ಸೂಪರ್ ಲೈಕಾ !!


ಸಾಮಾನ್ಯವಾಗಿ ದೃಶ್ಯ ಮಾಧ್ಯಮದಲ್ಲಿ ಪ್ರಸಾರ ಆಗುವ ಕಾರ್ಯಕ್ರಮಗಳು ಇಷ್ಟ ಆಗುವುದಕ್ಕಿಂತ ಹೆಚ್ಚಾಗಿ   ಅದರ ನಿರೂಪಕರು, ಹಿನ್ನಲೆ ಧ್ವನಿ ನೀಡಿದವರು, ಅದನ್ನು ಬರೆದವರು , ಅದರ ಕ್ಯಾಮರಾ  ವರ್ಕ್ ಮಾಡಿದವರು ಒಟ್ಟಾರೆ ಯಾವುದೇ ಒಂದು ಕಾರಣ ಹೆಚ್ಚು ಗಮನ ಸೆಳೆಯ ಬಹುದು. ನನ್ನ ಮಿತ್ರ ಪ್ರಸಿದ್ಧ ಚಾನೆಲ್ ಒಂದರ ಕ್ಯಾಮರ ಮ್ಯಾನ್ . ಅತ್ಯುತ್ತಮ ಬರಹಗಾರ, ಅತಿ ಹೆಚ್ಚಿನ ಭಾವುಕ,ಒಂದು ವಿಷಯ ಬರೆದರೆ ಅತಿ ಸುಂದರವಾಗಿ ಅನಲೈಸ್ ಮಾಡುವಂತಹ ಪ್ರತಿಭಾವಂತ. ಬದುಕನ್ನು ಕ್ಯಾಮರದ ಲೆನ್ಸ್ಗಳ ಜೊತೆ ಕಳೆಯುತ್ತಿರುವ ಗೆಳೆಯ ಒಮ್ಮೊಮ್ಮೆ ಹೇಳೋದಿಷ್ಟೇ.. ಈ ದೃಶ್ಯ ಮಾಧ್ಯಮದಲ್ಲಿ ಅತಿ ಕೆಳಮಟ್ಟದ ಅಂದ್ರೆ ಯಾರ ಗಮನಕ್ಕೂ ಸಿಗದವರು ಅಂದ್ರೆ ಕ್ಯಾಮರ ವರ್ಕ್ ಮಾಡುವ ನಮ್ಮಂತಹವರು. ನಮಗೆ ಈ ಕೆಲಸ ಬಿಟ್ಟು ಬೇರೆ ಆಯ್ಕೆ ಇರಲ್ಲ, ನಿರಂತರವಾಗಿ ನಾವು ವೀಕ್ಷಕರ ಸೇವೆ ಮಾಡುತ್ತಿದ್ದರು ನಾವೆಂದಿಗೂ ಹೈಲೈಟ್ ಆಗುವುದೇ ಇಲ್ಲ.. ಹಾಗಂತ ಅನೇಕ ಬಾರಿ ಭಾವುಕವಾಗಿ ಆತ ನನ್ನ ಮುಂದೆ ಹೇಳಿದ್ದಾರೆ. ನಾನು  ಸಹ ಆ ಗೆಳೆಯನ ಮಾತುಗಳನ್ನು ಕೇಳುವುದಷ್ಟೇ ಮಾಡೋಕೆ ಸಾಧ್ಯ.ಅಂತಹ ತೆರೆ ಮರೆಯ ಎಲ್ಲ ಕ್ಯಾಮರ ಮಂದಿಗೂ ಪ್ರೀತಿಯ  ಹಾಯ್ ಹೇಳ್ತಾ ಇದ್ದೀನಿ.. !



@ ಮೊದಲೇ ತಿಳಿಸಿದಂತೆ ಕೆಲವರು ತುಂಬಾ ಇಷ್ಟ ಆಗ್ತಾರೆ. ಅದರಲ್ಲಿ ನಿರೂಪಕನ ಶೈಲಿ ಇಷ್ಟ ಆದರೆ ಸಾಕು ಮತ್ತೆ ಮತ್ತೆ ನಾವು ಅವರು ನಡೆಸಿಕೊಡುವ ಕಾರ್ಯಕ್ರಮ ವೀಕ್ಷಿಸಲು ಆಶಿಸುತ್ತೇವೆ. ಅಂತಹ ನಿರೂಪಕರಲ್ಲಿ ಸುವರ್ಣ ನ್ಯೂಸ್  ಅಜಿತ್ ಹನುಮಕ್ಕನವರ್  ಅವರ ನಿರೂಪಣೆ ತುಂಬಾ ಚಂದ ಇರುತ್ತೆ. ಲೋಕ ಸಭಾ ಚುನಾವಣೆಯ ಸಮಯದಲ್ಲಿ ಮೋದಿ ಅವರ ಬಗ್ಗೆ ಒಂದು ಕಾರ್ಯಕ್ರಮದ ನಿರೂಪಣೆ ಮಾಡ್ತಾ ಇದ್ರೂ ಅದಾಗ ವಾಹಿನಿ ಒಂದರಲ್ಲಿ ಪ್ರಸಾರಿತ ಕಾರ್ಯಕ್ರಮ. ಅದನ್ನು ಕನ್ನಡಿಗರಿಗೆ ಅರ್ಥ ಆಗುವಂತೆ ಹೇಳುತ್ತಿದ್ದರು. ಆ ಶೈಲಿ, ಆ ಮಾತಿನ ಏರಿಳಿತ ಜಾಸ್ತಿ ಇಂಪ್ರೆಸ್ ಮಾಡಿತ್ತು. ಸಕತ್ ಕೆಲಸ ಆದ್ದರಿಂದ ಬ್ಲಾಗ್ ಕಡೆಗೆ ಗಮನ ಕೊಡೋಕೆ ಆಗ್ತಾ ಇಲ್ಲ. ಆದರು ಈ ಕಾರ್ಯಕ್ರಮ ಹೆಚ್ಚು ಇಷ್ಟ ಆಗಿತ್ತು..
ಕೆಲಸದ ನಡುವೆ ಟೀವಿ ನೋಡುವುದು ಸಾಮಾನ್ಯ ಸಂಗತಿ...ಆದರೆ ಈ ವಿಷ್ಯ ಎಷ್ಟೇ ದಿನ ಆದರು ಸರಿಯೇ ಹೇಳಲೇ ಬೇಕು ಅಂತ ಹೇಳಿದ್ದೇನೆ.

@ಇದೆ ವಾಹಿನಿಯ ಭಾವನ ಸಹ ಅತ್ಯಂತ ಇಷ್ಟ ಆಗುವ ನಿರೂಪಕಿ . ಎಲ್ಲೂ ಪದಗಳನ್ನು ನುಂಗಲ್ಲ, ಚ್ಯೂಯಿಂಗ್ ಗಂ ಥರ ಅಗಿದು ಅಗಿದು ಮಾತಾಡಲ್ಲ.. ಸ್ಪಷ್ಟವಾಗಿ ಅದರಲ್ಲೂ ಮುಖ್ಯವಾಗಿ ವೀಕ್ಷಕರಿಗೆ ಅರ್ಥ ಆಗೋ ಹಾಗೆ ಮಾತಾಡ್ತಾರೆ. 


@ ಇನ್ನೊಂದು ವಿಷ್ಯ ಹೇಳೋದಿತ್ತು.. ನಮ್ಮ ಮನೇಲಿ ಈಗ ಪಬ್ಲಿಕ್ ಟೀವಿ ಬರ್ತಾ ಇದೆ.. ರಂಗಣ್ಣ ಅಂಡ್ ಟೀಮ್ ನೋಡದೆ ಬೇಜಾರಾಗಿ ಹೋಗಿತ್ತು ;-) .. ರಂಗಣ್ಣ ಅಂದ್ರೆ ಸುಮ್ಮನೇನಾ.. !! ಅದಿರ್ಲಿ ಮತ್ತೊಂದು ಸಂಗತಿ.. ಎಲೆಕ್ಷನ್ ಸಮಯದಲ್ಲಿ ನಮ್ಮ ಮನೆಗೆ ನನ್ನ ಅತ್ತೆ ಒಬ್ರು ಬಂದಿದ್ರು.. ಆಕೆ ಮಾತಿನ ನಡುವೆ ಒಬ್ಬರು ಮಾತಾಡೋದನ್ನು  ಇಮಿಟೇಟ್ ಮಾಡ್ತಾನೆ ಇದ್ರೂ.. ನಮಗೆ ಆ ಮೇಲೆ  ಗೊತ್ತಾದ ಸಂಗತಿ ಅಂದ್ರೆ ಪಬ್ಲಿಕ್ ಟೀವಿಯ ರಂಗಣ್ಣ ಅಂದ್ರೆ ರವಷ್ಟು ಶಾನೆನೆ ಇಷ್ಟ.. ರಂಗ  ಸರ್ ಅಂದ್ರೆ ಸುಮ್ನೆನಾ ! ಹೇಗೋ ಹೆಣ್ಣು ಮಕ್ಕಳನ್ನು ಅಟ್ರಾಕ್ಟ್  ಮಾಡೋದ್ರಲ್ಲಿ .. ವಾವ್ ರಂಗಣ್ಣ ವಾವ್ ಸೂಪರ್ ಲೈಕಾ !! ನಮ್ಮ ಆಫೀಸಿನ ಹೆಣ್ಣುಮಗಳು ಸಹ ರಂಗಣ್ಣನ ಗುಣಗಾನ ಮಾಡ್ತಾ ಇರ್ತಾಳೆ .. ರಂಗಣ್ಣ ಅಂದ್ರೆ ಸುಮ್ನೆನಾ :-) ?????



ಕೇವಲ ಹೆತ್ತಬ್ಬೆ ಮಾತ್ರ ಅಮ್ಮ ಅಲ್ಲ ನಮ್ಮ ಬದುಕಲ್ಲಿ ಬೆಂಗಾವಲಾಗಿ ಕಾದವರು , ಭಾವುಕ ಕ್ಷಣದಲ್ಲಿ ಜೊತೆಯಾದವರು, ಅಮ್ಮನಂತಹ ಅಪ್ಪ, ಚಿಕ್ಕಪ್ಪ, ಚಿಕ್ಕಮ್ಮ, ಅಣ್ಣ, ಅಕ್ಕ, ತಂಗಿ ತಮ್ಮ ಗೆಳೆಯ ಗೆಳತಿ ಒಟ್ಟಾರೆ ತಾಯಿಯ ಸ್ಥಾನದಲ್ಲಿ ನಿಂತು ಸಲುಹಿದ ಎಲ್ಲರಿಗು ವಿಶ್ವ ತಾಯಂದಿರ ದಿನದ ಹಾರ್ದಿಕ ಶುಭಕಾಮನೆಗಳು ..

ಕಾರ್ಯಕ್ರಮ !


ಯುಗಾದಿ ಹಬ್ಬದಲ್ಲಿ ಉದಯ ನ್ಯೂಸ್ನಲ್ಲಿ ಜಾನಪದ ಮತ್ತು ಸಿನಿಮ ಕಲಾವಿದರ ಸಮ್ಮಿಲನದ ಕಾರ್ಯಕ್ರಮ ಇತ್ತು. ನನ್ನ ಆಲ್ ಟೈಮ್ ಹಾಸ್ಯಕಲಾವಿದ, ಸಂಗೀತ ನಿರ್ದೇಶಕ ಸಾಧುಕೋಕಿಲ ಆ ಕಾರ್ಯಕ್ರಮದ ಮುಖ್ಯ ಭಾಗವಾಗಿದ್ದರು. ಸಿನಿಮಾಹಾಡುಗಳ ಜೊತೆಜೊತೆಗೆ ಅಲ್ಲಿ ಜಾನಪದ ಗೀತೆಗಳು ಸಹ ಇತ್ತು.ತುಂಬಾ ಖುಷಿ ಕೊಟ್ಟ ಕಾರ್ಯಕ್ರಮ. ಸಾಮಾನ್ಯವಾಗಿ ಹಾಸ್ಯದ ಕಾರ್ಯಕ್ರಮಗಳು ಅಂದ್ರೆಅತಿ ಹೆಚ್ಚು ಪ್ರೀತಿ ನನಗೆ . ಕನ್ನಡದಲ್ಲಿ ಉದಯ ಕಾಮಿಡಿ ನೋಡ್ತಾ ಇರ್ತೀನಿ. ಅದರಲ್ಲೂ ವಿಶೇಷವಾಗಿ ಸಾಧು ಕೋಕಿಲ ಅವರಸಿನಿಮಾ ಕ್ಲಿಪ್ಪಿಂಗ್ ಇದ್ರೆ ಖುಷಿ.. ಇನ್ನು ಜಗ್ಗೇಶ್ ಅಹಾ.. ಅದೇ ರೀತಿ ಇನ್ನು ಅನೇಕರಿದ್ದಾರೆ. ಅದನ್ನು ಹೊರತು ಪಡಿಸಿದರೆ ನ್ಯೂಸ್ ಚಾನೆಲ್ಗಳಲ್ಲಿ ಪ್ರಸಾರಿಸುವ ಹಾಸ್ಯ ಕಾರ್ಯಕ್ರಮಗಳನ್ನು ನೋಡ್ತೀನಿ.. ಈ ಹಾಸ್ಯ ಮಾಡುವವರದ್ದು ಒಂದೇ ರೀತಿ ಇರುತ್ತೆ.. ಒಂದರಲ್ಲಿ ಒಬ್ಬರು ಹೇಳಿದ್ದಾರೆ, ಅದನ್ನೇ ಸ್ವಲ್ಪ ತಿರುಗಿಸಿ ಮತ್ತೊಂದು ಕಾರ್ಯಕ್ರಮದಲ್ಲಿ ಹೇಳ್ತಾರೆ... ಅದೇ ರೀತಿ ಮತ್ತೊಂದು ಕಾರ್ಯಕ್ರಮದಲ್ಲಿ ಇನ್ನೊಬ್ಬರು.. ಒಟ್ಟಾರೆ ಇವರುಗಳು ಭೂಮಿ ಗುಂಡಗಿದೆ ಅಂತ ಮತ್ತೆ ಮತ್ತೆ ಸಾಬೀತು ಮಾಡಿಬಿಡ್ತಾರೆ ;-)  ತೆಲುಗು ಸಹ ನಾನು ಆಗಾಗನೋಡ್ತಾ ಇರ್ತೀನಿ... ಅದರಲ್ಲಿ ಜೆಮಿನಿ ಕಾಮಿಡಿ ಚಾನೆಲ್ ಹೆಚ್ಚು ವೀಕ್ಷಿಸೊದು... ಮಜಾ ಬರುತ್ತೆ ಹಾಸ್ಯ ನಟರು ನಟಿಸಿರುವ ದೃಶ್ಯಗಳನ್ನು ವೀಕ್ಷಿಸುವಾಗ ...

ಕಳೆದವಾರ  ವಿ ಚಾನೆಲ್ ನೋಡುವಾಗ ಒಂದು ಕಾರ್ಯಕ್ರಮ ತುಂಬಾ ಗಮನ ಸೆಳೆಯಿತು.ಹೀರೋಸ್ ಅಂತ ಅದರ ಹೆಸರು. .. ಲೈಂಗಿಕ ಕಿರುಕುಳ ದಂತಹ   ಸಮಸ್ಯೆ, ಅಂತಹ ಹರಾಸ್ ಮೆಂಟ್ ಮತ್ತು  ಅಬ್ಯುಸ್ ನಂತಹ ಸಮಸ್ಯೆಗಳಿಂದ ಹೆಣ್ಣು ಯಾವರೀತಿ ತನ್ನನ್ನು ತಾನು ರಕ್ಷಿಸಿ ಕೊಳ್ಳುತ್ತಾಳೆ  ಎನ್ನುವುದು ಇದರ ಮುಖ್ಯ ಅಂಶ.. ಟೀನಿಗಳ ಕಾರ್ಯಕ್ರಮ. ಕಿವಿ ಕೇಳದ ಮತ್ತು ಮಾತು ಬರದ ಹುಡುಗಿಯೊಬ್ಬಳನ್ನು ಆಕೆಯ ಪಕ್ಕದ   ಮನೆಯಾತ, ಅದರಲ್ಲೂ ಬ್ರಹ್ಮಚಾರಿ, ಅದರಲ್ಲೂ ಆ ಹುಡುಗಿಯ ತಾಯಿಯನ್ನು ಮದುವೆಆಗ್ತಿನಿ ಎಂದು ಮಾತು  ಈ ಹುಡುಗಿಯ ದೇಹದ ರುಚಿ ನೋಡಲು ಪ್ರಯತ್ನಿಸುತ್ತಿದ್ದ ..ಇದನ್ನು ಆಕೆ ಎದುರಿಸಿದ್ದು.. ಅದನ್ನು ಜಗತ್ತಿಗೆ ತೋರಿದ್ದು .. ಎಲ್ಲವನ್ನು ಅದ್ಭುತವಾಗಿ ಪಿಕ್ಚರೈಸ್ ಮಾಡಿದ್ದರು... ಮತ್ತೆ ಎಂದಾದರು ಪ್ರಸಾರ ಮಾಡಿದರೆ ತಪ್ಪದೆ ನೋಡಿ.. ಆ ಮೂಕ ಹುಡುಗಿಯ ಪಾತ್ರ  ಮಾಡಿದ ಹೆಣ್ಣುಮಗಳ ನಟನೆ.. ನಿಜಕ್ಕೂ ಆ ಕಾರ್ಯಕ್ರಮ ಅತ್ಯಂತ ಆತಂಕ ಮತ್ತು ಗಾಬರಿಯಿಂದ .. ನೋಡಿದ್ದೇ..ನಿಜಕ್ಕೂ  ತಪ್ಪದೆ ನೋಡಲೇ ಬೇಕಾದ ಕಾರ್ಯಕ್ರಮ! 

ಕಲಸುಮೇಲೋಗರ


ಇಂದು ಪುಸ್ತಕ ಬಿಡುಗಡೆಗೆ ಹೋಗಿದ್ದೆ.. ಹೆಚ್ಚಾಗಿ ನಾನು ಇಂತಹ ಕಾರ್ಯಕ್ರಮಗಳಿಗೆ ಹೋಗುವುದಿಲ್ಲ ಇತ್ತೀಚೆಗೆ... ಕಾರ್ಯಕ್ರಮ ತುಂಬಾ ಚೆಂದ ಇತ್ತು.. ಪುರುಷೋತ್ತಮ ಬಿಳಿಮಲೆ  ಸೇರಿದಂತೆ ವೇದಿಕೆ ಮೇಲಿದ್ದವರೆಲ್ಲರದ್ದು  ಮಾತು ಸಕತ್ತಾಗಿತ್ತು... 
ಕಾರ್ಯಕ್ರಮವೆಲ್ಲ ಪೂರ್ಣ ಆದ ಬಳಿಕ.. ಎಲ್ಲರು ಅತ್ತಿತ್ತ ವಿಂಗಡಣೆ   ಆದರು.. ನಾವು ಒಂದಷ್ಟು ಜನರು ಒಟ್ಟಿಗೆ ಸೇರಿದೆವು.. ಮಾತಿನ ಮಧ್ಯೆ ಬಂಡ ಅದಕ್ಕಿಂತಲೂ ಹೆಚ್ಚಿನ ಪ್ರಾಧಾನ್ಯತೆ ಪಡೆದ ಸಂಗತಿ ಅದರಲ್ಲೂ ಟೀವಿ ಷೋ ಅಂದರೆ ಕಾಮಿಡಿ ವಿತ್ ಕಪಿಲ್... ಕಲರ್ ವಾಹಿನಿಯ ಕಾಮಿಡಿ  ಕಪಿಲ್  ವಿಷಯವನ್ನು ಬೆಂಗಳೂರಿನ ಕನ್ನಡ ಬುಕ್ ರಿಲೀಸ್ ನಂತರ ಮಾತಾಡ್ತಾರೆ ಹೆಣ್ಣುಮಕ್ಕಳು ಅಂದ್ರೆ ಆ ಕಾರ್ಯಕ್ರಮ ಅದೆಷ್ಟು ಖುಷಿ ಕೊಟ್ಟಿರ ಬಹುದು ಅಲ್ವೇ!
ಕಾಮಿಡಿ... ಕಾರ್ಯಕ್ರಮದಲ್ಲಿ ನನಗೆ ಕಪಿಲ್ ಅಲ್ಲದೆ ಎಲ್ಲ ಪಾತ್ರಗಳು   ಇಷ್ಟ ಆಗುತ್ತದೆ.ಆದರೆ ನಾನು ಪ್ರತಿಬಾರಿ ಕಾಯುವುದು ಸಿದ್ದು ಪಾಜಿ ಧರಿಸಿರುವ ಪಗಡಿ ಯಾವ ಕಲರ್ ಅಂತ ನೋಡೋಕೆ (ಇದು ನಾನು ಬಟ್ಟೆ ತಗೊಳೋಕೆ ಸಾಕಷ್ಟು ಸಹಾಯ ಮಾಡಿದೆ ಅನೇಕ ಸಂದರ್ಭಗಳಲ್ಲಿ ;-) }ಮತ್ತು ದಾದಿ , ಬುವ , ಪಲಕ್ ... ಬಿಟ್ಟು ಅತ್ತೆ ಮತ್ತು ಅಜ್ಜಿ ಸಕತ್ ಖುಷಿ ಕೊಟ್ಟಿದ್ದಾರೆ ನಟನೆ ಮುಖಾಂತರ, ಅದೇ ರೀತಿ ಪಲಕ್ ಸಹಿತ..
ಇಲ್ಲಿ ಪಾತ್ರಗಳ ಕಲಸುಮೇಲೋಗರ ಇಲ್ಲ ... ಆದ ಕಾರಣ ಇಷ್ಟ ಆಗುತ್ತೆ. 

ಕನ್ನಡದಲ್ಲಿ ಸುವರ್ಣ ಸುದ್ದಿ ವಾಹಿನಿಯಲ್ಲಿ ಖುಷಿ ಕೊಡುವ ಕಾರ್ಯಕ್ರಮ ವಿಶ್ವ ಅವರ ಉಡೀಸ್...ವಿಶ್ವ ಜೊತೆಯ ಸಹ ಕಲಾವಿದ ಇತ್ತೀಚೆಗೆ ನನ್ನ ತಾಯಿ ಅವರ ತವರೂರಿಗೆ ಬಂದಿದ್ದರು ಮಿಮಿಕ್ರಿ ಕಾರ್ಯಕ್ರಮ ನಡೆಸಲು. ಅವರದ್ದು  ಸಾಮಾನ್ಯ ಜೋಕ್ಸ್ ಬಿಡಿ... ಆದರೆ ಮಾತಿನ ನಡುವೆ ಆತ ಅಲ್ಲಿನವರಿಗೆ ನಿಮ್ಮ ಬಳಿ 3ಜಿ ಫೋನ್  ನೋಡಿದ್ದಿರಾ ಅಂದ್ರು...ಒಂದರ್ಥಲ್ಲಿ ಅಲ್ಲಿನವರಿಗೆ ಅದರ ಬಗ್ಗೆ ಅರಿವೇ ಇಲ್ಲವೇನೋ ಎನ್ನುವಂತೆ ಮಾತಾಡಿದರು.. ನನ್ನ ತಾಯಿಯ ತವರೂರಲ್ಲಿ ಅಂದು ಪ್ರೌಢಶಾಲೆ ಐವತ್ತರ ಸಂಭ್ರಮದಲ್ಲಿ   ಇತ್ತು... ಅಲ್ಲಿ ಓದಿದ ಬಹುತೇಕರು ಐಎಸ್ , ಐಪಿಎಸ್ ಮಾತ್ರವಲ್ಲ , ವಕೀಲರು, ವೈದ್ಯರು, ಟೀಚರ್ ಹೀಗೆ ಅತ್ಯುತ್ತಮ ಹುದ್ದೆಯಲ್ಲಿ ಇದ್ದಾರೆ. ಹಳ್ಳಿಯಲ್ಲಿ ಇರುವ ತಾಯಿತಂದೆಯರು ದೆಹಲಿ, ಮುಂಬೈ ಮುಂತಾದ ಕಡೆ ಇರುವ  ತಮ್ಮ ಮಕ್ಕಳ ಮನೆಗೆ ಫ್ಲೈಟ್ ನಲ್ಲೆ ಓಡಾಡೋದು..  ಇರ್ಲಿ ಬಿಡಿ ಪಾಪ ಆ ಕಲಾವಿದರಿಗೆ ಏನು ಗೊತ್ತಿದೆ... ನನ್ನ ಅಮ್ಮ ನಾ ಕಂಡ ಅತ್ಯಂತ ಬುದ್ಧಿವಂತ ಹೆಣ್ಣುಮಕ್ಕಳಲ್ಲಿ ಒಬ್ಬರು.. ಟೂ  ಬ್ರಿಲಿಯಂಟ್ ...  ನನ್ನ ಅಮ್ಮನ ಊರು, ಅಲ್ಲಿನ ಸಾಧಕರನ್ನು ನೆನಪು ಮಾಡಿಕೊಂಡರೆ ಹೆಮ್ಮೆ ಆಗುತ್ತೆ ನನಗೆ :-) 

ಸೊ,,,, ಸೊ,,,,



ಸಾಮಾನ್ಯವಾಗಿ  ನಾನು  ವಾಹಿನಿಗಳನ್ನು  ವೀಕ್ಷಿಸುವಾಗ  ಕಾರ್ಯಕ್ರಮಗಳನ್ನು  ನಡೆಸಿ  ಕೊಡುವ   ನಿರೂಪಕರನ್ನು , ಅವರ  ಭಾಷೆ  ಬಳಕೆ, ಆಂಗಿಕ ಶೈಲಿಯನ್ನು ಗಮನಿಸ್ತೀನಿ.. ಕೆಲವರು ಪೆಕರು  ಪೆಕರಾಗಿ ಮಾತಾಡೋ ರೀತಿ ಭಯಂಕರ ನಗು ಬರುತ್ತೆ, ಜೊತೆಗೆ ಅಸಹ್ಯ , ಹೇವರಿಕೆ ಸಹ ಆಗುತ್ತೆ. ಅದರಲ್ಲೂ  ಕಾಮಿಡಿ   ಚಾನೆಲ್ ಗಳ ಗೋಳು ಅಂದ್ರೆ ಇಂತಹ ನಿರೂಪಕರ ಆಯ್ಕೆ.
ನಿರೂಪಕರು ಅಂದಾಗ ನೆನಪಿಗೆ ಬರುವಾತ ಅಕುಲ್ ಬಾಲಾಜಿ.
ತೆಲುಗು ಶೈಲಿಯ ಕನ್ನಡಿಗ ಅಕುಲ್ ಬಾಲಾಜಿ.. ಮಾತಾಡುವಾಗ ತೆಲುಗು ಘಮಲು ಕನ್ನಡದಲ್ಲಿ ಗೊತ್ತಾಗ್ತಾ ಇರುತ್ತೆ.. ಆದರು ಆತನ ಬಗ್ಗೆ ನನಗೆ ಒಂದಷ್ಟು ವಿಶ್ವಾಸ ಇದೆ.. ಅದಕ್ಕೆ ಕಾರಣ ಅವರು ಜನರ  ಜೊತೆ  ಮಾತನಾಡುವ   ಪರಿ ..ಆರಂಭದಲ್ಲಿ  ನಾನು ಪ್ರಿಯಾಂಕ  ಪತ್ರಿಕೆಯಲ್ಲಿ  ಇದ್ದಾಗ  ಅಕುಲ್ ಆಗಿನ್ನೂ  ಸಿನಿಮಾ ಇಂಡಸ್ಟ್ರಿ ಗೆ    ಹೊಸಬರು . ಪತ್ರಿಕೆಗೆ  ಬಂದಾಗ  ನಾನು ಅವರ ಸಂದರ್ಶನ  ಮಾಡಿ  ಬರೆದಿದ್ದೆ. ಅದಾದ ಬಳಿಕ ಅವರು ಸಿನಿಮಾ, ಟೀವಿ, ನಿರೂಪಣೆಯ ಮುಖಾಂತರ ಬದುಕನ್ನು ಬೆಳೆಸಿಕೊಂಡರು. ಇತ್ತೀಚಿಗೆ ಟೀವಿ ಪತ್ರಿಕೆ ಒಂದರಲ್ಲಿ  ಕೆಲಸ ಮಾಡುವಾಗ ಅವರಿಗೆ ಪ್ರಶಸ್ತಿ ನೀಡಲು ಪತ್ರಿಕೆಯ ಹೆಡ್ಡು.. ನಿರ್ಧರಿಸಿದಾಗ ನಾನು ಅಕುಲ್ರನ್ನು  ಫೋನ್ ಮುಖಾಂತರ ಭೇಟಿ ಆಗಿದ್ದೆ !! ಅದಾದ ಬಳಿಕ ಕಳೆದ ವರ್ಷ ಚಿತ್ರ ಸಿನಿಮಾ ಪತ್ರಿಕೆಗೆ ಅವರ ಸಿನಿಮ ಒಂದಕ್ಕೆ  ಮೂರು ಹೀರೋಗಳನ್ನು  ಸಂದರ್ಶನ ಮಾಡುವಾಗ.. ( ಮಲ್ಟಿ ಸ್ಟಾರರ್ - ಶ್ರೀ ಮುರಳಿ-ಅಕುಲ್ ಬಾಲಾಜಿ-ಶ್ರೀಕಿ) ಇವರಿಗೆ ಮಾತಿನ ಮಧ್ಯೆ ಹಳೆಯದನ್ನು ನೆನಪಿಸಿದೆ.. ಬರೆಯೋರ ಅದರಲ್ಲೂ ನನ್ನಂತಹ ಪುಡಿ ಪತ್ರಕರ್ತರ ಹಣೆ ಬರಹವೇ ಇಷ್ಟು...
ಏನೇ ಆದರು ಸಮಯದಲ್ಲಿ ಮಾತಲ್ಲಿ ಇದ್ದ ಭಾವ ಇಷ್ಟ ಆಗಿತ್ತು.. ಟೀವಿ ಯಲ್ಲಿ ಈಗ ಡ್ಯಾನ್ಸ್ ರಿಯಾಲಿಟಿ ಷೋ ನಿರೂಪಕರಾಗಿದ್ದಾರೆ ಅಕುಲ್... ಅವರ ಷೋ ಟೀವಿ    ಕನ್ನಡದಲ್ಲಿ  ನೋಡಿದಾಗ ಇವೆಲ್ಲ ನೆನಪಾಯಿತು ಇವೆಲ್ಲ !
@@ ಜೀ ವಾಹಿನಿ DID ಲಿಲ್ ಮಾಸ್ಟರ್ ಕಾರ್ಯಕ್ರಮ ಆರಂಭ ಆಗಿದೆ..ನನಗೆ ಅತಿ ಹೆಚ್ಚು ಇಷ್ಟ ಆಗುವ ಕಾರ್ಯಕ್ರಮಗಳಲ್ಲಿ ಅದು ಸಹ ಒಂದಾಗಿದೆಅದರಲ್ಲಿ ಎಲ್ಲ ಮಕ್ಕಳು  ಇಷ್ಟ ಆಗ್ತಾರೆ, ಆದರೆ ಫಲಕ್ ಅನ್ನುವ  ಶ್ರಾವಣ ದೋಷ ಇರುವ ಮಗು, ಅನುಷ್ಕ ಎನುವ ಮಾತಿನ ಮಲ್ಲಿ ಮತ್ತು ಸಚಿನ್ ಎನ್ನೋ ಶಾಯರಿ  ಮಗು ಹೆಚ್ಚು ಗಮನ ಸೆಳೆದಿದ್ದಾರೆ. ಫಲಕ್ ಮಾತು ಆಡ್ತಾಳೆ ಗಿಣಿಯಂತೆ ... ಎಷ್ಟು ಜಾಣೆ ಗೊತ್ತಾ .. ಕಿವಿ ಕೇಳಿಸದೆ ಇದ್ದರು ರಿದಂ ಗೆ ತಕ್ಕಂತೆ ಆಕೆಯ ಕಾಲುಗಳು ಹೆಜ್ಜೆ ಹಾಕುತ್ತೆ, ಮುಖದ ಭಾವವು ಸಹ ಅದ್ಭುತ...!
ಸಚಿನ್ ಅದೆಷ್ಟು ಜಾಣ ಮಗು ಗೊತ್ತ ಡಾನ್ಸ್ ಜೊತೆಜೊತೆಗೆ ಶಾಯರಿ ಸಹ ವಾವ್,, ಅನುಷ್ಕ ಮಾತು ಕೇಳಲೇ ಬೇಕು ಅನ್ನಿಸುವಷ್ಟು ಚಂದ ಇರುತ್ತೆ. ಅದೇ ರೀತಿ ಆಕೆಯ ಡ್ಯಾನ್ಸ್ ಸಹಿತ..

ಇನ್ನು ಜೈ ಅತ್ಯುತ್ತಮ ನಿರೂಪಕ.. ಮಾತು ಲೀಲಾಜಾಲ, ನನ್ನ ಫೇವ್ ಗ್ರಾಂಡ್   ಮಾಸ್ಟರ್ ಮಿಥುನ್ ದಾ,ಮಾಸ್ಟರ್  ಗೀತಾಮಾ, ಮಾಸ್ಟರ್ ಅಹಮದ್  ಖಾನ್ ಎಲ್ಲರ ಬಗ್ಗೆ ಹೇಳುವಷ್ಟೇ  ಇಲ್ಲ.. ಅಸಮಾನ್ಯ ಪ್ರತಿಭೆ ಮಾಸ್ಟರ್ ಮುದಸ್ಸರ್ ಸಹ ಮುಖ್ಯ ಸ್ಪರ್ಧೆಯಲ್ಲಿ ಇದ್ದಿದ್ದರೆ ಚಂದಿತ್ತು.. ! ಆತ ಸ್ಪರ್ಧೆಯ ಅತ್ಯಂತ ಪ್ರತಿಭಾವಂತ ಕಿರಿಯ ತೀರ್ಪುಗಾರ... ಒಳ್ಳೊಳ್ಳೆ ಅದರಲ್ಲೂ ಸಲ್ಲು BOY  ಸಿನಿಮಾಗಳಿಗೆ  ಕೊರಿಯಾಗ್ರಫಿ ಮಾಡಿದ್ದಾರೆ.. ಸೊ ಅದಕ್ಕೆ ಸ್ವಲ್ಪ ಜಾಸ್ತಿ ಇಷ್ಟ ನನಗೆ ಮುದಸ್ಸರ್ ಬಗ್ಗೆ :-)