ಗುಡ್ ಲಕ್

 

ಬಿಗ್ ಬಾಸ್ ಇನ್ನು ನಿನ್ನೆ ಮೊನ್ನೆಯಷ್ಟೇ ಶುರು ಆದಂಗೆ ಇದೆ. ಆಗಲೇ  ಫಿನಾಲೆ  ಹತ್ರ ಬಂತು.ಯಾರು ಯಾವುದೇ ರೀತಿಯ ಅಭಿಪ್ರಾಯ ಹೊಂದಿರಲಿ ನಾನು ತಪ್ಪದೆ ನೋಡಿದ, ನೋಡುವ, ನೋಡುತ್ತಿದ್ದ ಶೋಗಳಲ್ಲಿ ಇದು ಒಂದು. ಕಿಚ್ಚ ಸುದೀಪ ಬಗ್ಗೆ ಸಾಕಷ್ಟು ಸರ್ತಿ ಬರೆದು ಅಭಿಮಾನಿಸಿದ್ದೀನಿ.. ಆ ಗೌರವ ಇದ್ದೆ ಇದೆ. ಸಾಮಾನ್ಯವಾಗಿ ಸ್ಟಾರ್ ಹೀರೋಗಳ ಬಗ್ಗೆ ಒಳ್ಳೆಯದನ್ನು ಹೇಳುವುದಕ್ಕಿಂತ ಕೆಟ್ಟದ್ದನ್ನು ಹರಡುವ ಮಂದಿ  ಹೆಚ್ಚು. ಅದು ಅವರ ಖುಷಿ ಬಿಡಿ..! ಒಳ್ಳೆ ಮಾತು ಹೇಳಿದರೆ ನಮಗೆ ಅವರಿಂದ ಲಾಭ ಆಗ್ತಾ ಇದೆ ಅಂತ ತಿಯೋ ಮಂದಿ ಸಹ ಹೆಚ್ಚು...!

ಬಿಗ್ ಬಾಸ್ ನಲ್ಲಿ  ಆದಿ ಹೊರಗೆ ಬಂದ ನಂತರ ಯಾರನ್ನು ಭೇಟಿ ಮಾಡ್ತೀರಿ.. ಯಾರ ಜೊತೆ ಸ್ನೇಹ ಇಟ್ಟು ಕೊಳ್ತಿರಿ ಎಂದು ಸಾಮಾನ್ಯವಾಗಿ  ಪ್ರತಿಬಾರಿ ಬಿಗ್ ಬಾಸ್ ಮನೆಯಲ್ಲಿ ಕೇಳಿಬರುತ್ತೆ. ಆದರೆ ಹೊರ  ಬದುಕು ಹೆಚ್ಚು ದಿನ ಅಂತಹ ಸ್ನೇಹ ಉಳಿಸಲ್ಲ.. ಆದರೂ ಕೆಲವೊಂದಷ್ಟು ಸ್ನೇಹ ಉಳಿದಿದೆ.. ನಮ್ಮ ವರ್ತೂರು ಸಂತೋಷ್  ಮುಗ್ಧತೆ ಬಗ್ಗೆ ಎರಡು ಮಾತಿಲ್ಲ, ಕೋಲಾರದ ಗ್ರೂಪ್ ಗಳಲ್ಲಿ ಜೈ ಹಳ್ಳಿಕಾರ್, ಜೈ ವರ್ತೂರ್  ಅನ್ನುವ ಪೋಸ್ಟರ್ ಗಳು ಸಾಮಾನ್ಯವಾಗಿ ಕಂಡು ಬರ್ತಾ ಇದೆ. ವರ್ತೂರು ಸಂತೋಷ್ ಬಗ್ಗೆ ಕೋಲಾರದವರು ಅಭಿಮಾನಿಸುವುದು ವಿಶೇಷವೇನಲ್ಲ .. ಆದರೆ ಇತ್ತೀಚಿಗೆ ಒಂದು ಸುದ್ದಿ ಕೇಳಿದ್ದು ಅಂದ್ರೆ ಚಿಕ್ಕಮಗಳೂರಿನ  ಒಂದಷ್ಟು ಯೂತ್ಸ್ ಬಂದು ಬೆಟ್ಟದ ತಾಯಿ  ಚಾಮುಂಡಿ ಹತ್ರ ಕೇಳಿಕೊಂಡಿದ್ದು   ಹಳ್ಳಿಕಾರ್ ವರ್ತೂರ್ ಸಂತೋಷ್ ಗೆಲ್ಲಬೇಕು..

ಎನಿವೇಸ್ ಡಿಯರ್  ಸುದೀಪ ನಾವಂತೂ ಮುಖಾಮುಖಿ ಭೇಟಿ ಆಗಲ್ಲ . ನಿಮ್ಮಂತಹ ಮೇರುಶಿಖರವನ್ನು ದೂರದಿಂದ ನೋಡಿ ಗೌರವಿಸುವುದೇ ನಮ್ಮಂತಹವರು ಮಾಡುವ ಕೆಲಸ. ಹೊಗಳಿಕೆ ಅಲ್ಲ ಮನದಾಳದ ಮಾತು. ಮುಂದೆ ಎಂದಾದರೂ  ದೇವರು ಅವಕಾಶ ಕೊಟ್ಟರೆ ನಿಮ್ಮನ್ನು ... ?!

ವೆಲ್ ಎಲ್ಲ ಸ್ಪರ್ಧಿಗಳಿಗೂ ಒಳ್ಳೆಯದಾಗಲಿ. ಸೋತವರು -ಗೆದ್ದವರು ಅನ್ನುವುದು ಫಿನಾಲೆ ವೀಕ್ ನಲ್ಲಿ ಆದ್ಯತೆ  ಪಡೆಯಲ್ಲ.. ಮತ್ತೊಮ್ಮೆ ಗುಡ್ ಲಕ್ 

ಖುಷಿ ಕೊಡ್ತು.

 

ನನಗಂತೂ ಬಾಲಕ ರಾಮ ಪ್ರಾಣ ಪ್ರತಿಷ್ಠಾಪನೆ ಸಖತ್  ರೋಮಾಂಚನ ನೀಡಿದೆ. ರಾಮನ ಮುದ್ದುಮೊಗ ಉಡುಪಿಯ ಕಿಟ್ಟಪ್ಪನ  ಮುದ್ದು ಮುಖದಂತೆ ಕಂಡಿದೆ ಮತ್ತು ಕಾಣಿಸ್ತಾ ಇದೆ. ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಗಳ ಸಮರ್ಥ ಹೋರಾಟದ ಫಲ  ಬಾಲಕ ರಾಮ ಕೃಷ್ಣನಂತೆ ಕಾಣುತ್ತಿರಬೇಕು. ಒಬ್ಬರಿಗೆ ಶ್ರೀನಿವಾಸ ಗೋವಿಂದ , ಒಂದಷ್ಟು ಮಂದಿಗೆ  ಶಂಭುಕುಮಾರ ವಡಿವೇಲ ಅಂದ್ರೆ ಬಾಲಸುಬ್ರಮಣ್ಯ ಸ್ವಾಮಿಯಂತೆ ಕಂಡು ಬರ್ತಾ ಇದ್ದಾರೆ ಅಂದ್ರೆ ಅನೇಕರೂಪ ಏಕದೇವ ಎನ್ನುವ ಅಂಶ  ಸ್ಪಷ್ಟವಾಗಿದೆ. ಜೈ ಶ್ರೀ ರಾಮ್  
 ಜೀ ಕನ್ನಡ ವಾಹಿನಿಯ ಸರಿಗಮಪ ಸೀಜನ್  20  ಸಂಕ್ರಾಂತಿ ಸಮಯದ ಎಪಿಸೋಡ್ ನಲ್ಲಿ ಅಯ್ಯಪ್ಪ ಸ್ವಾಮಿ ಹಾಡುಗಳು  ಖುಷಿ ಕೊಡ್ತು. ಚಿಕ್ಕಂದಿನಲ್ಲಿ ನಾವು ಅಯ್ಯಪ್ಪ ಸ್ವಾಮಿ ದೀಪ ಹೊತ್ತಿದ್ದೆ ಮೆರವಣಿಗೆ ಸಮಯದಲ್ಲಿ.. ಆಗ  ವೀರಮಣಿ ರಾಜು ಅವರು ಹಾಡಿರುವ ಪಳ್ಳಿಕಟ್ಟು  ಶಬರಿ  ಮಲೈ ಕ್ಕೂ ಕಲ್ಲುಮ  ಮುಳ್ಳುಮ  ಕಾಲುಕ್ಕು  ಮೆಥೈ ಸ್ವಾಮಿಯೇ  ಅಯ್ಯಪ್ಪೋ  ಅಯ್ಯಪ್ಪೋ  ಸ್ವಾಮಿಯೇ ನೆಯ್ಯ್ಯಭಿಷೇಕಂ  ಸ್ವಾಮಿಕ್ಕೆ ಕರ್ಪೂರ  ದೀಪಂ  ಸ್ವಾಮಿಕ್ಕೆ ತಪ್ಪದೆ ಕೇಳುತ್ತಾ ತಪ್ಪುತಪ್ಪಾಗಿ ತಮಿಳಿನಲ್ಲಿ ಹಾಡುತ್ತಾ ಸಾಗುತ್ತಿದ್ದೆವು    ವಿಜಯಪ್ರಕಾಶ ಅಲ್ಲದೆ  ಸ್ಪರ್ಧಿಗಳು ಅಯ್ಯಪ್ಪ ದೇವನ ಹಾಡು ಹಾಡಿ  ಮನಕ್ಕೆ ಮುದ ನೀಡಿದರು. ಕರ್ನಾಟಕದಲ್ಲಿ ಅಯ್ಯಪ್ಪ ಸ್ವಾಮಿ ಭಕ್ತರು ಹೆಚ್ಚು.. ಅದೇರೀತಿ ಶ್ರೀರಾಮದೇವನ ಹಾಡು ಖುಷಿ ಕೊಡ್ತು. ಡಿವೋಷನಲ್, ಎಮೋಷನಲ್  ಹಾಡು .. ನಾವು ಸಹ ಬಾಲಕ ರಾಮ ಪ್ರಾಣಪ್ರತಿಷ್ಠಾಪನೆ ದಿನವಾದ ನಿನ್ನೆ ರಾಮದೇವನಿಗೆ ಪೂಜಿಸಿ ನಮ್ಮ ಮನೆಯಲ್ಲಿ ಹಾಡಿನ ಮೂಲಕ ಭಕ್ತಿ ಸಮರ್ಪಣೆ ಮಾಡಿದೆವು ಮಹಾಗುರು ಹಂಸಲೇಖ ಸರ್.. :-) 

ಜೈ ಶ್ರೀ ರಾಮ್

 

 22 ಜನವರಿ2024  ಅತ್ಯಂತ ಸುಂದರ ದಿನ ಧಾರ್ಮಿಕ ಮನಸ್ಥಿತಿಯನ್ನು ಹೊಂದಿದವರಿಗೆ.....  ಭಾರತದ ಇತಿಹಾಸದಲ್ಲಿ ಇಂತಹದ್ದೊಂದು ದಿನ ಬರುತ್ತದೆ.. ಈ ಕೆಲಸ ಸಾಧ್ಯ ಆಗುತ್ತದೆ ಎಂದು ಯಾರು  ತಿಳಿ ದಿರಲಿಲ್ಲ. ಕನ್ನಡದ ವಾಹಿನಿಗಳಾದ  ಏಷ್ಯಾನೆಟ್  ಸುವರ್ಣ , ಪಬ್ಲಿಕ್  ಟಿವಿ   ರಿಪಬ್ಲಿಕ್ ಕ  ನ್ನಡ  ಟಿವಿ ನೈನ್, ಟಿವಿ 5,ವಿಸ್ತಾರ .. ಹೀಗೆ ಕನ್ನಡ ಎಲ್ಲಾ  ವಾರ್ತಾ ವಾಹಿನಿಗಳು ತಮ್ಮದೇ ಆದ ಶೈಲಿಯಿಂದ ರಾಮ್ದೇವ್ನ ದರ್ಶನ ಮಾಡಿಸಿದ್ದು ನಿಜಕ್ಕೂ ಅವಿಸ್ಮರಣೀಯ. ಪಬ್ಲಿಕ್  ಟಿವಿ  ರಂಗಣ್ಣ, ಏಷ್ಯಾನೆಟ್ ಅಜಿತ, ರಿಪಬ್ಲಿಕ್  ಜಯಪ್ರಕಾಶ ಶೆಟ್ಟಿ ಸ್ವಲ್ಪ ಭಿನ್ನವಾಗಿ ಗಮನ ಸೆಳೆದರು.. ಶೆಟ್ರ ಉತ್ರ ಜಾಸ್ತಿ ವೈರಲ್ ಆಯ್ತು.. ಅದರ ಬಗ್ಗೆ ಹೆಚ್ಚು ವಿಸ್ತಾರಾ ಬೇಡ .. ಅದೇ ರೀತಿ ನಮ ರಂಗಣ್ಣ ಪಾದರಕ್ಷೆ ಇಲ್ಲದೆ  ರಾಮ ದೇವಳದ ಬಗ್ಗೆ ನೀಡಿದ ಮಾಹಿತಿಯ ಚಿತ್ರ ಸಹ.. ಅಜಿತ ಮತ್ತು ದೇವರ ..?! ನಡುವೆ ನಡೆದ ಚರ್ಚೆ .. ಇದು ಸಹ ....  

ಬಹುತ್ವಕ್ಕೆ ಭಾರತ ಹೆಸರುವಾಸಿ ಅದು ಇನ್ನುಮುಂದೆ ಇರಲ್ಲ, ರಾಮ್ ನಾಮ್ ಸತ್ಯ ಹಾಯ್ ಅನ್ನುವ ಮನಸ್ಥಿತಿ ಸಹ ಸಾಕಷ್ಟು ಹೊರ ಬಂತು.. ಬಹುತ್ವ ಅನ್ನುವುದು ಆರಂಭವಾಗುವುದೇ ಭಾರತದ ದೇಗುಲಗಳಲ್ಲಿ. ಇಲ್ಲಿ  ಯಾರು ಯಾವ ರೀತಿ  ಸೇವೆ, ಸಹಕಾರ ಉಪಯೋಗ, ಪ್ರಯೋಜನ ಪಡೆಯುತ್ತಿದ್ದಾರೆ ಎನ್ನುವುದನ್ನು ಕೂಲಂಕಷವಾಗಿ ಗಮನಿಸಿದರೆ ತಿಳಿಯುತ್ತದೆ. ಆ ದೇವಳಕ್ಕೆ ನೀಡುವ ಹೂವು, ಅದನ್ನು ಬೆಳೆಯುವ ರೈತ, ಅದಕ್ಕೆ ಬಳಕೆ ಆಗುವ ಗೊಬ್ಬರ, ಕೀಟ ನಾಶಕ, ಅದನ್ನು ತಯಾರಿಸುವ ಫ್ಯಾಕ್ಟರಿ  ಹೂ  ಕಟ್ಟಲು ಬೇಕಾಗುವ  ದಾರ, ದಾರವನ್ನು ತಯಾರಿಸುವ ಕಾರ್ಖಾನೆ, ಅದನ್ನು ತಯಾರಿಸುವ ಕಾರ್ಮಿಕ, ಅದಕ್ಕೆ ಬಳಕೆ ಆಗುವ ಯಂತ್ರ, ಅದನ್ನು ನಿರ್ಮಿಸಿದ ಟೆಕ್ನಿಷಿಯನ್ ಅದು ಕೆಟ್ಟರೆ ಹಾಳಾದರೆ  ಅದರಿಂದ ದೊರಕುವ ಮೆಟಲ್, ಪ್ಲಾಸ್ಟಿಕ್ ನಂತಹ   ಈ ತ್ಯಾಜ್ಯ, ಬಳಸಿ ಅದನ್ನು ಪುರುರ್ತ್ಪತ್ತಿ ಮಾಡುವ ಕಬಾಡಿ, ಮತ್ತೆ ಅದು ಬೇರೆ ರೂಪದಲ್ಲಿ ಗ್ರಾಹಕರ ಕೈ ಸೇರುವ ವಿಧಾನ ಇವೆಲ್ಲವಕ್ಕೆ  ಒಂದಕ್ಕೊಂದು  ಲಿಂಕ್ ಇರುತ್ತದೆ. .. ಹೀಗೆ ಅಲ್ಲಿರುವ ಎಲ್ಲಾ ಅಂಶಗಳಿಗೂ ಅದರದ್ದೇ ಆದ ಕೊಂಡಿ ಇದೆ. ಇಲ್ಲಿ ಯಾರು ಕ್ರಿಶ್ಚಿಯನ್, ಯಾರು ಪಾರ್ಸಿ, ಯಾರು ಮುಸ್ಲಿಂ ಅನ್ನುವುದು ಗೊತ್ತಿರಲ್ಲ ಅದರ ಅದರ ಅಗತ್ಯ ಇರಲ್ಲ. ಬಹುತ್ವ ಇರಬೇಕಾಗಿರುವುದು ಇಂತಹ ಅಂಶಗಳಲ್ಲಿ ಬರೀ  ಪುಸ್ತಕದಲ್ಲಿ ಅಥವಾ ತಮ್ಮ ಬೇಳೆ  ಬೇಯಿಸಿಕೊಳ್ಳುವವರ ಮಾತುಗಳಲ್ಲಿ ಅಲ್ಲವೇ ಅಲ್ಲ.. ಜೈ ಶ್ರೀ ರಾಮ್