ಚಿಂದಿ ಚಿತ್ರಾನ್ನ

Image result for pink color

 ನೀವು  ಕನಿಷ್ಠ ವಾರಕ್ಕೊಂದಾದರೂ ಪೋಸ್ಟ್ ಹಾಕಿ ಎಂದು ಕೇಳುವ ಸ್ನೇಹಿತರು ಬೇಕಾದಷ್ಟಿದ್ದಾರೆ.. ಆದರೆ ಸಾಕಷ್ಟು ಸರ್ತಿ ಬರೀಬೇಕು ಎಂದು ನಿರ್ಧಾರ ಮಾಡಿದರೂ ಸಹಿತ ಬರೆಯೋಕೆ ಆಗೋದೇ ಇಲ್ಲ.ಅದಕ್ಕಾಗಿ ನಾನು ಈಗ ನಿಯಮಕ್ಕೆ ಬದ್ಧಳಾಗಿರರದೇ, ಆದಾಗ ಬರೆಯುವ ಎಂದು ನಿರ್ಧಾರ ಮಾಡಿದ್ದೇನೆ.
@ ಕಲರ್ ಕನ್ನಡ ವಾಹಿನಿಯಲ್ಲಿ ಈಗ ಚಿಣ್ಣರ ಡ್ಯಾನ್ಸ್ ಕಾರ್ಯಕ್ರಮ ಪ್ರಸಾರ ಆಗುತ್ತಿದೆ. ಅದರಲ್ಲಿ ರವಿಚಂದ್ರನ್, ಪ್ರಿಯಾಮಣಿ ಮತ್ತು ಮಯೂರಿ  ಉಪಾಧ್ಯ   ತೀರ್ಪುಗಾರರಾಗಿದ್ದಾರೆ. ಅಲ್ಲದೆ ಅಕುಲ್ ನಿರೂಪಣೆ . ಕಷ್ಟ ಪಟ್ಟು ಕನ್ನಡ ಮಾತಾಡ್ತಾ ಇದ್ದಾರೆ ಅನ್ನಿಸಿದರೂ ಸಹ್ಯವಾಗುತ್ತದೆ. ನನ್ನ ಅನಿಸಿಕೆ ಪ್ರಕಾರ  ಸೆಲೆಬ್ರಿಟಿ ಡ್ಯಾನ್ಸಿಂಗ್ ಸ್ಟಾರ್ ಗಿಂತ ಸಾಮಾನ್ಯ ಮನೆಯ ಮಕ್ಕಳ ಈ ಡ್ಯಾನ್ಸಿಂಗ್ ಸ್ಟಾರ್  ರವಿ ಮಾಮ, ಪ್ರಿಯ ಹಾಗೂ ಮಯೂರಿಗೆ ಇಷ್ಟ ಆಗುತ್ತೆ. ನಿಜ ಬದುಕಿನ ಬವಣೆ, ಆಸೆ, ಅದಕ್ಕಾಗಿ ತಾಯಿತಂದೆ  ಮಾಡುವ ಪ್ರಯತ್ನ ಎಲ್ಲವೂ ಅರ್ಥ ಆಗುತ್ತೆ. ಇಂತಹ ಮಕ್ಕಳು ಅದಕ್ಕಿಂತ ಅವರ ತಾಯಿತಂದೆ ಮಾಡುವ ಸಾಧನೆ ಚಿಂದಿ ಚಿತ್ರಾನ್ನ ಬಿಡಿ!
ಜೋಗಯ್ಯ  ಶಿವಣ್ಣನದು ಸೊ ಇಷ್ಟವಾದ ಹಾಡುಗಳಲ್ಲಿ ಒಂದು. ಏನೇ ಹೇಳಿ ಎಲೆಮರೆಕಾಯಿ ಹುಡುಕುವ ಈ  ಮಕ್ಕಳ ಡ್ಯಾನ್ಸಿಂಗ್ ಸ್ಟಾರ್ .. ಬೇಜಾರಿಲ್ಲದೆ ವೀಕ್ಷಿಸ ಬಹುದು. 



@  ಸೋನಿ ವಾಹಿನಿಯಲ್ಲಿ ಇಂಡಿಯನ್  ಐಡಲ್  ನಲ್ಲಿ ವಿಶಾಲ್, ಸೋನಾಕ್ಷಿ, ಸಲೀಮ್ ತೀರ್ಪಿನ ಅಡಿಯಲ್ಲಿ ಅನೇಕ ಪ್ರತಿಭೆಗಳು ಹೊರ ಬರುತ್ತಿವೆ.ರಿತ್ವಿಕ ತುಂಟತನ ಚಂದ ಇದೆ. ಇನ್ನು ಹುಸೇನ್ ಅವರ ನಿರೂಪಣೆ ನೋಡ್ತಾ ಇದ್ರೆ ಅವರು ಸ್ಟಾರ್ ವಾಹಿನಿಯಲ್ಲಿ ನಟಿಸಿದ್ದ ಕುಂ ಕುಂ ನೆನಪಾಗುತ್ತದೆ. ಸ್ವಲ್ಪ ದಿಲೀಪ್ ಕುಮಾರ್, ಸ್ವಲ್ಪ ಶಾರೂಖ್ ಖಾನ್ ಥರ  ಮಾತಾಡುವ ಹಾಗೆನ್ನುವುದಕ್ಕಿಂತ ನಟಿಸುವ, ಅವರನ್ನು ಅನುಸರಿಸುವ ಪ್ರತಿಭೆ. ನಾನು ಆನ್ ಲೈನ್ ಪೇಪರ್ ನಲ್ಲಿ ಸಿನಿಮಾ ನ್ಯೂಸ್ ಬರೆಯುತ್ತೇನೆ. ಸಾಮಾನ್ಯವಾಗಿ ಸ್ಯಾಂಡಲ್ ವುಡ್ ಅಲ್ಲದೆ ಬಾಲಿವುಡ್, ಕಾಲಿವುಡ್ ಮತ್ತು ಟಾಲಿವುಡ್ ನ್ಯೂಸ್ ಹೆಚ್ಚು ಬರಿತೀನಿ. ಆಗ ಹೆಚ್ಚು ಹೆಚ್ಚು  ಓದುವ ಅಭ್ಯಾಸ.ಸೋನಾಕ್ಷಿಯ ಬಗ್ಗೇ ಸಹ ಜಾಸ್ತಿ  ಓದಿದ್ದೇನೆ :-) ಏಕೆಂದರೆ ನಾನು ನನ್ನ ಓದುಗರಿಗೆ ಒಳ್ಳೆಯ ಅದರಲ್ಲೂ ಅವರ ಮನ ಸೆಳೆಯುವ ವಾರ್ತೆಗಳನ್ನು, ಗಾಸಿಪ್ ಗಳನ್ನೂ ಬರೆಯ ಬೇಕಲ್ಲ. ಅವೆಲ್ಲ ಈಗ ಹೇಳಲ್ಲ. ಆದರೆ ಈ ಕಾರ್ಯಕ್ರಮದಲ್ಲಿ ಈಕೆ ಇಷ್ಟ ಆದ್ರು. ಮುದ್ದಾದ  ಗಲ್ .. ಆಕೆಯಲ್ಲಿ ಒಂದು ತೆರೆನಾದ ಸರಳತೆ ಇದೆ. ಆ ಸರಳತೆ ನಾಟಕೀಯ ಅಂತ ಅನ್ನಿಸಲ್ಲ . ಲವ್ ಇಟ್ 

Image result for pink color
ಜೀ ಹಿಂದಿ  ವಾಹಿನಿಯಲ್ಲಿ ಡಿಐಡಿ  ಇಷ್ಟಪಟ್ಟು ವೀಕ್ಷಿಸುವ ಕಾರ್ಯಕ್ರಮಗಳಲ್ಲಿ ಒಂದು .  ಮಿಥುನ್ದಾ , ಮುದಸ್ಸರ್, ಪುನೀತ್, ಗೇತಿ, ಜಾಯ್ ಎಲ್ಲರೂ ನಮಗೆ ಸಕತ್ ಕ್ಲೋಸ್ ಅನ್ನಿಸುವಂತೆ ಕಾರ್ಯಕ್ರಮ ನಡೆಸಿಕೊಡ್ತಾರೆ. ಪ್ರಾಯಶಃ  ಆ ಕಾರ್ಯಕ್ರಮ ಇಷ್ಟ ಆಗಿದ್ದಕ್ಕೆ ಹಾಗೆ ಅನ್ನಿಸಿರ ಬಹುದು. ಆದರೆ ನನಗೆ ಇತ್ತೀಚೆಗೆ ಹೆಚ್ಚು ಇಷ್ಟ ಆಗಿದ್ದು, ಸಿಂಡ್ರೆಲ್ಲಾ ಕಥೆಯನ್ನು ಶಾಸ್ತ್ರೀಯ ನೃತ್ಯ ರೂಪದಲ್ಲಿ ತೋರಿಸಿದ್ದು. ವಿಭಿನ್ನ ಅಂತ ಅನ್ನಿಸಿತು. ಎಲ್ಲ  ಪ್ರತಿಭೆಗಳ ಡ್ಯಾನ್ಸ್ ಚೆನ್ನಾಗಿತ್ತು ಆದರೆ ಅದ್ಯಾಕೋ ಆ ಡ್ಯಾನ್ಸ್ ಬಹಳ ಖುಷಿ ಕೊಡ್ತು.

ಸಕತ್ ಸರಳ

Image result for blue flower images
ಒಂದಷ್ಟು ದಿನ ಸೋಶಿಯಲ್ ನೆಟ್ ವರ್ಕ್ ನಲ್ಲಿ ಬರೀ ಗುಂಪುಗಾರಿಕೆ ಅಂದ್ರೆ ಅವರವರ ಭಾವಕ್ಕೆ ಅವರವರ ಭಕುತಿಗೆ ಎನ್ನುವಂತೆ ಗುಂಪು ಮಾಡಿಕೊಂಡು ತಮ್ಮ ಪ್ರತಿಭೆಯ ಪ್ರಭೆ ತೋರುತ್ತಿದ್ದರು . ಈಗ ಹಾಗಿಲ್ಲ ಬಿಡಿ . ನಾನು ಸಾಮಾನ್ಯವಾಗಿ ಆಗಾಗಾ  ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳನ್ನು ಓದುತ್ತಿರುತ್ತೇನೆ . ಏನೇನು ಹೇಳ್ತಾರೆ ರಿಸರ್ಚ್ ಮಾಡಿದವರು, ಇನ್ನೇನು ಬದಲಾವಣೆ ಕಂಡಿದೆ ಆರೋಗ್ಯದ ವಿಷಯದಲ್ಲಿ . ಆದರೆ ಕೆಲವು ಸಂಗತಿಗಳು ಭಾರೀ ಮಜಾ ನೀಡಿದೆ ನನಗೆ. ಉದಾಹರಣೆಗೆ ಸಾಮಾನ್ಯವಾಗಿ ಸೂರ್ಯನ ಕಿರಣಗಳು ಇಂತಿಷ್ಟು ಸಮಯದಲ್ಲಿ ಮಾತ್ರ ಮೈಮೇಲೆ ಬೀಳಬೇಕು, ಆ ಸಮಯ ಮೀರಿದರೆ ಅಲ್ಟ್ರ ವೈಲೆಟ್ ಕಿರಣಗಳು ಬಂದು ತಾಕುತ್ತವೆ. ಆಗ ಚರ್ಮಕ್ಕೆ ತೊನ್ದರೆ. ಇದು ಎಲ್ಲರಿಗು ಗೊತ್ತೇ ಇದೆ. 
 ಸಾಮಾನ್ಯವಾಗಿ ಮುಂಜಾನೆ 11ರಿಂದ ಸಂಜೆ 4 ತನಕ ಇರುವ ಬಿಸಿಲು ಒಳ್ಳೆಯದಲ್ಲ ಎಂದೇ ಓ ದಿದ್ದು. ಒಮ್ಮೆ ಒಂದು ಲೇಖನದಲ್ಲಿ ಮುಂಜಾನೆ ಒಂಬತ್ತರ ನಂತರ ದಯಮಾಡಿ ಬಿಸಿಲಿಗೆ ಹೋಗದಿರಿ ಎಂದು ಬರೆದಿದ್ದರು. ಅದೂ ಆಯ್ತು , ಇತ್ತೀಚಿಗೆ ಒಂದು ಲೇಖನದಲ್ಲಿ ಮುಂಜಾನೆ 11ರಿಂದ ಸಂಜೆ 3 ಗಂಟೆ ತನಕ ಜನ ಹೊರಗೆ ಬರೋದೆ ಇಲ್ಲ. ಆದಕಾರಣ ಅವರ ದೇಹದಲ್ಲಿ ವಿಟಮಿನ್ ಡಿ ಲೋಪ ಆಗಿದೆ. ಹೀಗೆ ಬರೆದರೆ ತಲೆ ಕೆಡಲ್ವ ?? :-)
 ಹಾಗೆ ಆಗುತ್ತೆ ನನಗೆ ಅನೇಕ ಟೀವಿ ಕಾರ್ಯಕ್ರಮಗಳನ್ನು ವೀಕ್ಷಿಸುವಾಗ. ಅದರಲ್ಲೂ ಚರ್ಚೆಗಳು ಅಂದ್ರೆ ಭಾರಿ ಗಾಬರಿ ನನಗೆ. ಬಿಡಿ ಅದರ ಬಗ್ಗೆ ವಿಶೇಷವಾಗಿ ಹೇಳುವ ಅಗತ್ಯವಿಲ್ಲ. 
ಆದರೆ ಟೀವಿ ಪರದೆಯ ಮೇಲೆ  ನಳನಳಿಸುತ್ತಾ  ತುಂಬಾ ಗಂಭೀರವಾಗಿ ಮಾತನಾಡುವ  ಹುಡುಗೀರು  ರೀಲ್ ಹಿಂದೆ ಸಕತ್ ಸರಳ . 
ಪಬ್ಲಿಕ್ ಟೀವಿಯ ರಾಧ ಹಿರೇ ಗೌಡರ್  ರಂಗಣ್ಣನ ಕ್ಯಾಂಪ್ ಮೆಂಬರ್ . ಆಕೆ ಬಗ್ಗೆ ಆಕೆಯ ಸಹೋದ್ಯೋಗಿ ಒಬ್ಬರಿಂದ ತಿಳಿದ ಮಾಹಿತಿ  ಎಂದರೆ ಆಕೆ ಸಕತ್ ಸರಳ . ಅದರಲ್ಲೂ ತನ್ನ ಸಹೋದ್ಯೋಗಿಗಳ ಜೊತೆ ಆರಾಮವಾಗಿ, ಖುಷಿಯಾಗಿರುತ್ತಾರೆ. ಅದೇ ಚಾನೆಲ್ ನ  ಒಬ್ಬ ಪುರುಷ ಮಹಾಶಯನ  ಅವತಾರಗಳು !!
ಸುವರ್ಣ ವಾಹಿನಿಯ ವಿಷಯದಲ್ಲಿ ಇಂತಹ  ವಿಷಯದಲ್ಲಿ ಹೇಳುವುದಾದರೆ  ನಿರೂಪಣೆ ವಿಷಯದಲ್ಲಿ ಸಹನಾ ಭಟ್  ಸಕತ್ ಭಿನ್ನ . ಇಷ್ಟ ಆಗುವ ಶೈಲಿ, ಅತಿ ಅಲ್ಲದ ಹಾವಭಾವ, ಎಲ್ಲ ಕಾರ್ಯಕ್ರಮಗಳಿಗೂ ಹೊಂದಿಕೆಯಾಗುವ ಆಂಕರ್. 

ವೇಯಿಟಿಂಗೂ


Image result for red nature images
ಹಿಂದಿ ವಾಹಿನಿಗಳಲ್ಲಿ ಈಗ ರಿಯಾಲಿಟಿ ಶೋ ಗಳ ಕಾಲ. ಜೀ ಹಿಂದಿ ವಾಹಿನಿಯಲ್ಲಿ ಅಮ್ಮಂದಿರ ಡ್ಯಾನ್ಸ್ ನೋಡಿದ ಬಳಿಕ  ಯಂಗಿಸ್ಟರ್ ಗಳ ಡ್ಯಾನ್ಸ್ . ಡಿಐಡಿ  ಸಂಭ್ರಮ ಮತ್ತೆ ಆರಂಭವಾಗಿದೆ ಜೀ ಹಿಂದಿ ವಾಹಿನಿಯಲ್ಲಿ. ಮುದಸ್ಸರ್  ಖಾನ್ , ಗೈಟಿ  ಸಿದ್ದಿಕಿ ಮತ್ತು ಪುನೀತ್  ಪಾಠಕ್ ತೀರ್ಪುಗಾರರು.  ಅಲ್ಲದೆ ದಾದ ಮಿಥುನ್ ಜೊತೆಗೆ ಹೊಸ ಹೊಸ ಪ್ರತಿಭಾವಂತರು . ಅವರ ಪ್ರತಿಭೆಯ ಸವಿ ಅನುಭವಿಸುವ ಖುಷಿ . ನಿಜಕ್ಕೂ  ಅತ್ಯಂತ ಪ್ರತಿಷ್ಠಾತ್ಮಕ  ಕಾರ್ಯಕ್ರಮ ಇದಾಗಿದೆ. ತುಂಬಾ ವಿಶಿಷ್ಟ ಎಂದು ಅನ್ನಿಸಿದೆ ನನಗೆ ಪ್ರತಿಬಾರಿ ನೋಡಿದಾಗಲು . ಜಾಯ್ ನಿರೂಪಣೆ ಸಹಿತ ಆಕರ್ಷಕ . ಶನಿವಾರ ಹಾಗೂ ಭಾನುವಾರದ ಉತ್ತಮ ಕಾರ್ಯಕ್ರಮ.
 
@ಸೋನಿ ವಾಹಿನಿಯಲ್ಲಿ ಇಂಡಿಯನ್  ಐಡಲ್   ಜೂನಿಯರ್ ಕಾರ್ಯಕ್ರಮ ಆರಂಭವಾಗಿದೆ. ಅದರಲ್ಲಿ ಶ್ರೀಲಕ್ಷ್ಮಿ ಎನ್ನುವ ಹೆಸರಿನ ಬೆಂಗಳೂರಿನ ಬಾಲಿಕೆ  ಇದ್ದಾಳೆ. ಕಳೆದವಾರ ನನಗೆ ಎರಡು ಕಾರಣಗಳಿಂದ ಆ ಕಾರ್ಯಕ್ರಮ ಇಷ್ಟ ಆಯ್ತು. ಅದೇನೆಂದರೆ ಇಬ್ಬರು ಸ್ಪರ್ಧಿಗಳಲ್ಲಿ (ಶ್ರೀಲಕ್ಷ್ಮಿ  ಸೇರಿದಂತೆ )ನನ್ನ ಇಷ್ಟ ಹಾಡು ಹಾಡಿದ್ರು. ಒಂದು ಸಾಥಿಯ ಎ ತೂನೇ  ಕ್ಯಾಕಿಯ, ಮತ್ತೊಂದು  ತೇ ರಿ ಮೇರಿ ಮೇರಿ ತೆರಿ ಪ್ರೇಂ ಕಹಾನಿ ಹೇ ಮುಷ್ಕಿಲ್ ... ಆಹಾ ! ಕೇರಳದ ಹೆಣ್ಣುಮಗು ಇದ್ದಾಳೆ, ಆಕೆ ಡ್ಯಾನ್ಸ್ ಮಾಡಿಕೊಂಡು ಹಾಡ್ತಾಳೆ , ಏನ್ ಡೈನಮಿಕ್ ಗೊತ್ತ? ನಿಜವಾಗಿ ಭಿನ್ನ ರೀತಿಯ ವಿಶೇಷ ಕಾರ್ಯಕ್ರಮ ಇದು.ಜೀ ಹಿಂದಿಯಂತೆ ಸೋನಿಯಲ್ಲೂ ಕನ್ನಡತಿಯೇ ಗೆಲುವು ಪಡಿತಾಳಾ .. ಅಹ್  ಅ ಯಾ... ಮ್ ವೇಯಿಟಿಂಗೂ....   

ಮೀಡಿಯ ಮಂದಿ

Image result for blue nature wallpaper

ಅನೇಕ ವಾರಗಳಿಂದ ಬ್ಲಾಗ್ ಕಡೆ ಬರಲು  ಸಾಧ್ಯವಾಗಲೇ ಇಲ್ಲ. ಅದಕ್ಕೆ ಕಾರಣಗಳು ಹಲವಾರಿದ್ದರು, ಬರಲಾಗಲಿಲ್ಲ ಎನ್ನುವುದು ಸತ್ಯ. ಸಾಮಾನ್ಯವಾಗಿ ಎಲ್ಲಾ  ವಾಹಿನಿಗಳು, ಅಂದರೆ ಕನ್ನಡ ಸೇರಿದಂತೆ ಬೇರೆ ಭಾಷೆಯ ವಾಹಿನಿಗಳನ್ನು ವೀಕ್ಷಿಸುವಾಗ, ಅದಕ್ಕೆ ಸಂಬಂಧಪಟ್ಟಂತೆ  ಬರೆಯುವ ಪರಿಪಾತಕ್ಕೆ ಸ್ವಲ್ಪ ದಿನ ವಿರಾಮ  ನೀಡಿದ್ದರು ಸಹಿತ ನಾನು ಟೀವಿ  ನೋಡುವುದು ಬಿಟ್ಟಿರಲಿಲ್ಲ ಬಿಡಿ . ಆದರೆ ನನ್ನನ್ನು ತುಂಬಾ ಕಾಡಿದ್ದು, ಪತ್ರಕರ್ತ ಶರತ್ ಕುಮಾರ್ ಸಾವು. ಶಶಿಧರ್ ಭಟ್ ಅವರು ಶರತ್ ಸಾವಿನ ಬಗ್ಗೆ ಬರೆದಾಗ ಹೆಚ್ಚು ನೋವಾಗಿತ್ತು. ಬೆಳಕಿನಲ್ಲಿ ಕುಳಿತು ಫಳಫಳ ಎಂದು ಹೊಳೆಪಿನ  ಮುಖ ಹೊತ್ತು, ಕಿಲಕಿಲ ಎಂದು ನಗುವ ಆಂಕರ್ ಗಳು, ಪತ್ರಕರ್ತರು, ತೆರೆಯ ಹಿಂದೆ ಕೆಲಸ ಮಾಡುವ ನನ್ನ ಅನೇಕಾನೇಕ ಗೆಳೆಯರು-ಗೆಳತಿಯರು  ಇವರಲ್ಲಿ ಬಹುತೇಕರ ಪಾಡು ಹಿಂಗೆ!!
ಯಾರೋ ದುಡ್ಡು ಮಾಡಿರ ಬಹುದು, ಆದರೆ ಬಹಳಷ್ಟು ಜನ ಮೀಡಿಯ ಮಂದಿ ಸ್ಥಿತಿ ಹೇಳಿಕೊಳ್ಳುವಂತಿಲ್ಲ . ನನ್ನ ಅಮ್ಮನ ಬಳಿ  ಈ ವಿಷಯ ಮಾತಾಡುತ್ತಾ, ಇದ್ದರೆ ಸ್ವಲ್ಪ ದಿನ  ಇದರಲ್ಲಿ  ಉಳೀತಿನಿ ,ಆಮೇಲೆ ಬೇರೆ ಉದ್ಯೋಗ ಮಾಡ್ತೀನಿ ಸಾಕಾಯ್ತು ಎಂದು ಹೇಳುವುದು ಇತ್ತೀಚಿಗೆ ಜಾಸ್ತಿ ಆಗಿದೆ ನನ್ನ ಕಡೆಯಿಂದ. ರೋಸುತ್ತೆ ಕಣ್ರೀ ಇಲ್ಲಿನ ವಾತಾವರಣ!! 
@ ಈಟಿವಿ ನ್ಯೂಸ್ ನಲ್ಲಿ ಎಸ್ಪಿ ಬಾಲಸುಬ್ರಮಣ್ಯಂ ಅವರ ಎದೆತುಂಬಿ ಹಾಡಿದೆನು ಕಾರ್ಯಕ್ರಮ ಮತ್ತೆ ಆರಂಭವಾಗಿದೆ. ಆದರೆ ಅದನ್ನು ನೋಡಲು ಸಾಧ್ಯವಿಲ್ಲ, ಯಾಕೇಂದ್ರೆ  ಆ ಚಾನೆಲ್ ನಮ್ಮ ಮನೇಲಿ ಬರಲ್ಲ :-). ಎಂತಹ ವಿಷಾದ ಅಲ್ವೇನ್ರಿ! ಬೇರೆ ಭಾಷೆಯಲ್ಲಿ ಯಾವ ಚಾನೆಲ್ ಆರಂಭವಾಗಲಿ ಲಬಕ್  ಅಂತ ಸೇವೆ ನೀಡುತ್ತೆ . ಆದರೆ ಕನ್ನಡದಲ್ಲಿ ಅದೆಷ್ಟು ನ್ಯೂಸ್ ಚಾನೆಲ್ಗಳು ಆರಂಭವಾಗಿದೆ. ಆದರೆ ಬರೋದು ಮಾತ್ರ  ಆ...  ಒಂದು ... ಆ ಎರಡು ... ಆ ಮೂರು !!
@  ಕಲರ್ ಕನ್ನಡ ವಾಹಿನಿಯಲ್ಲಿ ವಿ ರವಿಚಂದ್ರನ್ ಅವರ ನೇತೃತ್ವದ  ಡ್ಯಾನ್ಸಿಂಗ್  ಕಾರ್ಯಕ್ರಮದಲ್ಲಿ ಮಾಸ್ಟರ್  ಆನಂದ್ ಗೆ ಟ್ರೋಫಿ ಬಂದಿದ್ದು ಖುಷಿ ಅನ್ನಿಸಿತು. ಆದರೆ ಅದಕ್ಕಿಂತ ನನಗೆ ಖುಷಿ ಆಗೋ ಸಂಗತಿ ಅಂದ್ರೆ ಡ್ಯಾನ್ಸಿಂಗ್ ಸ್ಟಾರ್ ಜೂನಿಯರ್ ಆರಂಭವಾಗುತ್ತದೆ. ಅದರಲ್ಲಿ ಮುಖ್ಯವಾಗಿ ಹೊಸಬರು ಅಂದ್ರೆ ಸೆಲೆಬ್ರಿಟಿಗಳು ಅಲ್ಲದವರು ಇದ್ದಾರೆ ಚಂದ . ಅಂತಹ ಪ್ರತಿಭೆಗಳ ಡ್ಯಾನ್ಸ್ ಅಥವಾ ಇನ್ಯಾವುದೇ ಕಾರ್ಯಕ್ರಮ ನೋಡಲು ನನಗಿಷ್ಟ .
@@ ಸುವರ್ಣ ಮನೋರಂಜನೆ ವಾಹಿನಿಯಲ್ಲಿ  ಪುಟಾಣಿ ಪಂಟ್ರು  ಎನ್ನುವ ಕಾರ್ಯಕ್ರಮ ಬರ್ತಾ ಇದೆ. ಅದರಲ್ಲಿ ಮಿತ್ರ ನಿರಂಜನದೇಶಪಾಂಡೆ  ನಿರೂಪಣೆ ಮಾಡುತ್ತಿದ್ದಾರೆ.ಅದರಲ್ಲಿ ಗುರು ಪ್ರಸಾದ್, ರಕ್ಷಿತಾ ಮತ್ತು ಮಾಸ್ತರ್ ಸುಂದರಂ ಅವರು ತೀರ್ಪುಗಾರಾಗಿದ್ದಾರೆ. ಚಂದದ ಕಾರ್ಯಕ್ರಮ. ಬಹಳ ದಿನಗಳ ಬಳಿಕ ನನಗೆ ನಿರಂಜನ ಅವರನ್ನು ಟೀವಿ ಪರದೆ ಮೇಲೆ ಅಂದ್ರೆ ರಿಯಾಲಿಟಿ ಶೋ ಮೂಲಕ ನೋಡುವ ಅವಕಾಶ. ಜಾಲಿ ಬಾಯ್ ,ರೇಡಿಯೋ ಜಾಕಿ ಆಗಿದ್ದಾಗ, ಜೀ ಕನ್ನಡದಲ್ಲಿ ವಿದೇಶಕ್ಕೆ ಹೋಗಿ ಕಾರ್ಯಕ್ರಮ ನಡೆಸಿ ಕೊಡುವಾಗಲು  ಇಷ್ಟ ಆಗಿತ್ತು. ಈಗ ಹೀರೋ ಆಗಿದ್ದಲ್ಲದೆ ಕನ್ನಡಿಗರಿಗೆ ಹೆಚ್ಚು ಗೊತ್ತಾಗಿದ್ದಾರೆ ನಿರಂಜನ್ . ವೆಲ್ ಅವರ ವಿಷಯ ಪಕ್ಕಕ್ಕೆ ಇಡೋಣ ಒಟ್ಟಾರೆ  ಅತ್ಯಂತ ಖುಷಿ ಕೊಡುವ ಕಾರ್ಯಕ್ರಮ ಇದು. ಗುರು ನಿರ್ದೇಶನ ಬಿಟ್ಟು ಜಡ್ಜ್ ಆಗಿ ಸೇಫರ್ ಸೈಡ್ ನಲ್ಲಿದ್ದಾರೆ. 
  


ಎಂದೆಂದೂ ನಿನ್ನನು ಮರೆತು ..


ಕಳೆದ ಕೆಲವು ದಿನಗಳಿಂದ ಒಟ್ಟಾರೆ ಎರಡು ವಾರದಿಂದ ಹಲವಾರು ಸಂಗತಿಗಳು ಮನಸ್ಸು ಕದಡಿತ್ತು. ನೇಪಾಲದ ಭೂಕಂಪ, ಒಬ್ಬ ಹುಡುಗನ ರೋಲ್ ಕಾಲ್ ಸ್ವಭಾವ, ಒಬ್ಬ ಹೆಣ್ಣುಮಗಳು ತನ್ನ ಪತಿಗೆ ಮಾಡಿದ ಮೋಸ ಎಲ್ಲವು ಛೆ ಲೈಫ್ ಇಷ್ಟೇನಾ ಎನ್ನುವಂತಹ ಪ್ರಶ್ನೆ ಮೂಡಿಸಿತ್ತು. ಏಕಾಗ್ರತೆ ಲೋಪವಾದ ಕಾರಣ ಬ್ಲಾಗ್ ಬರೆಯಲಾಗಲೇ ಇಲ್ಲ. ದಿನಕ್ಕೆ ರಾಶಿ ರಾಶಿ ಬರೀತೀನಿ, ಆದರೆ ಬ್ಲಾಗ್ ಪ್ರಪಂಚ ಬೇರೆ. ಆದ್ದರಿಂದ ಅದ್ಯಾಕೋ ಕೂತು ಬರಿಯಲಾರೆ, ತಲೆಯಲ್ಲಿ ರಾಶಿ ರಾಶಿ ಸಂಗತಿಗಳಿದ್ದರೂ ಸಹಿತ ಬ್ಲಾಗ್ ನಲ್ಲಿ ಒಂದು ಅಕ್ಷರವೂ ಟೈಪಿಸಲಾರೆ ಎಂದು ಅನ್ನಿಸಿತು. ಸೊ ಆ ಕಾರಣವನ್ನು ಮುಂದಿಟ್ಟು ಬರೆದಿರಲಿಲ್ಲ.

ಕಳೆದ  ಸ್ವಲ್ಪ ದಿನಗಳಿಂದ ಕನ್ನಡ ಕಾರ್ಯಕ್ರಮಗಳು ಅಂದ್ರೆ ಕನ್ನಡ ವಾಹಿನಿಗಳೇ ಪ್ರಸಾರ ಆಗಲಿಲ್ಲ. ಟಾಟ ಸ್ಕೈ  ಕನ್ನಡಕ್ಕೆ ಟಾಟ ಮಾಡಿತ್ತು. ಈಗ ಬರ್ತಾ ಇದೆ. ಸಾಮಾನ್ಯವಾಗಿ ಯಾವುದೇ ಭಾಷೆಯ ಕಾರ್ಯಕ್ರಮಗಳು   ನೋಡಿದರು ಕನ್ನಡ ನೋಡೆ ತೀರ್ತಾ ಇದ್ದೆ. ಆದರೆ ಸುಮಾರು ಎರಡು ವಾರಗಳಿಂದ ಮಿಸ್ಸಿಂಗ್ . ಆದರು ಸಧ್ಯ ಈಗ ಸರಿಯಾಗಿದೆ ಅದೇ ಖುಷಿ. 

ಜೀ ಹಿಂದಿ  ವಾಹಿನಿಯಲ್ಲಿ  ಡಿಐಡಿ ಅಮ್ಮಂದಿರ ವಿಶೇಷ ನೃತ್ಯ ಸ್ಪರ್ಧೆಯಲ್ಲಿ ಮೂರು ಅಪರೂಪದ ತೀರ್ಪುಗಾರರಿದ್ದಾರೆ. ಅವರ ಬಗ್ಗೆ ನಿಮಗೆ ಗೊತ್ತಿದೆ. ಗೋವಿಂದ , ಟೆರೆನ್ಸ್, ಗೀತ ಅವರ ಬಗ್ಗೆ  ವಿಶೇಷವಾಗಿ ಹೇಳುವಷ್ಟಿಲ್ಲ. ಅಲ್ಲದೆ ಒಂದು ಪೋಸ್ಟ್ ನಲ್ಲಿ ನಾನು ಸೌಮ್ಯಶ್ರೀ ಎನ್ನುವ ಕನ್ನಡದ ಹೆಣ್ಣು ಮಗಳ ಬಗ್ಗೆ ಹೇಳಿದ್ದೆ. ಆಕೆ ಸಕತ್ ಎನೆರ್ಜಿಟಿಕ್. ಅದೇರೀತಿ  ಬೇರೆ ಮದರ್ ಇಂಡಿಯಾಗಳು ಸಹ ಸಕತ್ ಡ್ಯಾನ್ಸ್ ಮಾಡ್ತಾರೆ. (ಈ ಸಮಯದಲ್ಲಿ ನಾನು ಹೆಚ್ಚು ಬಾರಿ ಹೋಗಿದ್ದ ಒಂದು ಮಹಿಳಾ ಸಂಘದ ನೆನಪಾಗುತ್ತದೆ. ಅದರಲ್ಲಿ ಅರವತ್ತಕ್ಕೂ ಹೆಚ್ಚು ವಯಸ್ಸಾದ ಅಮ್ಮಂದಿರ ಡ್ಯಾನ್ಸ್ ಎಷ್ಟು ಎನೆರ್ಜಿಟಿಕ್  ಗೊತ್ತ ಸುಪರ್ಬ್..  !)

ಆದರೆ ನನಗೆ ಹೆಚ್ಚು ಖುಷಿ ಕೊಟ್ಟ ಸಂಗತಿ ಗೋವಿಂದ ಅವರು ಡಾ. ರಾಜ್ ಕುಮಾರ್ ಅವರ ಎವರ್ ಗ್ರೀನ್ ಪ್ರೇಮಗೀತೆ ಎಂದೆಂದೂ ನಿನ್ನನು ಮರೆತು ಹಾಡನ್ನು ಹಾಡಿದ್ದು.. ವಾವ್  ಖುಷಿ ಆಯ್ತು. ಹಿಂದಿನ ದಿನವಷ್ಟೇ ಅಣ್ಣಾವ್ರ ಹುಟ್ಟು ಹಬ್ಬವಾಗಿತ್ತು. ಮಾರನೆಯ ದಿನ ಪ್ರಸಿದ್ಧ ಟೀವಿ ಷೋ ನಲ್ಲಿ ವಾವ್  ಕ್ಯಾ  ಬಾತ್ ಹಾಯ್ ಲೈಕ್ ಇಟ್ . 


@ಇಂಡಿಯ ಗಾಟ್ ಟ್ಯಾಲೆಂಟ್ ಕಾರ್ಯಕ್ರಮ ಈಗ ಕಲರ್ ವಾಹಿನಿಯಲ್ಲಿ ಪ್ರಸಾರ ಆಗ್ತಾ ಇದೆ. ಕಿರಣ್, ಕರಣ್ ಹಾಗೂ ಮಲೈಕ ಜೊತೆ ನಾವು ಎಂಜಾಯ್ ಮಾಡೋ ಕಾರ್ಯಕ್ರಮ.  ಬೆಂಗಳೂರಿನ ಪ್ರತಿಭೆ  ವಿಶೇಷವಾಗಿ ತನ್ನಲ್ಲಿರುವ ವಿಭಿನ್ನತೆ ತೋರಿದ. ಕೊಳಲು ನುಡಿಸುತ್ತಾ ಬಾಯಲ್ಲಿ ತಬಲದಂತೆ ಶಬ್ದ  ಮಾಡುತ್ತಾ ವಾವ್ ! ಅದನ್ನು ನೋಡಿದ್ರೆನೆ  ಕಣ್ರೀ ಮಜಾ ಸಿಗೋದು. ಆ ವಾಹಿನಿಯವರು ಮತ್ತೊಮ್ಮೆ ಪ್ರಸಾರ ಮಾಡಿದ್ರೆ ನೋಡಿ. ಅದೇರೀತಿ ಬಾಟಲ ಮೇಲೆ ಸ್ಟೂಲ್ ನಂತಹವು ಹಾಕಿ ಒಂದಷ್ಟು ಗುಂಪು ಕಸರತ್ತು ಮಾಡಿದ್ರು. ಸಕತ್ತಾಗಿತ್ತು.