ನಾರದ..

Displaying IMG-20151126-WA0020.jpg
PC: Yagnapala  V. Ghatt


ಬಿಗ್ ಬಾಸ್ ಕಾರ್ಯಕ್ರಮ ವೀಕ್ಷಿಸುತ್ತಿದ್ದರೆ ಅನೇಕ ಅಂಶಗಳು ಗೋಚರವಾಗುತ್ತಾ ಸಾಗುತ್ತದೆ. ಮನುಷ್ಯನ ಸಂಬಂಧಗಳು ಎಷ್ಟು ನಿಗೂಢ ಮತ್ತು, ಅದೆಷ್ಟು  ಜಾಳು ಜಾಳು ಅಂತ ಸಹಿತ ಅನ್ನಿಸುತ್ತದೆ. ಆದರೂ ಈ ನಾಗರಿಕ ಸಮಾಜದಲ್ಲಿ ಒಂದು ಬಗೆಯ ಮುಖವಾಡ  ಧರಿಸಿ ಬದುಕುವ ಪ್ರಯತ್ನ ಮಾಡುತ್ತಲೇ ಸಾಗುತ್ತಾರೆ  ಮಂದಿ .


Displaying IMG-20151126-WA0020.jpg
ನನಗೆ ಎಫ್ ಬಿ  ಸೇರಿದಂತೆ ಸಾಮಾಜಿಕ ಜಾಲತಾಣಗಳು, ನನ್ನ ಬ್ಲಾಗ್  ನಿಂದ ಅನೇಕ ಫ್ರೆಂಡ್ಸ್ ಆಗಿದ್ದಾರೆ. ಒಂದಷ್ಟು ಜನರು ಬೈ  ಅಂತ ದೂರ ಹೋಗಿದ್ದಾರೆ, ಒಂದಷ್ಟು ಮಂದಿ ಆಪ್ತರಾಗಿ ಹಾಗೆ ಉಳಿ ದಿದ್ದಾರೆ. ಕೆಲವರು ನನ್ನ ಜೊತೆ  ಮಾತುಕತೆಯನ್ನು ಆಡಿ  ತಮ್ಮ ವಿಶ್ವಾಸ  ತೋರಿದರೆ, ಒಂದಷ್ಟು ಜನ ಮನದಲ್ಲಿ ಗೌರವ ಉಳಿಸಿಕೊಂಡು ತಮ್ಮ ರಂಗದಲ್ಲಿ ಬೆಳೆಯುವ ವಿಷಯದಲ್ಲಿ ಮಗ್ನರಾಗಿದ್ದಾರೆ. ಗೌರವ ಉಳಿಸಿಕೊಂಡವರ ಬಗ್ಗೆ ನನಗೆ ಸ್ಪಷ್ಟವಾದ ನಂಬಿಕೆ ಇದೆ . ಯಾಕೆಂದ್ರೆ ಅವರ ಸೋಲಿನ ಸಮಯದಿಂದ  ಪ್ರತಿ ಗೆಲುವಿನ ಹೆಜ್ಜೆ ಕಂಡಿದ್ದೇನೆ . ಅವರಲ್ಲಿ ಬಿಗ್ ಬಾಸ್ ನಲ್ಲಿ ವಾಯ್ಸ್ ಓ ವರ್ ಮಾಡುತ್ತಿರುವ  ಪ್ರದೀಪ್  ಬಡಕ್ಕಿಲ , ಶ್ರೀ ಮುರಳಿ ಸಿನಿಮಾ ರಥಾವರದ  ಎಡಿಟರ್ ಶಿವಶಂಕರ್  ಗೌಡ.
ಆರಂಭಿಕ ಹಂತದಲ್ಲಿ ಪ್ರದೀಪ್ ಧ್ವನಿ ಮೂಲಕ ಜನರ ಮನಕ್ಕೆ ತಲುಪಿದ್ದರೂ ಸಹಿತ ಅದು ಅವರೇ ಎಂದು ಜನಕ್ಕೆ ಗೊತ್ತಿರಲಿಲ್ಲ. ಆದರೆ ಸಾಧನೆ - ಪ್ರಯತ್ನ, ಅದೃಷ್ಟ ಎಲ್ಲವೂ ಈಗ ಈ ಟೀವಿ ಕನ್ನಡದ  ಎಲ್ಲ ಕಾರ್ಯಕ್ರಮಗಳ ಪ್ರೊಮೊ ಗಳಿಗೆ, ಬಿಗ್ ಬಾಸ್ ಮನೆಯಲ್ಲಿ ನಡೆಯುವ ಎಲ್ಲ ಚಟುವಟಿಕೆಗಳಿಗೆ ಧ್ವನಿ  ಕೊಡುವ ಒಂದು ಅವಕಾಶ ದೊರೆತು.. ಅವರು ಎದುರು ಸಿಕ್ಕಾಗ ಜನಕ್ಕೆ ತಿಳಿದೇ ಇದ್ರೂ ಅವರ ಧ್ವನಿ ಕೇಳಿದಾಗ ಪ್ರದೀಪ್ ಅನ್ನುವಷ್ಟು ಬೆಳೆ ದಿದ್ದಾರೆ. (ಸಿನಿಮಾ - ಸೀರಿಯಲ್ಲು ಎಲ್ಲಾ ಕಡೆ ಅಭಿನಯ ಚಾತುರ್ಯ ತೋರಿಸಿದ್ದಾರೆ ಪ್ರದೀಪ್ )
ಶಿವು ಅಂತಾನೆ ಕರೆಯೋದು ಇವನನ್ನು .  ರಥಾವರ ಆತನ ಬದುಕಲ್ಲಿ ತಿರುವು ನೀಡಿದೆ . ಚಿತ್ರರಂಗದ ಪ್ರಸಿದ್ಧ  ಸಂಕಲಕಾರರಲ್ಲಿ ಒಬ್ಬರಾದ ಶ್ರೀಕಾಂತ್ ಅವರ ತಮ್ಮ ನಮ್ಮ ಶಿವು. ಒಂದರ್ಥದಲ್ಲಿ ಆತ  ನನಗೆ  ಪ್ರೀತಿಯ ತಮ್ಮ. ನಮ್ಮದು ಜಾತಿ, ಧರ್ಮ, ನೆಂಟಸ್ತಿಕೆಯ ಬಾಂಧವ್ಯವಲ್ಲ, ಆದರೆ ಇಬ್ಬರದ್ದು  ಆಪ್ತತೆ, ಮನದ ಬಾಂಧವ್ಯ . ತುಂಬಾ ವರ್ಷಗಳಿಂದ ನಮ್ಮ ಸ್ನೇಹ ಇದೆ. ಈ ತಮ್ಮ   ಶಿವು  ಈಗ ರಥಾವರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದಾನೆ . ಅದು ಇದೇ  ತಿಂಗಳ 4 ನೇ  ತಾರೀಖು ಜನರ ಮುಂದೆ ಬರ್ತಾ  ಇದೆ. ಅವನ ಕೆಲಸಕ್ಕೆ ಇಷ್ಟಪಟ್ಟ ಕ್ರಿಯೇಟಿವ್ ನಿರ್ದೇಶಕರು ಕೆಲಸ ಮಾಡಲು ಅವಕಾಶ ನೀಡಿದ್ದಾರೆ ತಮ್ಮ ಮುಂದಿನ ಚಿತ್ರಗಳಲ್ಲಿ ಅದಕ್ಕಿಂತ ಸಂತೋಷದ ಸಂಗತಿ ಏನಿದೆ ? ಒಳ್ಳೆದಾಗಲಿ .. ಹೆಚ್ಚು ಹೆಚ್ಚು ಬೆಳೆಯಲಿ  ನಮ್ ಶಿವು.

Image result for doubt pics
ಬಿಗ್ ಬಿಗ್ ಬಿಗ್ ಬಾಸ್ ಹೌದು ಸ್ವಾಮಿ ...ಹೀಗೆ ನಿಮಗೊಂದು ಸುಂದರವಾದ ಹೆಸರು ಪ್ರಶಸ್ತಿ ಸಿಗುತ್ತೆ ಅಂತ ನನಗೆ ಗೊತ್ತೇ ಇರಲಿಲ್ಲ ಕಿಚ್ಚ.. ನಮ್ ಆನಂದ್ ಹಾಕಿದ ಜನಿವಾರವ  ಹಾಡಿನ ಮೂಲಕ ನಿಮ್ಮನ್ನು ನಾರದನನ್ನಾಗಿ ಮಾಡಿಬಿಟ್ಟರೆ ;-)
 ನಮ್ಮನ್ನು  ಕಾಡುವ ಕಟ್ಟಕಡೆಯ ಪ್ರಶ್ನೆ ಹೀಗೂ ಉಂಟೆ  ಉಂಟೇ  ...
ಸ್ನೇಹ ಪ್ರೀತಿ, ಬಾಂಧವ್ಯ, ನಂಬಿಕೆ ಎಲ್ಲದರ  ಮಧ್ಯೆ  ಒಂದು ಅನುಮಾನದ ಸಣ್ಣ  ಗೆರೆ ಇರುತ್ತೆ.  . ಅದು ಅಗೋಚರವಾಗಿರುತ್ತದೆ. ಆ ಗೆರೆ ದಾಟಿದರೆ ನೋವು, ಅಪಮಾನ, ಎಲ್ಲವು ಎದುರಾಗುತ್ತದೆ. ಪೂಜಾ ವಿಷಯದಲ್ಲಿ ಹೀಗಾಗಿದ್ದು  ನಮಗೆ ನಿರೀಕ್ಷಿತ ಆಗಿದ್ದರು ಸಹ ಪಾಪ ಹೀಗಾಗ ಬಾರದಿತ್ತು ಅಂತ ಅನ್ನಿಸಿದ್ದು ಸತ್ಯ. ಅಯ್ಯಪ್ಪ ಎಂತಹ ಆಟಗಾರ!. ಲಾಲಿಪಪ್ ರೌಂಡ್ ನಲ್ಲಿ ಮುತ್ತು ಕೊಟ್ಟವರ ಚಿತ್ರಗಳನ್ನು ಮುಂದೆ ಇಟ್ಟರೆ ಮತ್ತೆ ಆಕೆ ಏನ್ ಮಾಡ್ತಾರೆ ಅನ್ನುವುದು ವೀಕ್ಷಕರಿಗೆ ಗೊತ್ತೇ ಇದೆ..
ಆದರೆ  ಬ್ರದರ್ ಮತ್ತು ಸಿಸ್ಟರ್ ಬಗ್ಗೆ ನಾವು ಮಾತ್ರವಲ್ಲ ಅನೇಕ ಸ್ನೇಹಿತರು ತಮ್ಮ ಅಭಿಪ್ರಾಯ ಸಹ ಪ್ರಶ್ನಾರ್ಥಕವಾಗಿದೆ ಸುದೀಪ್ ..
ನಾನು ಹತ್ತು ವರ್ಷದಿಂದ ಮಾಧ್ಯಮದಲ್ಲಿ ಇದ್ದೇನೆ ನನಗೆ ಗೊತ್ತು ಬಾಯ್ ಬಿಡಿಸೋದು.. ಆದರೆ ನಾನು ಹಾಗೆ ಮಾಡಲಿಲ್ಲ  ಎನ್ನುವ ಮಾತು ತಮ್ಮ ಜೊತೆ ಮಾತಾಡಿದ  ಕಾಲರ್ ಬಗ್ಗೆ ಮಾತಾಡುತ್ತಾ  ತಮ್ಮ ಜೊತೆಗಾರರ ಜೊತೆ ಹೇಳಿದ್ರು ಬ್ರದರ್..! ನಿಜ ಹೇಳಿ ಜನರ ಮುಂದೆ ಮಾಧ್ಯಮದ ಶಕ್ತಿ ಎಷ್ಟಿದೆ ? ನಮಗೆ ಒಂದು ಸಂಸ್ಥೆಯಿಂದ ಮಾತ್ರ  ಬೆಲೆ ಸಿಕ್ಕೋದು ಅಲ್ವೇ !!

ಆ ವಿಷ್ಯದ ಚರ್ಚೆ ಯಾಕೆ.. ಸುದೀಪ್   ? ನನ್ನ ಪ್ರಿಯ ಮಿತ್ರ -ಓದುಗ  ರಂಜಿತ್ ಅಡಿಗ ಅಕಸ್ಮಾತ್ .. ಹೀಗೆ ಆದ್ರೆ ಎನ್ನುವುದನ್ನು ಬ್ರದರ್ ಬಗ್ಗೆ  ಬರೆದಿದ್ದಾರೆ . ಅದನ್ನು  ರಂಜಿತ್ ಮಾಣಿ  ಅನುಮತಿ ಮೇರೆಗೆ ಇಲ್ಲಿ ಅಂಟಿಸಿದ್ದೇನೆ ...
 ರೆಹಮಾನ್ ಬಿಗ್ ಬಾಸ್ ನಿಂದ ಹೊರಬಂದಾಗ.
ಸುದೀಪ್: ನಿಮ್ಮ ಪ್ರಕಾರ ಬಿಗ್ ಬಾಸ್ ಮನೆ ಒಳಗೆ ಇರೋರಲ್ಲಿ ಹೆಚ್ಚು ಪ್ರಾಮಾಣಿಕ ಯಾರು?
ರೆಹಮಾನ್: ನೇಹ. ಯಾಕಂದ್ರೆ ನಾನು ಅವಳ ಜೊತೆ ಹೆಚ್ಚು ಸಮಯ ಕಳೆದಿರೋದ್ರಿಂದ ಅವಳು ಪ್ರಾಮಾಣಿಕ ಅಂತ ಹೇಳೋಕೆ ಇಷ್ಟ ಪಡ್ತೀನಿ ಸುದೀಪ್ ಸರ್.

ಸುದೀಪ್: ನಿಮ್ಮ ಪ್ರಕಾರ ಬಿಗ್ ಬಾಸ್ ಮನೆ ಒಳಗೆ ಇರೋರಲ್ಲಿ ಕ್ಲೀನ್ ಇರೋರು ಯಾರು?
ರೆಹಮಾನ್: ನೇಹ. ಯಾಕಂದ್ರೆ ನಾನು ಅವಳ ಜೊತೆ ಹೆಚ್ಚು ಸಮಯ ಕಳೆದಿರೋದ್ರಿಂದ ಅಲ್ಲದೇ ನಾನು ನೋಡಿರೋ ಹಾಗೆ ಅವಳ ಮನಸ್ಸು ಮತ್ತೆ ಅವಳು ಇರೋದು ತುಂಬಾನೆ ಕ್ಲೀನ್ ಅಂತ ಹೇಳೋಕೆ ಇಷ್ಟ ಪಡ್ತೀನಿ ಸುದೀಪ್ ಸರ್.
ಸುದೀಪ್: ಬಿಗ್ ಬಾಸ್ ಮನೆ ಹೇಗನ್ನಿಸ್ತು?
ರೆಹಮಾನ್: ಬಿಗ್ ಬಾಸ್ ಬಗ್ಗೆ ಅಷ್ಟೋಂದ್ ಗೊತ್ತಿಲ್ಲ. ಆದ್ರೆ ನೇಹ ತುಂಬಾ ಒಳ್ಳೇ ಹುಡುಗಿ. ನಾನು ಅವಳ ಜೊತೆ ಹೆಚ್ಚು ಸಮಯ ಕಳೆದಿರೋದ್ರಿಂದ...
ಸುದೀಪ್: ಬಿಗ್ ಬಾಸ್ ಮನೆ ಒಳಗೆ ಊಟ ತಿಂಡಿ ಹೇಗಿತ್ತು?
ರೆಹಮಾನ್: ನೇಹ. ಯಾಕಂದ್ರೆ ನಾನು ಅವಳ ಜೊತೆ ಹೆಚ್ಚು ಸಮಯ ಕಳೆದಿರೋದ್ರಿಂದ ನಾವಿಬ್ರೂ ಊಟ ತಿಂಡಿ ನ ಶೇರ್ ಮಾಡ್ಕೋತಿದ್ವಿ.
ಸುದೀಪ್: ರೆಹಮಾನ್ ನನ್ನ ಪ್ರಶ್ನೆ ಅದಲ್ಲ.. ಹೋಗ್ಲಿ ಬಿಡಿ
.




ಕನ್ನಡ ನಾಡಲಿ

PC: Prakash Hegde

ಸಾಕಷ್ಟು ಸರ್ತಿ ಟೀವಿ ಕಾರ್ಯಕ್ರಮಗಳ ಬಗ್ಗೆ ಬರಿಯ ಬೇಕು ಎಂದುಕೊಂಡರೂ ಅದು ಸಾಧ್ಯವಾಗುವುದೇ ಇಲ್ಲ. ಕೆಲವು ಬಾರಿ ಟೀವಿ ಕಾರ್ಯಕ್ರಮಗಳು ಅಂದರೆ ವಿಶೇಷವಾದ ಕಾರ್ಯಕ್ರಮಗಳನ್ನು ವೀಕ್ಷಿಸಲು ಸಾಧ್ಯವಾಗಿರುವುದಿಲ್ಲ. ಅಂತಹ ಸಮಯದಲ್ಲಿ ಏನನ್ನು ಬರೆಯಲಾಗದೆ ಹಾಗೆ ಸುಮ್ಮನೆ ಇದ್ದು ಬಿಡುತ್ತೇನೆ. ಅದಷ್ಟೇ ಉತ್ತರ ಸರಿಯಾಗಿರುವುದು ಅಂತ ಹೇಳೋಕೆ ಇಷ್ಟ ಪಡ್ತೀನಿ :)
ಆದರೆ ಕೆಲವೊಂದು ಕಾರ್ಯಕ್ರಮಗಳು ನಾಲ್ಕೈದು   ದಿನಗಳ ಹಿಂದೆ ವೀಕ್ಷಿಸಿದ್ದರು ಸಹಿತ, ಅಥವಾ ಒಂದು ವಾರದ ಹಿಂದೆ ನೋಡಿದ್ದರು ಅದರ ಬಗ್ಗೆ ಹೇಳಲೇ ಬೇಕು ಅನ್ನುವ ತುಡಿತ ಇರುತ್ತದೆ.. ಅದರಲ್ಲಿ ಒಂದೆರಡು ಅಂದ್ರೆ ಟೀವಿ ನೈನ್ ವಾಹಿನಿಗೆ ಸಂಬಂಧ ಪಟ್ಟಿದ್ದು. ಕಳೆದ ಶನಿವಾರ  ಈ ವಾಹಿನಿಯಲ್ಲಿ ನಿರೂಪಕ ಬೆಂಗಳೂರು ರಸ್ತೆ ಗುಂಡಿಗಳ ಬಗ್ಗೆ ವಿಷಯ ತೆಗೆದುಕೊಂಡಿದ್ದರು. ಪ್ರಸ್ತುತ  ಭವಿಷ್ಯದ ಹಾಗೂ ಭೂತಕಾಲದಲ್ಲಿ ಜನಸಾಮಾನ್ಯರು ಎದುರಿಸುತ್ತಿರುವ ಕಷ್ಟಗಳಲ್ಲಿ ರಸ್ತೆಗುಂಡಿ, ತೊಂದರೆ, ಸಮಸ್ಯೆ ಇತ್ಯಾದಿ ಇತ್ಯಾದಿ.  ಆದರೆ ಪರಿಸ್ಥಿತಿಯಲ್ಲಿ ಬದಲಾವಣೆ ಊಹುಂ ಏನೂ ಆಗಿಲ್ಲ.
ಮುಖ್ಯವಾಗಿ ಇಂತಹ ವಿಷಯ ಚರ್ಚೆ ಮಾತ್ರ ಆಗದೆ ಸರ್ಕಾರದ ಗಮನಕ್ಕೆ ತರುವಂತೆ ಪ್ರಯತ್ನ ಮಾಡ ಬೇಕು.. ಇಲ್ಲದೆ ಹೋದರೆ ಅದು ಬರಿ ಚರ್ಚೆ ಆಗಿ ಉಳಿದು ಬಿಡುತ್ತದೆ..
Image result for blue flowers
@ ಇದೇ ವಾಹಿನಿಯಲ್ಲಿ ಭಾನುವಾರ ಮತ್ತೊಂದು ಕಾರ್ಯಕ್ರಮ ನೋಡಿದೆ.. ಊಲಾಲ ಅಂತ ಅದರ ಶೀರ್ಷಿಕೆ ಇತ್ತು. ತುಂಬಾ ಇಷ್ಟವಾದ ಕಾರ್ಯಕ್ರಮಗಳಲ್ಲಿ ಅದು ಒಂದು. ಕನ್ನಡ ರಾಜ್ಯೋತ್ಸವದ ಸಮಯದಲ್ಲಿ ಮಾತ್ರ ಕನ್ನಡ ಮಾತನಾಡುವ ಇಲ್ಲವೇ ಚಂದದ  ಕನ್ನಡದ ಹೆಣ್ಣು ಮಕ್ಕಳು ಕಂಡಾಗ  ಕನ್ನಡ ಸ್ವಲ್ಪ ಸ್ವಲ್ಪ ಬರುತ್ತೆ  ಎಂದು ಉಲಿಯುವವವರು ಬೇಕಾದಷ್ಟು ಮಂದಿ ಇದ್ದಾರೆ..
ಆ ವಿಷ್ಯ ಬಿಡಿ ಈ ಊಲಾಲ ಕಾರ್ಯಕ್ರಮದ ವಿಶೇಷ ಅಂದ್ರೆ ಕ್ಯಾಮರೋನ್  ಗೆ ಸೇರಿದ ವ್ಯಕ್ತಿ  ಕೇಮ್ ಬ್ರೇವ್ ಕನ್ನಡ ಹಾಡು ಹಾಡುತ್ತಾ ರಂಜಿಸುತ್ತಿದ್ದರು. ಅವರು ವೈ ಡಿಸ್ ಕೊಲವರಿ ಡಿ ಎಂದು ಹಾಡಿ ವೀಕ್ಷಕರ ಖುಷಿ ಹೆಚ್ಚಿಸುತ್ತಿದ್ದರು. ಅದಾದ ಬಳಿಕ ನೈಜೀರಿಯಾದ ವ್ಯಕ್ತಿ  -- ಹುಟ್ಟಿದರೆ ಕನ್ನಡ ನಾಡಲಿ ಹುಟ್ಟ ಬೇಕು ಹಾಡು ಹಾಡಿದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಓದಲು ಬಂದಿದ್ದ ಈ ವಿದೇಶಿ ವಿದ್ಯಾರ್ಥಿಗಳು ಹಾಡಿದ  ಅಪ್ಪಟ ಶುದ್ಧ ಕನ್ನಡದ ಹಾಡನ್ನು ಕೇಳಿ  ಆಹಾ ಖುಷಿ ಆಯ್ತು. ಯಾಕೆಂದ್ರೆ ಸಂಪೂರ್ಣವಾಗಿ  ಭಿನ್ನವಾದ ಭಾಷೆಯ ಹಾಡನ್ನು, ಅದರಲ್ಲೂ ಕಸ್ತೂರಿ ಕನ್ನಡದ ಹಾಡು  ಸ್ಪಷ್ಟವಾಗಿ ಹಾಡಿದರು ಅಂದ್ರೆ  ನನಗಂತೂ ಸಕತ್ ಇಷ್ಟ ಆಯ್ತು.. ನಮ್ ಕೃಷ್ಣೆ  ಗೌಡ್ರಂತೆ ಹೇಳಿಕೊಟ್ಟಿದ್ದು ಕನ್ನಡವಾ.. ನಿಮಗೊಂದು  ನಮುಸ್ಕಾರ ಸರ್ .. ಮತ್ತೆ ಪ್ರಸಾರ ಆದ್ರೆ ನೋಡಿ ಚೆನ್ನಾಗಿದೆ ಕಾರ್ಯಕ್ರಮ..

ಸತ್ಯಾವತಾರ...


PC: Prakash Hegde
ಇಂದು ಭಾರತದಲ್ಲಿ ಅಸಹಿಷ್ಣುತೆ ಹೆಚ್ಚಾಗಿದೆ ಅಂತ ದೊಡ್ದೊರೆಲ್ಲ ಹೇಳ್ತಾ ಇದ್ದಾರೆ. ಅದರ ಭಾಗವಾಗಿ ವಿಶ್ವದಲ್ಲಿ ಹೆಚ್ಚಾದ ಅಸಹಿಷ್ಣುತೆಯ ಫಲ ಮುಂಬೈ ದಾಳಿ ಆಗಿ ಇಂದಿಗೆ  26 / 11 ..ಏಳು ವರ್ಷ. ಈ ಅಸಹಿಷ್ಣುತೆ ಬಗ್ಗೆ ವಾಪಸಿ ಜನರು  ಏನು ಹೇಳ್ತಾರೋ ...  ಗೊತ್ತಿಲ್ಲ. ಆದರೆ ದೇಶಕ್ಕಾಗಿ , ದೇಶದ ಜನತೆಗಾಗಿ ಪ್ರಾಣ ತೆತ್ತ ಜೀವಾತ್ಮಗಳಿಗೆ ನಮನ...
ಈ ಟೀವಿ ನ್ಯೂಸ್ ನಲ್ಲಿ ಇದರ ಬಗ್ಗೆ ಸಂಜೆ ಪ್ರಸಾರವಾದ ಕಾರ್ಯಕ್ರಮ ಗಮನ ಸೆಳೆಯಿತು. ಅದನ್ನು ಸಿದ್ಧ ಮಾಡಿದ ರೀತಿ, ಅದನ್ನು ಜನರ ಮುಂದೆ ಇಟ್ಟ ಬಗೆ, ಅದಕ್ಕೆ ವಾಯ್ಸ್ ಓವರ್ ಮಾಡಿದವರು , ಆ ಸ್ಪಷ್ಟತೆ, ಕಾರ್ಯಕ್ರಮದಲ್ಲಿ ಪೂರಕ ದೃಶ್ಯ ಜೋಡಣೆ ಎಲ್ಲವೂ ಮನ ಸೆಳೆಯಿತು.
@ ಬಿಗ್ ಬಾಸ್ ಮನೆಯಿಂದ ಗಾಯಕ ರವಿ ಮೂರೂರ್ ಹೊರ ಬಂದ ಬಳಿಕ ಅತ್ಯಂತ ಆಹ್ಲಾದ ಉಂಟಾಗುವಂತೆ ಇತ್ತು.. ಅವರು ಹೊರ ಬಂದಿದ್ದಕ್ಕೆ ಅಲ್ಲ ಅವರನ್ನು ಸಂದರ್ಶಿಸಿದ ವಾಹಿನಿಗಳು ಆ ಕಲಾವಿದರ ಕೈಲಿ ಹಾಡು ಹಾಡಿಸಿ ಮಾನಸೋಲ್ಲಾಸ  ಹೆಚ್ಚಿಸಿದರು.
ಸುವರ್ಣ ನ್ಯೂಸ್ ನಿರೂಪಕ, ಪತ್ರಕರ್ತ  ರಾಘವೇಂದ್ರ ಅವರ ಸಂದರ್ಶನ ನೋಡುವ ಅವಕಾಶ ಸಿಕ್ತು. ಅತ್ಯುತ್ತಮ ರೀತಿಯಲ್ಲಿ ಸಂದರ್ಶಿಸುವ  ನಿರೂಪಕರಲ್ಲಿ ರಾಘವೇಂದ್ರ ಸಹ ಒಬ್ಬರು..ಚಂದದ ಕಾರ್ಯಕ್ರಮ.. ಚಂದದ ಹಾಡುಗಾರ ರವಿ ...
ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ ನಿತ್ಯವೂ ಅವತರಿಪ ಸತ್ಯಾವತಾರ... ಆಹಾ ಥ್ಯಾಂಕ್ಸ್ ರವಿ  ಅವರೇ ಖುಷಿ ಕೊಡ್ತು..
 ಹಾಡಿನಿಂದ   ಮಾತ್ರವಲ್ಲ ರವಿ   ಬಿಗ್ ಬಾಸ್ ಮನೆಯಲ್ಲಿ   ಮಾಡಿದ ಮಿಮಿಕ್ರಿ  , ಆ ಡ್ಯಾನ್ಸ್ ಸಕತ್ ಖುಷಿ ಕೊಡ್ತು.. ಸಿನಿಮಾದವರಿಗೆ ಈ ಪ್ರತಿಭೆ ಕಣ್ಣಿಗೆ ಬಿದ್ರೆ ಕನ್ನಡಕ್ಕೆ ಮತ್ತೋರ್ವ ಉತ್ತಮ ಕಲಾವಿದನ ಸೇರ್ಪಡೆ ಆಗುತ್ತದೆ ಚಿತ್ರರಂಗದಲ್ಲಿ..      Image result for red flowers images
@ಸ್ಟಾರ್ ಪ್ಲಸ್ ನಲ್ಲಿ ರಾಮಾಯಣ ಪ್ರಾರಂಭವಾಗಿದೆ. ಅದ್ರ ಬಗ್ಗೆ ನಾನು ಈ ಮೊದಲು ಒಂದು ಬಾರಿ ಹೇಳಿದ್ದೆ. ರಾಮಾಯಣದ ಬಗ್ಗೆ ಆಗಿರಲಿ, ಮಹಾಭಾರತದ ಬಗ್ಗೆಯೇ ಆಗಿರಲಿ ನನಗೆ ಬಹಳಷ್ಟು ಕುತೂಹಲ ಮತ್ತು ಇಷ್ಟ ಇದ್ದೆ ಇದೆ. ವಾಹಿನಿ, ಭಾಷೆ ಯಾವುದೇ ಆಗಿರಲಿ ನೋಡೋಕೆ ಇಷ್ಟ ಪಡ್ತೀನಿ. ಕೆಲವೊಂದು ಅಷ್ಟೊಂದು ಮನ ಸೆಳೆಯೋಲ್ಲ.. ಆದರೆ ಈ ಬಾರಿ ನನಗೆ ಮಾತ್ರ ಸ್ಟಾರ್ ಪ್ಲಸ್ ನಲ್ಲಿ ಪ್ರಸಾರ ಆಗ್ತಾ ಇರುವ  ರಾಮಾಯಣ ತುಂಬಾ ಇಷ್ಟ ಆಗ್ತಾ ಇದೆ. ಹೊಸ ಕಾನ್ಸೆಪ್ಟ್, ಮುಖ್ಯವಾಗಿ ಅ ಕಾಲದಲ್ಲಿ ಇರಬಹುದಾದ ಕೆಲವು ಅಂಶಗಳು, ಕಾಲ್ಪನಿಕ ಅಂಶಗಳಿಗೆ ನೈಜತೆ ಜೊತೆಗೂಡಿಸಿ ಅದ್ಭುತ ರೀತಿಯಲ್ಲಿ ಕಥೆಯನ್ನು ವಿಸ್ತರಿಸಿದ್ದಾರೆ. ಆ ಅರಮನೆ, ರಾಜ ಎಂದರೆ ಇರುವ ಒಂದು ಅಡ್ಡಿ, ರಾಣಿವಾಸದೊಳಗೆ ಇರುವ  ಅಸಹನೆ, ಅಸಂತೋಷ , ಹೀಗೆ ಹತ್ತಾರು ಅಂಶಗಳನ್ನು ಒಳಗೊಂಡಿದೆ.ಬಳಸಿರುವ ಉಡುಗೆ ತೊಡುಗೆ , ಸೀತೆ, ಊರ್ಮಿಳ, ಮಾಂಡವಿ, ಶ್ರುತಕೀರ್ತಿ  ಪುಟ್ಟ ಬಾಲೆಯರು, ಅತ್ಯಂತ ಆಕರ್ಷಕ ರಾಮ, ನಮ್ಮ ಕಲ್ಪನೆಯಲ್ಲಿ ಇರುವಂತಹ ಪಾತ್ರಧಾರಿ,  ಲಕ್ಷ್ಮಣ, ಭರತ, ಶತ್ರುಘ್ನ ಎಲ್ಲದರ ಜೊತೆ ಜನಕ, ಆತನ ತಮ್ಮ ಪ್ರತಿಯೊಂದು ಪಾತ್ರವು ತುಂಬಾ ವಿಶೇಷವಾಗಿ ತೋರಿಸಿದ್ದಾರೆ..
@ ಕಲರ್ ವಾಹಿನಿಯಲ್ಲಿ ಎರಡು ಸುಂದರ ಹಾಸ್ಯ ಕಾರ್ಯಕ್ರಮಗಳು ಪ್ರಸಾರ ಆಗ್ತಾ ಇದೆ, ಒಂದು ಬಚಾವ್, ಮತ್ತೊಂದು ಕಾಮಿಡಿ ವಿತ್ ಕಪಿಲ್..
ಕಪಿಲ್  ಕಾರ್ಯಕ್ರಮದಲ್ಲಿ ಗುತ್ತಿ, ಪಲಕ್, ದಾದಿ, ಅಡುಗೆಯವ,ಸಿದ್ದುಜಿ ಎಲ್ಲರೂ ಇಷ್ಟ ಆಗ್ತಾರೆ. ಅದೇರೀತಿ ಬಚಾವ್ ನಲ್ಲಿ ಭಾರತಿ, ಕೃಷ್ಣ, ಕರಣ್, ಶ್ರುತಿ, ಅನಿತಾ, ಅಲ್ಲದೆ ಎಲ್ಲ ಕಲಾವಿದರು ಅದ್ಭುತವಾಗಿ ನಡೆಸಿಕೊಡ್ತಾರೆ. ಸಮರ್ಥವಾಗಿ ನಗಿಸುವ ಕೆಲಸ ಮಾಡುತ್ತಾ ವೀಕೆಂಡ್  ನಗುತ್ತಾ  ಕಳೆಯುವಂತೆ  ಮಾಡ್ತಾರೆ..

ಡೌಟ್.....


PC: Prakash Hegde
ಕಳೆದ ಭಾನುವಾರ ಬಹುದಿನಗಳ ಬಳಿಕ ಜೇಮ್ಸ್  ಬಾಂಡ್  OO7 -‎ಸ್ಪೆಕ್ಟ್ರೆ ‬ ‪ಗೆ ಹೋಗಿದ್ದೆ. ಬಾಂಡ್ ಸಿನಿಮಾಗಳಲ್ಲಿ ಬರಿ ಕತ್ತಲು, ಇಲ್ಲದೆ ಹೋದರೆ ಇದ್ದಬದ್ದ  ಮನೆ , ಕಾರು, ವಿಮಾನ, ಹೆಲಿಕಾಪ್ಟರ್ ಎಲ್ಲವನ್ನು ಒಡೆದು ಹಾಕುವ ತಂತ್ರಗಾರಿಕೆ. ಶಬ್ದಮಯ. ಆದರು ಮಜಾ ಸಿಗುತ್ತೆ ಅಂತಹ ಸಿನಿಮಾಗಳಿಂದ. ಎಂತಹ ವಿಶೇಷ ಕ್ರೌರ್ಯ ಇರುತ್ತೆ . ಡಡಾಂಟ...ಡಾ...ಅ...ಅ... ಡಿಶ್ಕುಲ್ .. ಇಂತಹದ್ದೇ ಶಬ್ದ....

ಕಲರ್ ವಾಹಿನಿಯಲ್ಲಿ ಬಿಗ್ ಬಾಸ್ ಗಲಾಟೆ  ಈಗ ಶ್ರುತಿಕಡೆ ತಿರುಗಿರುವುದು ಮಾತ್ರ ನಿರೀಕ್ಷಿತ ಸಂಗತಿ. ಶ್ರುತಿ ಬಗ್ಗೆ ಹೆಚ್ಚು ಇಷ್ಟ ಆಗಿದ್ದು ಬಿಗ್ ಬಾಸ್ ಕಾರ್ಯಕ್ರಮದಿಂದ.. ಆಕೆಯ ಬದುಕಲ್ಲಿ  ಏನೆಲ್ಲಾ  ನಡೆಯಿತು.. ಆಕೆಯನ್ನು ಮತ್ತಷ್ಟು ಗಟ್ಟಿ ಗೊಳಿಸುವ ರಿಯಾಲಿಟಿ ಷೋ ಇದು.. ಬೇರೆಯವರ  ಅಸೂಯೆ ಶ್ರುತಿಯ ಒಳ್ಳೆಯ ವ್ಯಕ್ತಿತ್ವದ ಮೇಲೆ ಹೇಗೆ  ಪ್ರಭಾವ ತೋರುತ್ತೆ ಅನ್ನುವ ಅಂಶದ ಬಗ್ಗೆ ಕುತೂಹಲವಿದೆ.  ಈ ಕಾರ್ಯಕ್ರಮದಲ್ಲಿ ಅಯ್ಯಪ್ಪ ನಿಜಕ್ಕೂ ಸರಿಯಾಗಿ ಗೇಂ ಆಡ್ತಾ ಬಂದಿದ್ದಾರೆ. ಎಲ್ಲರನ್ನು ಡಿವೈಡ್ ಅಂಡ್ ರೂಲ್.
ನಿಜ ಹೇಳ ಬೇಕೆಂದರೆ ಆತ ಕ್ರಿಕೆಟ್ ಟೀಮ್ ನಲ್ಲೂ ಇದೆ ಸ್ಟ್ರಾಟಜಿ ಬಳಸಿ ಹೆಚ್ಚು ಬೆಳೆದರಾ ಅಂತ ಅನ್ನಿಸುತ್ತೆ. ಏನೇ ಇರಲಿ ಈ ಬಾರಿ ಅಲಂಕಾರದ  ಕಾನ್ಸೆಪ್ಟ್ ಖುಷಿ- ಮಜಾ ಕೊಡ್ತು. ಇನ್ನು ಹಾಗೆ ನೋಡೋಕೆ ಹೋದ್ರೆ ಹುಚ್ಚಾಸ್ಪತ್ರದು ಅಷ್ಟೊಂದು  ಖುಷಿ ನೀಡಲಿಲ್ಲ ಬಿಡಿ.
 ನಾಮಿನೇಷನ್ ಸಮಯದಲ್ಲಿ  ಭಾವನ ಬೆಳಗೆರೆ ತನ್ನ ಹೆಸರು ಬರುತ್ತೆ ಎಂದು ನಿರೀಕ್ಷೆ ಮಾಡಿರಲಿಲ್ಲ ಅಂತ ಕಾಣುತ್ತೆ.. ಆಕೆ ಸ್ವಲ್ಪ ಬದಲಾಗಿದ್ದು ಸ್ಪಷ್ಟವಾಗಿ ಕಾಣ್ತಾ ಇತ್ತು. ಏನೇ ಹೇಳಿ ಸುನಾಮಿ ಪೂza  ಅವರು ಅಂತ ಹೇಳ್ತಾ ತಮ್ಮ ವಿಶ್ವಾಸ ಪೂಜಾಗಾಂಧಿ ಎನ್ನುವ ಬದಲಾದ ವ್ಯಕ್ತಿತ್ವದ ಬಗ್ಗೆ ತೋರಿಸ್ತಾ ಇರ್ತಾರೆ.
ಸಿಸ್ಟರ್ ನೇಹಾ ಮಾತ್ರ ತುಂಬಾ ರೆಬಲ್ ಆಗಿ ಬ್ರದರ್ ಜೊತೆ ಇದ್ದು ತಾವು ಒಳ್ಳೆವರು ಅನ್ನುವ ಪ್ರಯತ್ನ ಮಾಡ್ತಾ ಇದ್ರೂ. ಬಿಡಿ ಆಕೆ ಬಗ್ಗೆ ಹೇಳೊಂಗಿಲ್ಲ  . ಯಾಕೆಂದ್ರೆ ಮಾಡೆಲ್ ಜಯಶ್ರೀ ಹೇಳಿದಂತೆ ತಿಕ್ಕಿ ತಿಕ್ಕಿ ತಿಕ್ತಾ ಇದ್ದೀನಿ ನಾನು ಮನೇಲೂ ತಿಕ್ಕಲಿಲ್ಲ  ಪಾತ್ರೆನ್ನ  ಅಂತ ಜೊತೆ ಅಸಹನೆಯನ್ನು ತಿಕ್ಕಿ ತಿಕ್ಕಿ ಕಕ್ಕುತಾ ಇದ್ರಲ್ಲ ಪುಣ್ಯಾತಗಿತ್ತಿ..
ಆನಂದ್ ನಿಜಕ್ಕೂ ಅತ್ಯುತ್ತಮ ಕಲಾವಿದ ಅಂತ  ಮತ್ತೆ ಮತ್ತೆ ತಮಗೆ ನೀಡಿರುವ ಟಾಸ್ಕ್, ಆ ಮಿಮಿಕ್ರಿ ಮೂಲಕ ತೋರಿಸಿದ್ದಾರೆ. ಆನಂದ್ ಯಾವರೀತಿ ಮನೋರಂಜನೆ ನೀಡ್ತಾರೆ ಅಂತ ಕಾಯುತ್ತಾ ಇರ್ತೀನಿ ನಾನು.
ಸುದೀಪ್ ಸಣ್ಣ ಡೌಟ್

ಹಿಂದಿ ಬಿಗ್ ಬಾಸ್ ನಲ್ಲಿ  ಸಲ್ಮಾನ್ ಬಂದಾಗ ಎಲ್ಲರು ಮುದ್ದಾಗಿ ಅದರಲ್ಲೂ ಹೆಣ್ಣುಮಕ್ಕಳು ಸಲ್ಮಾನ್ ಅಂತ ಮುದ್ದಾಗಿ ಕರೀತಾರೆ.. ನಿಮ್ಮನ್ನು ದೀಪು ಅಂತ ಕಿಚ್ಚ ಅಂತ ಯಾಕೆ ಕರೆಯೋಲ್ಲ.. ನೀವು ಸಾಕಷ್ಟು ಮಿಸ್ ಮಾಡ್ಕೋತಾ ಇದ್ದೀರಿ ಅಂತ ಅನ್ನಿಸ್ತಾ ಇಲ್ವಾ  ;-)
ರವಿ ಮೂರೂರ್ ಅವರು ಭಾವನ ಬೆಳಗೆರೆಯನ್ನು ನನ್ನ ತಂಗಿ ಅಂತ ಪಾಪ ಪ್ರೀತಿಯಿಂದ ಹೇಳಿದ್ರು.. ಆಕೆ ರವಿ ಮಾಮ ರವಿ ಮಾಮ ಅಂತ ಸಂಬೋಧನೆ ಮಾಡ್ತಾ ಇದ್ರು... :-)
ನೀವು ನಿಮ್ಮ ಕೂದಲನ್ನು ಫಳಫಳ ನೆ ಹೊಳೆಯುವಂತೆ ಮಾಡಿರೋದು ಶಾಂಪೂ, ಕ್ಯಾಮರ  ಅದರ ಜೊತೆಗಿನ ಬೆಳಕು ಅಥವಾ ..   ;-)

ಗಣತಂತ್ರ


PC: Prakash hegde
ಭಾರತದಲ್ಲಿ ಈಗ ಎಲ್ಲ ಭಾಷೆಗಳ ಮಾಧ್ಯಮಗಳು ಅಸಹಿಷ್ಣುತೆಯ ಬಿಸಿಯಲ್ಲಿ ಇದ್ದಾರೆ. ಕೆಲವರ ಪ್ರಕಾರ  ಇದು ಬೌದ್ಧಿಕ ದಾರಿದ್ಯ ಆಗಿದ್ದರೆ, ಒಂದಷ್ಟು ಜನರಿಗೆ ನೋವಿನ ಸಂಗತಿ. ಕಾರಣ ಇಷ್ಟೇ ಎಲ್ಲರು ಅವರದ್ದೇ ಅದ ರೀತಿಯಲ್ಲಿ ಅದನ್ನು ಅರ್ಥೈಸಿಕೊಂಡು ತಮ್ಮ ಮನದ ಭಾವ ಹೊರ ಹಾಕುತ್ತಿದ್ದಾರೆ. ಈ ವಿಷಯಕ್ಕೆ ಸಂಬಂಧಪಟ್ಟಂತೆ ಹಾಗೆ ಜೀ ಹಿಂದಿ ನ್ಯೂಸ್ ಕಡೆಗೆ ಹೊರಟಾಗ ಅಲ್ಲಿ ರೋಹಿತ್ ಅವರು ಮಾತು ಕಥೆ ನಡೆಸಿದ್ದರು. ಅಲ್ಲಿನ ಸಂಗತಿ ಸಹಿತ ಸಹಿಷ್ಣುತೆ ಆಗಿತ್ತು. ಆದರ್ ನನಗೆ ಹೆಚ್ಚು ನೋವು ಕೊಡುವ ಸಂಗತಿಗಳಲ್ಲಿ ಒಂದಾದ  ಕಾಶ್ಮೀರ್ ಪಂಡಿತರ ಬದುಕು. ಜೀ ಯಲ್ಲಿ ಅಲ್ಲಿ ಉಳಿದಪಂಡಿತರ ಬಗ್ಗ ಹೇಳ್ತಾ ಅಂಕಿಅಂಶಗಳನ್ನು ತೋರಿಸ್ತಿದ್ದರು, ಅದರಲ್ಲಿ 1947  ರ ಸಮಯದಲ್ಲಿ  ಅಲ್ಲಿ ಶೇ. 15 ರಷ್ಟು  ಪಂಡಿತರು ಇದ್ದರಂತೆ, ಅದೇರೀತಿ 1981ರಷ್ಟರಲ್ಲಿ ಆ ಸಂಖ್ಯೆಯಲ್ಲಿ ಸಾಕಷ್ಟು ವ್ಯತ್ಯಾಸ ಕಂಡು ಬಂದಿತ್ತು, ಅಂದರೆ ಶೇ. 5 ರಷ್ಟು ಮಾತ್ರ ಅಲ್ಲಿದ್ದರು. ಈಗಿನ ಪರಿಸ್ಥಿತಿ  ಕೆಟ್ಟದಾಗಿದೆ ಎನ್ನುವುದನ್ನು ಹೇಳ ಬೇಕಿಲ್ಲ.
ಆದರೆ ಈ ಅಂಶವನ್ನು ಮತ್ತು ಆಮೀರ್ ಖಾನ್ ಅಸಹಿಷ್ಣುತೆಯ   ವಿಷಯವನ್ನು ಜೊತೆ ಮಾಡಿಸಿ ಡಿಬೇಟ್ ಮಾಡ್ತಾ ಇದ್ರೂ ರೋಹಿತ್.  ಈ ಪತ್ರಕರ್ತ - ನಿರೂಪಕರ   ಬಗ್ಗೆ ಹೇಳುವಷ್ಟಿಲ್ಲ, ನನ್ನ ಕಡೆಯಿಂದ ಒಂದು ಥಂಬ್ಸ್ ಅಪ್ . ಆಮೀರ್ ಹೇಳಿರುವುದನ್ನು ತಪ್ಪಾಗಿ ಅರ್ಥೈಸಿರ ಬಹುದು, ಅಥ್ವಾ  ಏನೇ  ಸಂಗತಿ ಆಗಿರ ಬಹುದು ಆದರೆ ಪಾರ್ಟಿಗಳ ಮುಖಂಡರು ತಮ್ಮ ಬೆನ್ನು ತಾವು ತಟ್ಟಿ ಕೊಳ್ಳುವ ಸಂಗತಿ ಅತ್ಯಂತ ಖೇದ  ಅನ್ನಿಸಿತು.
ಅದೇ ಸಮಯದಲ್ಲಿ ಹಾಗೆ ಆಂಗ್ಲ ಚಾನೆಲ್ ಗಳ ಕಡೆಗೆ ಹೋದಾಗ ಚಾನೆಲ್ ನ್ಯೂಸ್ ಏಷ್ಯ ವಾಹಿನಿಯ ಬಾಗಿಲು ತೆಗೆದಾಗ ಅಲ್ಲಿ ಮ್ಯಾನ್ಮಾರ್  ಚುನಾವಣೆಯ ಬಗ್ಗೆ ಅಲ್ಲಿ ಆ ಕ್ಷಣದಲ್ಲಿ ಜನರು ಎದುರಿಸಿದ ಒಂದು ಭಾವನೆಗಳು, ಆ ಖುಷಿ, ಆ ಆತಂಕ ಎಲ್ಲವನ್ನು ರೋಡ್ ಟು ಡೆಮಾಕ್ರಸಿ ಎನ್ನುವ ಕಾರ್ಯಕ್ರಮದಲ್ಲಿ ತೋರಿಸಲಾಗುತ್ತಿತ್ತು.  ಸಂಜೆ ಐದೋವರೆಯಲ್ಲಿ ನಾನು ನೋಡಿದ್ದು, ಕಾಫಿಪ್ರಿಯಳಾದ ನನಗೆ ಕಾಫಿ ಕಡೆ ಸಹ ಗಮನ ಹೋಗದೆ ಇರುವಷ್ಟು ಇಷ್ಟವಾಯಿತು ಆ ಕಾರ್ಯಕ್ರಮ. ಅಕಸ್ಮಾತ್ ಆ ಚಾನೆಲ್ ನಿಮ್ಮ ಚಾನೆಲ್ಗಳ ಗುಚ್ಚದಲ್ಲಿ ಇದ್ರೆ , ಅದರಲ್ಲಿ ಮತ್ತೆ ಆ ಕಾರ್ಯಕ್ರಮ ಪ್ರಸಾರ  ಆಗೇ ಆಗುತ್ತೆ, ನೋಡಿ ತುಂಬಾ ಭಿನ್ನವಾಗಿದೆ.  ಅನೇಕ ಅಂಶಗಳನ್ನು  ಸಹಿಸಿಕೊಂಡಿರುವ ಭಾರತೀಯರು, ವಿಶ್ವದ ದೊಡ್ಡ ಗಣತಂತ್ರ ದೇಶವಾದ ಭಾರತದಲ್ಲಿ  ಸಹಿಷ್ಣುತೆ- ಅಸಹಿಷ್ಣುತೆಯ ಹಾಕ್ಯಾಟ. ಆದರೆ  ಸ್ವಾತಂತ್ರಕ್ಕಾಗಿ, ಗಣತಂತ್ರಕ್ಕಾಗಿ ಒದ್ದಾಡಿದ  ಆಂಗ್ ಸ್ಯಾನ್ ಸು ಕಿ ..ಆಕೆಯ  ಶ್ರಮದ ಸಾರ್ಥಕ ಕ್ಷಣಗಳು...ಹೊಟ್ಟೆ ತುಂಬಿದಾಗ ಹಿಂಗೆ ಆಗೋದು...
PC: Raghupathi Sringeri 
ಇದರ ನಡುವೆ ರಾಹುಲ್ ಗಾಂಧಿ ಅವರು ನಮ್ಮ ಮೌಂಟ್ ಕಾರ್ಮಲ್ ಹೆಣ್ಣುಮಕ್ಕಳ  ಜೊತೆ ಮಾತಾಡಿ ಅವರ ಅಭಿಪ್ರಾಯ ತಿಳಿದು ಸಣ್ಣಗೆ ಪೆಚ್ಚಾದ ಕಥೆ  ವಾಹಿನಿಗಳಲ್ಲಿ   ಹೇಗೆ ಪ್ರತಿಕ್ರಿಯಿಸಬೇಕು ಅಂತ ಗೊತ್ತಾಗದೆ ಹೋಯ್ತು .. ಬಿಡಿ ದೊಡ್ಡವರ ವಿಷ್ಯ.. ಆದರೆ ನಮ್ಮ ಹೆಣ್ಣುಮಕ್ಕಳೇ ಹೀಗೆ ನೇರ ದಿಟ್ಟ