗ್ ಬಾಸ್ ನಲ್ಲಿ ನನಗೆ ಹೆಚ್ಚು ಇಷ್ಟ ಆಗಿರೋದು ರಾಕೇಶ್ ಅಡಿಗ. ನಾನೊಂದು ಸಿನಿ ಪತ್ರಿಕೆಯಲ್ಲಿ (ಅರೆಬರೆ ಕೆಲಸ ) ಕೆಲಸ ಮಾಡುವಾಗ ರಾಕೇಶ್  ಕನ್ನಡ rap ನಲ್ಲಿ ಹೆಸರು ಮಾಡುತ್ತಿದ್ದ ಪ್ರತಿಭೆ . ರವಿ ಬೆಳಗೆರೆ ಮಗ ಕರ್ಣರ  ಫ್ರೆಂಡ್  ಆಗಿದ್ದಕ್ಕೆ ಈ  ತಂಡ ಬಗ್ಗೆ ಬರೆಯುವಂತೆ ಭಾವನಾ  ಬೆಳಗೆರೆ ನಮ್ಮ ಮ್ಯಾಮ್  ಬಳಿ ಕೇಳಿದ್ದರು . ಅವರು ನನಗೆ ಕೆಲಸ ಒಪ್ಪಿಸಿದ್ದರು. ಅದಾದ ಬಳಿಕ ಈ ಹುಡುಗ ಒಂದಷ್ಟು ಸಿನಿಮಾಗಳಲ್ಲಿ  ನಟಿಸಿದ್ದು ..ಯಶಸ್ವಿ ಆಗಿದ್ದು ... ! ಆಗ ಇದ್ದ ಸೌಮ್ಯ ಕಳೆ ಈಗಲೂ ಇದೆ .. ಅದಕ್ಕೆ ಲೈಕ್ ಆಯ್ತು . ಈತ ಟ್ರೋಫಿ ಗೆಲ್ತಾರೋ  ಇಲ್ಲವೋ ಗೊತ್ತಿಲ್ಲ .ಯಾಕೇಂದ್ರೆ  ಬಿಗ್ ಹೌಸ್ ಕ್ಯಾಲುಕಲೇಶನ್ ಬೇರೆ  ಅಲ್ವ ಸುದೀಪಾ ..
 ಅರುಣ್ ಸಾಗರ್ ಆ ಎನರ್ಜಿ , ಅಮ್ಮು ಧೈರ್ಯ , ಜೊತೆಗೆ ಅನುಪಮಾ  ಸ್ವಭಾವ  ಇಷ್ಟ ಆಗ್ತಾ ಇದೆ . ಮೊದಲ ಅತಂತ್ರದ  ಅನುಪಮಾ ಈಗಿನ ಆತ್ಮವಿಶ್ವಾಸದ  ಸ್ಟೈಲಿಶ್ ಹುಡುಗಿಯಾಗಿ ವೀಕ್ಷಕರ ಮುಂದೆ  ಬಂದಿರುವುದು ನೋಡುವಾಗ ಖುಷಿ ಆಗುತ್ತೆ.



No comments: