ಇದ್ದಾಗ... ಇದ್ದಾಗ!!!


ಆ ಮಗುವಿಗೆ ಕೇವಲ ಎಂಟು ವರ್ಷ. ಅವನ ತಾಯಿ ಸತ್ತು ಹೋಗುತ್ತಾಳೆ, ಆಗ ಆ ಮಗುವಿನ ತಂದೆ ಮದುವೆ ಆಗ್ತಾರೆ ಮತ್ತೆ. ಸ್ವಲ್ಪ ದಿನಗಳ ಬಳಿಕ ಆ ಮಗುವಿನ ತಂದೆ ಅವನ ಬಳಿ ಬಂದು ನಿನ್ನ ಹೊಸ ತಾಯಿ ಹೇಗಿದ್ದಾರೆ ಕಂದ ಎಂದು ಕೇಳಿದ. ಆಗ ಆ ಮಗು ಅಪ್ಪ ಹೊಸ   ಅಮ್ಮ ನಿಜ ಹೇಳ್ತಾಳೆ ಆದರೆ ಸತ್ತು ಹೋದ ಅಮ್ಮ ಸುಳ್ಳು ಹೇಳ್ತಾ ಇದ್ದಳು ಎಂದು ಹೇಳಿತು..
ಅಪ್ಪನಿಗೆ ಆಶ್ಚರ್ಯ...
ಅದು ಹೇಗೆ ಹೇಳ್ತಿಯಾ ನೀನ ಆ ಅಮ್ಮ ಸುಳ್ಳಿ  ಮತ್ತು ಈ ಅಮ್ಮ ನಿಜ ಹೇಳ್ತಾಳೆ ಅಂತ ಎಂದು ಕೇಳಿದ.. 
ಆಗ ಆ ಮಗು ಅಪ್ಪ ಆ ಅಮ್ಮ ನಾನೆಷ್ಟು ತುಂಟತನ ಮಾಡಿದರು ಸಹಿತ ನೋಡು ಹೀಗೆ ನೀನು ತುಂಟತನ ಮಾಡಿದರೆ ನಿನಗೆ ಊಟ ಹಾಕಲ್ಲ ಅಂತ ಹೇಳ್ತಾ ಇದ್ದಳು. ಆದರೆ ನಾನು ನನ್ನ ತುಂಟತನ ಬಿಡಲೇ ಇಲ್ಲ..ಹೆದರಿಸಿದ್ದ ಆ ಅಮ್ಮ ತಪ್ಪದೆ ನನ್ನನ್ನು ಮುದ್ದು ಮಾಡಿ ಊಟ ಹಾಕುತ್ತಿದ್ದಳು ...
ಆದರೆ ಈ ಹೊಸ ಅಮ್ಮನ ಬಳಿ ಸಹಿತ ನಾನು ತುಂಟತನ ಮಾಡಿದೆ.. ನಾನು ಮಾಡಿದ ತುಂಟತನ ಕಂಡು ಆ ಅಮ್ಮ ನೋಡು ನೀನು ಹೀಗೆ ತುಂಟತನ ಮಾಡಿದರೆ ಊಟ ಹಾಕಲ್ಲ ಅಂತ ಹೇಳಿದಳು.. ಅವಳು ಹೇಳಿದಂತೆ ಮಾಡಿದ್ದಾಳೆ ಮೂರು ದಿನ ಆಯ್ತು ನಾನು ಊಟ ಮಾಡಿ !! 
ಹೈದರಾಬಾದ್ ಗೆ ಸೇರಿರುವ  ರಮಣಾಕರ್  ನಿರ್ದೇಶಕ, ಗೀತ ರಚನೆಕಾರ, ಸೃಜನಶೀಲ ಬರಹಗಾರ.... ಹೀಗೆ ಅನೇಕ ಸಂಗತಿ + ಗಳನ್ನೂ ಹೊಂದಿರುವ ನನ್ನ ಫೇಸ್ ಬುಕ್  ಮಿತ್ರ. ಸದಾ ಒಂದೊಳ್ಳೆ ಸಂಗತಿಯನ್ನು ಅವರ ವಾಲ್ ಮೇಲೆ ಹಾಕಿರ್ತಾರೆ ತೆಲುಗು ಭಾಷೆಯಲ್ಲಿ ಬರೆದು.. ಅವರ ಈ ಬರಹ ಮನ ಸೆಳೆಯಿತು.. ನಿಮ್ಮ ಬಳಿ ಹಂಚಿಕೊಳ್ತಾ ಇದ್ದೀನಿ..
ಇದಕ್ಕೆ ಪೂರಕವಾಗಿ ನಾನು ಅಂದು ನಾನು 
ಸೋನಿ ವಾಹಿನಿಯ ಪ್ರಸಿದ್ಧ ಧಾರವಾಹಿ ಕ್ರೈಮ್  ಪೆಟ್ರೋಲ್ ವೀಕ್ಷಿಸಿದೆ... ಅದರಲ್ಲಿ ಹಣಕ್ಕಾಗಿ ಪರಿಚಿತ ವ್ಯಕ್ತಿ ಮಗುವನ್ನು ಅಪಹರಣ ಮಾಡುವುದು... ಆ ಬಳಿಕ ಕಥೆ ಸುಖಾಂತ್ಯ ಆಗುತ್ತದೆ.. ಪೊಲೀಸರ ಸಾಹಸ ಮನಸ್ಪರ್ಶಿಯಾಗಿ ತೋರಿಸಿದ್ದಾರೆ.ಅದನ್ನು ವೀಕ್ಷಿಸಿದ  ತುಂಬಾ ಸಮಯ ಒಂದು ತೆರನಾದ ಭಾವದಲ್ಲಿ ಇದ್ದೆ..ನನಗೆ ಅನೇಕ ಕಿರಿಯ ವಯಸ್ಸಿನ  ಪೊಲೀಸ್ ಪೇದೆ ಹುಡುಗರು ಪರಿಚಯ.. ಅವರು ಆ ಇಲಾಖೆಯ ಬಗ್ಗೆ ಹೇಳೋದನ್ನು ಕೇಳುವಾಗ ಅಬ್ಬ ಅನ್ನಿಸುತ್ತೆ.. ಆದರೆ ಸಿನಿಮಾಗಳಲ್ಲಿ ಪ್ರಸಾರಿಸುವಂತೆ ಅವರು ಇರಲ್ಲ ಅನ್ನೋದು ಸಹ ಮುಖ್ಯ ...

@@
ಸುವರ್ಣ ನ್ಯೂಸ್ ನಲ್ಲಿ ಪ್ರಸಾರ ಆಗುವ ಬೆರಗು  ಒಂದೊಳ್ಳೆಯ ಕಾರ್ಯಕ್ರಮ.  ರಾಘವೇಂದ್ರ ಕಾಂಚನ್ ಅವರ ನಿರೂಪಣೆ ಚಂದ ಇರುತ್ತದೆ.. ಕೆಲವು ಕಾರ್ಯಕ್ರಮಗಳಿಗೆ ಕೆಲವರೇ ಸೂಕ್ತ.. !! ಅತಿಯಾಗಿ ಹೆದರಿಸುವವರಿಗಿಂತ ವಿಷಯವನ್ನು ಹೇಳುವ ರೀತಿ ಹೆಚ್ಚು ಜನರನ್ನು ಸೆಳೆಯುತ್ತದೆ... 
ರಾಘವೇಂದ್ರ ಅತ್ಯುತ್ತಮ ನಿರೂಪಕ.. ಅದರ ಬಗ್ಗೆ ಎರಡು ಮಾತಿಲ್ಲ!


ಹಿಂದಿ ಬಿಗ್ ಬಾಸ್ ಆರಂಭ ಆಗಿದೆ.. ಒಂದಷ್ಟು ಮುಖಗಳು ನೋಡಿದ ನೆನಪು.. ಒಂದಷ್ಟು ಗೊತ್ತಿಲ್ಲ.. ಹೇಗೆ ಇಷ್ಟ ಆಗ್ತಾರೋ ಆ ಪ್ರಯಾಣಿಕರು ಗೊತ್ತಿಲ್ಲ.. ಆದರು ಕ್ಯಾಪ್ಟನ್  ಸಲ್ಮಾನ್ ಖಾನ್ ಇದ್ದಾಗ.. ಏರೋಪ್ಲೇನ್ ಆಕಾಶದಲ್ಲಿ ಕೆಟ್ಟರು ಸಹ ಅಲ್ಲೇ ನಿಲ್ಲಿಸಿ ಸರಿ ಮಾಡ್ತಾರೆ.. ಐ ಲೈಕ್ ಇಟ್ ಯಾ ..
...
ಏನೇ ಆದರೂ ಕನ್ನಡ ಬಿಗ್ ಬಾಸ್ ನಲ್ಲಿ ಸುದೀಪ್ ಮಾತು ... ಸ್ಟೈಲು ಮತ್ತು... ಸಾರಿ ಇನ್ನೇನು ಬರಿ ಬೇಕೋ  ಗೊತ್ತಾಗ್ತಾ ಇಲ್ಲ :-) .. ಆದರು ನಂಗೆ ಒಂದು ವಿಷಯದಲ್ಲಿ ಆತಂಕ ಆಗಿತ್ತು.. ಹಿರಿಯ ನಿರ್ದೇಶಕ ಗುರು ಅವರು ಸ್ವಲ್ಪ ಜಾಸ್ತಿನೇ ಬುದ್ಧಿವಂತ ಅನ್ನುವ ಸಂಗತಿ ಗೊತ್ತಿತ್ತು, ಆ ಎಡವಟ್ಟ ನಿರ್ದೇಶಕ ಅವರು ಸುಖಾಸುಮ್ಮನೆ  ಬೇರೆ ಸ್ಪರ್ಧಿಗಳಿಂದ ಹೀನಾಯವಾಗಿ ಅಪಮಾನ ಮಾಡಿಸಿಕೊಂಡರೆ ಎನ್ನುವ ಆತಂಕ ಇತ್ತು.. ಕಿಚ್ಚ ನೀವು ಆ ಪ್ರತಿಭೆಯನ್ನು ಕಳಿಸಿಕೊಟ್ಟ ರೀತಿ ಅನನ್ಯ  .. ಇಷ್ಟ ಆಯ್ತು ನನಗೆ...

ವಿಭಿನ್ನ



ಅತ್ಯಂತ ಸುಂದರ ಕಾರ್ಯಕ್ರಮ ಆಗಿದೆ ವೀಕೆಂಡ್ ವಿತ್ ರಮೇಶ್. ಪ್ರಾಯಶಃ ಆ ಕಾರ್ಯಕ್ರಮ ಹೆಚ್ಚು ಆಸಕ್ತಿ ಉಂಟು ಮಾಡುವುದರಲ್ಲಿ ರಮೇಶ್ ಅರವಿಂದ್ ಅವರ ಪಾತ್ರ ತುಂಬಾ ಹಿರಿದು ಅಂತ ಸ್ಪಷ್ಟವಾಗಿ ಹೇಳ ಬಹುದು. ಮುಖ್ಯವಾಗಿ ನಾನು ಕಂಡಂತೆ ಅಥವಾ ಕೇಳಿದಂತೆ ರಮೇಶ್ ಬಗ್ಗೆ ಒಂದಷ್ಟು ಒಳ್ಳೆಯ ಮಾತುಗಳನ್ನೇ ಆಡಿದ್ದಾರೆ. ಅವರ ಹಸನ್ಮುಖ, ಸೃಜನಶೀಲತೆ, ಆಂಗಿಕ ಭಾವ, ಜನರನ್ನು ಸೆಳೆಯುವ ಪರಿ ಎಲ್ಲವು ಇಷ್ಟ ಆಗುವಂತೆ ಇರುತ್ತದೆ . ಈ ಕಾರ್ಯಕ್ರಮಕ್ಕೆ ಅವರು ಬಿಟ್ರೆ ಮತ್ಯಾರಿಗೂ ಸಾಧ್ಯವಿಲ್ಲ ಮಾಡೋಕೆ ಪರ್ಫೆಕ್ಟ್ ಪಕ್ಕಾ ಪರ್ಫೆಕ್ಟ್. 
ಕೆಲವೊಂದು ಕಾರ್ಯಕ್ರಮಗಳಿಗೆ   ಇಂತಹವರೇ ಆಗ ಬೇಕು.. ಅವರನ್ನು ಬಿಟ್ರೆ ಆ ಜಾಗ ತುಂಬೋಕೆ ಕಷ್ಟ.  ಸಿನಿಮಾ ನಿರ್ದೇಶನದಲ್ಲೂ ಸಹಿತ ಸ್ಟಾರ್ ಹೀರೋಗಳು ನಿರ್ದೇಶಕರ ಬಗ್ಗೆ ಹಾಗೆ ನಿರ್ದೇಶಕರು ಸ್ಟಾರ್ ಹೀರೋಗಳ ಬಗ್ಗೆ ಗಮನ ನೀಡಿರುತ್ತಾರೆ, ಅವರನ್ನು ಹೊರತು ಪಡಿಸಿದರೆ ಮತ್ಯಾರಿಗೂ ಸಹಿತ ಆ ಸ್ಥಳ ತುಂಬೋಕೆ ಸಾಧ್ಯವಿಲ್ಲ ಎನ್ನುವ ಭಾವದಲ್ಲಿ ಇರ್ತಾರೆ.. ಡಾ. ರಾಜ್ ಕುಮಾರ್ ಅಶ್ವಥ್ ಅವರಿಗಾಗಿ ಕಾಯ್ತಾ ಇರೋರಂತೆ.. ಈಗ ಹಾಸ್ಯ -ಪೋಷಕ ಕಲಾವಿದರು ಸಹಿತ ಆ ರೇಂಜ್ ನಲ್ಲಿ ಇಲ್ಲ, ಆದರು ಸಹಿತ ಒಂದಷ್ಟು ಜನಕ್ಕೆ ಹೆಸರಿದೆ!


ರಮೇಶ್ ವಿಷಯದಲ್ಲೂ ಹಾಗೆ ಆಗಿದೆ.ಜೀ ವಾಹಿನಿಯ ವೀಕೆಂಡ್ ಗೆ ರಮೇಶ್ ಗೆ ರಮೇಶ್ ಸಾಟಿ.  ಒಮ್ಮೆ ಹೀಗೆ ಒಂದು ಲೇಖನ ಓದುತ್ತಿದ್ದೆ ರಮೇಶ್ ಬಗ್ಗೆ .. ಅವರು ಅತ್ಯಂತ ಸುಂದರ , ಸಂಭಾವಿತ,ಉತ್ತಮ ಕಲಾವಿದ, ಕನ್ನಡ ಹೆಣ್ಣುಮಕ್ಕಳಿಗಂತೂ   ಅವರನ್ನು ಕಂಡರೆ  ತುಂಬಾನೇ ಇಷ್ಟ, ಆದರೆ ಅಷ್ಟೆಲ್ಲ ಇಷ್ಟ ಪಡುವ ಹೆಣ್ಣುಮಕ್ಕಳು ಥಿಯೇಟರ್ ಗೆ ಹೋಗಿ ಅವರ ಚಿತ್ರ ನೋಡಲ್ಲ ಅಂತ ಬರೆದಿದ್ದರು. ಅದೆಷ್ಟು ಸತ್ಯವಾದ ಮಾತುಗಳು ಅಲ್ವೇ! ವೀಕೆಂಡ್ ವಿತ್ ರಮೇಶ್  ನೋಡುವಾಗ ಪ್ರತಿಬಾರಿ ಈ ಸಂಗತಿ ನೆನಪಿಗೆ ಬರುತ್ತದೆ. 
@  ಸುವರ್ಣ ವಾಹಿನಿಯ ಬಿಗ್ ಬಾಸ್ ನಲ್ಲಿ ಒಮ್ಮೆ ಆಕ್ಷನ್   ಕಿಂಗ್ ಅರ್ಜುನ್ ಸರ್ಜಾ ಅವರ ಜೊತೆ ಸುದೀಪ್ ಮಾತನಾಡಿದ ಕಾರ್ಯಕ್ರಮ ನನ್ನ ಮನದಲ್ಲಿ ಹೆಚ್ಚು ಪ್ರಭಾವ ಬೀರಿದೆ. ಕನ್ನಡದ ಪ್ರಸಿದ್ಧ ನಟರ ಮಗನಾಗಿ ಅರ್ಜುನ್ ತಮ್ಮ ಬದುಕನ್ನು ನೆರೆಯ ಭಾಷೆಯಲ್ಲಿ ಕಂಡುಕೊಂಡಿದ್ದು, ಅದಕ್ಕೆ ಕಾರಣ ಕನ್ನಡಿಗರು  ಅವರನ್ನು  ಸ್ವಿಕರಿಸದೇ ಇರುವ ಬಗ್ಗೆ  ಅವರಲ್ಲಿ ಇರುವ ನೋವು ಎಲ್ಲವೂ ಮನ ಸೆಳೆಯಿತು.ಅರ್ಜುನ್  ಐವತ್ತರ ಹರೆಯದವರು ಅಂತ ಅನ್ನಿಸೋದೇ ಇಲ್ಲ, ಮುಖ್ಯವಾಗಿ ಅವರ ಶೈಲಿ ಸ್ವಲ್ಪ ಜಾಸ್ತಿ ತಮಿಳು ಭಾಷಿಗರನ್ನು ಹೋಲ್ತ ತುಂಬಾ ವಿಭಿನ್ನ ಅನ್ನಿಸಿ ಖುಷಿ ಕೊಡ್ತು ನನಗೆ. ಸುದೀಪ್ ಸಹ ಅವರನ್ನು ಸಕತ್ತಾಗಿ ಸಂದರ್ಶಿಸಿದರು. ಅರ್ಜುನ್ ಅವರನ್ನು ಕನ್ನಡದವರು ಕೈಹಿಡಿಯಲಿ ಎನ್ನುವ ಹಾರೈಕೆ...
ಅದೇರೀತಿ ರಮೇಶ್ ಕಾರ್ಯಕ್ರಮದಲ್ಲಿ ಅರ್ಜುನ್ ಪತ್ನಿ ಮುಗ್ಧತೆ , ಅವರ ಮಗಳು ಐಶು ತುಂಟತನ ಸಹಿತ ಹೆಚ್ಚು ಆಸಕ್ತಿ ಮೂಡಿಸಿತ್ತು. ಎಷ್ಟು ಸರಳ ಅನ್ನಿಸಿತು ಅರ್ಜುನ್ ಪತ್ನಿಯನ್ನು ಕಂಡಾಗ..

@@ ಉದಯ ನ್ಯೂಸ್ ನಲ್ಲಿ ವಾರ್ತಾವಾಚಕರ ಬಗ್ಗೆ ಹೇಳುವಾಗ ನನಗೆ ಒಂದು ಸಂಗತಿ ಸದಾ ಇಂಪ್ರೆಸ್ ಮಾಡುತ್ತೆ. ಅದು ಅವರ ಭಾಷೆ, ಶೈಲಿ, ಸರಳತೆ ಎಲ್ಲದಕ್ಕೂ ಜಾಸ್ತಿ ನಂಬರ್. ಕಿರಿಯ ವಾರ್ತಾ ವಾಚಕರಿಂದ ಹಿರಿಯರ ತನಕ ವೆರಿ ಗುಡ್ಡು....

ನಿಮಗೆ ಅರ್ಪಣೆ


ಆಗಲೇ ಮತ್ತೊಂದು ಹುಟ್ಟು ಹಬ್ಬ ನನ್ನ ಬ್ಲಾಗ್ ಗೆ... ಖುಷಿಯನ್ನು ಹೆಚ್ಚಿಸಿ ಮಾಡ ಬೇಕಂತೆ... ಹಾಗಂತ ಹೇಳ್ತಾರೆ ಹಿರಿಯರು.. ಸೆಪ್ಟೆಂಬರ್ 10  ಕ್ಕೆ ನನ್ನ ಬ್ಲಾಗ್ ಹುಟ್ಟು ಹಬ್ಬ ಆದರೆ ಬಿಡುವು ಇಲ್ಲದ ಬದುಕಲ್ಲಿ ಯಾವುದರತ್ತಲೂ ಗಮನ ನೀಡಲಾಗದ ಅಸಹಾಯಕತೆ.. ಆದರೂ ಬರ್ತಡೇಯನ್ನು ಮರೆಯೋಕೆ ಆಗಲ್ಲ. ಮುಖ್ಯವಾಗಿ ಇಷ್ಟು ವರ್ಷಗಳಿಂದ ಏನೇ  ವಿಷಯ ಇರಲಿ ಹರಸಿ ಹಾರೈಸಿ.. ಓದಿ.. ಸಿಟ್ಟಿಗೆದ್ದು.. ಇವಳೇನು ಕೇವಲ ಅವರಿಗೆ ಮಾತ್ರ ವಿಶ್ ಮಾಡ್ತಾಳೆ ಎನ್ನುತ್ತಾ ಮುನಿದು.. ಚಂದ ಇರೋದರ ಬಗ್ಗೆ ಮೆಚ್ಚುಗೆ.. ಹೀಗೆ  ನಿಮ್ಮ ಪ್ರತಿಯೊಂದು ಅಭಿಪ್ರಾಯ  ನನ್ನ ಜೀವನದಲ್ಲಿ ಪ್ರಾಮುಖ್ಯತೆ ಗಳಿಸಿದೆ.. ಆಕಸ್ಮಿಕವಾಗಿ ಮಾಧ್ಯಮಲೋಕಕ್ಕೆ ಬಂದೆ. ಅಪ್ಪ ಪತ್ರಕರ್ತರಾಗಿದ್ದು ಕಾರ್ಯ ನಿರತವಾಗಿರುವಾಗಲೇ ಮರಣಿಸಿದ್ದರು.. ಅನೇಕರಿಗೆ  ಮಾರ್ಗದರ್ಶಿಯಾಗಿದ್ದ ಅಪ್ಪನ ಈ ಉದ್ಯೋಗದತ್ತ ಗಮನ ನೀಡದೆ ಓದಿದ್ದು ಬೇರೆಯದ್ದು.. ಆದರು ಋಣಾನುಬಂಧ ಇಲ್ಲಿಗೆ   ಬರುವಂತಾಯಿತು. 

 ಮಾಧ್ಯಮ ಸ್ಪರ್ಧೆಯಲ್ಲಿ ಎಷ್ಟೇ ಗೆಲುವು ಸಾಧಿಸಿದರು ನನ್ನ ಸಾಧನೆ ದೀಪದ ಕೆಳಗಿನ ಕತ್ತಲೆ  ಆಗಿದ್ದು ಮಾತ್ರ ಬೇಸರದ ಸಂಗತಿಯಾಗಿತ್ತು. ಆ ಅಂಶಗಳನ್ನು ಹೊರ ಹಾಕಲು ಸಾಧ್ಯವಾಗದೆ ಇದ್ದಾಗ   ನನ್ನನ್ನು ನಾನು ಮತ್ತೆ ಬೆಳೆಸಿಕೊಳ್ಳುವ ಉದ್ದೇಶದಿಂದ  ಬ್ಲಾಗ್ ಲೋಕಕ್ಕೆ ಬಂದೆ.. ಭಾವುಕ ಮನದವಳಿಗೆ ಭಿನ್ನ ಹೆಸರು ಇಡುವುದು ಕಷ್ಟವಲ್ಲ ಆದರೆ ಅಪ್ಪನ ನೆನಪು ಸದಾ ನನ್ನ ಮನದಲ್ಲಿ ಇರುವುದರಿಂದ ನನ್ನ ಬ್ಲಾಗ್ ಗೆ ಅವರ ಹೆಸರೇ ಕೊಟ್ಟೆ.. ಆಪ್ತ ಭಾವ ಇದೆ ನನಗೆ ಆ ಕಾರಣದಿಂದ ಎಷ್ಟೇ ಕಷ್ಟ ಆದರು ಬರೆದೆ ಬರೀತೀನಿ...ಮುಖ್ಯವಾಗಿ ದೇವರಲ್ಲಿ ವಾಸುದೇವ ದೇವರಲ್ಲಿ ಭಿನ್ನತೆ ಪಡೆದಾತ.. ವಾಸುದೇವ ವಿಶ್ವದಾತ.. ಈ ಅಂಶವು ಸಹಿತ ನನ್ನ ಮನದಲ್ಲಿ ಇದ್ದ ಕಾರಣ ಹೆಚ್ಚು ಸೂಕ್ತ ಅನ್ನಿಸಿತ್ತು ಆ ಹೆಸರು. 

ವಾಹಿನಿಗಳ ಬಗ್ಗೆ ಬರೆಯೋಕೆ ಆರಂಭ ಮಾಡಿದಾಗ ನಕ್ಕವರೇ ಹೆಚ್ಚು.. ಯಾಕೇಂದ್ರೆ ಇದು ನ್ಯೂಸ್ ಪೇಪರ್ ಥರ.. ಬರೆದದ್ದು ಬುಕ್ ಮಾಡೋಕೆ ಆಗೋದೇ ಇಲ್ಲ.. ಆದರೆ ಇದು ಭಿನ್ನ ಬ್ಲಾಗ್.. ಕಥೆ.. ಕವನ.. ಲೇಖನ ..ಲಹರಿ ಯಾವುದು ನನಗೆ ಕಷ್ಟವಲ್ಲ.. ಅವುಗಳನ್ನು ಹಾಯಾಗಿ ಬರೆಯುವ ಶಕ್ತಿ ಹಾಗು ಮನಸ್ಥಿತಿ  ಇದೆ .. ದಿನಕ್ಕೆ ಸರಿ ಸುಮಾರು ಹದಿನಾರು ಗಂಟೆಗಳ  ಕಾಲ ಅಕ್ಷರ ಲೋಕದಲ್ಲಿ ಒಂದಲ್ಲ ಒಂದು ರೀತಿಯಲ್ಲಿ  ನನ್ನನ್ನು ನಾನು ತೊಡಗಿಸಿಕೊಂಡಿದ್ದೇನೆ.. ಏನು ಮಾಡಲು ಮನಸ್ಸಿಲ್ಲ ಅಂದ್ರೆ ನನ್ನ ಗಿಡಗಳು.. ನನ್ನ ಮನೆಯ ಕ್ಲೀನಿಂಗ್  ಕೆಲಸ ಒಟ್ಟಾರೆ ಮನಸ್ಸು ಸದಾ ಸಂತಸವಾಗಿರುವ   ಎಲ್ಲ ಅಂಶಗಳಿಗೆ ಆದ್ಯತೆ ನೀಡ್ತೇನೆ...

ನನ್ನ ಅಕ್ಷರಗಳನ್ನು ಅತ್ಯಂತ  ಪ್ರೀತಿಯಿಂದ ಓದಿ ಮೆಚ್ಚುಗೆ  ವ್ಯಕ್ತ ಪಡಿಸಿದ ಎಲ್ಲರಿಗೂ ಧನ್ಯವಾದಗಳು... ನಿಮ್ಮ ಈ ಪ್ರೀತಿಗೆ ಸದಾ ಋಣಿ ನಾನು.. ನಿಮ್ಮೆಲ್ಲರ ವಿಶ್ವಾಸ ಪ್ರೀತಿಗೆ ತಲೆ ಬಾಗಿ ನನ್ನ ಈ ವರ್ಷದ ಬ್ಲಾಗ್  ಬರಹಗಳನ್ನು, ಅಮ್ಮ , ಅಣ್ಣಂದಿರು  ಹಾಗು ನಿಮಗೆ ಅರ್ಪಣೆ ಮಾಡ್ತಾ ಇದ್ದೀನಿ ... ವಿಶ್ವಾಸ ಹೀಗೆ ಇರಲಿ...
         ******** ^^^^^^^^*******^^^^^^^^^ ********* ^^^^^^^^ 

@@ ಆರಂಭದಲ್ಲಿ ಕಂಡಾಗ  ಅವರ ಹೆಸರ ಜೊತೆ ಇಂನ್ಷಿಯಲ್  ಇತ್ತು  ಆದರೇ ಈಗ  ಇಲ್ಲ ಆದರೆ ಹೆಸರ ಜೊತೆ ಉಪ್ಪುಂದ   ಅಂತ ಸೇರ್ಪಡೆ ಆಗಿದೆ.. ಅವರು ಸುವರ್ಣವಾಹಿನಿಯ ವರದಿಗಾರ ನಿರೂಪಕ ಮತ್ತು ನನ್ನ ಫೇಸ್ ಬುಕ್  ಮಿತ್ರ ವೀರೇಂದ್ರ. ಹೆಚ್ಚು ನಾನು ಅವರನ್ನು ಟೀವಿಯಲ್ಲಿ ವರದಿ ಮಾಡುವುದನ್ನು ಕಂಡಿದ್ದೆ.. ಆದರೆ ಕಳೆದ ವಾರ ಅನ್ನಿಸುತ್ತೆ ಸ್ವಲ್ಪ ಜಾಸ್ತಿನೇ ನಿರೂಪಣೆ ಮಾಡ್ತಾ ಇದ್ರೂ.. ಇನ್ನು ಸ್ವಲ್ಪ  ಕುದುರ ಬೇಕು ಎಂದು ಅನ್ನಿಸಿದರು ಸಹ ಓಕೆ ಬೇಸರ ಆಗಲ್ಲ.. ಕೇಪ್ ಇಟ್ ಅಪ್ . 
 ಪಬ್ಲಿಕ್ ವಾಹಿನಿ ಆಂಕರ್ ಗಳು ಸೆಲೆಬ್ರಿಟಿ ಗಳ ಯಾವ ರೀತಿ ಮಾತನಾಡಬೇಕು.. ವಿಷಯವನ್ನು ಹೇಗೆ ಗ್ರಹಿಸಿ ಅದನ್ನು ಜನತೆಗೆ ಹೇಳ ಬೇಕು ಎನ್ನುವ ಬಗ್ಗೆ ಆದ್ಯತೆ ನೀಡದೆ ಮಾತಾಡುವ ಶೈಲಿ ನನಗೆ ಪರಮಾಶ್ಚರ್ಯ ಹುಟ್ಟಿಸಿದೆ.  

ರಂಗಣ್ಣ  ಅನುಭವಿ ಪತ್ರಕರ್ತರು...  ನಾನು ಕೇಳಿದಂಗೆ ಅವರ ಜೊತೆಗಾರ ಅಂದ್ರೆ ಸಮಾನ ಮನಸ್ಕ.. ವಯಸ್ಕರು ಹೇಳುವಂತೆ ಬುದ್ಧಿವಂತರು.. ನಿಜ ತುಸು ಅತಿ ಅನ್ನಿಸುತ್ತೆ ಶೈಲಿ.. ಆದರೆ ಅದು ಅವರ ಶೈಲಿ..ಅವರು ಅತಿಥಿಗಳ ಜೊತೆ ಮಾತಾಡುವುದಕ್ಕೂ ಅವರ ಹಿನ್ನೆಲೆ.. ಅನುಭವ ಸಹಾಯಕಾರಿ. ಆದರೆ ಅವರನ್ನು ಫಾಲೋ ಮಾಡುವ ಅವರ  ಸಹೋದ್ಯೋಗಿಗಳು..ಅವರಂತೆ ಆಗೋಕೆ ಹೋದ್ರೆ ಏನ್ ಚಂದ  !! ರಂಗಣ್ಣ ಮತ್ತು ಅವರ ಸಹೋದ್ಯೋಗಿಗಳ ಅನುಭವದಲ್ಲಿ  ವ್ಯತ್ಯಾಸ ಇದೆ.. ಅದನ್ನು ಅರಿತರೆ ಒಳ್ಳೆಯದು.ಆದರೆ ಬೆಳಕು ಕ್ಯಾಮರ ಮುಂದೆ ... !!  ಏನೇ ಇರಲಿ ಫ್ರೆಂಡ್ಸ್ ನಿಮ್ಮ ಶೈಲಿ ಬೆಳೆಸಿಕೊಳ್ಳಿ ... ಜಾಸ್ತಿ ಇಷ್ಟ ಆಗ್ತಿರಿ ವೀಕ್ಷಕರಿಗೆ .
ಟೀವಿ ನೈನ್ ನಲ್ಲಿ ನಿರೂಪಕ ವರದಿಗಾರ  ಹರಿಪ್ರಸಾದ್ ಶೈಲಿ ತುಂಬಾ ತುಂಬಾ  ಬೆಳವಣಿಗೆ ಆಗಿದೆ.. ಟೀವಿ ನೈನ್ ಒಂದು ಕಲಿಕಾ ಕೇಂದ್ರ.. ಅಲ್ಲಿ ಯಾರೇ ಹೊಸಬರು ಬಂದ್ರು ಮಾತಿನ ಶೈಲಿ ಕಲಿತುಕೊಳ್ಳುವ ಅವಕಾಶ ಇರುತ್ತೆ. ಯಾಕೆ ಈ ಮಾತು ಅಂದ್ರೆ ವರದಿಗಾರ ಕೇವಲ ಅಲ್ಲೇ ಉಳಿಯಲ್ಲ ತಾನು ಭಿನ್ನ ರೀತಿಯಲ್ಲಿ ಬೆಳೆಸಿಕೊಳ್ಳಲು ವಾಹಿನಿ ಸಹಾಯ ಮಾಡಿದೆ.. ಗುಡ್ 

@@
ವಾವ್ ತೆಲುಗು ವಾಹಿನಿಯಲ್ಲಿ ಪ್ರಸಾರ ಆಗುವ ಸೆಲೆಬ್ರಿಟಿ ರಿಯಾಲಿಟಿ ಷೋ. ಇದು ಸಹ ಹೆಚ್ಚು ಕಾಲದಿಂದ ಪ್ರಸಾರ ಆಗ್ತಾ ಇದೆ. ನಟ  ಸಾಯಿಕುಮಾರ್ ಇದರ ಮುಖ್ಯ ಆಕರ್ಷಣೆ. ಈ ಟೀವಿ ತೆಲುಗು ಅಲ್ಲದೆ ಕನ್ನಡ ಈ ಟೀವಿಯಲ್ಲು ಸಹಿತ ಪ್ರಸಾರ ಆಗಿತ್ತು. ಆದರೆ ಈಟೀವಿ ತೆಲುಗು ವಾಹಿನಿಯಲ್ಲಿ ಈಗಲೂ ಪ್ರಸಾರ ಆಗುತ್ತದೆ. ಅದರ ಮುಖ್ಯ ಆಕರ್ಷಣೆಗಳಲ್ಲಿ ಒಂದು ಆ ಕಾರ್ಯಕ್ರಮದ ಸ್ಪರ್ಧಿಗಳು ಹಾಗೂ ಲವಲವಿಕೆಯ ಮಾತುಗಳು.. ನನ್ನ ಅಮ್ಮ ಹೆಚ್ಚು ಇಷ್ಟ ಪಟ್ಟು ವೀಕ್ಷಿಸೋ ಕಾರ್ಯಕ್ರಮದಲ್ಲಿ  ವಾವ್ ಸಹ ಒಂದು.. ನಿಜ ಚಂದ ಇರುತ್ತೆ. ಸಾಯಿ ಸ್ಟೈಲು ಮತ್ತು ಮಾತು ವಾವ್..! ಕಳೆದ ಬಾರಿ ಸ್ಪರ್ಧಿಯೋಬ್ಬಾಕೆ ತುಂಬಾ ಮುದ್ದಾಗಿದ್ಲು.. ಆಕೆಯ ಮದುವೆ ಟೀವಿಯಲ್ಲಿ  ಕೆಲಸ ಮಾಡ್ತಾ ಇರೋದ್ರಿಂದ  ಆಗಿಲ್ಲ.. ಜನರ ದೃಷ್ಟಿಕೋನದ ಬಗ್ಗೆ ನೊಂದು ಹೇಳಿದಳು ಆಕೆ.. ಅವಳನ್ನು ಕಂಡಾಗ ರತ್ನದಂತಹ  ಹುಡುಗಿ ಊರಿಗೆಲ್ಲ.. ಗಂಡು ಸಿಗುವುದೇನು ಕಷ್ಟವಲ್ಲ ಎಂದು ಅನ್ನಿಸಿತು ನಿಜ ಪಿಲ್ಲ!




ಸೆಪ್ಟೆಂಬರ್ 2  ರಂದು ಕಿಚ್ಚ ಸುದೀಪ್ ಅವರ ಹುಟ್ಟು ಹಬ್ಬ.. ಆದಕ್ಕೆ ಸಂಬಂಧಪಟ್ಟಂತೆ   ಹೆಸರೇ ಕೇಳಿರದ ಹೊಸ ಚಿತ್ರಗಳ ತಂಡ ಸುದೀಪ್ ಗೆ ವಿಶ್ ಮಾಡಿದ್ರು ಪೋಸ್ಟರ್ ಗಳ ಮೂಲಕ... ಅದು ಓಕೆ.. ಆದರೆ ಅನೇಕ ತಿಂಗಳುಗಳಿಂದ ಕೆಲಸ  ಮಾಡ್ತಾ ಇರೋ ಚಿತ್ರತಂಡ ರಿಂಗ್ ರೋಡ್ ಶುಭ.. ಆ ಚಿತ್ರದ ಒಂದು ಪೋಸ್ಟರ್ ಕಂಡು ಸಕತ್ ನಗು ಬಂತು.. ಆಕಡೆ ಒಂದಷ್ಟು ಹುಡುಗೀರು .. ಕೈಲಿ ಹೂವು .. ಈ ಕಡೆ ಒಂದಷ್ಟು ಹುಡುಗೀರು ಕೈಲಿ ಹೂವು ಮಧ್ಯದಲ್ಲಿ ಕಿಚ್ಚ ಅವರ ಪಟ.. ಅದನ್ನು ಕಂಡಾಗ ನನಗೆ ನಾವು ಶಾಲೆಯಲ್ಲಿ ಮಾಡ್ತಾ ಇದ್ದ ಗ್ರೂಪ್ ಡ್ಯಾನ್ಸ್ ಜ್ಞಾಪಕಕ್ಕೆ  ಬಂತು. ಮಧ್ಯ ಕೃಷ್ಣ ಪಾತ್ರಧಾರಿ.. ಆಕಡೆ ಈ ಕಡೆ ಇರೋ ಹುಡುಗೀರು  ಒಂದೇ ಸ್ಟೆಪ್ ಹಾಕ್ತಾ ಹಾಕ್ತಾ  ಇಡಿ ಡ್ಯಾನ್ಸ್ ಮುಗಿಸೋರು.
ಜೊತೆಗೆ ಮತ್ತೊಂದು ಹಾಡು ನೆನಪಿಗೆ ಬಂತು...ಕಳ್ಳ ಕಳ್ಳ  ಕಳ್ಳ ಏನ್ ಮಾಡ್ತಾ ಇದ್ದೀಯ... ? 

ತಪ್ಪು ...ತಪ್ಪು !!



ಅದ್ಯಾಕೋ ಇತ್ತೀಚಿಗೆ ಹೆಸರುಗಳನ್ನೂ ತಪ್ಪು ಬರೀತಾ ಇದ್ದೀನಿ, ಅಂದ್ರೆ ಸಾಧಕರ ಹೆಸರು ತಪ್ಪು ಬರೆಯೋಕೆ ಆರಂಭ ಮಾಡಿದ್ದೇನೆ . ತಲೆ ಎಲ್ಲೋ ಇದೆ ಎನ್ನುವುದು ಇದರ ಅರ್ಥವಲ್ಲ ಪ್ರಾಯಶಃ ಸ್ವಲ್ಪ ಜಾಸ್ತಿನೇ ಬ್ಯುಸಿ ಆಗಿರೋದು ಇದಕ್ಕೆ ಕಾರಣ ಎಂದೇ ಹೇಳ ಬಹುದು.. ನಿನ್ನೆ ಬರೆದ ಪೋಸ್ಟ್ ನಲ್ಲಿ  ಡಾ  ಸಿ  ಎನ್  ರಾಮಚಂದ್ರನ್  ಅವರ ಹೆಸರನ್ನು ಬೇರೆ ಬರೆದಿದ್ದೆ. ಇತ್ತೀಚಿಗೆ ಬರೆದ  ಪೋಸ್ಟ್ ನಲ್ಲಿ ಡಿವೈನ್ ಪಾರ್ಕ್  ಡಾ .  ಚಂದ್ರಶೇಖರ ಉಡುಪ ಅವರ ಹೆಸರು ಸಹಿತ.ನನ್ನ ಅಣ್ಣ ರವಿ ಇದನ್ನು ನನ್ನ ಗಮನಕ್ಕೆ ತಂದರು..  ಪ್ರಿಂಟ್ ಮೀಡಿಯಾದಲ್ಲಿ ಇದ್ದು ಸಹ ಈ ರೀತಿ ತಪ್ಪು ಮಾಡ್ತಾ ಇರೋದು ಅಕ್ಷಮ್ಯ.. ಈ ಮೂಲಕ ನಾನು ಮಾಡಿದ ಈ ಮಿಸ್ಟೇಕ್ ಗಳಿಗೆ ಹಿರಿಯರಿಂದ ಕ್ಷಮೆ ಯಾಚಿಸ್ತೀನಿ.. ತಪ್ಪಾಗಿರುವುದನ್ನು  ಆ ಬಳಿಕ ಬರೆದು   ಸರಿಪಡಿಸ್ತಿವಿ ನಿಜ ಆದ್ರೆ ಆದರೆ ತಪ್ಪಂತು ಮಾಡಿರೋದು ನಿಜ ತಾನೇ :-) ಅಗೇನ್ ಕ್ಷಮೆ ಇರಲಿ ಈ ಪಾಮರಳ  ಮೇಲೆ ಪ್ರಿಯ ಓದುಗರೇ! 

ಗೆಳೆಯ ಬದರಿನಾಥ್   ಈಗಷ್ಟೇ ಒಂದು ಸುದ್ದಿ ಹೇಳಿ ಮನಕ್ಕೆ ಬೇಸರ ಉಂಟು ಮಾಡಿದ್ರು.. ಅವರು ಹೇಳಿದ ಸಂಗತಿ ಹಾಗಿತ್ತು.. ದೃಶ್ಯ ಮಾಧ್ಯಮ ಅದೆಷ್ಟು ಅತಂತ್ರ ಅನ್ನೋದು ಮತ್ತೆ ಮತ್ತೆ ಸಾಬೀತಾಯಿತು.. ಇರಲಿ ಬಿಡಿ ಆ ಸಂಗತಿ !!

@@ ಉದಯವಾಹಿನಿಯಲ್ಲಿ ಶಾಲಿನಿ ನಡೆಸಿಕೊಡುವ   ಮಕ್ಕಳ ಕಾರ್ಯಕ್ರಮ ಅತ್ಯುತ್ತಮ ಅಂತ ಪದೇಪದೇ ಹೇಳೋಕೆ ಇಷ್ಟ  ಪಡ್ತೀನಿ.. ಮುಖ್ಯವಾಗಿ ತುಂಬಾ ಲವಲವಿಕೆಯ   ಹೆಣ್ಣುಮಗಳು ಆಕೆ . ಈ ವಾರ ಕೊಡಗಿನ ಮಕ್ಕಳ ಸಾಹ ಪ್ರಸಾರ ಆಯ್ತು. ವಿಷದ ಅಂದ್ರೆ ಆಅ ಮಕ್ಕಳಿಗೆ ಕೊಡಗು ಭಾಷೆಯನ್ನೂ ಅವರ ಪೋಷಕರು ಹೇಳಿಕೊಟ್ಟಿಲ್ಲ.. ಆ ಭಾಷೆಯು ಮುಖ್ಯ ಅಲ್ವ ಮಕ್ಕಳಿಗೆ?  ಈ ಕಾರ್ಯಕ್ರಮದಲ್ಲಿ  ಶಾಲಿನಿ ಮಕ್ಕಳ ಜೊತೆ ಮಾತಾಡುವ ಶೈಲಿ ಸಹಿತ ಚಂದ ಇದೆ.. ಮಕ್ಕಳ ಜೊತೆ ಮಕ್ಕಳಾಗುತ್ತಾ  .. ಅವರ ಅಪ ಅಮ್ಮಂದಿರ ಕಾಲು ಎಳೆಯುವ ಕೆಲಸ ಮಾಡುವ ಶಾಲಿನಿ ಪಾಪ ಪಾಂಡು ಧಾರಾವಾಹಿಯ ಪಾಚೋ ಗಿಂತ ಜಾಸ್ತಿ ಇಷ್ಟ ಆಗ್ತಾರೆ. ಅಲ್ಲದೆ, ಈಟೀವಿ ಯಲ್ಲಿ ಪ್ರಸಾರ ಆಗುವ  ಕಾಮಿಡಿ ಸರ್ಕಲ್ ನಲ್ಲೂ ಸಹಿತ ಈಕೆಯ ಭಾಗವಹಿಸುವಿಕೆ ಲುಂಗಿ ಡ್ಯಾನ್ಸ್ ಲುಂಗಿ ಡ್ಯಾನ್ಸ್ ನಂತೆ :-) ಸಕತ್! 
@@  ಹೇಳಿಕೊಳ್ಳುವಷ್ಟು ಹಾಸ್ಯ ಇಲ್ಲದೆ ಇದ್ರೂ ಈ ಧಾರವಾಹಿ ಸ್ವಲ್ಪ ಆಕರ್ಷಣೆ ಉಳಿಸಿ ಕೊಂಡಿದೆ. ಮಾಸ್ಟರ್ ಮಿಸ್ಟರ್ ಆನಂದ್  ಧಾರವಾಹಿ ರೋಬೋ ಬಗ್ಗೆ ಮತ್ತು ಬಳ್ಳಾರಿ ನಾಗ ಬಗ್ಗೆ ಹೇಳ್ತಾ ಇರೋದು.. ಆ ಧಾರವಾಹಿ ಫ್ಯಾನ್ಗಳು ಒಂದಷ್ಟು ಜನ ಇದ್ದಾರೆ ನಮ್ಮ ಮನೆಯಲ್ಲಿ.. ಸ್ವಲ್ಪ  ಜಾಸ್ತಿನೇ ಇಷ್ಟ ಪಟ್ಟು ನೋಡ್ತಾರೆ.. ನಮ್ಮ ಕುಟುಂಬಕ್ಕೆ ಸೇರಿದವರು.. ಹಿಂದೆ ಸುವರ್ಣ  ವಾಹಿನಿಯಲ್ಲಿ  ಪ್ರಸಾರ ಆಗಿದ್ದ ಎಸೆಸೆಲ್ಸಿ  ನನ್ ಮಕ್ಕಳು ಸಹ ನೋಡೋ ಗುಂಪು ಒಂದಿತ್ತು.. ಈಗ ಅವರು ರೋಬೋ ಗೆ ಶಿಫ್ಟ್ ಆಗಿದ್ದಾರೆ...
@@ ಸೋನಿ ವಾಹಿನಿಯಲ್ಲಿ ಮತ್ತೆ ಕೌನ್ ಬನೇಗ ಆರಂಭ ಆಗಿದೆ.. ಎಷ್ಟು ಬಾರಿ ಬಿಗ್ ಬಿ ಆ ರಿಯಾಲಿಟಿ ಷೋ  ನಡೆಸಿಕೊಟ್ರು ಬೇಜಾರು ಆಗಲ್ಲ.. ಅತ್ಯುತ್ತಮ ನಿರೂಪಕ ಮುಖ್ಯವಾಗಿ ಅತ್ಯಂತ ಆಕರ್ಷಣೆ ಉಂಟು  ಮಾಡುವ ನಿರೂಪಕರು ಬಿಗ್ ಬಚ್ಚನ್.. ಆ ನಗು, ಮಾತಿನ ಶೈಲಿ ಎವರ್   ಗ್ರೀನ್ :-) ವಾವ್ ಸರ್ಜಿ ವಾವ್ ! 

ಎಂತಹ ನಿಸ್ಸಹಾಯಕತೆ ... ಛೆ!


ಯು ಆರ್ ಅನಂತ ಮೂರ್ತಿಯವರ ಸಾವು.. ಅವರ ವಿವಾದ ... ಅವರ ಬಗ್ಗೆ ಹರಡಿದ್ದ ಕಳಪನೆಗಳು.. ಊಹೆಗಳು.. ವಾಸ್ತವ ಯಾಕೋ ಕಳೆದೆರಡು ದಿನಗಳಿಂದ ಹೆಚ್ಚು ಬೇಸರ.. ನೋವು ಸಣ್ಣ ಮಟ್ಟದಲ್ಲಿ ಅಳು ಬರುವಂತೆ ಮಾಡಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ..

ಎಲ್ಲ ವಾಹಿನಿಗಳು ಆ ಹಿರಿಯ ಚೇತನಕ್ಕೆ ತಮ್ಮದೇ ಆದ ರೀತಿಯಲ್ಲಿ  ನಮನ ಸಲ್ಲಿಸಿತು. ಇಂದು ಚಂದನವಾಹಿನಿಯ ಕಾರ್ಯಕ್ರಮ ಒಂದರಲ್ಲಿ ಹಿರಿಯ ಸಾಹಿತಿ-ವಿಮರ್ಶಕ  ಡಾ  ಸಿ  ಎನ್  ರಾಮಚಂದ್ರನ್ , ಪತ್ರಕರ್ತ  ಮತ್ತು ಫೇಸ್ ಬುಕ್ ಮಿತ್ರ ಜೋಗಿ  ಮತ್ತು ಷಡಕ್ಷರಿ ಅವರ ಸಂದರ್ಶನ ಹಾಗೆ ಅನ್ನುವುದಕ್ಕಿಂತ ಅವರ ಜೊತೆಗೆ ನಡೆಸಿದ ಮಾತುಕತೆ ಯು ಆರ್ ಅನಂತ್ ಮೂರ್ತಿ ಅವರ ಅನೇಕಾನೇಕ ಸಂಗತಿಗಳ ಅನಾವರಣ ... ನಿಜ ಹೇಳ ಬೇಕೆಂದರೆ ತುಂಬಾ ಅಚ್ಚುಕಟ್ಟಾಗಿತ್ತು. ಅನಂತ  ಮೂರ್ತಿ ಅವರು ಮೋದಿ ಅವರು ಪ್ರಧಾನಿ ಆದರೆ ದೇಶ ಬಿಟ್ಟು ಹೋಗ್ತೀನಿ ಎನ್ನುವ ಮಾತನ್ನು ಯಾವ ರೀತಿ ಬೆಳೆಸಿದರು ಮಾಧ್ಯಮದವರು, ಹೇಗೆ ಅವರನ್ನು ತೇಜೋವಧೆ ಮಾಡಿದರು ಎನ್ನುವ ಸಂಗತಿ ಹೇಳುವಾಗ ಸಕತ್ ನೋವಾಯಿತು.ಹಿರಿಯ ಜೀವ ಆ ಬಳಿಕ ಅದೆಷ್ಟು ಹಿಂಸೆ ಅನುಭವಿಸಿರ ಬೇಕು. 
ಗೆಳತಿ ಅಂಜಲಿ ರಾಮಣ್ಣ ಅನಂತ ಮೂರ್ತಿ ಅವರ ಮರಣದ ರಾತ್ರಿ ಒಂದು ಸಂಗತಿ ಬರೆದು ಕೊಂಡಿದ್ದರು ತಮ್ಮ ವಾಲ್ ನಲ್ಲಿ 
ಆ ದಿನ ಅವರೇ ಫೋನ್ ತೆಗೆದುಕೊಂಡರು. " ಓಹ್ , ಯಾವಾಗ ದೇಶ ಬಿಡ್ತೀರಿ ಅಂತ ಕೇಳೊಕ್ಕೆ ಮಾಡುವವರ ಕಾಲ್ ಅಂದುಕೊಂಡೆ " ಅಂದರು.
ಎಷ್ಟೇ ಗಟ್ಟಿ ಮನುಷ್ಯ ಆದರೂ ವಿವಾದ, ಅವಮಾನ, ಸಲ್ಲದ ಅನುಮಾನಗಳಿಂದ ಕಂಗೆಡುತ್ತಾನೆ. ಅದರಲ್ಲೂ ಆ ವಯಸ್ಸಿನಲ್ಲಿ....ಇದಂತೂ ನಾ ಹತ್ತಿರದಿಂದ ಕಂಡುಕೊಂಡ ಸತ್ಯ. 
ಈ ಕಾರಣಕ್ಕೇ ಅನಂತಮೂರ್ತಿಯವರ ಬಗ್ಗೆ ಮನಸ್ಸು ಮರುಗುತ್ತೆ. ಅವರೇನೋ ತುಂಬಾ ಆತ್ಮೀಯವಾಗಿ ಮಾತನಾಡಿಸುತ್ತಿದ್ದರು.
but, ನಾನು ಮಾತ್ರ 'ಸರ್' ಗಿಂತ ಹೆಚ್ಚು ಆತ್ಮೀಯತೆ ಬೆಳಸಿಕೊಳ್ಳಲೇ ಇಲ್ಲ. My bad !  
ಅವರು ಈಗಿರುವ ಕಡೆಯಲ್ಲೂ ಅವರೇ ಆಗಿರುತ್ತಾರೆ. ಅಷ್ಟಂತೂ ಖಚಿತ.


@ ಇಂದು ಪೂರಕವಾಗಿ ಮುಂಜಾನೆ ವಿದೇಶಿ ಚಾನೆಲ್  ಅಲ್ ಜಜೀರ ವೀಕ್ಷಿಸಿದೆ.. ಅದರಲ್ಲಿ ನಿರ್ದಾಕ್ಷಿಣ್ಯವಾಗಿ  ನಿಷ್ಪಾಪಿ ಜನರನ್ನು ಬಾಂಬ್ ಗಳ ಮೂಲಕ ಸಾಯಿಸಿದ ಭಯೋತ್ಪಾದಕರು ವಿಶ್ವದ ಪ್ರಸಿದ್ಧ ಧರ್ಮದ ಅನುಯಾಯಿಗಳು.. ಅತಿ ಹೆಚ್ಚ್ಗು ದುಖ ಅನ್ನಿಸಿದ್ದು  .. ಒಬ್ಬಾತ ಮುರಿದು ಚೂರಾದ ಒಂದು ಬಿಲ್ಡಿಂಗ್ ತೋರಿಸುತ್ತ ಇದು ಹೆಣ್ಣು ಮಕ್ಕಳ ಶಾಲೆ, ಇದರಲ್ಲಿ ಕೇವಲ ಹೆಣ್ಣುಮಕ್ಕಳು ಓದುತ್ತಾ ಇದ್ದುದು. ಇಲ್ಲಿದೆ ನೋಡಿ ಅವರ ಅಪ್ಲಿಕೇಶನ್.. ನಾವು ಪ್ರಪಂಚದ ಜೊತೆ ಬಾಳಲು ಇಷ್ಟ ಪಡ್ತೀವಿ.. ಪ್ರಪಂಚದ ಭಾಗ ಆಗಲು ಇಷ್ಟ. ಆದರೆ ಸಾಮಾನ್ಯವಾಗಿ ಕೇವಲ ಮಿಲಿಟರಿ ನೆಲೆಗಳ ಮೇಲೆ  ದಾಳಿ ಆಗಿದೆ ಎಂದು ಮಾಧ್ಯಮಗಳು ಮತ್ತು ಸರ್ಕಾರವು ಬಿಂಬಿಸುತ್ತದೆ. ಆದರೆ ಎಲ್ಲ ಕಡೆ ದಾಳಿ ಆಗಿದೆ. ನಮಗೆ ವಿಶ್ವದ ಎಲ್ಲ ಧರ್ಮಗಳ  ಬಗ್ಗೆ ಗೌರವ ಇದೆ...ಹೀಗೆ ಆ ದೇಶದ ಸ್ಥಳೀಯ ವ್ಯಕ್ತಿ ವರ್ಣಿಸುತ್ತಿದ್ದಾಗ ಮನಸ್ಸು ಕಲಕಿ ಹೋಯ್ತು ಎಂತಹ ನಿಸ್ಸಹಾಯಕತೆ  ... ಛೆ! 
ಜನಪ್ರಿಯತೆಗಾಗಿ ಮತ್ತು ಬಿಟ್ಟಿ ಪ್ರಚಾರದ ಹುಚ್ಚಿನಲ್ಲಿ ಕೆಲವೊಂದನ್ನು ಕಾಲ ಕೆಳಕ್ಕೆ ಹಾಕಿ ತುಳಿಯುವ .. ಒಂದಷ್ಟನ್ನು ಸುಖಾಸುಮ್ಮನೆ ಮೇಲೆತ್ತುವ ಕೆಲಸ ಸಾಗಿದೆ.. ದುರಾದೃಷ್ಟಕರ ಸಂಗತಿ ಎಂದರೆ ಈ ಎರಡು ವರ್ಗಗಳಿಗೆ ಮಾತ್ರವಲ್ಲ ಅಂತಹ ವ್ಯಕ್ತಿತ್ವಗಳಿಂದ ಸಮಾಜಕ್ಕೂ ಹೆಚ್ಚಿನ ಪ್ರಯೋಜ ಆಗಿಲ್ಲ..ಯಾವ ಧರ್ಮ ಮತ್ತು ಜಾತಿ ಇಲ್ಲಿ ಏನು ಮಾಡಲ್ಲ.. ವಿಶ್ವದ ಪ್ರಸಿದ್ಧ ಧರ್ಮಗಳು ಒಡೆದಿರುವುದು ಇದಕ್ಕೆ ಸಾಕ್ಷಿ. ಮತ್ತು ಒಂದೇ ಧರ್ಮದವರು ಅದೇ ಧರ್ಮದ ಮತ್ತೊಂದು ಪಂಗಡದ ನಿಷ್ಪಾಪಿ ಜೀವ ತೆಗೆಯುತ್ತಿರುವುದೇ ಸಾಕ್ಷಿ.. ಭಾರತದಲ್ಲಿ ಜಾತಿ ಪ್ರಭಾವ ಇದ್ದರೇ ವಿಶ್ವದಲ್ಲಿ ಧರ್ಮ ಪ್ರಭಾವ.. ಎರಡೂ ಕಡೆ ಮನುಷ್ಯನ ಹೀನ ಮನಸ್ಥಿತಿ ಅವಘಡಗಳಿಗೆ ಕಾರಣ ...