ಕಲರ್ಸ್ ಕನ್ನಡ ವಾಹಿನಿಯನ್ನು ನಾನು ತುಂಬಾ ನೋಡ್ತಾ ಇದ್ದೆ ಮೊದಲು. ಅದಕು ಮುನ್ನ ನಾನು ಹೆಚ್ಚು ನೋಡ್ತಾ ಇದ್ದದ್ದು ಸ್ಟಾರ್ ಸುವರ್ಣ. ಇತ್ತೀಚೆ ಸ್ಟಾರ್ ಸುವರ್ಣ ವಾಹಿನಿ ನೋಡುವುದೇ ಇಲ್ಲದಂತೆ ಆಗಿದೆ. ಅದೇರೀತಿ ಕಲರ್ಸ್ ಕನ್ನಡ..ಆದರೆ ಬಿಗ್ ಬಾಸ್ ಬರುವುದರಿಂದ ಈ ವಾಹಿನಿ ನೋಡ್ತಾ ಇರ್ತೀನಿ,ಸ್ವಲ್ಪ ಸ್ವಲ್ಪ ರಾಮಾಚಾರಿ, ಭಾಗ್ಯದ ಲಕ್ಷ್ಮಿ ಬಾರಮ್ಮ..!
ಕಿಚ್ಚ ಸುದೀಪ ಕಳೆದ ವಾರ ಮನೆಯಿಂದ ಸ್ನೇಹಿತ್ ಮತ್ತು ಮೈಕೆಲ್ ರನ್ನ ಹೊರ ಕಳುಹಿಸದೆ ಉಳ್ಸಿಕೊಂಡಿದ್ದಕ್ಕೆ ಹಲವಾರು ಕಾರಣ ಗಳು ಹರಡಿದೆ. ಆದರೆ ನನಗೆ ಒಬ್ಬ ನಾಯಕನಾಗಿ ಸುದೀಪ ತೆಗೆದುಕೊಂಡ ನಿರ್ಧಾರ ಸರಿ ಅನ್ನಿಸಿತು. ಕಾರಣ ಇಷ್ಟೇ ಸ್ನೇಹಿತ್ ಎಷ್ಟೇ ಚೇಲಾ ಆದರೂ ಆತನಲ್ಲಿ ಇರುವ ಫೈರ್ ಗೆ ಆ ವಾರ ಸರಿಯಾದ ವೇದಿಕೆ ಒದಗಿಸಿತು. ನನಗೆ ಈ ಮೊದಲು ಪ್ರಸಾರ ಆದ ಬಿಗ್ ಬಾಸ್ ನಲ್ಲಿ ಇದ್ದ ವೈಷ್ಣವಿ ಗೌಡ ನೆನಪಾಗುತ್ತಾರೆ. ಆಕೆಯನ್ನು ದಿವ್ಯ ಉರುಡುಗ ವೈಷ್ಣವಿ ಶಕ್ತಿಹೀನ ಸ್ಪರ್ಧಿ ಎಂದು ತಮ್ಮ ಟೀ ಮ್ ಗೆ ಸೇರಿಸಿಕೊಂಡು ಇರಲಿಲ್ಲ. ಆದರೆ ಆಕೆ ಆ ವಾರ ನೀಡಿದ ಸ್ಪರ್ಧೆ ಮತ್ತು ಗೆದ್ದ ರೀತಿ ಅದ್ಭುತ ! ಯಾರೇ ಆಗಲಿ ಕೆಲವೊಂದು ಸಮಯ ಕೈಲಾಗದವರಂತೆ ಇದ್ದಾರೆ ಅನ್ನಿಸಿದ್ರೂ ಸಮಯ ಅವರಲ್ಲಿರುವ ಬೆಂಕಿ ಹೊರ ಹಾಕುತ್ತದೆ. ಪ್ರಕೃತಿಯಲ್ಲಿ ಎಲ್ಲರು ಒಂದೇ.. ಎಲ್ಲರಿಗು ಒಂದಲ್ಲ ಒಂದು ರೀತಿಯ ಶಕ್ತಿ ನೀಡಿರುತ್ತದೆ.
ಸ್ಪರ್ಧಿ ತುಕಾಲಿ ಸಂತೋಷ ಅಬ್ಬಾ ಎಂಥ ಅದ್ಭುತ ಪ್ರತಿಭೆ. ಅರುಣ್ ಸಾಗರ್ , ಮಾಸ್ಟರ್ ಆನಂದ್ ನಂತರ ಸಕತ್ ಖುಷಿ ಕೊಡುತ್ತಿರುವ ಅಪ್ಪಟ ಪ್ರತಿಭಾವಂತ ಹಾಸ್ಯಗಾರ ತುಕಾಲಿ ಸಂತೋಷ್. ಆತನ ವರ್ತನೆ, ಸಣ್ಣಮಟ್ಟದ ಹೊಟ್ಟೆಕಿಚ್ಚು, ಜಗಳಗಂಟಿತನ ಏನೇ ಇರಲಿ ಅವರ ಪ್ರತಿಭೆ ಅನನ್ಯ. ಹೆಚ್ಚಾಗಿ ನಾನು ತೆಲುಗಿನಲ್ಲಿ ಬ್ರಹ್ಮಿ , ಸುನಿಲ್ ತಮಿಳಿನಲ್ಲಿ ಯೋಗಿ ಬಾಬು,ಅವರ ನಟನೆ ಇಷ್ಟಪಟ್ಟು ನೋಡ್ತೀನಿ.. ಹಾಸ್ಯ ಕಾರ್ಯಕ್ರಮಗಳು ನೋಡುವು ದಿಲ್ಲ ) ತುಕಾಲಿ, ಮಾಸ್ಟರ್ ಆನಂದ್ ಕುರಿತು ಪದಗಳು ಇಲ್ಲ ಬಿಡಿ..!
ಮಾನಸಿಕವಾಗಿ ಆಕ್ರಮಿಸಿತಪ್ಪು ಸಹ ಕಣ್ಣಿಗೆ ಕಾಣದೆ ಇರುವಂತೆ ಮಾಡುವ, ಮಾಡಿದ ತಪ್ಪು ಮರೆಮಾಚುವ ಚಾಕಚಕ್ಯತೆ ಇರುವ ಪ್ರತಾಪ್ ಬಗ್ಗೆ .. ! ಕಳೆದವಾರ ಆತ ತನಗಾದ ಸಮಸ್ಯೆ ಅದರಲ್ಲೂ ಕೋವಿಡ್ ಕಾಲದಲ್ಲಿ ಉಂಟಾದ ಸಮಸ್ಯೆ ಅತ್ತು ಅತ್ತು ಹೇಳುವಾಗ ಯಾರು ತಾನೇ ಕಣ್ಣೀರಾಗಲ್ಲ?? ಸುದೀಪ ?? ಬಿಗ್ ಬಾಸ್ ಆ ವೇದಿಕೆ ಒದಗಿಸಿದ್ದು ತಾನು ಮಾಡಿದ ತಪ್ಪು, ಕೇಳ ಬೇಕಾದ ಸಾರಿ ,ಹೇಳಬೇಕಾದ ಥ್ಯಾಂಕ್ಸ್ ಬಗ್ಗೆ. ... ಆದರೆ ಆತ ತನ್ನನ್ನು ನಂಬಿದ ಅಪಾರ ಜನಸಂಖ್ಯೆ ಭಾವನೆಗಳ ಮೇಲೆ ಆಡಿದ ಆಟದ ಬಗ್ಗೆ ಸೊಲ್ಲೆತ್ತದೆ ಕೋವಿಡ್ ಸಮಯದಲ್ಲಿ ತನಗೆ ತೊಂದರೆ ನೀಡಿದರು ಎಂದು ವೈದ್ಯರ ಮೇಲೆ ಅಪವಾದ ಹೊರೆಸಿ .. ಗೂಬೆ ಕೂರಿಸಿ ಚಿಕ್ಕವರಾದರು!ತಾನು ದೊಡ್ಡ ವಿಜ್ಞಾನಿ , ನನ್ನ ಲೆವೆಲ್ ಬೇರೆ ಎನ್ನುವ ಮನಸ್ಥಿತಿ ಆತನಿಗಿದೆ. ನಮ್ಮ ಮನೆಯಲ್ಲೂ ವಿಜ್ಞಾನಿ ಗಳು ಇದ್ದಾರೆ. ನನ್ನ ಕಸಿನ್ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರಿರುವ ಪೌಷ್ಟಿಕ ತಜ್ಞೆ. , ಒಬ್ಬಣ್ಣ ಕೇಂದ್ರ ಸರ್ಕಾರದಲ್ಲಿ ಕ್ಲಾಸ್ ಒ ನ್ ಆಫೀ ಸರ್. ಆತನಿರುವ ಡಿಪಾರ್ಟ್ ಮೆಂಟ್ ನಲ್ಲಿ ಅರ್ಧಕರ್ಧ ವಿಜ್ಞಾನಿಗಳು ಅಪಾರ ಡೆಡಿಕೇಷನ್, ಹಗಲು ರಾತ್ರಿ ಮಾಡುವ ರಿಸರ್ಚ್, ವರ್ಷದಲ್ಲಿ ಅರ್ಧ ಭಾಗ ಬಿಸಿಲು ಮಳೆ ಅನ್ನದೆ ಮಾಡುವ ಕೆಲಸಗಾರರು . ಬಿಗ್ ಬಾಸ್ ಕೊಟ್ಟ ಅವಕಾಶವನ್ನು ಬಳಸಿಕೊಳ್ಳ ಬೇಕಿತ್ತು ಸುದೀಪಾ ಅಷ್ಟೇ ನನ್ನ ಅಭಿಪ್ರಾಯ.
No comments:
Post a Comment