ಕಾರ್ಯಶೈಲಿ ಮತ್ತು ಚಾಕಚಕ್ಯತೆ

 

ಕಲರ್ಸ್  ಕನ್ನಡದಲ್ಲಿ ಪ್ರಸಾರ ಆಗುವ ಬಿಗ್ ಬಾಸ್ ವಿಷ್ಯ ಪ್ರತಿವಾರ ಬರೀತಾ ಇದ್ದೀನಿ.. ಕಳೆದವಾರ ಕಿಚ್ಚ ಸುದೀಪಾ ಸ್ಪರ್ಧಿಗಳ ಮೇಲೆ ಕೋಪ ಹಾಗೆನ್ನುವುದಕ್ಕಿಂತ ಮಾತಿನ ಮೂಲಕ ಚುರುಕು ಮುಟ್ಟಿಸಿದ್ದು ಕ್ಯಾಪ್ಟನ್  ಹೇಳಿದ ಮಾತು ಕೇಳ್ತಾ ಇಲ್ಲ. ಎನ್ನುವ ವಿಷಯಕ್ಕೆ ಸಂಬಂಧಪಟ್ಟಂತೆ. ಅದೇರೀತಿ ಹಿಂದಿ ಬಿಗ್ ಬಾಸ್ ನಲ್ಲಿ ಸಹ ಸಲ್ಮಾನ್  ಸಹ ಶುಕ್ರವಾರ ಬಿಸಿ  ಮಾತಿನ ಚುರುಕು ಅಲ್ಲಿನ ಸ್ಪರ್ಧಿಗಳಿಗೆ ಮುಟ್ಟಿಸಿದರು. ಅದಕ್ಕೆ ಕಾರಣ ಆಮೇಲೆ ಬರೀತೀನಿ. ಸುದೀಪಾ  ಈ ವಾರದಲ್ಲಿ ಸ್ಕೂಲ್ ಆಟ  ಅಥವಾ ಸ್ಪರ್ಧೆ ಚನ್ನಾಗಿತ್ತು.ಆದರೆ  ಶಾಲೆಯಲ್ಲಿ ಮಾಸ್ಟರ್ಗಳು ಬರೆದ ಕನ್ನಡದ ಬಗ್ಗೆ ಹೇಳುವುದಾದರೆ  ಅಬ್ಬೊ ಸಖತ್ತಾಗಿತ್ತು.. ಒಟ್ಟು  ವಿದ್ಯಾರ್ಥಿಗಳನ್ನು  ವಿಧ್ಯಾರ್ಥಿ ಗಳಾನ್ನಾಗಿ  ಮಾಡಿ ಹೊಸಗನ್ನಡವನ್ನು ಬಿಗ್ ಬಾಸ್ ಶಾಲೆಯ ಮೂಲಕ ನಮಗೆಲ್ಲಾ ಕಲಿಸಿಕೊಟ್ಟರು. ಟ್ಯಾಂಕ್ಸ್ .. 

ಇವೆಲ್ಲ ಇದ್ದದ್ದೇ..ಸುದೀಪಾ  ಮುಖ್ಯವಾಗಿ ಇನ್ನೊಂದು ಸಂಗತಿಯನ್ನು ಹೇಳಬೇಕಿದೆ. ಈ ಬಿಗ್ ಬಾಸ್ ಷೋ ಶನಿವಾರದ  ಎಪಿಸೋಡ್ ನ್ನು ಚಿಕ್ಕದಾಗಿ ಚೊಕ್ಕವಾಗಿ ಕತ್ತರಿಸಿ ಅಂಟಿಸುವ ಎಡಿಟರ್ ಗಳನ್ನೂ ನೋಡುವ ಆಸೆ ಇದೆ.  ಕಾರ್ಯಶೈಲಿ  ಮತ್ತು ಚಾಕಚಕ್ಯತೆ   ಕಂಡು ಇಷ್ಟ ಹಾಗು ಖುಷಿ ಆಗುತ್ತೆ. ಒಪ್ಪವಾಗಿ, ಮಾಡಿ ವೀಕ್ಷಕರ ಕೈಲಿ ಇಡುವ ಎಲ್ಲ ತಂತ್ರಜ್ಞರಿಗೆ ಹೃತ್ಪೂರ್ವಕ ಚಪ್ಪಾಳೆ.. 




No comments: