sudeep.. bigg bosssss

ಪ್ರತಿದಿನ ಮುಂಜಾನೆ  ಪ್ರತಿಯೊಂದು ವಾಹಿನಿಗಳು ವೀಕ್ಷಕರ ದಿನ ಚೆನ್ನಾಗಿ ಆರಂಭ ಆಗಲಿ ಎಂದು ಒಳ್ಳೆಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ . ಕೆಲವು ಮನಕ್ಕೆ ಆಪ್ತ ಅನ್ನಿಸಿದರೆ, ಒಂದಷ್ಟು ಸಾಕಪ್ಪ ಅನ್ನಿಸುವಂತೆ ಇರುತ್ತದೆ. ಜನಶ್ರೀ ವಾಹಿನಿಯಲ್ಲಿ ಬೆಳಗಿನ ಕಾರ್ಯಕ್ರಮದಲ್ಲಿ ತುಂಬಾ ಖುಷಿ ಕೊಟ್ಟಿದ್ದು ಸುಧಾಕರ ಶರ್ಮ ಅವರ ಜೀವನ ದರ್ಶನ . ಅಂದ್ರೆ ನಾವು ಕಲಿತ ವಿದ್ಯೆಯು ನಮ್ಮ ಬದುಕನ್ನು ಹೇಗೆ ಸಾಕಾರ ಮಾಡುತ್ತಿಲ್ಲ ಅನ್ನುವ ಸಂಗತಿಯನ್ನು ಮೆಕಾಲೆಯ ವಿದ್ಯಾ  ನೀತಿ ಎಲ್ಲದರ ಬಗ್ಗೆ ಅದ್ಭುತವಾಗಿ ಮಾಹಿತಿ ನೀಡಿ ದರು.ಅತ್ಯಂತ ಉಪಯುಕ್ತ ಮಾಹಿತಿ ನೀಡುವ, ಇತಿಹಾಸದ ಬಗ್ಗೆ ನಮಗಿರುವ ದೃಷ್ಟಿಕೋನವನ್ನು ಬದಲಾಯಿಸಿ, ವಿಷಯವನ್ನು ಭಿನ್ನ ರೀತಿಯಲ್ಲಿ ಯೋಚಿಸುವಂತೆ ಮಾಡುವಲ್ಲಿ ಸುಧಾಕರ ಶರ್ಮ ಅವರು ವಾವ್  ಅನ್ನಿಸುವಷ್ಟು ಅದ್ಭುತ . ಚಂದನ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ (ಈಗ ಪ್ರಸಾರ ಆಗ್ತಾ ಇದ್ಯಾ?)ಪ್ರತಿ ಭಾನುವಾರ ಇವರ ಕಾರ್ಯಕ್ರಮ  ಮನಸ್ಸಿಗೆ ಖುಷಿ  ಕೊಡ್ತಾ ಇತ್ತು. ಒಂದೇ ವಿಷಯವನ್ನು ಹೇಳಿ ಹೇಳಿ ತಲೆ ಕೆಡಿಸೋ ಮಂದಿ ಇರುವ ಈ ಕಾಲದಲ್ಲಿ ಸುಧಾರ ಶರ್ಮರಂತಹ ಭಿನ್ನ ಇತಿಹಾಸ ತಜ್ಞರು  ಇದ್ದಾರಲ್ಲ ಅದೇ ಹೆಮ್ಮೆ 
ಈಗ ಮತ್ತೆ ರಿಯಾಲಿಟಿ ಶೋಗಳ ಕಾಲ ನಮ್ಮ ಕನ್ನಡ ವಾಹಿನಿಗಳಲ್ಲಿ ಆರಂಭ ಆಯ್ತು. ಸುವರ್ಣ  ವಾಹಿನಿಯಲ್ಲಿ ಕನ್ನಡದ ಕೋಟ್ಯಧಿಪತಿ  ಕಾರ್ಯಕ್ರಮ ಮತ್ತೆ ಪ್ರಸಾರ ಆಗಿದೆ. ಧಾರಾವಾಹಿಗಳನ್ನು ಕಂಡು-ವೀಕ್ಷಿಸಿ ಸುಸ್ತಾದ ವೀಕ್ಷಕರಿಗೆ ಸ್ವಲ್ಪ ಬದಲಾವಣೆ ನೀಡುವ ಕಾರ್ಯಕ್ರಮ ಇದು.ಪುನೀತ್ ರಾಜ್ ಕುಮಾರ್ ಅವರಿಗೆ ಜನರೊಂದಿಗೆ ಬೆರೆಯುವ ಸದವಕಾಶ. ಉತ್ತಮ ಪ್ರೆಸೆ೦ಟರ್  ಆಗಿರುವ ಪುನೀತ್ಗೆ ಈ ಕಾರ್ಯಕ್ರಮ ಎಷ್ಟು ಇಷ್ಟಾನೋ ಅಷ್ಟೇ ಪ್ರೀತಿ ವೀಕ್ಷಕರಿಗೆ . ಆದರೆ  ಬೇರೆಯವರು ದುಡ್ಡು ತಗೊಂಡು ಹೋಗೋದನ್ನು ನಾವು ನೋಡ್ತಾ ಕೂರಬೇಕು ಅದೇ ದುಃಖದ ಸಂಗತಿ   



ಕನ್ನಡದಲ್ಲಿ ಬಿಗ್  ಬಾಸ್  ಆರಂಭ ಆಗ್ತಾ ಇದೆ. ಈ ಟೀವಿಯಲ್ಲಿ ಇದು ಪ್ರತಿದಿನ ಪ್ರಸಾರ ಆಗುತ್ತೆ. ಹಿಂದಿಯಲ್ಲಿ  ಈಗಾಗಲೇ ಆರು ಸೀಸನ್ ಕಂಡಿರುವ ಈ ರಿಯಾಲಿಟಿ ಷೋ ಕನ್ನಡಕ್ಕೆ ಬಂದಿದೆ . ಅಲ್ಲಿ ಸಾಧಕರದ್ದೆ ಕಾರುಬಾರು. ಅವರ ಜಗಳ ಗಲಾಟೆ ಅಳು, ಪ್ರೇಮ ಆಕ್ರೋಶ ನೋಡುವ ಸೌಭಾಗ್ಯ ಕನ್ನಡ ವೀಕ್ಷಕರಿಗೆ. ಮುಖ್ಯವಾಗಿ ಇದಕ್ಕೆ ಸುದೀಪ್  ಪ್ರೆಸೆ೦ಟರ್  ಅದೇ ಮುಖ್ಯ ಆಕರ್ಷಣೆ . ಕನ್ನಡ ಚಿತ್ರ ದರ್ಶಕರಲ್ಲಿ ಪುನೀತ್ , ಸುದೀಪ್,ದರ್ಶನ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಈ ಕಾರ್ಯಕ್ರಮ ಅಭಿಮಾನಿಗಳಿಂದ ಗೆಲ್ಲುತ್ತೆ ಅನ್ನುವುದಕ್ಕಿಂತ  ಸುದೀಪು ಯಾವ್ ರೀತಿ ತಮ್ಮ ಶೈಲಿಯಿಂದ ಗೆಲ್ಲಿಸುತ್ತಾರೆ ಅನ್ನುವುದು ಮುಖ್ಯ. ಯಾಕೆಂದ್ರೆ ಒಬ್ಬ ನಿರೂಪಕ ಕೆಲವು ಮಂದಿಯನ್ನು ಮಾತ್ರ ಗಮನದಲ್ಲಿ ಇಟ್ಟುಕೊಳ್ಳ ಬಾರದು. ಕಿಚ್ಚ  ನಾವೆಲ್ಲಾ ವೀಕ್ಷಿಸ್ತೀವಿ ಜ್ಞಾಪಕ ಇರ್ಲಿ 

1 comment:

Badarinath Palavalli said...

ಈಗ ವೀಕ್ಷಕರಿಗೆ ಸುಗ್ಗಿ ಕಾಲ ಕನ್ನಡದ ಎಲ್ಲಾ ವಾಹಿನಿಗಳು ಒಳ್ಳೊಳ್ಳೆಯ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಿವೆ. ಈ ನಿಟ್ಟಿನಲ್ಲಿ ನಿಮ್ಮ ಈ ಬರಹ ಅವರಿಗೆ ಗೈಡ್ ಆಗಲಿ.

ಮುಂದಿದೆ ಚುನಾವಣಾ ಪರ್ವ ನೋಡಬೇಕು.