ಉಡುಪು

 

 ಸುದೀಪ ..

ಹಿಂದೀ ದೂರದರ್ಶನದಲ್ಲಿ ಆಗಿನ್ನೂ ಧಾರವಾಹಿಗಳ ಆರಂಭಕಾಲ. ಸಣ್ಣಪುಟ್ಟ ಧಾರವಾಹಿಗಳು, ಕಥೆಗಳು ಪ್ರಸಾರ ಆಗುತ್ತಿತ್ತು. ಒಂದು ಹೆಚ್ಚು ಮನದಾಳದಲ್ಲಿ ನಿಂತಿದೆ. ಸಿನಿಮಾ ತೆಗೆಯುವ ಟೀಮ್‌ ಒಂದು ಸ್ಲಂ ನಲ್ಲಿ ವಾಸಿಸುವವರ ಬಗ್ಗೆ ಸಿನಿಮಾ ನಿರ್ಮಾಣ ಮಾಡಬೇಕು ಎಂದು ನಿರ್ಧಾರ ಮಾಡಿದರು. ಸರಿ ಅದಕ್ಕಾಗಿ ನಿಗದಿತ ಸ್ಲಂ ಒಂದನ್ನು ಹುಡುಕಿದರು. ಅಲ್ಲಿ ಪುಟ್ಟ ಸುಂದರಿ ಇದ್ಲು. ಮುದ್ದಾದ ಬಾಲಕಿ ಆ ಸಿನಿಮಾ ಮುಖ್ಯಪಾತ್ರ ಎಂದು ಟೀಂ ನಿರ್ಧಾರ ಮಾಡಿದರು. ಅವಳ ಬಳಿ ತಮ್ಮ ಮನದ ಮಾತನ್ನು ಹೇಳಿದರು. ಆ ಹುಡುಗಿಗೆ ಸ್ವರ್ಗ ಕಾಲಡಿ!! ಸರಿ ಆಕೆ ಬಾಲಿವುಡ್‌ ಪ್ರಸಿದ್ಧ ನಟಿಯರಂತೆ ನಟಿಸುವುದರ ತಾಲೀಮು ಶುರು ಮಾಡಿದಳು. ಯಾವಾಗ ಶೂಟಿಂಗ್‌ ಆಗುತ್ತದೆಯೋ ಎನ್ನುವ ಕಾತುರ ಆಕೆಗೆ. ಇನ್ನೇನು ಆ ದಿನ ಸಮೀಪಕ್ಕೆ ಬಂತು. ಆಗ ನಿರ್ದೇಶಕಿ ಆಕೆಯ ಪಾತ್ರದ ಬಗ್ಗೆ ವಿವರಿಸಿದಳು. ಅದರಲ್ಲಿ ಆ ಹುಡುಗಿ ಸ್ಲಂ ವಾಸಿ ಚಿಂದಿ ಆಯುವ ಹುಡುಗಿ. ಇಷ್ಟು ದಿನ ಖುಷಿಯಿಂದ ಇದ್ದ ಆ ಹುಡುಗಿ ಸಿನಿಮಾದಲ್ಲಿ ನಟಿಸಲು ನಿರಾಕರಿಸಿದಳು. ಆಗ ಅವಳು ಹೇಳಿದ್ದಿಷ್ಟೇ. ನಾವಿರುವುದು ಸ್ಲಂ ನಲ್ಲಿ ಹಾಗೆಂದು ಅದನ್ನು ಜನರ ಮುಂದೆ ತರಲು ನನಗೆ ಇಷ್ಟ ಇಲ್ಲ. ನೀವು ನೈಜವಾಗಿ ತರುವ ಪ್ರಯತ್ನದಲ್ಲಿ ಇದ್ದೀರಿ, ಆದರೇ ನಮಗೆ ಈ ಬದುಕಿನ ಮೂಲಕವೇ ತೆರೆಯ ಮೇಲೆ ಕಾಣುವುದು ಇಷ್ಟ ಇಲ್ಲ!

ಇದನ್ನು ಬರೆದದ್ದು ಯಾಕೆ ಅಂದ್ರೆ ,ಬಿಗ್ ಬಾಸ್‌ ಸ್ಫರ್ಧಿ ಅನುಮಂತ(ಶೋಭಾ ಶೆಟ್ಟಿ  ಕರೆಯುವಂತೆ ಬರೆದಿದ್ದೀನಿ ಅಷ್ಟೇ !) ಡ್ರೆಸ್‌ ಕೋಡ್‌ ಲುಂಗಿ ಮತ್ತು ಶರ್ಟ್‌ ಅಂತ ಜಗತ್ತಿಗೆ ತೋರಿಸಿ ಆತನ ಬದಲಾವಣೆಗೆ ಅವಕಾಶ ಕೊಡದ  ಒಂದು ವಾಹಿನಿಯ ಕಾರ್ಯಕ್ರಮ.ಆ ನಿಯಮ ಮುರಿದು ಬಿಗ್‌ ಬಾಸ್‌ ನಲ್ಲಿ ಮಾಡ್ರನ್‌ ಡ್ರೆಸ್ನಲ್ಲಿ ಅವರನ್ನು ಜಗತ್ತಿನ ಮಂದೆ ತಂದ್ರಿ. ಆ ಅಂಶ ನನಗೆ  ತುಂಬಾ ಇಷ್ಟ ಆಯಿತು.ಹನುಮಂತ ಅವರನ್ನು ನೋಡುವ ಪ್ರತಿಬಾರಿಯೂ ನನಗೆ ಮೇಲೆ ಹೇಳಿದ ಕಥೆ ನೆನಪಿಗೆ ಬರುತ್ತಿತ್ತು. ನಾನು ತಪ್ಪದೇ ವೀಕ್ಷಿಸುವ ಕಾರ್ಯಕ್ರಮ  ಬಿಗ್‌ ಬಾಸ್.‌ ಅದರಲ್ಲೂ ಶನಿವಾರ-ಭಾನುವಾರ….ಯಾವುದೇ ಕಾರ್ಯಕ್ರಮ ಇರಲಿ ಅದನ್ನು ಮುನ್ನಡೆಸುವ ಪ್ರಸೆಂಟರ್‌ ಆ ಇಡೀ ಕಾರ್ಯಕ್ರಮದ ಜೀವಾಳ. ಜಾಸ್ತಿ ಹೊಗಳಿಕೆ ಬೇಡ ಅಲ್ವಾ ಸುದೀಪ.

 



No comments: