ಆಗಲೇ ಮತ್ತೊಂದು ಹುಟ್ಟು ಹಬ್ಬ ನನ್ನ ಬ್ಲಾಗ್ ಗೆ... ಖುಷಿಯನ್ನು ಹೆಚ್ಚಿಸಿ ಮಾಡ ಬೇಕಂತೆ... ಹಾಗಂತ ಹೇಳ್ತಾರೆ ಹಿರಿಯರು.. ಸೆಪ್ಟೆಂಬರ್ 10 ಕ್ಕೆ ನನ್ನ ಬ್ಲಾಗ್ ಹುಟ್ಟು ಹಬ್ಬ ಆದರೆ ಬಿಡುವು ಇಲ್ಲದ ಬದುಕಲ್ಲಿ ಯಾವುದರತ್ತಲೂ ಗಮನ ನೀಡಲಾಗದ ಅಸಹಾಯಕತೆ.. ಆದರೂ ಬರ್ತಡೇಯನ್ನು ಮರೆಯೋಕೆ ಆಗಲ್ಲ. ಮುಖ್ಯವಾಗಿ ಇಷ್ಟು ವರ್ಷಗಳಿಂದ ಏನೇ ವಿಷಯ ಇರಲಿ ಹರಸಿ ಹಾರೈಸಿ.. ಓದಿ.. ಸಿಟ್ಟಿಗೆದ್ದು.. ಇವಳೇನು ಕೇವಲ ಅವರಿಗೆ ಮಾತ್ರ ವಿಶ್ ಮಾಡ್ತಾಳೆ ಎನ್ನುತ್ತಾ ಮುನಿದು.. ಚಂದ ಇರೋದರ ಬಗ್ಗೆ ಮೆಚ್ಚುಗೆ.. ಹೀಗೆ ನಿಮ್ಮ ಪ್ರತಿಯೊಂದು ಅಭಿಪ್ರಾಯ ನನ್ನ ಜೀವನದಲ್ಲಿ ಪ್ರಾಮುಖ್ಯತೆ ಗಳಿಸಿದೆ.. ಆಕಸ್ಮಿಕವಾಗಿ ಮಾಧ್ಯಮಲೋಕಕ್ಕೆ ಬಂದೆ. ಅಪ್ಪ ಪತ್ರಕರ್ತರಾಗಿದ್ದು ಕಾರ್ಯ ನಿರತವಾಗಿರುವಾಗಲೇ ಮರಣಿಸಿದ್ದರು.. ಅನೇಕರಿಗೆ ಮಾರ್ಗದರ್ಶಿಯಾಗಿದ್ದ ಅಪ್ಪನ ಈ ಉದ್ಯೋಗದತ್ತ ಗಮನ ನೀಡದೆ ಓದಿದ್ದು ಬೇರೆಯದ್ದು.. ಆದರು ಋಣಾನುಬಂಧ ಇಲ್ಲಿಗೆ ಬರುವಂತಾಯಿತು.
ಮಾಧ್ಯಮ ಸ್ಪರ್ಧೆಯಲ್ಲಿ ಎಷ್ಟೇ ಗೆಲುವು ಸಾಧಿಸಿದರು ನನ್ನ ಸಾಧನೆ ದೀಪದ ಕೆಳಗಿನ ಕತ್ತಲೆ ಆಗಿದ್ದು ಮಾತ್ರ ಬೇಸರದ ಸಂಗತಿಯಾಗಿತ್ತು. ಆ ಅಂಶಗಳನ್ನು ಹೊರ ಹಾಕಲು ಸಾಧ್ಯವಾಗದೆ ಇದ್ದಾಗ ನನ್ನನ್ನು ನಾನು ಮತ್ತೆ ಬೆಳೆಸಿಕೊಳ್ಳುವ ಉದ್ದೇಶದಿಂದ ಬ್ಲಾಗ್ ಲೋಕಕ್ಕೆ ಬಂದೆ.. ಭಾವುಕ ಮನದವಳಿಗೆ ಭಿನ್ನ ಹೆಸರು ಇಡುವುದು ಕಷ್ಟವಲ್ಲ ಆದರೆ ಅಪ್ಪನ ನೆನಪು ಸದಾ ನನ್ನ ಮನದಲ್ಲಿ ಇರುವುದರಿಂದ ನನ್ನ ಬ್ಲಾಗ್ ಗೆ ಅವರ ಹೆಸರೇ ಕೊಟ್ಟೆ.. ಆಪ್ತ ಭಾವ ಇದೆ ನನಗೆ ಆ ಕಾರಣದಿಂದ ಎಷ್ಟೇ ಕಷ್ಟ ಆದರು ಬರೆದೆ ಬರೀತೀನಿ...ಮುಖ್ಯವಾಗಿ ದೇವರಲ್ಲಿ ವಾಸುದೇವ ದೇವರಲ್ಲಿ ಭಿನ್ನತೆ ಪಡೆದಾತ.. ವಾಸುದೇವ ವಿಶ್ವದಾತ.. ಈ ಅಂಶವು ಸಹಿತ ನನ್ನ ಮನದಲ್ಲಿ ಇದ್ದ ಕಾರಣ ಹೆಚ್ಚು ಸೂಕ್ತ ಅನ್ನಿಸಿತ್ತು ಆ ಹೆಸರು.
ವಾಹಿನಿಗಳ ಬಗ್ಗೆ ಬರೆಯೋಕೆ ಆರಂಭ ಮಾಡಿದಾಗ ನಕ್ಕವರೇ ಹೆಚ್ಚು.. ಯಾಕೇಂದ್ರೆ ಇದು ನ್ಯೂಸ್ ಪೇಪರ್ ಥರ.. ಬರೆದದ್ದು ಬುಕ್ ಮಾಡೋಕೆ ಆಗೋದೇ ಇಲ್ಲ.. ಆದರೆ ಇದು ಭಿನ್ನ ಬ್ಲಾಗ್.. ಕಥೆ.. ಕವನ.. ಲೇಖನ ..ಲಹರಿ ಯಾವುದು ನನಗೆ ಕಷ್ಟವಲ್ಲ.. ಅವುಗಳನ್ನು ಹಾಯಾಗಿ ಬರೆಯುವ ಶಕ್ತಿ ಹಾಗು ಮನಸ್ಥಿತಿ ಇದೆ .. ದಿನಕ್ಕೆ ಸರಿ ಸುಮಾರು ಹದಿನಾರು ಗಂಟೆಗಳ ಕಾಲ ಅಕ್ಷರ ಲೋಕದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ನನ್ನನ್ನು ನಾನು ತೊಡಗಿಸಿಕೊಂಡಿದ್ದೇನೆ.. ಏನು ಮಾಡಲು ಮನಸ್ಸಿಲ್ಲ ಅಂದ್ರೆ ನನ್ನ ಗಿಡಗಳು.. ನನ್ನ ಮನೆಯ ಕ್ಲೀನಿಂಗ್ ಕೆಲಸ ಒಟ್ಟಾರೆ ಮನಸ್ಸು ಸದಾ ಸಂತಸವಾಗಿರುವ ಎಲ್ಲ ಅಂಶಗಳಿಗೆ ಆದ್ಯತೆ ನೀಡ್ತೇನೆ...
ನನ್ನ ಅಕ್ಷರಗಳನ್ನು ಅತ್ಯಂತ ಪ್ರೀತಿಯಿಂದ ಓದಿ ಮೆಚ್ಚುಗೆ ವ್ಯಕ್ತ ಪಡಿಸಿದ ಎಲ್ಲರಿಗೂ ಧನ್ಯವಾದಗಳು... ನಿಮ್ಮ ಈ ಪ್ರೀತಿಗೆ ಸದಾ ಋಣಿ ನಾನು.. ನಿಮ್ಮೆಲ್ಲರ ವಿಶ್ವಾಸ ಪ್ರೀತಿಗೆ ತಲೆ ಬಾಗಿ ನನ್ನ ಈ ವರ್ಷದ ಬ್ಲಾಗ್ ಬರಹಗಳನ್ನು, ಅಮ್ಮ , ಅಣ್ಣಂದಿರು ಹಾಗು ನಿಮಗೆ ಅರ್ಪಣೆ ಮಾಡ್ತಾ ಇದ್ದೀನಿ ... ವಿಶ್ವಾಸ ಹೀಗೆ ಇರಲಿ...
******** ^^^^^^^^*******^^^^^^^^^ ********* ^^^^^^^^
@@ ಆರಂಭದಲ್ಲಿ ಕಂಡಾಗ ಅವರ ಹೆಸರ ಜೊತೆ ಇಂನ್ಷಿಯಲ್ ಇತ್ತು ಆದರೇ ಈಗ ಇಲ್ಲ ಆದರೆ ಹೆಸರ ಜೊತೆ ಉಪ್ಪುಂದ ಅಂತ ಸೇರ್ಪಡೆ ಆಗಿದೆ.. ಅವರು ಸುವರ್ಣವಾಹಿನಿಯ ವರದಿಗಾರ ನಿರೂಪಕ ಮತ್ತು ನನ್ನ ಫೇಸ್ ಬುಕ್ ಮಿತ್ರ ವೀರೇಂದ್ರ. ಹೆಚ್ಚು ನಾನು ಅವರನ್ನು ಟೀವಿಯಲ್ಲಿ ವರದಿ ಮಾಡುವುದನ್ನು ಕಂಡಿದ್ದೆ.. ಆದರೆ ಕಳೆದ ವಾರ ಅನ್ನಿಸುತ್ತೆ ಸ್ವಲ್ಪ ಜಾಸ್ತಿನೇ ನಿರೂಪಣೆ ಮಾಡ್ತಾ ಇದ್ರೂ.. ಇನ್ನು ಸ್ವಲ್ಪ ಕುದುರ ಬೇಕು ಎಂದು ಅನ್ನಿಸಿದರು ಸಹ ಓಕೆ ಬೇಸರ ಆಗಲ್ಲ.. ಕೇಪ್ ಇಟ್ ಅಪ್ .
ಪಬ್ಲಿಕ್ ವಾಹಿನಿ ಆಂಕರ್ ಗಳು ಸೆಲೆಬ್ರಿಟಿ ಗಳ ಯಾವ ರೀತಿ ಮಾತನಾಡಬೇಕು.. ವಿಷಯವನ್ನು ಹೇಗೆ ಗ್ರಹಿಸಿ ಅದನ್ನು ಜನತೆಗೆ ಹೇಳ ಬೇಕು ಎನ್ನುವ ಬಗ್ಗೆ ಆದ್ಯತೆ ನೀಡದೆ ಮಾತಾಡುವ ಶೈಲಿ ನನಗೆ ಪರಮಾಶ್ಚರ್ಯ ಹುಟ್ಟಿಸಿದೆ.
ರಂಗಣ್ಣ ಅನುಭವಿ ಪತ್ರಕರ್ತರು... ನಾನು ಕೇಳಿದಂಗೆ ಅವರ ಜೊತೆಗಾರ ಅಂದ್ರೆ ಸಮಾನ ಮನಸ್ಕ.. ವಯಸ್ಕರು ಹೇಳುವಂತೆ ಬುದ್ಧಿವಂತರು.. ನಿಜ ತುಸು ಅತಿ ಅನ್ನಿಸುತ್ತೆ ಶೈಲಿ.. ಆದರೆ ಅದು ಅವರ ಶೈಲಿ..ಅವರು ಅತಿಥಿಗಳ ಜೊತೆ ಮಾತಾಡುವುದಕ್ಕೂ ಅವರ ಹಿನ್ನೆಲೆ.. ಅನುಭವ ಸಹಾಯಕಾರಿ. ಆದರೆ ಅವರನ್ನು ಫಾಲೋ ಮಾಡುವ ಅವರ ಸಹೋದ್ಯೋಗಿಗಳು..ಅವರಂತೆ ಆಗೋಕೆ ಹೋದ್ರೆ ಏನ್ ಚಂದ !! ರಂಗಣ್ಣ ಮತ್ತು ಅವರ ಸಹೋದ್ಯೋಗಿಗಳ ಅನುಭವದಲ್ಲಿ ವ್ಯತ್ಯಾಸ ಇದೆ.. ಅದನ್ನು ಅರಿತರೆ ಒಳ್ಳೆಯದು.ಆದರೆ ಬೆಳಕು ಕ್ಯಾಮರ ಮುಂದೆ ... !! ಏನೇ ಇರಲಿ ಫ್ರೆಂಡ್ಸ್ ನಿಮ್ಮ ಶೈಲಿ ಬೆಳೆಸಿಕೊಳ್ಳಿ ... ಜಾಸ್ತಿ ಇಷ್ಟ ಆಗ್ತಿರಿ ವೀಕ್ಷಕರಿಗೆ .
ಟೀವಿ ನೈನ್ ನಲ್ಲಿ ನಿರೂಪಕ ವರದಿಗಾರ ಹರಿಪ್ರಸಾದ್ ಶೈಲಿ ತುಂಬಾ ತುಂಬಾ ಬೆಳವಣಿಗೆ ಆಗಿದೆ.. ಟೀವಿ ನೈನ್ ಒಂದು ಕಲಿಕಾ ಕೇಂದ್ರ.. ಅಲ್ಲಿ ಯಾರೇ ಹೊಸಬರು ಬಂದ್ರು ಮಾತಿನ ಶೈಲಿ ಕಲಿತುಕೊಳ್ಳುವ ಅವಕಾಶ ಇರುತ್ತೆ. ಯಾಕೆ ಈ ಮಾತು ಅಂದ್ರೆ ವರದಿಗಾರ ಕೇವಲ ಅಲ್ಲೇ ಉಳಿಯಲ್ಲ ತಾನು ಭಿನ್ನ ರೀತಿಯಲ್ಲಿ ಬೆಳೆಸಿಕೊಳ್ಳಲು ವಾಹಿನಿ ಸಹಾಯ ಮಾಡಿದೆ.. ಗುಡ್
@@
ವಾವ್ ತೆಲುಗು ವಾಹಿನಿಯಲ್ಲಿ ಪ್ರಸಾರ ಆಗುವ ಸೆಲೆಬ್ರಿಟಿ ರಿಯಾಲಿಟಿ ಷೋ. ಇದು ಸಹ ಹೆಚ್ಚು ಕಾಲದಿಂದ ಪ್ರಸಾರ ಆಗ್ತಾ ಇದೆ. ನಟ ಸಾಯಿಕುಮಾರ್ ಇದರ ಮುಖ್ಯ ಆಕರ್ಷಣೆ. ಈ ಟೀವಿ ತೆಲುಗು ಅಲ್ಲದೆ ಕನ್ನಡ ಈ ಟೀವಿಯಲ್ಲು ಸಹಿತ ಪ್ರಸಾರ ಆಗಿತ್ತು. ಆದರೆ ಈಟೀವಿ ತೆಲುಗು ವಾಹಿನಿಯಲ್ಲಿ ಈಗಲೂ ಪ್ರಸಾರ ಆಗುತ್ತದೆ. ಅದರ ಮುಖ್ಯ ಆಕರ್ಷಣೆಗಳಲ್ಲಿ ಒಂದು ಆ ಕಾರ್ಯಕ್ರಮದ ಸ್ಪರ್ಧಿಗಳು ಹಾಗೂ ಲವಲವಿಕೆಯ ಮಾತುಗಳು.. ನನ್ನ ಅಮ್ಮ ಹೆಚ್ಚು ಇಷ್ಟ ಪಟ್ಟು ವೀಕ್ಷಿಸೋ ಕಾರ್ಯಕ್ರಮದಲ್ಲಿ ವಾವ್ ಸಹ ಒಂದು.. ನಿಜ ಚಂದ ಇರುತ್ತೆ. ಸಾಯಿ ಸ್ಟೈಲು ಮತ್ತು ಮಾತು ವಾವ್..! ಕಳೆದ ಬಾರಿ ಸ್ಪರ್ಧಿಯೋಬ್ಬಾಕೆ ತುಂಬಾ ಮುದ್ದಾಗಿದ್ಲು.. ಆಕೆಯ ಮದುವೆ ಟೀವಿಯಲ್ಲಿ ಕೆಲಸ ಮಾಡ್ತಾ ಇರೋದ್ರಿಂದ ಆಗಿಲ್ಲ.. ಜನರ ದೃಷ್ಟಿಕೋನದ ಬಗ್ಗೆ ನೊಂದು ಹೇಳಿದಳು ಆಕೆ.. ಅವಳನ್ನು ಕಂಡಾಗ ರತ್ನದಂತಹ ಹುಡುಗಿ ಊರಿಗೆಲ್ಲ.. ಗಂಡು ಸಿಗುವುದೇನು ಕಷ್ಟವಲ್ಲ ಎಂದು ಅನ್ನಿಸಿತು ನಿಜ ಪಿಲ್ಲ!
ಸೆಪ್ಟೆಂಬರ್ 2 ರಂದು ಕಿಚ್ಚ ಸುದೀಪ್ ಅವರ ಹುಟ್ಟು ಹಬ್ಬ.. ಆದಕ್ಕೆ ಸಂಬಂಧಪಟ್ಟಂತೆ ಹೆಸರೇ ಕೇಳಿರದ ಹೊಸ ಚಿತ್ರಗಳ ತಂಡ ಸುದೀಪ್ ಗೆ ವಿಶ್ ಮಾಡಿದ್ರು ಪೋಸ್ಟರ್ ಗಳ ಮೂಲಕ... ಅದು ಓಕೆ.. ಆದರೆ ಅನೇಕ ತಿಂಗಳುಗಳಿಂದ ಕೆಲಸ ಮಾಡ್ತಾ ಇರೋ ಚಿತ್ರತಂಡ ರಿಂಗ್ ರೋಡ್ ಶುಭ.. ಆ ಚಿತ್ರದ ಒಂದು ಪೋಸ್ಟರ್ ಕಂಡು ಸಕತ್ ನಗು ಬಂತು.. ಆಕಡೆ ಒಂದಷ್ಟು ಹುಡುಗೀರು .. ಕೈಲಿ ಹೂವು .. ಈ ಕಡೆ ಒಂದಷ್ಟು ಹುಡುಗೀರು ಕೈಲಿ ಹೂವು ಮಧ್ಯದಲ್ಲಿ ಕಿಚ್ಚ ಅವರ ಪಟ.. ಅದನ್ನು ಕಂಡಾಗ ನನಗೆ ನಾವು ಶಾಲೆಯಲ್ಲಿ ಮಾಡ್ತಾ ಇದ್ದ ಗ್ರೂಪ್ ಡ್ಯಾನ್ಸ್ ಜ್ಞಾಪಕಕ್ಕೆ ಬಂತು. ಮಧ್ಯ ಕೃಷ್ಣ ಪಾತ್ರಧಾರಿ.. ಆಕಡೆ ಈ ಕಡೆ ಇರೋ ಹುಡುಗೀರು ಒಂದೇ ಸ್ಟೆಪ್ ಹಾಕ್ತಾ ಹಾಕ್ತಾ ಇಡಿ ಡ್ಯಾನ್ಸ್ ಮುಗಿಸೋರು.
ಜೊತೆಗೆ ಮತ್ತೊಂದು ಹಾಡು ನೆನಪಿಗೆ ಬಂತು...ಕಳ್ಳ ಕಳ್ಳ ಕಳ್ಳ ಏನ್ ಮಾಡ್ತಾ ಇದ್ದೀಯ... ?
1 comment:
ತುಂಬಾ ಖುಷಿಯಾಯಿತು. ತಮ್ಮ ಬ್ಲಾಗ್ ಹತ್ತು ವರ್ಷ ಪೂರೈಸಿದ್ದು ಮೆಚ್ಚತಕ್ಕ ವಿಚಾರ.
ತಮ್ಮಿಂದ ಇನ್ನೂ ಹೆಚ್ಚು ಬರಹಗಳು ಬರಲಿ.
ಮಾದ್ಯಮದ ಹೂರಣದ ಪ್ರಪ್ರಥಮ ಬ್ಲಾಗ್ ತಮ್ಮದು ಎನ್ನುವುದು ಹೆಗ್ಗಳಿಕೆ. ನಾನು ತಮ್ಮ ಅನುಯಾಯಿ.
ಸುವರ್ಣ ಸುದ್ದಿ ವಾಹಿನಿಯ ಹಿರಿಯ ರಾಜಕೀಯ ವರದಿಗಾರರು ಶ್ರೀಯುತ. ವೀರೇಂದ್ರ ಉಪ್ಪುಂದ. ಅವರ ನಿರೂಪಣೆಯೂ ವಿಭಿನ್ನ ಮತ್ತು ವಸ್ತು ನಿಷ್ಠ.
ವಾವ್ ನನ್ನ ನೆಚ್ಚಿನ ಕಾರ್ಯಕ್ರಮ. ಇದು ಈ ಟೀವಿ ಕನ್ನಡದಲ್ಲೂ ಬಂದಿತ್ತು. ಸಾಯಿ ಕುಮಾರ್ the ultimate.
ಸುದೀಪ್ ಅವರಿಗೆ ಜನುಮದಿನದ ಶುಭಾಶಯಗಳು. poster design ಸಖತ್ತಾಗಿತ್ತು!
Post a Comment