Posts

Showing posts from August 7, 2011

ಕಾನ್ಷಿಯಸ್ !

Image
ಟೀವಿ ನೈನ್ ವಾಹಿನಿಯಲ್ಲಿ ಪ್ರಸಾರ ಆದ ಮೂರು ಕಾರ್ಯಕ್ರಮಗಳು ಹೆಚ್ಚು ಗಮನ ಸೆಳೆಯಿತು ನನ್ನನ್ನು .ಆದರೆ ಇವೆಲ್ಲವೂ ಬೇರೆ ಸಮಯ ದಿನಗಳಲ್ಲಿ ಪ್ರಸಾರ ಆಗಿದ್ದು. ವಾಯ್ಸ್ ಆಫ್  ಬೆಂಗಳೂರು ಸ್ಪರ್ಧೆಯ ಅಡಿಶನ್ ಗೆ ಗಾಯಕ ರಾಜೇಶ್ ಕೃಷ್ಣನ್ ಅವರು ತೀರ್ಪುಗಾರಾಗಿ ಕುಳಿತು ಗಾಯಕರನ್ನು ಹೆಕ್ಕುವ ಕೆಲಸದಲ್ಲಿ ನಿರತರಾಗಿರುವ ಕಾರ್ಯಕ್ರಮ. ಅದರಲ್ಲಿ ಎಲ್ಲಾ ರೀತಿಯ ಪ್ರತಿಭೆಗಳು, ಅವರ ಪ್ರತಿಭೆ , ಪ್ರತಿಯೊಂದು ಸಂಗತಿಯನ್ನು ಕೂಲಂಕಷವಾಗಿ ಗಮನಿಸಿ ತಮಗೆ ಬೇಕೆನಿಸಿದ ಕಡೆ ಮತ್ತೆ ಮತ್ತೆ ಹಾಡಿಸಿ.. ಒಟ್ಟಾರೆ ಈ ಸಂಗೀತದ ಗುರುಗಳು ತಾವು ಕಾರ್ಯಕ್ರಮಗಳಲ್ಲಿ ಯಾವ ರೀತಿಯಲ್ಲಿ ಸಲಹೆ, ಇನ್ವಾಲ್ವ್ ಆಗ್ತಾರೋ ಹಾಗೆ ಅಡಿಶನ್ ಕಾರ್ಯಕ್ರಮದಲ್ಲಿಯೂ ತಮ್ಮ ಗಮನ ಕೇಂದ್ರೀಕರಿಸಿ, ಸಾಮಾನ್ಯವಾಗಿ ಹಾಡುವ ಆಸಕ್ತರಿಗೂ ಪ್ರೋತ್ಸಾಹ ನೀಡುವುದು ಮಾತ್ರ ಹೆಚ್ಚಿನ ಖುಷಿ ಕೊಡುತ್ತದೆ. .ಅಷ್ಟೆ ಅಲ್ಲದೆ ಅವರ ಧ್ವನಿಯಲ್ಲಿ ನಗುವ ನಯನ ಹಾಡು ಕೇಳುವುದಕ್ಕೆ  ಶಾನೆ ಖುಷಿ ನನಗೆ, ಸಾಮಾನ್ಯವಾಗಿ ರಾಜೇಶ್ ತಮ್ಮ ಯಾವುದೇ ಕಾರ್ಯಕ್ರಮದಲ್ಲಿ ಈ ಹಾಡು ಸ್ವಲ್ಪ ಆದರೂ ಹಾಡೇ ಹಾಡ್ತಾರೆ. ಥ್ಯಾಂಕ್ಸ್ ರಾಜೇಶ್.. ನಮ್ಮಂತಹ ಕಲಾಸಕ್ತರಿಗೆ ಇದಕ್ಕಿಂತ ಔತಣ  ಮತ್ತೇನು ಬೇಕು..

@@@ ಟೀವಿ ನೈನ್ ವಾಹಿನಿಯ ಅತ್ಯಂತ ಚಂದದ ಕಾರ್ಯಕ್ರಮ  'ಮರೆಯಲಾರೆ '. ನಿರೂಪಕಿ ರಾಧಿಕ ಅವರ ಮಾತಿನ ಶೈಲಿ ಸೆಲಬ್ರಿಟಿ  ಗೆಸ್ಟ್ ಗಳ ಜೊತೆಯ ಅವರ ಮಾತಿನ ವೈಖರಿ, ಬಂದ ಅತಿಥಿಗಳಿಗೆ ಹೆಚ್ಚು…

ಆಸಂ ಆಸಂ ಆಸಂ!

Image
ಸ್ಟಾರ್ ಪ್ಲಾಸ್ ವಾಹಿನಿಯಲ್ಲಿ ಜಸ್ಟ್ ಡ್ಯಾನ್ಸ್ ಎನ್ನುವ ಡಯಾಸ್ ರಿಯಾಲಿಟಿ ಷೋ ಪ್ರಸಾರ ಆಗ್ತಾ ಇದೆ. ಈಗಾಗಲೇ ಇಂತಹ ಅನೇಕ ರಿಯಾಲಿಟಿ ಶೋಗಳನ್ನು ಕಂಡಿರುವ ಸ್ಟಾರ್ ಪ್ಲಾಸ್ ಪ್ರತಿ ಬಾರಿಯೂ ಹೊಸ ಬಗೆಯಲ್ಲಿ ವೀಕ್ಷಕರ  ಮುಂದೆ ಬರಲು ಪ್ರಯತ್ನಿಸುತ್ತದೆಯಾದರೂ ಅನೇಕ ಸರ್ತಿ  ಟೊಯ್ ಟೊಯ್ ಫಿಶ್ ಎನ್ನುವ ಪರಿಸ್ಥಿತಿ ಆಗುತ್ತದೆ. ಪ್ರಾಯಶಃ ಇತರ ವಾಹಿನಿಗಳ ಕಾರ್ಯಕ್ರಮಗಳ ಮುಇಂದೆ ಅದರ ಪ್ರಯತ್ನ ಸಪ್ಪೆ ಸಪ್ಪೆ. ಆದರೆ ಜಸ್ಟ್ ಡ್ಯಾನ್ಸ್ ಮುಖ್ಯ ಆಕರ್ಷಣೆ ನಟ ರಿತಿಕ್  ರೋಶನ್ . ಅಷ್ಟೇ ಅಲ್ಲದೆ ಜಾಲಿ ಜಡ್ಜ್ ಗಳಾದ  ಖಾನ್ ಮತ್ತು ವೈಭವಿ ಮರ್ಚಂಟ್.

ಹಿಂದಿ ವಾಹಿನಿಗಳಲ್ಲಿ  ಪ್ರಸಾರ ಆಗುವ ಇಂತಹ ಕಾರ್ಯಕ್ರಮಮ್ಗಳಲ್ಲಿ ಭಾಗವಹಿಸುವ ಸ್ಪರ್ಧಿಗಳು ಕೇವಲ ಭಾರತದಿಂದ ಮಾತ್ರವಲ್ಲ ವಿಶ್ವದೆಲ್ಲೆಡೆಯಿಂದಲೂ ಬಂದು ಭಾಗವಹಿಸುತ್ತಾರೆ. ಇತ್ತೀಚಿಗೆ ಪ್ರಸಾರ ಆದ ಒಂದು ಷೋ ನಲ್ಲಿ ಭಾಗವಹಿಸಿದ್ದ ಸ್ಪರ್ಧಿಯು ಕಾಲಿನ ಇನ್ಫೆಕ್ಷನ್ ನಿಂದ ಬಳಲುತ್ತಿದ್ದರು. ಆತನ ಪಯಣ ಲಂಡನ್ ನಿಂದ   ಮುಂಬೈ ತನಕ ಬಂದು ನಿಂತಿತ್ತು. ಕಥಕ್ ನೃತ್ಯ ಶೈಲಿಯಲ್ಲಿ ನರ್ತಿಸಿದ ಆ ಕಲಾವಿದ ತನ್ನ ಕಾಲಿಗೆ ಸಮಸ್ಯೆ ಇದೆ ಎನ್ನುವುದನ್ನು ತೋರ್ಪಡಿಸದೆ ನರ್ತಿಸಿ ಮಾದರಿಯಾದರು. ಬದುಕು ಎನ್ನುವುದೇ ಹಾಗೆ ಅಲ್ವಾ! ಸೋಲುವ ಕ್ಷಣಗಳಲ್ಲೂ ಎದ್ದು ನಿಂತು ಮತ್ತೆ ಗೆದ್ದು ಗೆದ್ದು ಮುಂದೆ ಸಾಗುವುದು.
ಆ ಸಮಯದಲ್ಲಿ ಆತನ ಜೊತೆಗೆ ಮತ್ತೊಬ್ಬ ಸ್ಪರ್ಧಿಯು ನರ್ತಿಸುತ್ತಿದ್ದರು. ಕಾರ್ಯಕ್ರಮದಲ್ಲಿ ಸೀಡಿಯ ಬಳಕ…