ಗಮನಕ್ಕೆ ಬಂದಿದ್ದರೆ !


Image result for green and yellow flowers
ನಿನ್ನೆ ಬೆಳಿಗ್ಗೆ ಸುವರ್ಣ ನ್ಯೂಸ್ ನಲ್ಲಿ  ಪ್ರಸಾರ ಆಗ್ತಾ ಇದ್ದ ಕಾರ್ಯಕ್ರಮ ಗಮನ ಸೆಳೆಯಿತು. ಉತ್ತಮ ಆಂಕರ್ ಗಳಲ್ಲಿ, ನನಗೆ ಇಷ್ಟವಾದ ಒಂದಷ್ಟು ಆನಕರ್ಗಳಲ್ಲಿ ಒಬ್ಬರಾದ ಸಹನಾ ಭಟ್ ಆ ಕಾರ್ಯಕ್ರಮ ನಡೆಸಿ ಕೊಡ್ತಾ ಇದ್ರು. ಸಿಟಿ ಟ್ಯಾಕ್ಸಿ  ಥರ ಈಗ ಸಿಟಿ ಬೈಕ್  ಅಂತ ನಗರದಲ್ಲಿ ತನ್ನ ಸೇವೆ ಆರಂಭ ಮಾಡಿದೆಯಂತೆ.. ಇಂತಿಷ್ಟು ನಿಗದಿತ  ದಾರಿ ಕ್ರಮಿಸಿದರೆ ಇಂತಿಷ್ಟು ಮೊತ್ತ ಹಾಗೂ ಆ ಬಳಿಕ  ಅದರ ಮೊತ್ತ  ಹೆಚ್ಚುತ್ತದೆ... ಹೀಗೆ ಪ್ರತಿಯೊಂದು ಸಂಗತಿ ಬಗ್ಗೆ ಇತ್ತು ಕಾರ್ಯಕ್ರಮ.. ಆಟೋ, ಟ್ಯಾಕ್ಸಿ ಬೇಡ ಅನ್ನೋರಿಗೆ ಇದು ಹೆಚ್ಚು ಸೂಕ್ತ ಅನ್ನುವ ಮಾತನ್ನು ಹೇಳ್ತಾ ಇದ್ರು. ಈಗ ಸಧ್ಯಕ್ಕೆ ಗಂಡಸರು ಮಾತ್ರ ಇದರ ಸೌಲಭ್ಯ ಪಡೆಯುವಂತಿದ್ದು, ಇಷ್ಟರಲ್ಲೇ ಹೆಣ್ಣುಮಕ್ಕಳಿಗೂ ಆ ಸೌಲಭ್ಯ ಕೊಡ್ತಾರಂತೆ ಮಂದಿ.ಸಂತೋಷ ಆಯ್ತು ಬಿಡಿ ಕೇಳಿ..
ಆದರೆ ಈ ರೀತಿಯ ಸೌಲಭ್ಯ ಇದೇ ಮೊದಲಲ್ಲ.ಏಕೆಂದರೆ  ಶಿರಸಿಯಲ್ಲಿ ಈಗಾಗಲೇ ಇಂತಹ ಸೌಲಭ್ಯ ಆರಂಭವಾಗಿ ತುಂಬಾ ಸಮಯವಾಗಿದೆ ಅಲ್ವ ಭಟ್ರೇ   :-) ಅದರೂ ಬೆಂಗಳೂರಿನಲ್ಲಿ ಸಾಕಷ್ಟು ಜನ ಬಿಟ್ಟಿ ಲಿಫ್ಟ್ ತಗೊಳೋರು ಆದರೆ ಈಗ ಪೈಸೆ ನೀಡ ಬೇಕು ಅಷ್ಟೇ !
Image result for green and yellow flowers
@ ಈ ಬೇಸರ , ಗೊಂದಲ, ಆತಂಕ, ಯೋಚನೆ, ಪ್ರಶ್ನೆ,  ಏನು ಬೇಕಾದರೂ ಅನ್ನಿ ನನ್ನ ಎಫ್ ಬಿ ಮಿತ್ರರು ಆಗಿರುವ, ಹಿಸ್ಟರಿ ಪ್ರೊಫೆಸರ್ ಆದ, ಪುರಾಣ ಪುಣ್ಯಕಥೆಯಲ್ಲಿ ಸಾಕಷ್ಟು ಆಸಕ್ತಿ ಹೊಂದಿರುವ   ಅಶೋಕ್ ಶೆಟ್ಟರ್ ಅವರು ತಮ್ಮ ಈ ಮನದ ಮಾತನ್ನು ಎಫ್ ಬಿ ಗೋಡೆ ಮೇಲೆ ಹರಡಿದ್ದಾರೆ.. ಅವರ ಮನದ ಭಾವದ ಮಾತಿನ, ನೋವಿನ, ಗೊಂದಲದ, ಅಚ್ಚರಿಯ, ಆಸಕ್ತಿಯ ಇನ್ನು ಹಲವಾರು ಅಂಶಗಳ ಮುಖ್ಯ ವ್ಯಕ್ತಿ ಅರ್ನಬ್ ಗೋಸ್ವಾಮಿ  .. ಅಶೋಕ್ ಅವರ ಮನದ ಮಾತು ಯಥಾವತ್  ಕಾಪಿ ಪೇಸ್ಟ್ ಮಾಡಿ ಇಲ್ಲಿ ಹಾಕಿದ್ದೇನೆ.. ಜೊತೆ ಬಂದಿರುವ ಕಾಮೆಂಟ್ ಗಳನ್ನೂ ಸಹಿತ.. ನಿಮ್ಮಲ್ಲಿ ಯಾರಾದರು ಉತ್ತರ ಹೇಳಿ  ಅಶೋಕ್ ಅವರ ಗೊಂದಲ ದೂರ ಮಾಡಿ ಪುಣ್ಯ ಕಟ್ಟಿಕೊಳ್ಳಿ  . ;-)
 ..Over  to  Ashok  Shettar ...


ಭಾರತದ ಪುರಾಣ, ದಂತಕಥೆ, ಐತಿಹ್ಯಗಳನ್ನು ಆಳವಾಗಿ ಅಧ್ಯಯನ ಮಾಡಿದವರಿದ್ದರೆ ದೇವರು ನಾರದನಿಗೆ "ನೀನು ಮುಂದಿನ ಜನ್ಮದಲ್ಲಿ ಅರ್ನಬ್ ಗೋಸ್ವಾಮಿಯಾಗಿ ಹುಟ್ಟು" ಎಂದು ಶಾಪ ಕೊಟ್ಟ ಪ್ರಸಂಗವೇನಾದರೂ ತಮ್ಮ ಗಮನಕ್ಕೆ ಬಂದಿದ್ದರೆ ದಯವಿಟ್ಟು ನಮ್ಮ ಗಮನಕ್ಕೆ ತರುವದು..
Comments
M.s. Rudreswaraswamy Narada had a purpose in doing something, but this gentleman?
LikeReply18 hrs
Raghavan Chakravarthy True..before that one must bring it to the notice of Arnab himself as there is a possible curse that he won't know unless someone explicitly reminds him of so...
LikeReply8 hrs
ಕನ್ನಡಿಗ ವಿಶ್ವನಾಥ್ ಶಾಪದ ಬಗ್ಗೆ ಗೊತ್ತಿಲ್ಲ , ಆದರೆ ನಿಮ್ಮ ಮಾತು ನಿಜ ಅನಿಸುತ್ತದೆ ಸರ್
LikeReply28 hrs

GV Jayashree Ghatt
Write a reply...
Rajeev Ramachandra ನಿಮ್ಮ ಮಾತು ನಿಜ ಬಿಡಿ

ನಾರದನ "ನಾರಾಯಣ ನಾರಾಯಣ"...See More

LikeReply38 hrs
Ramakanth Puranik Really, India want to know about it !
LikeReply18 hrs
Santosh Hulagabali Really, i want to know about it
LikeReply7 hrsEdited
Ashok Shettar You should try and know it soon Baale, The Nation can't wait too long for you to know what you are doing..
LikeReply7 hrsEdited
GV Jayashree Ghatt

Write a reply...
Venkatramana Gowda ಅರ್ನಬ್ ಗೋಸ್ವಾಮಿ ಮತ್ತಿತರ ಪೀಸುಗಳಾಗಿ ಹುಟ್ಟು ಎಂದಿರಬೇಕು ಶಾಪ.
LikeReply6 hrs
Padmapani Jodidar Naaradanu ,raamaayanada manthareyannu vivaahavaadanendoo,avana vamshasthare eegina ella tv anchor galendu kaage puraanadalli helalaagide,sir
LikeReply46 hrs
Ashok Shettar ತುಂಬ ಚೆನ್ನಾಗಿ ಕಾಗೆ ಹಾರಿಸ್ತೀರಲ್ರೀ ನೀವು..
LikeReply26 hrs
Krishnamurthy Srinath ನಾರ‌ದ‌ನ‌ ಕೈಲೊ0ದು ತ‌0ಬೂರಿಯಿತ್ತು.
ಇವ‌ನ‌ ಕೈ ಮ‌ತ್ತು ತ‌ಲೆ ಎರ‌ಡ‌ಕ್ಕೂ ದೇವ‌ರು ಏನ‌ನ್ನೂ ಪ‌ರಿಪಾಲಿಸ‌ಲಿಲ್ಲ‌.ಅಯ್ಯೋ ಪಾಪ‌ ಅ0ತ‌ ಒ0ದು ಕ‌ನ್ನ‌ಡ‌ಕ‌ ಮಾತ್ರ‌
smile emoticon ಪರಿಪಾಲಿಸಿದ್ದಾನೆ. :

LikeReply5 hrs
Eranna Itigi ನಾನೆಲ್ಲೂ ಇದನ್ನು ಕೇಳಿಲ್ಲ ಬಿಡಿ .
LikeReply5 hrs
Ravi Belagere Television has become repulsive to me becoz of Arnab Goswamy. Hate to see him. Kivi harida meke tharaa badkothaane.
LikeReply2 hrs
*G.V.Jayashree
Journalist

ಸಾರಿ ಸಾರಿ....


ಮೊನ್ನೆ ಸಂಜೆ ಚಾನೆಲ್ ನ್ಯೂಸ್ ಏಷ್ಯಾ ದಲ್ಲಿ ಪ್ರಸಾರ ಆಗುತ್ತಿದ್ದ ದ ರಿಯಲ್ ವುಮನ್ ನಾಟ್ ವಿಚ್ ಎನ್ನುವ ಕಾರ್ಯಕ್ರಮ ಪ್ರಸಾರ ಆಗ್ತಾ ಇತ್ತು. ನಾನು ಅದರತ್ತ ಹೋಗುವಷ್ಟರಲ್ಲಿ ಆ ಕಾರ್ಯಕ್ರಮ ಅರ್ಧಕ್ಕಿಂತ ಹೆಚ್ಚು ಪೂರ್ಣಗೊಂಡಿತ್ತು. ಪಪುವಾ ನ್ಯೂ ಗಿನಿ ದೇಶದ - ದ್ವೀಪದ ಬಗ್ಗೆ ಒಂದು ಕಾರ್ಯಕ್ರಮ ಪ್ರಸಾರ  ಆಗ್ತಾ ಇತ್ತು. ಅದರಲ್ಲಿ ತೊಂದರೆಗೊಳಗಾದ , ಹಿಂಸೆ ಎದುರಿಸಿದ ಓರ್ವ ಹಿರಿಯ ಹೆಣ್ಣುಮಗಳ  ಬಗ್ಗೆ ಕಾರ್ಯಕ್ರಮ ಪ್ರಸಾರವಾಗ್ತಾ ಇತ್ತು. ಹೆಚ್ಚು ತಲೆಗೆ ಹೋಗದೆ ಇದ್ದರು ಸಹಿತ ಅಲ್ಲಿನ ಕಾರ್ಯಕ್ರಮದಿಂದ ಹೆಣ್ಣುಮಕ್ಕಳ ಪರಿಸ್ಥಿತಿ ಅಲ್ಲಿ ಬದಲಾಗುವ ಸಾಧ್ಯತೆಗಳು ತುಂಬಾ ಕಡಿಮೆ ಎನ್ನುವುದು ಮತ್ತೇ ಸಾಬೀತು ಮಾಡಿತ್ತು ಕಾರ್ಯಕ್ರಮ. ಹೆಣ್ಣು ಮಕ್ಕಳ   ನಿಸ್ಸಹಾಯಕತೆ ಆ ಕಾರ್ಯಕ್ರಮದಿಂದ ಮಾತ್ರವಲ್ಲ ಒಟ್ಟಾರೆ ಆ ದೇಶದ ಬಗ್ಗೆ ತಿಳಿದವರಿಗೆ ಗೊತ್ತೇ ಇದೆ. ಅತಿ ಹೆಚ್ಚು ಅತ್ಯಾಚಾರಕ್ಕೆ ಒಳಗಾಗುವ ಹೆಣ್ಣುಮಕ್ಕಳು ಅಲ್ಲಿ ಬದುಕುತ್ತಿದ್ದಾರೆ. ಗಂಡ ಮಾತ್ರವಲ್ಲದೆ, ಸಮೀಪ- ದೂರದ ನೆಂಟರು, ಅಕ್ಕಪಕ್ಕದ, ಅಪರಿಚಿತ ಗಂಡಸರುಗಳು ಸಹ  ಹೆಣ್ಣನ್ನು ದೈಹಿಕವಾಗಿ- ಲೈಂಗಿಕವಾಗಿ ದೌರ್ಜನ್ಯ ಮಾಡ್ತಾ ಇದ್ದಾರೆ. . ಅಲ್ಲದೆ ಆ ದೇಶದಲ್ಲಿ ಹೆಣ್ಣುಮಕ್ಕಳು ಅದೆಷ್ಟರಮಟ್ಟಿಗೆ ಶೋಷಿತರು ಅಂದರೆ ಅಲ್ಲಿರುವ  ಪೊಲೀಸ್  ಸ್ಟೇಶನ್ ಗಳಲ್ಲಿ ದಾಖಲಾಗುವ ಬಹುತೇಕ   ಕೇಸ್ ಗಳು ಪುರುಷರಿಂದ ಒದೆ, ಗಿಂಡಿದ, ಸುಟ್ಟ, ಚಾಕುವಿನಿಂದ ಕತ್ತರಿಸಿಕೊಂಡು ಜೀವ ಉಳಿಸಿಕೊಳ್ಳಲು ಬಂದಂತಹ ಹೆಣ್ಣುಮಕ್ಕಳ ಸಂಖ್ಯೆ ಅಧಿಕ (ಇದರಲ್ಲಿ ಗಂಡನ ಪಾತ್ರ ಹಿರಿದು ). ಲೈಂಗಿಕವಾಗಿ, ದೈಹಿಕವಾಗಿ   ಆಕೆಯ ಶೋಷಣೆ ನಿರಂತರವಾಗಿ ಸಾಗಿದೆ ಆ ಪುಟ್ಟ ದೇಶದಲ್ಲಿ.  848 ಭಾಷೆಗಳನ್ನು ಒಳಗೊಂಡ ಅನೇಕಾನೇಕ ಸಂಸ್ಕೃತಿ ಧರ್ಮಗಳನ್ನೂ ಒಳಗೊಂಡ, ಆರ್ಥಿಕವಾಗಿ ಮುಂದಿರುವ ಆ ದೇಶದಲ್ಲಿ ಎಕನಾಮಿಕಲಿ ಏನೇ ವ್ಯತ್ಯಾಸವಾದರೂ ಸಹಿತ ಅಲ್ಲಿ ಅದರ ಪ್ರಭಾವ ಉಂಟಾಗುವುದಿಲ್ಲವಂತೆ.ಅದಕ್ಕೆ ಕಾರಣ ಅಲ್ಲಿನವರು ತಮ್ಮ ಮೂಲವೃತ್ತಿಯ ಮೂಲಕ ಜೀವನ ನಡೆಸುತ್ತಾ  ಬದುಕುತ್ತಿದ್ದಾರೆ.
ಆದರೆ  ವಿಷಯ ಏನೇ ಇರಲಿ ಬ್ಲಾಕ್ ಮ್ಯಾಜಿಕ್ ನಂತಹವುಗಳನ್ನು ಅಧಿಕ ಪ್ರಮಾಣದಲ್ಲಿ ನಂಬುವ ಮಂದಿ. ಅದರಿಂದ  ಹೆಣ್ಣುಮಕ್ಕಳು ಜೀವ ಕಳೆದುಕೊಳ್ಳುವ ಪರಿಸ್ಥಿತಿ ಎದುರಿಸುತ್ತಿದ್ದಾರೆ.  ಈ ಅಂಶದ ಅಡಿಯಲ್ಲಿ ಕಾರ್ಯಕ್ರಮ ಸಿದ್ಧವಾಗಿದೆ .  ಪ್ರಕೃತಿ ಸೌಂದರ್ಯ ಆಹಾ  ಅದ್ಭುತವಾಗಿದೆ. ಈ ಕಾರ್ಯಕ್ರಮ ಮತ್ತೆ ಪ್ರಸಾರ ಆದರೆ, ನನ್ನ ಸಮಯ ಹೊಂದಿಕೆಯಾದರೆ ನೋಡುವ ಇರಾದೆಯಿದೆ.

@ ಹೆಣ್ಣುಮಕ್ಕಳು ಕರುಣಾಶಾಲಿಗಳು   ಕಣ್ರೀ.. ಹೇಗೆ ಅಂತೀರಾ.. ಇತ್ತೀಚಿಗೆ ಡಿಸ್ಕವರಿ  ಚಾನೆಲ್ ನಲ್ಲಿ ಒಂದು ಕಾರ್ಯಕ್ರಮ ವೀಕ್ಷಣೆ ಮಾಡಿದೆ.. ಅದರಲ್ಲಿ ಮ್ಯಾನ್, ವುಮನ್, ವೈಲ್ಡ್ . ಹೆಸರೇ ಹೇಳುವಂತೆ ಕಾಡಲ್ಲಿ ನಾನು ನೀನು . ಅಲ್ಲಿ ಊಟ, ಪರಿಸರ, ಅಲ್ಲಿ ನೀರು , ಪ್ರಾಣಿ, ಒದ್ದಾಟ, ಚಳಿ, ಕತ್ತಲು, ಭಯ, ಬೆಂಕಿ ಹೀಗೆ ಹತ್ತು ಹಲವಾರು ಅಂಶಗಳ ಬಗ್ಗೆ  ಪ್ರಸಾರವಾಗ್ತಾ ಇತ್ತು. ಆದರೆ ನನಗೆ ಹೆಚ್ಚು ಮಜಾ ಕೊಟ್ಟ ಸಂಗತಿ ಅಂದ್ರೆ ಆ ಕಾರ್ಯಕ್ರಮದ ಕಡೆಯಲ್ಲಿ ಆತ ಮತ್ತು ಆಕೆ ಮೀನು ಹಿಡಿತಾರೆ ಯಾವುದೇ ಪ್ರಾಪರ್ಟಿ ಸಹಾಯ  ಇಲ್ಲದೆ.. ಆಕೆ  ಪ್ರಯತ್ನ  ಮಾಡ್ತಾ ಇದ್ರೂ ಸಹ ಮೀನು ಕೈಯಿಂದ  ಜಾರ್ತಾ ಇತ್ತು.. ಆಕೆ ಪಾಪ ಸಾರಿ ಸಾರಿ ಅಂತ ಹೇಳ್ತಾ ಆ ಮೀನು ಹಿಡಿದೇ ಬಿಟ್ಲು. ಅಲ್ಲದೆ, ಸಾರಿ ಸಾರಿ ಅಂತ ಆ ಮೀನನ್ನು ಸಾಯಿಸಿ , ಸುಟ್ಟು ಸ್ವಾಹಾ  :-).. ಆದರೆ ಆ ಹೆಣ್ಣುಮಗಳು ಯಾರಿಗೋ ಸಾರಿ ಹೇಳಿದ್ದು  ;-)

ಅಧಿಕಾರ ದಾಹ

Image result for red flower
ಇತ್ತೀಚಿಗೆ ಮಾಜಿ ಪ್ರಧಾನಿ ದಿವಂಗತ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ತಾಷ್ಕಾಂಟ್  ಒಪ್ಪಂದದ ಬಗ್ಗೆ ಓದುವ ಅವಕಾಶ ಸಿಕ್ತು.ಅದಕ್ಕೂ ಮುನ್ನ ಅವರು ಪ್ರಧಾನಿ ಆಗಿದ್ದಾಗ ನೆಹರೂ ಪುತ್ರಿ ಇಂದಿರಾಗಾಂಧಿ ಅವರ ವರ್ತನೆ, ಆಕೆಯ ಸ್ವಭಾವ ಶಾಸ್ತ್ರೀಜಿ ಅವರಿಗೆ ತಲೆನೋವಾಗಿದ್ದು ಎಲ್ಲವನ್ನು ಲೇಖಕರು ತಿಳಿಸುತ್ತಾ  ಸಾಗಿದ್ದರು. ಅತ್ಯಂತ ಸರಳವಾದ   ರೀತಿಯಲ್ಲಿ ಇದ್ದ ಲೇಖನ ಅದು . ಹಾಗೆ ಓದುವಾಗ ತಾಷ್ಕಾಂಟ್  ಒಪ್ಪಂದದ ನಂತರ ತಾವೇನು ಎನ್ನುವುದನ್ನು ಜಗತ್ತಿಗೆ ಮನದಟ್ಟು ಮಾಡಬೇಕು ಎನ್ನುವ ಉತ್ಸಾಹದಲ್ಲಿ ಇದ್ದ ಶಾಸ್ತ್ರೀಜಿ ಅವರು  ಮಾರನೆಯ ದಿನ ಹೆಣವಾಗಿ (11 January 1966) ಬಿಟ್ಟಿದ್ದರು ಎನ್ನುವುದು ಓದಿದಾಗ ಕಣ್ಣಲ್ಲಿ ನೀರು ಬಂದಿತ್ತು. ಅಂತಹ ವಿಶೇಷ ವ್ಯಕ್ತಿತ್ವದ ದೇಹದ ಮೇಲೆ ಇದ್ದ ಹೊಲಿಗೆ, ಅವರಿಗೆ ಮರಣೋತ್ತರ ಪರೀಕ್ಷೆ ಮಾಡಲು ಅವಕಾಶ ನೀಡದ ಸರ್ಕಾರ, ಅವರ ಪತ್ನಿಯ ಅನುಮಾನವನ್ನು ಬಗೆಹರಿಸದ ಸರ್ಕಾರ  ಅವೆಲ್ಲ ಓದುವಾಗ ಯಾಕೋ ತುಂಬಾ  ಬೇಜಾರಾಗಿತ್ತು.
Image result for red flower
@ಆದರೆ ಮತ್ತೆ ನನಗೆ ಆ ಬೇಸರ ಕಾಡಿತು . ಅದು ದುಃಖದ ಬೇಸರ. ಅದಕ್ಕೆ ಕಾರಣ ಸುವರ್ಣ ನ್ಯೂಸ್ ನಲ್ಲಿ  ನಿನ್ನೆ ಬೆಳಿಗ್ಗೆ ನೇತಾಜಿ ಸುಭಾಶ್ ಚಂದ್ರ ಭೋಸ್ ಅವರ ಬಗ್ಗೆ   ಒಂದು ಕಾರ್ಯಕ್ರಮ ಪ್ರಸಾರ ಆಗ್ತಾ ಇತ್ತು. ಅದನ್ನು ನವಿತ ಜೈನ್ ನಿರೂಪಣೆ ಮಾಡ್ತಾ ಇದ್ರೂ. ಅದನ್ನು  ಚೆನ್ನಾಗಿ ಬರೆದಿದ್ದಾರೆ ವಿಷಯವನ್ನು ಅಲ್ಲದೆ ಅದರ  ಹಿನ್ನೆಲೆ ಧ್ವನಿ ನೀಡಿದವರು ತುಂಬಾ ಚೆನ್ನಾಗಿ ಆ ವಿಷಯವನ್ನು ವಿವರಿಸುತ್ತಾ ಸಾಗಿದ್ದರು.
ಅದರಲ್ಲಿ ತಾಷ್ಕಾಂಟ್   ಒಪ್ಪಂದದಲ್ಲಿ ಶಾಸ್ತ್ರಿ ಅವರಿಗೆ ನೇತಾಜಿ ಕಂಡಿದ್ದು, ಆ ವಿಡಿಯೋವನ್ನು ಪ್ರಸಾರಿಸುವಾಗ ಶಾಸ್ತ್ರಿ ಅವರ  ಹಿಂದೆ ನಿಂತಿದ್ದ ವ್ಯಕ್ತಿ ನೇತಾಜಿ ಇರಬಹುದು ಎನ್ನುವ, ಊಹೆ, ಸ್ಪಷ್ಟತೆ ಹೀಗೆ ಹತ್ತು ಹಲವಾರು ಅಂಶಗಳನ್ನು ಮುಂದಿಟ್ಟು  ಸುವರ್ಣ ನ್ಯೂಸ್ ನಲ್ಲಿ ಕಾರ್ಯಕ್ರಮ ಪ್ರಸಾರ ಆಗ್ತಾ ಇತ್ತು. ವಿಮಾನ ಅಪಘಾತದಲ್ಲಿ ಸಾಯದೆ ನೇತಾಜಿ ಅರವತ್ತರ ದಶಕಗಳ ತನಕ ಬದುಕಿದ್ದರು ಎನ್ನುವ ಸುದ್ದಿ ಪುಳಕ ನೀಡುತ್ತದೆ, ಆದರೆ ಅಂತಹ ಮಹಾನ್ ಚೇತನ ತನ್ನ ನೆಲದಲ್ಲಿ ಸ್ವತಂತ್ರವಾಗಿ ಓಡಾಡದೆ ಇರುವಂತೆ ಮಾಡಿದ ಗ್ಲಾಮರಸ್ ಪ್ರಧಾನಿ ನೆಹರು ಅವರ ವರ್ತನೆ.. ಎಲ್ಲದರ ಬಗ್ಗೆ ನೆನಪಾದಾಗ ಬೇಜಾರಾಗುತ್ತದೆ. ಜೊತೆಗೆ ನೆಹರು ಅವರು ರಷ್ಯಾಕ್ಕೆ ಬರೆದ ಪತ್ರ, ಅ ವಿಡಿಯೋದಲ್ಲಿ ಇರುವವರು ನೇತಾಜಿ ಅವರೇ ಎಂದು ವಿದೇಶಿಯರು ಭಾರತೀಯರಿಗೆ ಸ್ಪಷ್ಟ ಮಾಡಿರುವ ಸಂಗತಿ ಎಲ್ಲವನ್ನು ಸುವರ್ಣ ನ್ಯೂಸ್ ಕಾರ್ಯಕ್ರಮದಲ್ಲಿ ತೋರಿಸ್ತಾ ಇದ್ರೂ..
ಅದು ಮತ್ತೆ ಪ್ರಸಾರ ಆದ್ರೆ ಖಂಡಿತ ನೋಡಿ. ಒಂದೊಳ್ಳೆಯ ಕಾರ್ಯಕ್ರಮ. ಭಾರತದಲ್ಲಿ ಅಧಿಕಾರ ದಾಹ ಎಷ್ಟೆಲ್ಲಾ ಒಳ್ಳೆಯ ರಕ್ತಗಳನ್ನು ಕುಡಿದಿದೆ ಎನ್ನುವುದು ಅರ್ಥವಾಗುತ್ತದೆ.. ಮೇರಾ  ಭಾರತ್ ಮಹಾನ್ ಅಲ್ವೇ !

ಭಟ್ಟಿ ಇಳಿಸು!

Image result for blue color flowers
ಕನ್ನಡ ವಾಹಿನಿಗಳಲ್ಲಿ ಹಾಸ್ಯ ಕಾರ್ಯಕ್ರಮಗಳ ಬಗ್ಗೆ ಹೇಳೋದಾದರೆ   ಉದಯವಾಹಿನಿಯಲ್ಲಿ ಪ್ರಸಾರ ಆಗುವಂತಹ ಫ್ಯಾಮಿಲ್ಲಿ ನಂಬರ್ ಒನ್ ಮೊದಲ ಸ್ಥಾನದಲ್ಲಿದೆ ಎನ್ನಬಹುದು.ಇದು ನನ್ನ ಅಭಿಪ್ರಾಯ  . ಯಾಕೆ ಈ ಮಾತನ್ನು ಹೇಳ್ತಾ ಇದ್ದೀನಿ ಅಂದ್ರೆ ಜೀ ಟೀವಿಯಲ್ಲಿ ಪ್ರಸಾರ ಆಗ್ತಾ ಇರುವ ಶ್ರೀಮಾನ್ ಶ್ರೀಮತಿ ಹಾಸ್ಯ ಧಾರವಾಹಿ ಅಂತ ಹೆಸರನ್ನು ಗಳಿಸಿದೆ ಅಷ್ಟೇ, ತಿಳಿ ಹಾಸ್ಯವನ್ನು ಅದರಲ್ಲಿ ಜೋಡಿಸಿರುವುದು ಅಷ್ಟಾಗಿ ಕಂಡು  ಬಂದಿಲ್ಲ. ಅವರವರ ಭಾವಕ್ಕೆ ಅಂತ ತಿಳಿ ಬಹುದು, ಆದರೂ ಪ್ರೇಕ್ಷಕರಿಗೆ   ಖುಷಿ ಕೊಡುವುದಕ್ಕೆ ಅಗತ್ಯ ಇರುವ ಅಂಶಗಳು ಎಲ್ಲಿದ್ದರೆ ಅಲ್ಲಿ ಅವರು  ಗಮನ ನೀಡುತ್ತಾರೆ.
ಫ್ಯಾಮಿಲಿ ನಂಬರ್ ಒನ್ ಧಾರಾವಾಹಿಯಲ್ಲಿ ಪಾತ್ರಧಾರಿಗಳು ಅಪರೂಪದ ಪ್ರತಿಭೆಗಳು. ಟೆನಿಸ್ ಕೃಷ್ಣ, ಸುನೇತ್ರ ,ಪ್ರಕೃತಿ, ಮಂಜುಳಾ ಅಶೋಕ್ ಅಲ್ಲದೆ ಬೇರೆ ಯಾರೇ ಆಗಿರ ಬಹುದು ಪಾತ್ರವನ್ನು ಹಾಯಾಗಿ ಕರೆದುಕೊಂಡು ಹೋಗ್ತಾ ಇದ್ದಾರೆ.
ಹಾಸ್ಯ ಪಾತ್ರಧಾರಿಗಳು ತುಂಬಾ ಸ್ಮಾರ್ಟ್ ಆಗಿ, ವಿಶೇಷವಾಗಿ, ಸ್ಟೈಲೀಶ್ ಆಗಿ ಇರ ಬೇಕೆಂದೇನೂ ಇಲ್ಲ..ಅವರ ದೇಹಸಿರಿ ಹೇಗೆ ಇದ್ರೂ  ಪಾತ್ರಕ್ಕೆ ನೀಡುವ ಜೀವ ಬಹಳ ಮುಖ್ಯ..ನಾನು ಸಮಯ ಸಿಕ್ಕಾಗ ಈ ಧಾರವಾಹಿ ನೋಡಿದ್ದೇನೆ.. ಚಂದ ಇದೆ..

Image result for blue color flowers
@ & ಟೀವಿಯಲ್ಲಿ ಪ್ರಸಾರ ಆಗುವ ಭಾಬಿಜಿ ಘರ್ ಪರ್ ಹೈ ಧಾರಾವಾಹಿಯು ಈಗ ಸ್ವಲ್ಪ ದಾರಿ ತಪ್ಪಿದೆ. ಹಾಸ್ಯ ಧಾರವಾಹಿ ನಿಧಾನವಾಗಿ ಸಾಗುವ ತಿಳಿನೀರಿನಂತೆ ಇರ ಬೇಕು. ಒಟ್ಟಾರೆ ನೋಡುವುದಾದರೆ ಧಾರವಾಹಿ ಓಕೆ ಓಕೆ ಆಗಿದೆ. ಇಲ್ಲಿನ ಪಾತ್ರಧಾರಿಗಳಾದ ಶಿಲ್ಪಿ ಶಿಂಧೆ, ಆಸಿಫ್ ಶೇಖ್, ರೋಹಿತಾಶ್ವ್ ಗೌಡ್, ಸೌಮ್ಯ ಟಂಡನ್   ಅತಿಯಾಗಿ  ನಟಿಸದೆ ಆರಾಮವಾಗಿ ನಟಿಸುತ್ತಿದ್ದಾರೆ.ಆದರೆ ಪ್ರತಿದಿನ ನೀಡುವ ಕಥೆಯ ವಿಷಯದಲ್ಲಿ ಬರಹಗಾರ,ನಿರ್ದೇಶಕ ನಿಂತಲ್ಲೇ ನಿಂತಿದ್ದಾರೆ..
ಕನ್ನಡದಲ್ಲಿ ಇದೇ ಧಾರಾವಾಹಿಯು ಶ್ರೀಮಾನ್ ಶ್ರೀಮತಿ ರೂಪದಲ್ಲಿ ಬರ್ತಾ ಇದೆ. ಕೆಲವು ಅಂಶಗಳು ನೇಟಿವಿಟಿಗೆ   ತಕ್ಕಂತೆ ಬದಲಾಯಿಸಲು ಪ್ರಯತ್ನ ಮಾಡಿದರೂ ಸಹಿತ ಅಷ್ಟೊಂದು ವಿಶೇಷವಾಗಿಲ್ಲ.. ಯಾವುದೇ ಭಾಷೆ ಆಗಿರಲಿ ಮೂಲ ಭಾಷೆಯಲ್ಲಿ ತಯಾರಾದ ಇಂತಹ ಧಾರವಾಹಿ , ಕಥೆಯನ್ನು ಬರೆದವರು  ಕೆಲವು ಅಂಶಗಳನ್ನು ಅಲ್ಲಿನ ವಾತಾವರಣ   ತಲೆಯಲ್ಲಿ ಇಟ್ಟುಕೊಂಡು  ಬರೆದಿರುತ್ತಾರೆ. ಆದರೆ ಅದನ್ನೇ ಸ್ಥಳೀಯವಾಗಿ ಭಟ್ಟಿ ಇಳಿಸಲು ಹೋದರೆ ..... !