ಟಿವಿನೈನ್ ನೋಡ್ತಾ ಇರಮ್ಮ!





ಅನೇಕ ಸಂಗತಿಗಳು ಹೆಚ್ಚಿನ ತ್ರಾಸು ಉಂಟು ಮಾಡುತ್ತದೆ.  ಅದರಲ್ಲು ಈ ಸಾವಿನ ಸಂಗತಿ ಇದೆಯಲ್ಲ ಅದರಷ್ಟು ಬೇಸರದ ಸಂಗತಿ ಮತ್ತೊಂದಿಲ್ಲ. ನಿಜ ಹುಟ್ಟಿದವ ಸಾಯಲೇ ಬೇಕು ಆದರೆ ಅಕಾಲಿಕ ಮರಣ ಇರುತ್ತದಲ್ಲ ಅದರಷ್ಟು ನೋವಿನ ಸಂಗತಿ ಮತ್ತೊಂದಿಲ್ಲ ಬಿಡಿ.
ಕಳೆದ ಹದಿನೈದು ದಿನಗಳಿಂದ ಅತ್ಯಂತ ಖೇದ ಅನ್ನಿಸುವ ಸಂಗತಿಗಳೇ..
ಹೈದರಾಬಾದ್ ಗೆ ಹೋಗುತ್ತಿದ್ದ ಬಸ್ ನ ಪ್ರಯಾಣಿಕರ ದುರ್ಮರಣ  ಅತ್ಯಂತ ನೋವನ್ನು ಉಂಟು ಮಾಡಿತ್ತು. ಅದಾದ ಸ್ವಲ್ಪ ದಿನಗಳಲ್ಲೆ  ನನ್ನ ಕಸಿನ್ ಮಗ ನದಿಯಲ್ಲಿ ಕಾಲು ಜಾರಿ ಮರಣಹೊಂದಿದ.ಅವನಿಗೆ ಕೇವಲ 18   ವರ್ಷ  ಮಾತ್ರ. ಅದೆಲ್ಲಕ್ಕಿಂತ ಮನಸ್ಸಿಗೆ ತ್ರಾಸ ಅನ್ನಿಸಿದ್ದು ಆ ಹುಡುಗನ ಅಮಾಯಕ  ತಾಯಿ ತಂದೆಯರ ಸ್ಥ್ತಿತಿ. ಹಳ್ಳಿಯಲ್ಲಿರುವ ಪಾಪದವರು.. ನಿನ್ನೆ ಮತ್ತೆ ಬಸ್ ನಲ್ಲಿ ದುರ್ಮರಣ  ಕ್ಕೆ  ತುತ್ತಾದ ಮಂದಿ...

ಇನ್ನೊಂದು ವಿಷ್ಯಾ ಹೇಳೋದಿದೆ. ಕಳೆದವಾರ ಕೋಲಾರದ ಹತ್ತಿರ ಇರೋ ನಮ್ಮ ನೇಟಿವ್ ನಲ್ಲಿ ಶಾಲೆ ಬಸ್ಸು ಪಲ್ಟಿ ಹೊಡೆಯಿತು. ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಯಿತು. ಆ ಬಸ್ ನಲ್ಲಿ ನಮ್ಮ ಸೋದರ ಮಾವನ ಮೊಮ್ಮಕ್ಕಳು ಸಹ ಇದ್ರು. ಆ ಗ್ರೂಪ್ ನಲ್ಲಿ ಅವರೇ ದೊಡ್ಡ ಮಕ್ಕಳು. ಟಿವಿ ನೈನ್ ವಾಹಿನಿಯಲ್ಲಿ ಅದರದ್ದೇ ಕಾರುಬಾರು. ನಾವು ಆ ವಾರ್ತೆ  ನೋಡಿರಲಿಲ್ಲ. ನಮಗೆ ಆ ವಿಷ್ಯ ಗೊತ್ತೂ  ಆಗಲಿಲ್ಲ. ಆ ಬಳಿಕ ತಿಳಿಯಿತು. ಎಲ್ಲರೂ ಕ್ಷೇಮ ಅನ್ನೋ ಸುದ್ದಿ ತಿಳಿದು ನಮ್ಮ ಅಮ್ಮ ಮಾವನಿಗೆ ಫೋನ್  ಮಾಡಿದಾಗ ಮಾವ ಟಿವಿ ನೈನ್ ನೋಡ್ತಾ ಇರಮ್ಮ ಒಳ್ಳೆ ಸುದ್ದಿಗಳು ಇರುತ್ತೆ ಅಂದ್ರು.. ಹೀಗೂ ಉಂಟೆ
ಇಂತಹ ಪ್ರಸಂಗಗಳನ್ನು  ನೋಡುವಾಗ ಬದುಕೆಷ್ಟು ಅನಿಶ್ಚಿತ ಅಂತ ಅನ್ನಿಸುತ್ತೆ. ಅಂತಹುದರಲ್ಲಿ  ಕಲರ್   ವಾಹಿನಿಯಲ್ಲಿ  ಬಿಗ್ ಬಾಸ್ ಆಟಗಾರರನ್ನು ಗಮನಿಸುವಾಗ ಆಶ್ಚರ್ಯ  ಆಗುತ್ತದೆ. ಎಲ್ಲದಕ್ಕೂ ಜಗಳ ಎಲ್ಲಕ್ಕೂ..!
ಕುಶಾಲ್   ತಂಡನ್   ನನಗೆ ಅತ್ಯಂತ ಆಶ್ಚರ್ಯ  ತಂದ ವ್ಯಕ್ತಿ. ಅದೇ ರೀತಿ ಅರ್ಮಾನ್.. ಕುಶಾಲ್ ನಾಗರೀಕ ಅಸಭ್ಯ ಪ್ರಾಣಿಗೆ ಮತ್ತೊಂದು ಹೆಸರು ಅಂತ ಹೇಳ ಬಹುದು  ಬಿಡಿ. ಈಗ ಆತ ಇಲ್ಲ ಆದರೂಆ ಅಸಭ್ಯ ಪ್ರಾಣಿಗಾಗಿ ಗೌಹರ್ ಒದ್ದಾಡ್ತಾ ಇರೋದು ನೋಡಿದ್ರೆ ಪ್ರೀತಿ ಕುರುಡು ಅಂತ ಪಕ್ಕಾ ಅನ್ನಿಸುತ್ತೆ.
ನೇರವಾಗಿ ಹೇಳ್ತೀನಿ ಸಲ್ಮಾನ್ ಕನ್ನಡದ ಸ್ಥಿತಿ ಇಷ್ಟು ಹದಗೆಟ್ಟಿರಲಿಲ್ಲ ಬಿಡಿ!
ಸಾಮಾನ್ಯವಾಗಿ ಇಂತಹ ಕಾರ್ಯಕ್ರಮಗಳನ್ನು  ನಡೆಸಿ ಕೊಡುವಾಗ ಪ್ರೆಸೆಂಟರ್ಸ್ ಗಳು ತೆಗೆದು ಕೊಳ್ಳುವ ಮೊತ್ತದ ಕಡೆಗೆ ಮಾತ್ರ ಎಲ್ಲರ ಗಮನ ಇರುತ್ತದೆ, ಆದರೆ ಅವರು ಅನುಭವಿಸುವ ಕಿರಿಕಿರಿ!
ಸಲ್ಮಾನ್ ಸಹ ಪಾಪ ಈ ಸ್ಥಿತಿಯನ್ನು ಎದುರಿಸುತ್ತಲೇ  ಬಂದಿದ್ದಾರೆ. ಹೊರಗೆ ಬಂದ ಸ್ಪರ್ಧಿ ಮೊಟ್ಟ ಮೊದಲು ವಿಷ ಕಾರುವುದೇ ಸಲ್ಮಾನ್ ಬಗ್ಗೆ. ನಾನು ಆತನ ಫ್ಯಾನ್ ಅಂತ ಈ ಮಾತನ್ನು ಹೇಳ್ತಾ ಇಲ್ಲ, ಆ ಜಾಗದಲ್ಲಿ ಯಾರೇ ಇದ್ರು ಆ ಪರಿಸ್ಥಿತಿಯನ್ನು ಎದುರಿಸಲೇ ಬೇಕಾಗಿದೆ. ನಮ್ಮ ಸುದೀಪೂ ಗೂ ಸಹ ಇದೇ ಕಷ್ಟ ಎದುರಾಗಿತ್ತು.
ನನಗೆ ಕಳೆದ ವಾರ ಸಲ್ಮಾನ್ ಖಾನ್ ಒಂದು ಅಂಶ ಜಾಸ್ತಿ ಇಷ್ಟ ಆಯ್ತು.. ಪ್ರತಿವಾರ ಒಬ್ಬ ವೀಕ್ಷಕರಿಗೆ  ಫೋನ್ ಮಾಡುವ ಅವಕಾಶ ಇರುತ್ತೆ. ಕಳೆದ ವಾರ ಹಾಗೆ ಮಾಡಿದ ವ್ಯಕ್ತಿಗೆ ಸಲ್ಮಾನ್ ಜೊತೆ ಮಾತನಾಡುತ್ತಿರುವುದು ಗೊತ್ತೆ ಆಗಲಿಲ್ಲ. ಆಗ ಸಲ್ಮಾನ್  ಏನ್ ಮಾಡಿದ್ರು ಅಂದ್ರೆ  ಮೈ ಅಮಿತಾಬ್ ಬಚ್ಚನ್ ಕೌನ್ ಬನೆಗಾ ಕರೋಡ್ ಪತಿ ಸೆ ಎಂದು ಆ ಕಾಲರ್ ಗೆ ಕಾಲ್ ಎಳೆದರು. ಅದು ಮಾತ್ರ ಆ ವಾರದ ದಿ ಬೆಸ್ಟ್ ಅನ್ನಿಸಿತು ಸಚ್ಚಿ!
  

ಆತನ ಸ್ಮೈಲ್ !




ಸಾಮಾನ್ಯವಾಗಿ ಮಾಧ್ಯಮಗಳು ಎಲ್ಲವನ್ನು  ಜನರ ಮುಂದೆ ಬಿಚ್ಚಿಡಲು  ಪ್ರಯತ್ನ ಮಾಡ್ತಾನೆ ಇರುತ್ತೆ, ತಮ್ಮ ಒಳಗಿರುವ ಗುಟ್ಟುಗಳನ್ನು  ಹೊರತು ಪಡಿಸಿ !
 ತಮ್ಮ ಮೈಕ್ ಗಳನ್ನೂ ಪಾಪ  ಸಾಧಕರ ಮುಂದೆ ಇಟ್ಟು  ಬೇಡದ ಪ್ರಶ್ನೆಗಳನ್ನು ಕೇಳಿ  ಅವರನ್ನು ಮಾತಲ್ಲಿ ಸಿಕ್ಕಿಸಿ  ಬಿಡ್ತಾರೆ . ಈ  ವಿಧಾನ  ಸಾಕಷ್ಟು ಸರ್ತಿ ವೀಕ್ಷಕರಿಗೆ  ಆಪ್ತ ಆಗಲ್ಲ . ಅದು ನಿಮಗೆ ಗೊತ್ತೇ ಮಾಧ್ಯಮಿಗಳೇ? 
ಬೇಕಾದ್ರೆ ರಾಜಕಾರಣಿಗಳ ಬಗ್ಗೆ ಸ್ವಲ್ಪ ಕ್ಷಮಿಸ್ತಾರೆ ಆದ್ರೆ ಅವರ ಮೆಚ್ಚಿನ ಕಲಾವಿದರು, ಧರ್ಮಗುರುಗಳು, ಜಾತಿ, ಧರ್ಮ.. ಅಂತಹ ಸೂಕ್ಷ್ಮ ವಿಚಾರಗಳ ಬಗ್ಗೆ  ನನಗೆ ಅನ್ನಿಸೋ ರೀತಿಯಲ್ಲಿ ನೋ....  ವೇ.... !
ನಿಮಗೆ ತಿಳಿದಿರುವಂತೆ ಅತಿ ಹೆಚ್ಚಿನ ವೀಕ್ಷಕರು ಇರೋದು ಮೇಲೆ ತಿಲಿಸಿದವರು. ಮೂಢನಂಬಿಕೆ ಬ್ಯಾನ್ ಮಾಡ್ತಿ ವಿ  ಅಂತ ಹೋರಾಡೋ ಜನಗಳು ಒಮ್ಮೆ ತಮ್ಮ ಆಪ್ತ ವಲಯ ಗಮನಿಸಿದರೆ ಸಾಕು ಅಲ್ಲಿ ಬೇರೆಯವರಿಗಿಂತಲೂ ಹೆಚ್ಚಿನ ಇಂತಹ ಜನರು ಕಾಣುತ್ತಾರೆ.

ಬಿಡಿ ನಮಗ್ಯಾಕೆ ಬೇಕು ದೊಡ್ಡವರ ಉಸಾಬರಿ !
 ನನ್ನನ್ನು ಹೆಚ್ಚು ಇಷ್ಟ ಪಡುವಂತೆ ಮಾಡಿದ ಕಾರ್ಯಕ್ರಮ ಸ್ಟಾರ್ ವಾಹಿನಿನಚ್ ಬಲಿಯೆ. ಈ ಸೀಸನ್ ನಲ್ಲಿ ಮತ್ತೆ ಅದೇ ಪ್ರತಿಭಾವಂತ  ಸಾಜಿದ್, ಶಿಲ್ಪ, ಟೆರೆನ್ಸ್ . ಅವರೆಲ್ಲರೂ ಸಕತ್ ಇಷ್ಟ ನನಗೆ.
 ಆದರೆ ಈ ಬಾರಿ ಹೆಚ್ಚು ವಿನೋದ್  ದಂಪತಿಗಳ ಡ್ಯಾನ್ಸ್ ( ಹೆಸರು ಸರಿ ಇದೆ  ಅಲ್ವೇ )
 ಅದರಲ್ಲೇನು ಅಂತ ಕೇಳಬೇಡಿ . ಆ ಡ್ಯಾನ್ಸ್ ನಲ್ಲಿ ಇರುವ ಜೋಡಿಯಲ್ಲಿ ಹುಡುಗನಿಗೆ  ಕಾಲಿಲ್ಲ . omg  ಅನ್ನುವಂತಾಯಿತು ಆ ಹುಡುಗನ ಡ್ಯಾನ್ಸ್ ನೋಡಿ . ಆತನ ಸ್ಮೈಲ್  ಸಹ ವಾವ್.. ತಪ್ಪದೆ ನೋಡ್ರಿ !

ಕ್ಷಮೆ ಇರಲಿ ಪ್ಲೀಸ್ !





ಪ್ರೀತಿಯ ಗೆಳೆಯ ಬದರಿನಾಥ  ಪಲವಳ್ಳಿ  ವಾಹಿನಿಯ ಕ್ಯಾಮರಾಮನ್. ಸುಂದರ-ಅಸುಂದರ ದೃಶ್ಯಗಳನ್ನು ಸೆರೆ ಹಿಡಿಯುವ ಈತ ಅದ್ಭುತ ರೀತಿಯಲ್ಲಿ ಅಕ್ಷರಗಳ ಮೂಲಕ ಎಲ್ಲರ ಮನವನ್ನು  ಸೆರೆ ಹಿಡಿಯುವುದರಲ್ಲಿ ನಿಸ್ಸೀಮ. ಈಗ ಸುವರ್ಣ ನ್ಯೂಸ್ ನಲ್ಲಿ ಬದುಕನ್ನು ಕಾಣುತ್ತಿರುವ ಬದರಿನಾಥ್ ತುಸು ಹೆಚ್ಚೇ ಭಾವುಕ. ಅತಿ ಅನ್ನಿಸುವಷ್ಟು ಅದರ ಪ್ರಕಟ . ಪ್ರಾಯಶಃ ಆತನ ಬದುಕಲ್ಲಿ ಅತಿ ಸಿಟ್ಟಿಗೆದ್ದ ಗೆಳತಿ ನಾನೇ ಅಂತ ಕಾ ಣು ತ್ತೆ. ಒಳ್ಳೆ ಮನದ ಗೆಳೆಯನ ಕವನ ಸಂಕಲನ ಇತ್ತೀಚಿಗೆ ಬಿಡುಗಡೆ ಆಯಿತು. ಮೊದಲಿನಿಂದಲೂ ನಾನು ಆತನ ಕವನ ಓದುಗಳು . ಫೇಸ್  ಬುಕ್  ನಲ್ಲಿ ಲಿಂಕ್ ಅಂಟಿಸಿ ನೋಡಮ್ಮ ವಸಿ ಎ೦ದೋ .. ನಿಮ್ಮ ಅಭಿಪ್ರಾಯ  ನಮಗೆ   ಬಹಳ  ಮುಖ್ಯ ಎಂದೋ ಒಟ್ಟಿನಲ್ಲಿ  ಓದುವಂತೆ ಮಾಡುತ್ತಿದ್ದ  ಭೂಪ !
 ಪ್ರೀತಿ ಹೆಚ್ಚಾದಾಗ ಸ್ವಲ್ಪ ತೆಲುಗು, ಬೇಜಾರಾದಾಗ ಕನ್ನಡ,  ಹಾಗೆ ಸುಮ್ಮನೆ ಸ್ವಲ್ಪ ಇಂಗ್ಲೀಷು ಇದು ನಮ್ಮ  ಲೈಫು.

ಮೊದಲೇ ತಿಳಿಸಿದಂತೆ ಆತ  ತೀರಾ  ಭಾವುಕ. ಅನೇಕ ಬಾರಿ ನಾವಿಬ್ಬರು ಕವನಗಳ ಮೂಲಕ ಜಗಳ ಆಡಿ  ಸಿಟ್ಟು ತೋರಿಸಿದ್ದೇವೆ ಅದರಲ್ಲೂ ನಾನು ಬಿಡಿ :-) ಆದರೆ ಎಲ್ಲವನ್ನು ಮೀರಿದ ಸಂತೋಷ ಅಂದ್ರೆ ಬದರಿ ಕವನ ಸಂಕಲನ ಬಿಡುಗಡೆ ಆಗಿರೋ ದು. ಯಾಕೆ ಅಂದ್ರೆ ಬದರಿಯ ಈ ಆಸೆ ಇಂದು ನಿನ್ನೆಯದಲ್ಲ. ಒಂದು ಕವನ ಸಂಕಲನ ಬಿಡುಗಡೆ ಆಗ ಬೇಕು ಕಣಮ್ಮ ಎಂದು ಪ್ರತಿಬಾರಿ ಸಿಕ್ಕಾಗಲು  .. ಫೋನಿಸಿದಾಗಲು  ತಪ್ಪದೆ ಹೇಳುತ್ತಿದ್ದ ಭಾವುಕ. ಯಾಕಿಷ್ಟು ಆತುರ ಕಾತುರ ಅಂದ್ರೆ ಮತ್ತದೇ ಸಾವಿನ ವಿಷಯ. ಏನು ಹಾಗಂದ್ರೆ ಅನ್ನುವುದು ಸಹಜ. ಆದರೆ ಆತನ ಭಾವದಲ್ಲಿ ಅಡಗಿರುವ ಆ ಅಂಶಗಳು ಬಿಡಿಸಿ ಹೇಳೋಕೆ ಆಗಲ್ಲ. ಚಿಕ್ಕಂದಿನಲ್ಲಿ ತಂದೆಯನ್ನು ಕಳೆದುಕೊಂಡ ಬದರಿ ಕವನಗಳಲ್ಲಿ ಸಾವಿನ ಬಗ್ಗೆ ಒಂದಷ್ಟು- ತಿಳಿದಷ್ಟು ಬರೆಯುವ ಜೀವ. ಚಿಕ್ಕಂದಿನಲ್ಲಿ ತಂದೆಯನ್ನು ಕಳೆದು ಕೊಂಡ  ನನಗೂ ಅದ್ಯಾಕೋ ಈತನ ಕವನಗಳು ಆಪ್ತ.




ಪಾತ್ರ ಅನ್ವೇಷಣಾ  ನಮ್ಮ ಪ್ರೀತಿಯ ಬದರಿಯ ಕವನಸಂಕಲನ. ಬೆಲೆ ಕೇವಲ 100ರೂ. ಹೆಚ್ಚಿಗೆ ಹೇಳಲಾರೆ ಕವನಗಳ ಬಗ್ಗೆ ಒಂದೊ೦ದು  ಅಮೂಲ್ಯ, ಅಮೋಘ  ಹಾಗೂ ಅನರ್ಘ್ಯ . ಎಲ್ಲವೂ ಇದೆ ಈ ಕವನ ಹೂ  ತೋಟದಲ್ಲಿ . ಸಂಭ್ರಮ, ಹಳೆಯ ನೆನಪುಗಳ ಸಮಾಗಮ, ಜಾಗತೀಕರಣದ ಅಂಧ ಸರಿಗಮ  , ಪ್ರೀತಿಯ ಮಧುರಿಮ, ಸೋತ ಕ್ಷಣದ ಪರಿಣಾಮ. ಪ್ರೀತಿಯ ಗೆಳೆಯ ಇನ್ನು ಹೆಚ್ಚು ಬರೆಯಲಿ. ಅಂದಿನ ಕಾರ್ಯಕ್ರಮ ಸುಮಧುರ. ಮುಖ್ಯವಾಗಿ ಈ ಭಾವುಕನ ಕನಸಿಗೆ ಜೀವ ಕೊಟ್ಟವರಿಗೆ ನಮೋನ್ನಮಃ . ಅಂದು ಇನ್ನು ಮೂರು ಪುಸ್ತಕಗಳು ಬಿಡುಗಡೆ ಆಯಿತು. ಅದರಲ್ಲಿ ದಿನಕರ ಮೊಗೆರ ನನ್ನ ಬ್ಲಾಗ್ ಓ ದುಗರು. ಅವರ ಸಣ್ಣ ಕಥೆಗಳು ಹೆಚ್ಚು ಮಜಾ ಕೊಡ್ತು . ಉಳಿದಿಬ್ಬರದ್ದು ಅಷ್ಟೇ  ಖುಷಿ  ನೀಡಿದೆ  ಹೆಚ್ಚು ಇಂದಿನ ಬರಹ ಬದರಿ ಪುಸ್ತಕಕ್ಕೆ ಅರ್ಪಿತ.. ಸೊ ಬೇರೆಯರ  ಬಗ್ಗೆ ಬರೆಯಲಾರೆ ಕ್ಷಮೆ ಇರಲಿ ಪ್ಲೀಸ್ !