ಮೀಡಿಯ ಮಂದಿ

Image result for blue nature wallpaper

ಅನೇಕ ವಾರಗಳಿಂದ ಬ್ಲಾಗ್ ಕಡೆ ಬರಲು  ಸಾಧ್ಯವಾಗಲೇ ಇಲ್ಲ. ಅದಕ್ಕೆ ಕಾರಣಗಳು ಹಲವಾರಿದ್ದರು, ಬರಲಾಗಲಿಲ್ಲ ಎನ್ನುವುದು ಸತ್ಯ. ಸಾಮಾನ್ಯವಾಗಿ ಎಲ್ಲಾ  ವಾಹಿನಿಗಳು, ಅಂದರೆ ಕನ್ನಡ ಸೇರಿದಂತೆ ಬೇರೆ ಭಾಷೆಯ ವಾಹಿನಿಗಳನ್ನು ವೀಕ್ಷಿಸುವಾಗ, ಅದಕ್ಕೆ ಸಂಬಂಧಪಟ್ಟಂತೆ  ಬರೆಯುವ ಪರಿಪಾತಕ್ಕೆ ಸ್ವಲ್ಪ ದಿನ ವಿರಾಮ  ನೀಡಿದ್ದರು ಸಹಿತ ನಾನು ಟೀವಿ  ನೋಡುವುದು ಬಿಟ್ಟಿರಲಿಲ್ಲ ಬಿಡಿ . ಆದರೆ ನನ್ನನ್ನು ತುಂಬಾ ಕಾಡಿದ್ದು, ಪತ್ರಕರ್ತ ಶರತ್ ಕುಮಾರ್ ಸಾವು. ಶಶಿಧರ್ ಭಟ್ ಅವರು ಶರತ್ ಸಾವಿನ ಬಗ್ಗೆ ಬರೆದಾಗ ಹೆಚ್ಚು ನೋವಾಗಿತ್ತು. ಬೆಳಕಿನಲ್ಲಿ ಕುಳಿತು ಫಳಫಳ ಎಂದು ಹೊಳೆಪಿನ  ಮುಖ ಹೊತ್ತು, ಕಿಲಕಿಲ ಎಂದು ನಗುವ ಆಂಕರ್ ಗಳು, ಪತ್ರಕರ್ತರು, ತೆರೆಯ ಹಿಂದೆ ಕೆಲಸ ಮಾಡುವ ನನ್ನ ಅನೇಕಾನೇಕ ಗೆಳೆಯರು-ಗೆಳತಿಯರು  ಇವರಲ್ಲಿ ಬಹುತೇಕರ ಪಾಡು ಹಿಂಗೆ!!
ಯಾರೋ ದುಡ್ಡು ಮಾಡಿರ ಬಹುದು, ಆದರೆ ಬಹಳಷ್ಟು ಜನ ಮೀಡಿಯ ಮಂದಿ ಸ್ಥಿತಿ ಹೇಳಿಕೊಳ್ಳುವಂತಿಲ್ಲ . ನನ್ನ ಅಮ್ಮನ ಬಳಿ  ಈ ವಿಷಯ ಮಾತಾಡುತ್ತಾ, ಇದ್ದರೆ ಸ್ವಲ್ಪ ದಿನ  ಇದರಲ್ಲಿ  ಉಳೀತಿನಿ ,ಆಮೇಲೆ ಬೇರೆ ಉದ್ಯೋಗ ಮಾಡ್ತೀನಿ ಸಾಕಾಯ್ತು ಎಂದು ಹೇಳುವುದು ಇತ್ತೀಚಿಗೆ ಜಾಸ್ತಿ ಆಗಿದೆ ನನ್ನ ಕಡೆಯಿಂದ. ರೋಸುತ್ತೆ ಕಣ್ರೀ ಇಲ್ಲಿನ ವಾತಾವರಣ!! 
@ ಈಟಿವಿ ನ್ಯೂಸ್ ನಲ್ಲಿ ಎಸ್ಪಿ ಬಾಲಸುಬ್ರಮಣ್ಯಂ ಅವರ ಎದೆತುಂಬಿ ಹಾಡಿದೆನು ಕಾರ್ಯಕ್ರಮ ಮತ್ತೆ ಆರಂಭವಾಗಿದೆ. ಆದರೆ ಅದನ್ನು ನೋಡಲು ಸಾಧ್ಯವಿಲ್ಲ, ಯಾಕೇಂದ್ರೆ  ಆ ಚಾನೆಲ್ ನಮ್ಮ ಮನೇಲಿ ಬರಲ್ಲ :-). ಎಂತಹ ವಿಷಾದ ಅಲ್ವೇನ್ರಿ! ಬೇರೆ ಭಾಷೆಯಲ್ಲಿ ಯಾವ ಚಾನೆಲ್ ಆರಂಭವಾಗಲಿ ಲಬಕ್  ಅಂತ ಸೇವೆ ನೀಡುತ್ತೆ . ಆದರೆ ಕನ್ನಡದಲ್ಲಿ ಅದೆಷ್ಟು ನ್ಯೂಸ್ ಚಾನೆಲ್ಗಳು ಆರಂಭವಾಗಿದೆ. ಆದರೆ ಬರೋದು ಮಾತ್ರ  ಆ...  ಒಂದು ... ಆ ಎರಡು ... ಆ ಮೂರು !!
@  ಕಲರ್ ಕನ್ನಡ ವಾಹಿನಿಯಲ್ಲಿ ವಿ ರವಿಚಂದ್ರನ್ ಅವರ ನೇತೃತ್ವದ  ಡ್ಯಾನ್ಸಿಂಗ್  ಕಾರ್ಯಕ್ರಮದಲ್ಲಿ ಮಾಸ್ಟರ್  ಆನಂದ್ ಗೆ ಟ್ರೋಫಿ ಬಂದಿದ್ದು ಖುಷಿ ಅನ್ನಿಸಿತು. ಆದರೆ ಅದಕ್ಕಿಂತ ನನಗೆ ಖುಷಿ ಆಗೋ ಸಂಗತಿ ಅಂದ್ರೆ ಡ್ಯಾನ್ಸಿಂಗ್ ಸ್ಟಾರ್ ಜೂನಿಯರ್ ಆರಂಭವಾಗುತ್ತದೆ. ಅದರಲ್ಲಿ ಮುಖ್ಯವಾಗಿ ಹೊಸಬರು ಅಂದ್ರೆ ಸೆಲೆಬ್ರಿಟಿಗಳು ಅಲ್ಲದವರು ಇದ್ದಾರೆ ಚಂದ . ಅಂತಹ ಪ್ರತಿಭೆಗಳ ಡ್ಯಾನ್ಸ್ ಅಥವಾ ಇನ್ಯಾವುದೇ ಕಾರ್ಯಕ್ರಮ ನೋಡಲು ನನಗಿಷ್ಟ .
@@ ಸುವರ್ಣ ಮನೋರಂಜನೆ ವಾಹಿನಿಯಲ್ಲಿ  ಪುಟಾಣಿ ಪಂಟ್ರು  ಎನ್ನುವ ಕಾರ್ಯಕ್ರಮ ಬರ್ತಾ ಇದೆ. ಅದರಲ್ಲಿ ಮಿತ್ರ ನಿರಂಜನದೇಶಪಾಂಡೆ  ನಿರೂಪಣೆ ಮಾಡುತ್ತಿದ್ದಾರೆ.ಅದರಲ್ಲಿ ಗುರು ಪ್ರಸಾದ್, ರಕ್ಷಿತಾ ಮತ್ತು ಮಾಸ್ತರ್ ಸುಂದರಂ ಅವರು ತೀರ್ಪುಗಾರಾಗಿದ್ದಾರೆ. ಚಂದದ ಕಾರ್ಯಕ್ರಮ. ಬಹಳ ದಿನಗಳ ಬಳಿಕ ನನಗೆ ನಿರಂಜನ ಅವರನ್ನು ಟೀವಿ ಪರದೆ ಮೇಲೆ ಅಂದ್ರೆ ರಿಯಾಲಿಟಿ ಶೋ ಮೂಲಕ ನೋಡುವ ಅವಕಾಶ. ಜಾಲಿ ಬಾಯ್ ,ರೇಡಿಯೋ ಜಾಕಿ ಆಗಿದ್ದಾಗ, ಜೀ ಕನ್ನಡದಲ್ಲಿ ವಿದೇಶಕ್ಕೆ ಹೋಗಿ ಕಾರ್ಯಕ್ರಮ ನಡೆಸಿ ಕೊಡುವಾಗಲು  ಇಷ್ಟ ಆಗಿತ್ತು. ಈಗ ಹೀರೋ ಆಗಿದ್ದಲ್ಲದೆ ಕನ್ನಡಿಗರಿಗೆ ಹೆಚ್ಚು ಗೊತ್ತಾಗಿದ್ದಾರೆ ನಿರಂಜನ್ . ವೆಲ್ ಅವರ ವಿಷಯ ಪಕ್ಕಕ್ಕೆ ಇಡೋಣ ಒಟ್ಟಾರೆ  ಅತ್ಯಂತ ಖುಷಿ ಕೊಡುವ ಕಾರ್ಯಕ್ರಮ ಇದು. ಗುರು ನಿರ್ದೇಶನ ಬಿಟ್ಟು ಜಡ್ಜ್ ಆಗಿ ಸೇಫರ್ ಸೈಡ್ ನಲ್ಲಿದ್ದಾರೆ. 
  


ಎಂದೆಂದೂ ನಿನ್ನನು ಮರೆತು ..


ಕಳೆದ ಕೆಲವು ದಿನಗಳಿಂದ ಒಟ್ಟಾರೆ ಎರಡು ವಾರದಿಂದ ಹಲವಾರು ಸಂಗತಿಗಳು ಮನಸ್ಸು ಕದಡಿತ್ತು. ನೇಪಾಲದ ಭೂಕಂಪ, ಒಬ್ಬ ಹುಡುಗನ ರೋಲ್ ಕಾಲ್ ಸ್ವಭಾವ, ಒಬ್ಬ ಹೆಣ್ಣುಮಗಳು ತನ್ನ ಪತಿಗೆ ಮಾಡಿದ ಮೋಸ ಎಲ್ಲವು ಛೆ ಲೈಫ್ ಇಷ್ಟೇನಾ ಎನ್ನುವಂತಹ ಪ್ರಶ್ನೆ ಮೂಡಿಸಿತ್ತು. ಏಕಾಗ್ರತೆ ಲೋಪವಾದ ಕಾರಣ ಬ್ಲಾಗ್ ಬರೆಯಲಾಗಲೇ ಇಲ್ಲ. ದಿನಕ್ಕೆ ರಾಶಿ ರಾಶಿ ಬರೀತೀನಿ, ಆದರೆ ಬ್ಲಾಗ್ ಪ್ರಪಂಚ ಬೇರೆ. ಆದ್ದರಿಂದ ಅದ್ಯಾಕೋ ಕೂತು ಬರಿಯಲಾರೆ, ತಲೆಯಲ್ಲಿ ರಾಶಿ ರಾಶಿ ಸಂಗತಿಗಳಿದ್ದರೂ ಸಹಿತ ಬ್ಲಾಗ್ ನಲ್ಲಿ ಒಂದು ಅಕ್ಷರವೂ ಟೈಪಿಸಲಾರೆ ಎಂದು ಅನ್ನಿಸಿತು. ಸೊ ಆ ಕಾರಣವನ್ನು ಮುಂದಿಟ್ಟು ಬರೆದಿರಲಿಲ್ಲ.

ಕಳೆದ  ಸ್ವಲ್ಪ ದಿನಗಳಿಂದ ಕನ್ನಡ ಕಾರ್ಯಕ್ರಮಗಳು ಅಂದ್ರೆ ಕನ್ನಡ ವಾಹಿನಿಗಳೇ ಪ್ರಸಾರ ಆಗಲಿಲ್ಲ. ಟಾಟ ಸ್ಕೈ  ಕನ್ನಡಕ್ಕೆ ಟಾಟ ಮಾಡಿತ್ತು. ಈಗ ಬರ್ತಾ ಇದೆ. ಸಾಮಾನ್ಯವಾಗಿ ಯಾವುದೇ ಭಾಷೆಯ ಕಾರ್ಯಕ್ರಮಗಳು   ನೋಡಿದರು ಕನ್ನಡ ನೋಡೆ ತೀರ್ತಾ ಇದ್ದೆ. ಆದರೆ ಸುಮಾರು ಎರಡು ವಾರಗಳಿಂದ ಮಿಸ್ಸಿಂಗ್ . ಆದರು ಸಧ್ಯ ಈಗ ಸರಿಯಾಗಿದೆ ಅದೇ ಖುಷಿ. 

ಜೀ ಹಿಂದಿ  ವಾಹಿನಿಯಲ್ಲಿ  ಡಿಐಡಿ ಅಮ್ಮಂದಿರ ವಿಶೇಷ ನೃತ್ಯ ಸ್ಪರ್ಧೆಯಲ್ಲಿ ಮೂರು ಅಪರೂಪದ ತೀರ್ಪುಗಾರರಿದ್ದಾರೆ. ಅವರ ಬಗ್ಗೆ ನಿಮಗೆ ಗೊತ್ತಿದೆ. ಗೋವಿಂದ , ಟೆರೆನ್ಸ್, ಗೀತ ಅವರ ಬಗ್ಗೆ  ವಿಶೇಷವಾಗಿ ಹೇಳುವಷ್ಟಿಲ್ಲ. ಅಲ್ಲದೆ ಒಂದು ಪೋಸ್ಟ್ ನಲ್ಲಿ ನಾನು ಸೌಮ್ಯಶ್ರೀ ಎನ್ನುವ ಕನ್ನಡದ ಹೆಣ್ಣು ಮಗಳ ಬಗ್ಗೆ ಹೇಳಿದ್ದೆ. ಆಕೆ ಸಕತ್ ಎನೆರ್ಜಿಟಿಕ್. ಅದೇರೀತಿ  ಬೇರೆ ಮದರ್ ಇಂಡಿಯಾಗಳು ಸಹ ಸಕತ್ ಡ್ಯಾನ್ಸ್ ಮಾಡ್ತಾರೆ. (ಈ ಸಮಯದಲ್ಲಿ ನಾನು ಹೆಚ್ಚು ಬಾರಿ ಹೋಗಿದ್ದ ಒಂದು ಮಹಿಳಾ ಸಂಘದ ನೆನಪಾಗುತ್ತದೆ. ಅದರಲ್ಲಿ ಅರವತ್ತಕ್ಕೂ ಹೆಚ್ಚು ವಯಸ್ಸಾದ ಅಮ್ಮಂದಿರ ಡ್ಯಾನ್ಸ್ ಎಷ್ಟು ಎನೆರ್ಜಿಟಿಕ್  ಗೊತ್ತ ಸುಪರ್ಬ್..  !)

ಆದರೆ ನನಗೆ ಹೆಚ್ಚು ಖುಷಿ ಕೊಟ್ಟ ಸಂಗತಿ ಗೋವಿಂದ ಅವರು ಡಾ. ರಾಜ್ ಕುಮಾರ್ ಅವರ ಎವರ್ ಗ್ರೀನ್ ಪ್ರೇಮಗೀತೆ ಎಂದೆಂದೂ ನಿನ್ನನು ಮರೆತು ಹಾಡನ್ನು ಹಾಡಿದ್ದು.. ವಾವ್  ಖುಷಿ ಆಯ್ತು. ಹಿಂದಿನ ದಿನವಷ್ಟೇ ಅಣ್ಣಾವ್ರ ಹುಟ್ಟು ಹಬ್ಬವಾಗಿತ್ತು. ಮಾರನೆಯ ದಿನ ಪ್ರಸಿದ್ಧ ಟೀವಿ ಷೋ ನಲ್ಲಿ ವಾವ್  ಕ್ಯಾ  ಬಾತ್ ಹಾಯ್ ಲೈಕ್ ಇಟ್ . 


@ಇಂಡಿಯ ಗಾಟ್ ಟ್ಯಾಲೆಂಟ್ ಕಾರ್ಯಕ್ರಮ ಈಗ ಕಲರ್ ವಾಹಿನಿಯಲ್ಲಿ ಪ್ರಸಾರ ಆಗ್ತಾ ಇದೆ. ಕಿರಣ್, ಕರಣ್ ಹಾಗೂ ಮಲೈಕ ಜೊತೆ ನಾವು ಎಂಜಾಯ್ ಮಾಡೋ ಕಾರ್ಯಕ್ರಮ.  ಬೆಂಗಳೂರಿನ ಪ್ರತಿಭೆ  ವಿಶೇಷವಾಗಿ ತನ್ನಲ್ಲಿರುವ ವಿಭಿನ್ನತೆ ತೋರಿದ. ಕೊಳಲು ನುಡಿಸುತ್ತಾ ಬಾಯಲ್ಲಿ ತಬಲದಂತೆ ಶಬ್ದ  ಮಾಡುತ್ತಾ ವಾವ್ ! ಅದನ್ನು ನೋಡಿದ್ರೆನೆ  ಕಣ್ರೀ ಮಜಾ ಸಿಗೋದು. ಆ ವಾಹಿನಿಯವರು ಮತ್ತೊಮ್ಮೆ ಪ್ರಸಾರ ಮಾಡಿದ್ರೆ ನೋಡಿ. ಅದೇರೀತಿ ಬಾಟಲ ಮೇಲೆ ಸ್ಟೂಲ್ ನಂತಹವು ಹಾಕಿ ಒಂದಷ್ಟು ಗುಂಪು ಕಸರತ್ತು ಮಾಡಿದ್ರು. ಸಕತ್ತಾಗಿತ್ತು.

ಕನ್ನಡ ಕೇಳೋ ಹಂಗೆ ಇರುತ್ತೆ!


Image result for flower
ಅನೇಕ ಬಾರಿ ಯಾವ ಕಾರ್ಯಕ್ರಮಗಳ ಬಗ್ಗೆ ಬರೆಯೋದು ಅಂತ ಅನ್ನಿಸುತ್ತಿರುತ್ತದೆ. ಯಾಕೇಂದ್ರೆ ಸಾಮಾನ್ಯವಾಗಿ ನಾನು ಕೆಲವು ಕಾರ್ಯಕ್ರಮಗಳನ್ನು ಹೆಚ್ಚು ನೋಡಿರ್ತೀನಿ, ಅದರ ಬಗ್ಗೆ ಪದೇಪದೇ ಬರೆಯೋಕೆ ಆಗಲ್ಲ. ಈ ಎಲ್ಲಾ ಕಾರಣಗಳಿಂದ ಬರಿಯದೆ ಇರುವುದು ಹೆಚ್ಚು ಆರಾಮ ಎಂದು ಅನ್ನಿಸುತ್ತೆ. 

ಉದಯವಾಹಿನಿ ಅಂದ್ರೆ  ಬಹಳಷ್ಟು ವೀಕ್ಷಕರಿಗೆ ಅದರಲ್ಲೂ  ಮಹಿಳಾ ವೀಕ್ಷಕರಿಗೆ ಇಷ್ಟ ಆಗುತ್ತದೆ. ಅತಿರಂಜಕ ಧಾರಾವಾಹಿಗಳ ಪ್ರಸಾರ, ಅಲ್ಲದೆ ತನ್ನದೇ ಆದ  ಛಾಪು  ಒತ್ತಿರುವ ಕೆಲವು ರಿಯಾಲಿಟಿ ಷೋಗಳು... ! ಅದರಲ್ಲಿ ನನಗೆ ಶಾಲಿನಿ ನಡೆಸಿಕೊಡುವ ಕಾರ್ಯಕ್ರಮ ಅತಿ ಇಷ್ಟ. ಯಾಕೆ ಎನ್ನುವುದು ವಿವರಿಸಿ ಹೇಳ ಬೇಕಿಲ್ಲ. ಮಕ್ಕಳೇ ಮಾಣಿಕ್ಯ, ಅವರ ಮಾತುಗಳ, ಕಲ್ಪನಾ ಲಹರಿ ಅಮೋಘ. ಅದರ ಜೊತೆ ಶಾಲಿನಿಯ ಮಾತಿನ ಶೈಲಿ  ಅದ್ಭುತ. ಭಾನುವಾರ ಆ ಕಾರ್ಯಕ್ರಮ ನೋಡಲು ಕಾತುರದಿಂದ ಕಾಯುವಂತಾಗುತ್ತದೆ.

@ ಉದಯ ನ್ಯೂಸ್ ಯಾವ ಕಾರಣದಿಂದ ಇಷ್ಟ ಆಗುತ್ತೆ ಅಂದ್ರೆ ಅದರಲ್ಲಿ ವಾರ್ತೆ ಓದುವವರು ಸ್ಫುಟವಾದ ಕನ್ನಡದಲ್ಲಿ ವಾರ್ತೆ ಓದುತ್ತಾರೆ. ಆದರೆ ಬಹಳಷ್ಟು ಕನ್ನಡ ವಾಹಿನಿಗಳಲ್ಲಿ ವಾರ್ತೆ  ಕೇಳೋದೇ ಹಿಂಸೆ ಆಗುತ್ತೆ. ಕೆಲವರಂತೂ ಬ್ಯಾಡ ಬಿಡಿ ನನಗ್ಯಾಕೆ !! 

ಆದರೆ ಈವರೆಗೂ ಅಂತಹ ಬೇಸರ ಆಗಿಲ್ಲ ಉದಯ ನ್ಯೂಸ್ ನವರ ಬಗ್ಗೆ ಹೇಳುವುದಾದರೆ!   ಸಾಕಷ್ಟು ಬದಲಾವಣೆಗಳು ಆಗಿವೆ ಉದಯ ನ್ಯೂಸ್ ನಲ್ಲೂ ಸಹಿತ.ತೀರ ಬ್ರೆಕಿಂಗ್ ನ್ಯೂಸ್ ಹಾವಳಿ ಇಲ್ಲ ಅಂದ್ರೂ ಇರುವ ನ್ಯೂಸ್ ಅಚ್ಚುಕಟ್ಟಾಗಿ ಹೇಳುತ್ತಾರೆ. ಚಂದನ ವಾಹಿನಿ ಬಳಿಕ   ಜಾಗ ಪಡೆದ ಚಾನೆಲ್ ಅಂದ್ರೆ ಇದು. ಕನ್ನಡ ಕೇಳೋ ಹಂಗೆ ಇರುತ್ತೆ ! 
@ ಉದಯ ಮ್ಯೂಸಿಕ್  ವಿಷಯಕ್ಕೆ ಬರುವುದಾದರೆ ಹೊಸ ಹುಡುಗ ಹುಡುಗಿಯರು ಎಷ್ಟು ಸುಂದರವಾಗಿ ಕನ್ನಡ ಮಾತಾಡ್ತಾರೆ.  ಇಲ್ಲಿ ನಾನು ಖುಷಿಯಿಂದ ಈ ಮಾತು ಹೇಳ್ತಾ ಇದ್ದೀನಿ ಏಕೆಂದರೆ ಸಾಮಾನ್ಯವಾಗಿ ಅತಿಯಾದ ಕಂಗ್ಲೀಷ್ ಇರುವಾಗ ಕನ್ನಡವೂ ಚೆನ್ನಾಗಿ ಮಾತಾಡೋದು, ಮುಖ್ಯವಾಗಿ  ವೀಕ್ಷಕರಿಗೆ ಅರ್ಥ ಆಗುವಂತೆ ಕನ್ನಡ ಮಾತಾಡ್ತಾರೆ. ಸಿನಿ ತಾರೆಯರ  ಸಂದರ್ಶನ ಸಹ ಅಷ್ಟೇ ಚಂದ ಮಾಡ್ತಾರೆ. ಲೈಕ್ ಆಗುವಂತೆ... ನ್ಯೂಸ್ ಚಾನೆಲ್ ಗಳ ವಾರ್ತಾ ವಾಚಕರಿಗಿಂತ ಈ ಬಾಲಕ ಬಾಲಕಿಯರ ಮಾತು  ಕಿವಿಗೆ ಹಿತವಾಗಿರುತ್ತದೆ. 

ಅಜ್ಞಾತ ಕವಿಗಳು

Image result for red and green flower
ನನಗೆ ಮೊದಲಿನಿಂದಲೂ ಕನ್ನಡ ಸ್ವಲ್ಪ ಚೆನ್ನಾಗಿ ಬರೀತಿನಿ ಅನ್ನುವ ಹೆಮ್ಮೆ, ಆತ್ಮವಿಶ್ವಾಸ ಏನ್ ಬೇಕಾದ್ರೂ ತಿಳಿಯ ಬಹುದು. ಆದರೆ ಇಬ್ಬರು ವ್ಯಕ್ತಿಗಳು ನನ್ನ ಈ ನಂಬಿಕೆಯನ್ನು ಸುಳ್ಳು ಮಾಡಿ ಬಿಟ್ಟಿದ್ದಾರೆ. ಮೊದಲನೆಯವರು ಬರಹಗಾರರು . ಅವರು ಒಮ್ಮೆ ನಾನು ಬಳಸಿದ ಪದದ ಬಗ್ಗೆ ತಪ್ಪು ಕಂಡು ಹಿಡಿದರು, ನಾನು ಯಾವುದೋ ಮೂಡ್ ನಲ್ಲಿ ಇದ್ದವಳು ನಾನು ಬರೆದದ್ದು ಸರಿ ಎಂದೇ.. ಆತ ತಕ್ಷಣ  ಕೆಂಡಗಣ್ಣನಾಗಿ ನನ್ನ ಕಡೆ ಬಿಸಿ ಗಾಳಿ ತೋರಿ  ಇನ್ನುಮುಂದೆ ನಿಮ್ಮ ತಪ್ಪು ತಿದ್ದಲ್ಲ ಎಂದು ಬಿಟ್ಟರು. ಆದರೆ ತಮಾಷೆ ಅಂದ್ರೆ  ಆ ಸಂಗತಿಯನ್ನು ಅವರ್ಯಾಕೆ ಅಷ್ಟೊಂದು  ಗಂಭೀರವಾಗಿ ಅದನ್ನು ಪರಿಗಣಿಸಿದರು ಎನ್ನುವ ಬಗ್ಗೆ ಸಾಕಷ್ಟು ದಿನ ಬೇಸರ ನನ್ನನ್ನು ಕಾಡಿತ್ತು. ಅದಾದ ಬಳಿಕ ನಾನು ಅವರ ಪುಸ್ತಕಗಳನ್ನು ಓದುವುದು,  ಅಕ್ಷರಪ್ರಿಯರಿಗೆ ಅದನ್ನು ಕೊಡುವುದನ್ನು ಬಿಟ್ಟೆ. ನಾವು ಸಾಮಾನ್ಯರು ದೊಡ್ಡವರ ಉಸಾಬರಿ ಯಾಕೆ ಅಂತ!


ಕಳೆದ ಎರಡು ಮೂರು ದಿನಗಳಿಂದ ಒಬ್ಬಾತ ನನ್ನ ಕನ್ನಡದ  ಬಗ್ಗೆ ಟೀಕಾಪ್ರಹಾರ ಮಾಡ್ತಾ ಇದ್ದಾನೆ. ಅದರ ಬಗ್ಗೆ ನನಗೆ ಬೇಸರ ಇಲ್ಲ. ಆದರೆ ಒಂದಂತೂ  ಮನದಟ್ಟಾಯ್ತು  .. ಜಯಶ್ರೀ ನಿನಗೇನೂ ಬರಲ್ಲ. ಮಿಸ್ಫಿಟ್, ಕನ್ನಡ ಬರುತ್ತೆ ಎನ್ನುವ ನಿನ್ನ ನಂಬಿಕೆ, ಆತ್ಮ ವಿಶ್ವಾಸ ಎಲ್ಲವನ್ನು ಬಿಟ್ಟುಬಿಡು ಎಂದು ಹೇಳಿಕೊಂಡೆ..  ಕನ್ನಡ ಬರದ ನಾನು ತಪ್ಪು ಮಾಡಿದರೆ ದಯಮಾಡಿ ಪ್ರಿಯ ರೀಡರ್ಸ್ ಒಪ್ಪಿಕೊಳ್ಳಿ..ಇದು ನನ್ನ ರಿಕ್ವೆಸ್ಟ್.


@@ ಸಂಗೀತ ಪ್ರಿಯರಿಗೆ, ಭಕ್ತಿ, ದೇವರು ದಿಂಡರು, ಸಂಪ್ರದಾಯ , ಪುರಾತನ ಸಂಗತಿಗಳ ಬಗ್ಗೆ ಆಸ್ಥೆ ಇರುವವರಿಗೆ ಇಷ್ಟ ಆಗುವ ಚಾನೆಲ್ಗಳಲ್ಲಿ   svbc  ಶ್ರೀ ವೆಂಕಟೇಶ್ವರ ಭಕ್ತಿ ಚಾನೆಲ್  ಸಹ ಒಂದು. ಈ ತೆಲುಗು  ಚಾನೆಲ್ ನಲ್ಲಿ ಆಗಾಗ ಕನ್ನಡ ಸಹ ಕೇಳಿ ಬರುತ್ತೆ. ಟಿಟಿಡಿಯ  ಈ ವಾಹಿನಿಯಲ್ಲಿ  (ದೇವರು- ದಿಂಡರು ಅಂತ ನಂಬುವ ನನ್ನಂತಹ ಅತಿ ಸಾಮಾನ್ಯರಿಗೆ )  ಸಾಮಾನ್ಯವಾಗಿ ತಿರುಪತಿಯ ದೇಗುಲ, ಸುತ್ತಮುತ್ತಲ ದೇವಾಲಯಗಳಲ್ಲಿ ನಡೆಯುವ ಕಾರ್ಯಕ್ರಮ ಪ್ರಸಾರವಾಗುತ್ತದೆ.   ಅಲ್ಲದೆ, ಈ ಚಾನೆಲ್ ನಲ್ಲಿ ಇಷ್ಟ ಆಗುವ ಕಾರ್ಯಕ್ರಮ ಮತ್ತೊಂದಿದೆ. ಅದು ಅಜ್ಞಾತ ವಾಗ್ಗೇಯಕಾರರ  ಕಾರ್ಯಕ್ರಮ. ನಾವು ಸಾಮಾನ್ಯವಾಗಿ ಕೆಲವು ವಾಗ್ಗೇಯಕಾರರ ಬಗ್ಗೆ ಕೇಳಿದ್ದೇವೆ. ಆದರೆ  ಬಹಳಷ್ಟು ಅಜ್ಞಾತ ಕವಿಗಳು ಬಿಟ್ಟು ಹೋಗಿರುವ ಅಪಾರ ಸಂಗೀತ ಸಂಪತ್ತನ್ನು ಆ ವಾಹಿನಿಯವರು ಪ್ರಸಾರ ಮಾಡುತ್ತಿದ್ದಾರೆ. ಸಂಗೀತಪ್ರಿಯರಿಗೆ ಇಷ್ಟ ಆಗುವ ಕಾರ್ಯಕ್ರಮ.. ಸಾಧ್ಯವಾದರೆ ವೀಕ್ಷಿಸಿ ಆನಂದಿಸಿ. (ರಾತ್ರಿ 10 ಗಂಟೆಗೆ ಪ್ರಸಾರ ಆಗುತ್ತದೆ.)

ಕನ್ನಡ ಸ್ಪರ್ಧಿ

Image result for pink flower
ಭಟ್ಟರ ವಾಸ್ತುಪ್ರಕಾರ ಬಂದಿದ್ದೆ ತಡ ಬ್ಯಾಡ ಬ್ಯಾಡಾಂದ್ರೂ ಸೋಷಿಯಲ್ ನೆಟ್ ವರ್ಕ್ ನಲ್ಲಿ ಮಂದಿ ತಮಗೆ ಇಷ್ಟ  ಬಂದ ಕಮೆಂಟ್ ಹಾಕಿ ಹಾಕಿ ಜಗ್ಗೇಶ್ ಅವರಿಗೆ ಕೋಪ ಬರಿಸಿದ್ದು ಸತ್ಯ. ಆದರೂ ವಾಸ್ತು ಪ್ರಕಾರದ ಬಗ್ಗೆ ಮಂದಿಗೆ ಕುತೂಹಲ ಇದ್ದೆ ಇದೆ ಬುಡಿ. 
 ವಾಸ್ತು ಪ್ರಕಾರದಲ್ಲಿ ಟಿ ಏನ್ ಸೀತಾರಾಮ್  ಮಾಡಿರುವ ಪಾತ್ರಕ್ಕೆ ಮೊದಲು ಬ್ರಹ್ಮಾಂಡ  ಗುರುಜೀ   ನರೇಂದ್ರ ಬಾಬು ಶರ್ಮ ಅವರನ್ನು ಆಯ್ಕೆ ಮಾಡಲಾಗಿತ್ತು, ಅವರು ತಿರಸ್ಕರಿಸಿದ ಬಳಿಕ ಆ ಜಾಗಕ್ಕೆ ಟಿ ಏನ್ ಎಸ್ ಬಂದ್ರು ಎನ್ನುವ ಸಂಗತಿ ನನ್ನ ಎಫ್ಬಿ ದೋಸ್ತ್ ಬಾಬ ಪ್ರಸಾದ್  ವೆಂಕಟೇಶ್ ಬರಕೊಂಡಿದ್ದರು.ಅದೇ ಆ ಪಾತ್ರ ಕಾಳಿ ಮಠ ಸ್ವಾಮಿ ಮಿಸ್ಟರ್ ಕೂಗುಮಾರಿಗೆ ನೀಡಿದ್ದರೆ ಆಹಾ ! ತಪ್ಪದೆ ಓಕೆ ಅಂದು ಬಿಡ್ತಾ ಇದ್ರೂ..
Image result for pink flower
@ಮಧುಸೂಧನ್  ಪ್ರಭಾಕರ್ ರಾವ್ ಎನ್ನುವ ವರದಿಗಾರ ಸುವರ್ಣ ನ್ಯೂಸ್ ನಲ್ಲಿ ಇದ್ದಾರೆ. ಸೀರಿಯಸ್ ಆಗಿರುವ ನ್ಯೂಸ್ ಸಹ ನಗುಮುಖದಲ್ಲಿ ಹೇಳುವ ಅಭ್ಯಾಸ ಇವರದ್ದು. ಅದೇರೀತಿ ಎಫ್ ಬಿಯಲ್ಲಿ  ಸೀರಿಯಸ್ , ಆ ವಿಷ್ಯ ಈ ವಿಷ್ಯ ಏನೇ ಹಾಕಲಿ ಅವರು ತಮ್ಮ ಪೋಸ್ಟ್ ಕೊನೆಯಲ್ಲಿ ನಿಮ್ಮ ಪ್ರೀತಿಯ ಅಂತ ಮುಕ್ತಾಯ  ಮಾಡ್ತಾರೆ.. 
ಅವರು ಯಾರ ಪ್ರೀತಿಯವರು ಎನ್ನುವ  ಸಂಗತಿ ನಮಗೆ ಗೊತ್ತಾದರೆ ಮತ್ತೂ ಒಳ್ಳೆಯದು :-)
Image result for pink flower
@
ಜೀ ಹಿಂದಿ ವಾಹಿನಿಯಲ್ಲಿ ಡಿಐಡಿ  ಅಮ್ಮಂದಿರ ಸ್ಪೆಶಲ್ ಡ್ಯಾನ್ಸ್ ಕಾರ್ಯಕ್ರಮ ಪ್ರಸಾರ ಆಗುತ್ತಿದೆ. ಅದರಲ್ಲಿ ಸೌಮ್ಯಶ್ರೀ ಎನ್ನುವ ಕನ್ನಡ ಸ್ಪರ್ಧಿ ಇದ್ದಾರೆ. ಸಕತ್ ಎನರ್ಜಿ ಆಕೆಯ ಡ್ಯಾನ್ಸ್ ನಲ್ಲಿದೆ. ಖುಷಿ ಕೊಟ್ಟ ಸಂಗತಿ ಅಂದ್ರೆ ಆಕೆ ಕನ್ನಡದಲ್ಲಿ   ಮಾತಾಡಿದ್ದು. ಅವರ ತಾಯಿ ಪತಿ ಎಲ್ಲರು ಕನ್ನಡದಲ್ಲಿ ಮಾತಾಡಿದ್ದು.ಕರ್ನಾಟಕದಲ್ಲೇ  ನಾವಿದ್ದರೂ ಬೇರೆ ಭಾಷೆಯ ವೇದಿಕೆಯಲ್ಲಿ   ಮಾತೃ ಭಾಷೆ ಕೇಳಿದಾಗ ಸಕತ್ ಖುಷಿ ಅನ್ನಿಸುತ್ತೆ..
ಗೀತಾ-ಗೋವಿಂದ ಮತ್ತು ಟೆರೆನ್ಸ್  ತೀರ್ಪು, ಮುಖ್ಯವಾಗಿ ಅದರ ಎಂಜಾಯ್ ಮೆಂಟ್ ಎಲ್ಲವೂ ಆಹಾ! 
Image result for pink flower
@@
 ಸ್ಟಾರ್ ವಾಹಿನಿಯ ಮಾಸ್ಟರ್ ಶೆಫ್  ಕಾರ್ಯಕ್ರಮದ ಕೊನೆಯ ಆರ. ಸಾಕಷ್ಟು ಆಸಕ್ತಿಯಿಂದ ನಾನು ವೀಕ್ಷಣೆ ಮಾಡುತ್ತಿರುವ ಕಾರ್ಯಕ್ರಮಗಳಲ್ಲಿ ಇದೂ ಸಹ ಒಂದಾಗಿದೆ. ಅದು ಮುಗಿದರೆ ಸ್ವಲ್ಪ ಮಿಸ್ ಮಾಡಿಕೊಳ್ಳುತ್ತೇನೆ. ಯಾಕೇಂದ್ರೆ ಕೆಲವು ಕಾರ್ಯಕ್ರಮಗಳು ಮನಸ್ಸು ಸೆಳೆದು ಬಿಡುತ್ತದೆ. ಜೊತೆ ಅದರ ಗ್ಲಾಮರಸ್ ತೀರ್ಪುಗಾರರಾದ  ಕಾಮ್ ಸಂಜೀವ್, ಸ್ಟೈಲೀಶ್   ರಣವೀರ್ ಮತ್ತು  ಕೂಲ್ ವಿಕಾಸ್  ಒಂದರ್ಥದಲ್ಲಿ ಎಲ್ಲರನ್ನು ಮಿಸ್ ಮಾಡಿಕೊಳ್ತೇನೆ :-)