ಮಾಧುರ್ಯ

nature grass apple fruit wallpaper


ಗೆದ್ದವರ ಬದುಕನ್ನು ಕೂಲಂಕಷವಾಗಿ ನೋಡಿದಾಗ ಬಹುತೇಕರು ಅಪಮಾನದ ಮೂಸೆಯಲ್ಲಿ ಕರಗಿ ಸುಂದರ ಆಕೃತಿ ಪಡೆದಿರುತ್ತಾರೆ. ವಿಷಾದ , ವಿಡಂಬನೆ, ತಮಾಷೆ ಅಂದ್ರೆ ಆ ರೀತಿ ಅಪಮಾನದ ನೋವು ಅನುಭವಿಸಿ ಬೆಳೆದ ದೊಡ್ಡವರು ಅಪಮಾನ ಮಾಡುವ ಕಾಯಕದಲ್ಲಿ ನಿರತರಾಗಿರುತ್ತಾರೆ.
ಕೆಲವು ತಿಂಗಳ ಹಿಂದೆ ನಾನು ಆನ್ ಲೈನ್ ಪತ್ರಿಕೆಯಲ್ಲಿ ಸಿನಿಮಾ ಬಗ್ಗೆ ಬರೀತಾ ಇದ್ದೆ. ಈಗ ಬರೀತಾ ಇಲ್ಲ. ಅದಕ್ಕೂ ಮುನ್ನ ಕನ್ನಡದ ಪ್ರತಿಷ್ಠಿತ  ಸಿನಿಮಾ ಮಾಸ ಪತ್ರಿಕೆಯಲ್ಲಿ ಸಹ ಲೇಖನ ಬರೀತಾ ಇದ್ದೆ, ಸೊ ಈಗ ಬರೀತಾ ಇಲ್ಲ. ಯಾಕೆ ಈ ಸಂಗತಿ ಹೇಳ್ತಾ ಇದ್ದೀನಿ ಅಂದ್ರೆ, ನಮ್ಮ ಬಗ್ಗೆ ನಾವು ಬಹಳಷ್ಟು, ಇಲ್ಲ ಸಲ್ಲದ ಒಂದು ಬಿಲ್ಡ್ ಅಪ್ ಹೊಂದಿರುತ್ತೇವೆ. ಅದು ನಾವು ಅಂದು ಕೊಂಡಂತೆ ಅಲ್ಲ ಎನ್ನುವ ಸತ್ಯ ಗೊತ್ತಾದಾಗ ಆಗುವಂತಹ ಪರಿಣಾಮವೇ ಬೇರೆ. ಆದರೂ ಬದುಕಲ್ಲಿ ಹೀಗೆ ಆಗಾಗ ನಡೆಯುತ್ತಿರ ಬೇಕು. ಆಗ ಮಾತ್ರ ನಮ್ಮಲ್ಲಿರುವ ನಾವು ಮತ್ತಷ್ಟು ಗಟ್ಟಿ ಆಗುತ್ತೇವೆ.

Image result for nature

@ ಚಂದನ ವಾಹಿನಿಯಲ್ಲಿ ಪ್ರಸಾರ ಆಗುವ ಥಟ್ ಅಂತ ಹೇಳಿ ಕಾರ್ಯಕ್ರಮದ  ವಿಶೇಷ ಎಪಿಸೋಡ್ ಗಳು ಹಬ್ಬಗಳು, ರಾಷ್ಟ್ರೀಯ ಹಬ್ಬಗಳು, ವಿಶೇಷ ಸಮಯದಲ್ಲಿ ಅಲ್ಲದೆ ಪ್ರತಿ ಶುಕ್ರವಾರ ವಿಶೇಷವಾಗಿರುತ್ತದೆ. ಅಂದು ಯಾರು ಬರ್ತಾರೆ ಎನ್ನುವ ಕುತೂಹಲ ಇದ್ದೆ ಇರುತ್ತದೆ ನನಗೆ.ಜೊತೆಗೆ ನಾ. ಸೋಮೇಶ್ವರ್ ಮೇಷ್ಟ್ರ ಶೈಲಿ ಸದಾ ಇಷ್ಟ ನನಗೆ.  ಈ ಬಾರಿ ಥಟ್ ಅಂತ ಹೇಳಿಯಲ್ಲಿ ನೆರೆಯ ರಾಜ್ಯವಾದ ಆಂಧ್ರದ ಇತಿಹಾಸದ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದು ಕಂಡು ಹೆಚ್ಚು ಆಶ್ಚರ್ಯ ಆಗಲಿಲ್ಲ. ಯಾಕೇಂದ್ರೆ ಇತಿಹಾಸ ಯಾವ ಪ್ರಾಂತ್ಯದ್ದಾದರೂ ತಿಳಿಯುವುದು ಹೆಚ್ಚು ಒಳ್ಳೆಯದು. ಅದರಲ್ಲೂ ಸಾಧಕ ಜೀವಗಳ ಬಗ್ಗೆ ಅರಿಯುವುದು ಒಳ್ಳೆಯದು. ಇಂತಹ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ಮುನ್ನಡೆಯುತ್ತದೆ. ಸಿನಿಮಾಗಳಲ್ಲಿ ತೆಲುಗು ತುರುಕಿ ಆ ಭಾಷೆ ಅರ್ಥ ಆಗದೆ, ಆ ಚಿತ್ರ ತೋಪೆದ್ದು ಹೋಗುವಂತಹದ್ದಲ್ಲ ಇಂತಹ ಸಂಗತಿಗಳು.
ಇತ್ತೀಚಿಗೆ ಅತಿಯಾದ ಕರೆಂಟ್ ಹೋಗುವುದು, ಅತಿಯಾಗಿ  ಇಂಟರ್ ನೆಟ್ ಸರ್ವರ್ ಡೌನ್ ಆಗುವ ಕಾರಣದಿಂದ ವೀಕ್ಷಣೆ, ಬರೆಯುವ ಕೆಲಸ ಕಡಿಮೆ ಆಗಿದೆ. ಆದರೆ ಏನು ಮಾಡೋಕೆ ಆಗಲ್ಲ ಅಂತ ಸುಮ್ಮನಾಗುವ  ಕೆಲಸ ಮಾಡ್ತಾ ಇದ್ದೀನಿ.


@ ಹಿಂದಿ  ಜೀ ವಾಹಿನಿಯಲ್ಲಿ  ಎ ವಾದಾ ರಹ ಧಾರಾವಾಹಿಯು ಪ್ರಸಾರ ಆಗ್ತಾ ಇದೆ. ಹೊಸದಾಗಿ ಪ್ರಸಾರ ಆಗುವ ಸ್ವಳಪ್ ದಿನ ತಪ್ಪದೆ ನೋಡ್ತೀನಿ, ಆಮೇಲೆ ಕಥೆ ಕಾಲು ಬಾಲ ಇರಲ್ಲವಲ್ಲ ಅದು ಹೇಗ್ ಹೇಗೋ  ಮುಂದುವರೆದಾಗ  ಆ ಕಾರಣದಿಂದ  ನೋಡದೆ ದೂರ ಸರಿಯುವುದು ಸಾಮಾನ್ಯ. ಅದರಲ್ಲಿನ ಹೀರೋ - ಹೀರೋಯಿನ್ ( ಚಿಕ್ಕವರು  ಇಬ್ಬರು ) , ಅವರ ನಟನೆಯಲ್ಲಿರುವ ಫ್ರೆಶ್ನೆಸ್ , ತಾಯಿ ಪಾತ್ರಧಾರಿ, ಗಣಪತಿ ಬಪ್ಪ ಎಲ್ಲ ಇಷ್ಟ ಆಗಿದೆ. ಬಪ್ಪ ಭಕ್ತಳಾದ ನನಗೆ ಬಪ್ಪ ಇರುವ ಕಡೆ ಇಷ್ಟ ಆಗೋದು ಸಹಜ ಆದರು, ಧಾರವಾಹಿ ಹಳ್ಳ ಹಿಡಿದಾಗ ಮಾತ್ರ ಬಪ್ಪ ಸಾರಿ ಬಪ್ಪ ಅಂತ ನೋಡದೆ ಇರುವುದು ಸಾಮಾನ್ಯ.

Image result for nature

@ ಜೀ ಕನ್ನಡ ವಾಹಿನಿಯಲ್ಲಿ  ಲಿಲ್ ಚಾಂಪ್ ಹಾಡಿನ ರಿಯಾಲಿಟಿ ಷೋ ಬಗ್ಗೆ ಹೇಳಿದ್ದೆ. ಅದರಲ್ಲಿ ನಿರೂಪಕಿಯ  ಆ ವರ್ತನೆ ಬಗ್ಗೆ ಬರೆದಾಗ ಅದನ್ನು ಓದಿದವರ ಪ್ರತಿಕ್ರಿಯೆ ಇಲ್ಲಿ ಹಾಕ್ತಾ ಇದ್ದೀನಿ.ಅದಕ್ಕೂ ಮುನ್ನ ಈ ಒಂದು ಹಾಡಿನ ಸ್ಪರ್ಧೆಯಲ್ಲಿ ಸುಪ್ರಿಯಾ ಜೋಷಿ ಎನ್ನುವ ಸ್ಪರ್ಧಿ ಇದ್ದಾಳೆ. ಅಬ್ಬಾ   ಎಂಥ ಸ್ವೀಟ್ ಇದೆ ಗೊತ್ತ ಆಕೆಯ ಧ್ವನಿ. ತುಂಬಾ ಖುಷಿ ಕೊಡುತ್ತದೆ ಆಕೆಯ ಹಾಡಿನ ಶೈಲಿ.
ಎಸ್ ಪಿ ಬಾಲಸುಬ್ರಮಣ್ಯಂ ಧ್ವನಿ ಆಹಾ.. ತುಂಬಾ ಇಷ್ಟ ಪಟ್ಟು ಕೇಳುವ ಶಾರೀರ ಅವರದ್ದು. ಆನಂತರ ಆ ರೀತಿಯ ಖುಷಿ  ಸಿಕ್ಕೋದು ರಾಜೇಶ್ ಕೃಷ್ಣನ್ ಅವರಿಂದ, ವಿಜಯ್ ಪ್ರಕಾಶ್ ಅವರ ಧ್ವನಿಯಲ್ಲಿ ಸಿಗುವ  ಮಾಧುರ್ಯ ವಿಭಿನ್ನ..ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆ ಅಪರೂಪ..
ಆದರೆ ಹೊಸ ಪ್ರತಿಭೆಗಳಿಂದ ಪ್ರತಿಯೊಂದು  ಸೀಸನ್ ಸಿಗುವ ಆನಂದ ಅಪಾರ.
 ನಿರೂಪಕಿ ಬಗ್ಗೆ ಹೊಂದಿರುವ ಅಭಿಪ್ರಾಯಗಳಲ್ಲಿ ಒಂದಷ್ಟು...
ಆದರೆ ಇಲ್ಲಿ ನಾನು ಹಾಕಿರುವ ಕಾಮೆಂಟ್ ಗಳು ಆ ನಿರೂಪಕಿಯನ್ನು ನೋಯಿಸುವ ಉದ್ದೇಶದಿಂದ ಅಲ್ಲ.. ಜನರ ಅಭಿಪ್ರಾಯ ಹೀಗಿರುತ್ತದೆ. ಈ ಕಾರ್ಯಕ್ರಮ  ಆರಂಭವಾದ ದಿನದಿಂದ ಇಂತಹ ಪ್ರತಿಕ್ರಿಯೆ ಬರ್ತಾನೆ ಇದೆ.  ಬೇರೆ ಭಾಷೆಯಲ್ಲಿ ಇಂತಹ ಅಂಶಗಳು ಬಹಳ ಸಾಮಾನ್ಯ, ಆದರೆ ಕನ್ನಡ ವೀಕ್ಷಕರಿಗೆ ಕನ್ನಡದ ಚಾನೆಲ್ ನಲ್ಲಿ ಇಂತಹ  ವೈಖರಿ ಅದ್ಯಾಕೋ ಲೈಕ್ ಆಗ್ತಾ ಇಲ್ಲ. ಅದನ್ನು ಗಮನದಲ್ಲಿಟ್ಟು  ಕೊಳ್ಳುವುದು ಬಹಳ ಮುಖ್ಯ. ವೀಕ್ಷಕನ ಕೈಲಿ ರಿಮೋಟ್ ಇರುತ್ತದೆ.. ಈಗಂತೂ ಸಿಕ್ಕಾಪಟ್ಟೆ   ಚಾನೆಲ್ ಗಳು ಸಹ ಇವೆ ಅಲ್ಲವೇ   ?


Raaghu Mathikere Nirupaki atiyagi adodu yarigu esta agtila

Arkalgud Jayakumar ಅಕುಲ್ ಬಾಲಾಜಿ ಸಹಜವಾಗಿ ನಿರೂಪಣೆ ಮಾಡುತ್ತಾ ಪ್ರಿಯಾಮಣಿಯನ್ನು ಕಾಲೆಳೆಯಲು ಯತ್ನಿಸುವ ರೀತಿ ಮನಸ್ಸಿಗೆ ಮುದ ನೀಡುತ್ತೆ ಅದನ್ನೆ ಲಿಟ್ಲ್ ಚಾಂಪ್ ನಲ್ಲಿ ಅನುಕರಣೆ ಮಾಡಲೆತ್ನಿಸುವ ನಿರೂಪಕಿ ಅನುಶ್ರೀ ಶೋ ನಲ್ಲಿ ಪೇಲವವಾಗಿ ಬಿಡುತ್ತಾರೆ, ಮತ್ತು ಅವರ ಫನ್ ಅತೀ ಎನಿಸಿ ಬಿಡುತ್ತೆ. ನು ಕಾರ್ಯಕ್ರಮ ಸಂಘಟಕರು ಇದನ್ನು ಗಮನಿಸ ಬೇಕು
Like

ಪರಿಹಾರ

Image result for pink flowers
ಇತ್ತೀಚೆಗೆ ಸಣ್ಣ ಪುಟ್ಟ ವೀಡಿಯೋಗಳನ್ನು ವೀಕ್ಷಿಸುವ ಕೆಲಸ.ಮಾನವೀಯತೆ, ಪ್ರೀತಿ, ಬುದ್ಧಿ   ಹೇಳೋದು, ಪ್ರಾಣಿ ಪಕ್ಷಿಗಳು, ಹೀಗೆ ಹತ್ತು ಹಲವಾರು ವೀಡಿಯೋಗಳು. ಅದೆಷ್ಟೋ ವೀಡಿಯೋಗಳು ಫನ್ನಿ ಅನ್ನಿಸಿದರೂ ಪೂರ್ತಿ ನೋಡಿರುತ್ತೇವೆ. ಇರಲಿ ಈಗ ವೀಡಿಯೋ ಕಾಲ ಎಂದು ಹೇಳ ಬಹುದು. ಅದರ ನಡುವೆ ತಲೆ ಕೆಟ್ಟು ಕೆರ ಹಿಡಿಯ ಬೇಕಾದರೆ ಸಾಮಾಜಿಕ ಜಾಲತಾಣದಲ್ಲಿ ನಮ್ಮನ್ನು ನಾವು ತೊಡಗಿಸಿ ಕೊಳ್ಳಬೇಕು. ನನಗೆ ಆಶ್ಚರ್ಯ ತಂದ ಅನೇಕ ಸಂಗತಿಗಳು ಅಂದೇ. ಕೆಲವು ವರ್ಷಗಳ ಹಿಂದೆ ಮುಸ್ಲೀಮ್ ಬಾಂಧವರನ್ನು ಪಾಕಿಸ್ತಾನಿಗಳು ಎಂದು ಇನ್ನು ಬೇರೆ ರೀತಿಯಲ್ಲಿ ಕರೆಯುತ್ತಿದ್ದ ಹೆಣ್ಣುಮಗಳಿಗೆ  ಇದ್ದಕ್ಕಿದ್ದಂತೆ ಎಲ್ಲ ಧರ್ಮಗಳನ್ನು, ಅದರಲ್ಲೂ ಇಸ್ಲಾಂ ಧರ್ಮದ ಬಗ್ಗೆ ಅಪಾರವಾದ ಪ್ರೀತಿ..! ನೀವು   ಅನ್ನಬಹುದು ಬದಲಾವಣೆಯಿಂದ ಅಂತ, ಇಲ್ಲ ಬಿಡಿ ಕೆಲವು ಹೇಳೋಕೆ ಆಗದ ಸತ್ಯಗಳು ಇವೆ.. ಆದರೆ ತನ್ನ ಯಶಸ್ಸಿಗೆ ಧರ್ಮವನ್ನು ಮೆಟ್ಟಿಲು ಮಾಡಿಕೊಳ್ಳುವ ಮಂದಿ ಇದ್ದಾರೆಂಬೋದು ಸತ್ಯವಾದ ಸಂಗತಿ ಎನ್ನುವುದಷ್ಟೇ ನಾನು ಹೇಳ್ತಾ ಇರೋದು. ನನ್ನ ಮನೆಯಲ್ಲಿ ಮುಸ್ಲಿಂರ ಜೊತೆಗಿನ ಒಡನಾಟ ಜಾಸ್ತಿ ಇದೆ. ಅವರ ಇಫ್ತಾರ್ ನಷ್ಟೇ ನಮ್ಮ  ಮನೆಯ ಗಣೇಶ ಹಬ್ಬವು ಪ್ರಾಮುಖ್ಯತೆ ಪಡೆದಿರುತ್ತದೆ.
Image result for pink flowers
@ಟೀವಿ ನೈನ್ ವಾಹಿನಿಯಲ್ಲಿ  ಹರಿಪ್ರಸಾದ್ ಅವರು ಮಕ್ಕಳ ಕಳುವಿನ ಬಗ್ಗೆ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಅತ್ಯಂತ ಖೇದ ತರುವ ಸಂಗತಿ ಇದು. ಸರ್ಕಾರಿ ಆಸ್ಪತ್ರೆಯನ್ನು ಅವಲಂಬಿಸಿರುವ ಸಾಮಾನ್ಯರು ಹೆರಿಗೆ ನೋವು ಕೊನೆಗೆ ಮಗುವನ್ನು ಕಳೆದುಕೊಂಡ ನೋವು ಎರಡನ್ನು ಉಣ್ಣಬೇಕು. ಅಂತಹ ಕಾರ್ಯಕ್ರಮಗಳು ಮನಕ್ಕೆ ಬೇಸರ ಮೂಡಿಸಿದರು, ಈ ವಾಸ್ತವ ಸತ್ಯವನ್ನು ಅರಿಯಲೇ ಬೇಕು. ಇಂತಹ ಕೆಟ್ಟ ಸಮಸ್ಯಗಳಿಗೆ ಪರಿಹಾರವೇ ಇಲ್ಲವೇ ?

@ ಜೀ ಕನ್ನಡ ವಾಹಿನಿಯಲ್ಲಿ ಲಿಲ್ ಚಾಂಪ್ ಅತಿ ಚಂದದ ಕಾರ್ಯಕ್ರಮ. ಮುದ್ದು ಮಕ್ಕಳು ಸಿಕ್ಕಾಪಟ್ಟೆ ಚೆನ್ನಾಗಿ ಹಾಡ್ತಾ ಇದ್ದಾರೆ. ಇವರ ನಡುವೆ ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್, ಅರ್ಜುನ್ ಜನ್ಯ ತೀರ್ಪು ..ಎಲ್ಲವು ಚಂದ.
ಆದರೆ  ಫನ್ ಹೆಸರಲ್ಲಿ ನಿರೂಪಕಿ ಮತ್ತು ಅರ್ಜುನ್ ಜನ್ಯ  ಅವರ ಸಂಭಾಷಣೆ ಸ್ವಲ್ಪ ಮುಜುಗರ ತರುತ್ತೆ ಅನ್ನೋದು ಬಹಳಷ್ಟು ಜನರ .. ವೀಕ್ಷಕರ ಬೇಸರ. ನಿಜ ಅಂತಹ ಮಾತು, ಆ ರೀತಿಯ ಕವನ ಕೇಳುವಾಗ ಈ ಮೊದಲು ಕೇಳಿದ್ದ ಮಗುವಿನ ಹಾಡಿನ ಸವಿಯನ್ನು ದೂರ ಮಾಡುತ್ತದೆ. ಆದರೆ , ಅಂತಹ ಸಂಗತಿ ಬಗ್ಗೆ ಏನೂ ಹೇಳೋಕೆ ಆಗಲ್ಲ, ನಿರೂಪಕಿಗೆ ವಹಿಸಿದ ಕೆಲಸ ಆಕೆ ಮಾಡಲೇ ಬೇಕು. ಇಂತಹ ಅಂಶಗಳು ಎಲ್ಲಾ ಭಾಷೆಯ  ವಾಹಿನಿಗಳಲ್ಲೂ ಕಂಡು ಬರುತ್ತದೆ.  ಕೆಲವು ಸರ್ತಿ ಮುಜುಗರ ಅನ್ನಿಸುವಷ್ಟು. ಅದು ಆ ಗಳಿಗೆಯ ಸಂಗತಿ ಎಂದು ವೀಕ್ಷಕರು  ಮರೆಯುತ್ತಾರೆ. ಸುಮ್ಮನಾಗುತ್ತಾರೆ.  ಆದರೂ ಅತಿ ಆದ್ರೆ ...!

ನಿಜನಾ



ಒಬ್ಬರ ಜೊತೆ ಕೆಲವು ಗಂಟೆಗಳು ಕಳೆದರೆ ಸಾಕು ಅವರ ಬಗ್ಗೆ ತಿಳಿದು ಹೋಗುತ್ತದೆ ಎನ್ನುವ ಮಾತು ಅರಿತವರು ಹೇಳುತ್ತಾರೆ. ಅದು ಸತ್ಯ. ಅದೇ ರೀತಿ ಒಂದಷ್ಟು ಅಪರಿಚಿತರ ನಡುವೆ ನಾವಿದ್ದು, ಇರಲೇ ಬೇಕಾದಾಗ , ಇದ್ದು ಒಂದು ಕೈ ನೋಡೇ ಬಿಡುವ ಎಂದು ಕೊಂಡಾಗ ಆ ವ್ಯಕ್ತಿತ್ವಗಳ ಪರಿಚಯ ಆಗುತ್ತದೆ, ಇಷ್ಟವಾಗುತ್ತದೆ, ಕಷ್ಟವಾಗುತ್ತದೆ, ಹೀಗೆ ಹತ್ತು ಹಲವಾರು ಭಾವಗಳು. ಈ ಟೀವಿ ಕನ್ನಡ  ನ್ಯೂಸ್  ಮುಖ್ಯಸ್ಥರಾಗಿರುವ ಜಿ ಎನ್ ಮೋಹನ್ ಅವರು ತಮ್ಮ ಗೆಳೆಯ-ಗೆಳತಿಯರ ವಲಯದ ಒಂದಷ್ಟು ಮಂದಿಯನ್ನು ವಾಟ್ಸ್ ಆಪ್ ನಲ್ಲಿ ಒಟ್ಟು ಮಾಡಿದ್ದಾರೆ. ನಾನು ಇದ್ದೇನೆ ಅದರಲ್ಲಿ. ಅಲ್ಲಿ ಇರುವವರಲ್ಲಿ ಜಿನ್ ಬಿಟ್ರೆ ನನಗೆ ಯಾರೂ ಗೊತ್ತಿಲ್ಲ, ಆದರೆ ಒಂದಿಬ್ಬರು ವಾಟ್ ಆಪ್ ಪರಿಚಿತರಾಗಿದ್ದಾರೆ. ಆದರೆ ಬಹಳಷ್ಟು ಜನರಿಗೆ ನಾವು ಈ ಗ್ರೂಪ್ ನಲ್ಲಿ ಇದ್ದೇವೆ ಸೊ ಇದ್ದೇವೆ ಎನ್ನುವ ಭಾವ. ಯಾರ ಬಗ್ಗೆಯೂ  ನಾನು ಹೇಳುತ್ತಿಲ್ಲ, ಮನುಷ್ಯ ಸಂಘಜೀವಿ ಅನ್ನೋದು ನಿಜನಾ ಎನ್ನುವ ಸಂಗತಿ  ಇಂತಹ  ಅಂಶಗಳನ್ನು ಕಂಡಾಗ ಸಂಶಯ ಕಾಡುತ್ತದೆ ನನಗೆ.



@ನನ್ನನ್ನು ಹೆಚ್ಚು ಆಶ್ಚರ್ಯ ಗೊಳಿಸುವುದು ಈ ರಿಯಾಲಿಟಿ ಶೋಗಳು. ಅದರಲ್ಲಿನ ಸ್ಪರ್ಧಿಗಳು. ಅದರಲ್ಲಿ ಎಲ್ಲಿಂದಲೋ ಬಂದಿರುತ್ತಾರೆ. ಅನೇಕ ಸ್ತರಗಳು, ಜೀವನ ಶೈಲಿಗಳು. ಒಟ್ಟಾರೆ ಅವರ ಗುರಿ ಗೆಲುವು. ಆ ಗೆಲುವು ಭಿನ್ನವಾಗಿ ಇರಬೇಕು ಎನ್ನುವ ಮನಸ್ಥಿತಿ. ಅಂತಹ ಗೆಲುವಿಗಾಗಿ ಜೀ ಹಿಂದಿಯ ಡಿಐಡಿ  ಸ್ಪರ್ಧಿಗಳು, ಝಲಕ್ ದಿಕ್ಲಾಜ ಸ್ಪರ್ಧಿಗಳು ಕಾದಿದ್ದಾರೆ. ಬೇರೆ ಬೇರೆ ವಾಹಿನಿ ಆದರೂ ನನ್ನನ್ನು ಅತಿ ಹೆಚ್ಚು ಆಕರ್ಷಿಸಿರುವುದು ಜೀ ಯ  ಡಿಐಡಿ, ಸ್ಟಾರ್ ಪ್ಲಸ್ ನಲ್ಲಿರುವ ಪ್ಲಸ್ ಕಾರ್ಯಕ್ರಮ. ಇಲ್ಲಿ ಇರುವವರು ಯಾರೂ ಸೆಲೆಬ್ರಿಟಿ ಹಿನ್ನೆಲೆ ಇರುವವರಲ್ಲ.
ಅಂತಹ ಎಲೆಮರೆಯ ಕಾಯಿ ಜಗತ್ತಿನ ಮುಂದೆ ಬರೋದು ಖುಷಿಯ ಸಂಗತಿ. ಡಿಐಡಿ ಇನ್ನೇನು ಮುಗೀತಾ ಇದೆ, ಮಿಥುನ್ ದಾ, ಜಾಯ್, ಪುನೀತ್, ಗೇತಿ, ಮುದಸ್ಸರ್ ಜೊತೆಗೆ ಆ ಪ್ರತಿಭೆಗಳನ್ನು ಮಿಸ್ ಮಾಡಿಕೊಳ್ಳುವ ದಿನಗಳು ಹತ್ತಿರ ಬರ್ತಾ ಇದೆ. ಒಟ್ಟಾರೆ , ಇಷ್ಟ ಪಟ್ಟು ನೋಡುವಂತೆ ಹೊಸತನ ನೀಡಿದ  ಸ್ಪರ್ಧಿಗಳು.

@ಉದಯ ವಾಹಿನಿಯಲ್ಲಿ ಫ್ಯಾಮಿಲಿ  ನಂಬರ್ 1  ಎನ್ನುವ ಧಾರವಾಹಿ ಬರ್ತಾ ಇದೆ. ಅದರಲ್ಲಿ ಕಲಾವಿದರು ಅತಿ ಅಬ್ಬರದವರಲ್ಲ. ಅದರಲ್ಲಿ ಮಂಜುಳಾ ಎನ್ನುವ ಕಲಾವಿದೆ ಇದ್ದಾರೆ. ಆಕೆ ಎತ್ತರ ಕಡಿಮೆ ಇರುವ ಕಲಾವಿದೆ. ಸಾಮಾನ್ಯವಾಗಿ ಸಿನಿಮಾಗಳಲ್ಲಿ ಹೀರೋಯಿನ್ ಜೊತೆಗೆ ಇರುವ ಸಾಧಾರಣ ಮೊಗದ ಗೆಳತಿಯ ಪಾತ್ರಗಳನ್ನೂ ಮಾಡುತ್ತಾ ಬದುಕನ್ನು ನಡೆಸಿದ್ದಾಕೆ.ಈಗ ಫ್ಯಾಮಿಲಿ ನಂಬರ್ 1  ಇದ್ದಾರೆ. ಯಾವುದೋ ಒಂದು ಧಾರಾವಾಹಿಯಲ್ಲಿ ಕ್ರೂರವಾದ ಪಾತ್ರ ಸಹ ಮಾಡಿದ್ದ ನೆನಪು. ಒಟ್ಟಾರೆ ಈಕೆಗೆ ಕನ್ನಡದ ಧಾರವಾಹಿ ಲೋಕ ಅವಕಾಶ ನೀಡುತ್ತಿದೆ. ಅದೇ ಖುಷಿಯ ಸಂಗತಿ. ಇದೆ ಧಾರಾವಾಹಿಯಲ್ಲಿ ನನ್ನ ಎಫ್ ಬಿ ಮಿತ್ರ ಪ್ರಸಾದ್ ಅವರ ಮಗಳು ಪ್ರಕೃತಿ ಸಹ ಇದ್ದಾಳೆ. ಈ ಮುದ್ದಾದ ಬಾಲಿಕೆ  ಮುಂದೊಂದು ದಿನ ಸೂಪರ್ ಹೀರೋಯಿನ್ ಆಗೋದ್ರದಲ್ಲಿ ಸಂಶಯವೇ ಇಲ್ಲ.  ಆಗೋದ್ರದಲ್ಲಿ ಸಂಶಯ ಇಲ್ಲ. ಉತ್ತಮ ಅಭಿನೇತ್ರಿ ಪ್ರಕೃತಿ .
ಒಳ್ಳೆ ಭವಿಷ್ಯ ಕಾದಿದೆ ಎನ್ನುವುದು ಮಾತ್ರ ಸುಸ್ಪಷ್ಟ .
  @ಶಂಕರ ವಾಹಿನಿಯಲ್ಲಿ ಭಜನ್ ಸಾಮ್ರಾಟ್ ಎನ್ನುವ ಕಾರ್ಯಕ್ರಮ  ಪ್ರಸಾರವಾಗುತ್ತದೆ. ಇಲ್ಲಿ ತಮಿಳು ಹಾಗೂ ಕನ್ನಡದ ತೀರ್ಪುಗಾರರು ಇರ್ತಾರೆ. ಅದರ ಮುಖ್ಯ ಸಂಗತಿ ಅಂದರೆ ಆ ರಿದಂ. ಭಜನೆಯ ಸವಿ ಹೆಚ್ಚಿಸುವ ಶೈಲಿ, ತುಂಬಾ ಇಷ್ಟ ಆಗುವ ಆ ಸಂಯೋಜನೆ. ಸಂಗೀತಕ್ಕೆ ಯಾವುದೇ ಗಡಿ ಇರಲ್ಲ ಅನ್ನೋದು ಇಂತಹ ಕಾರ್ಯಕ್ರಮಗಳಿಂದ ಸ್ಪಷ್ಟವಾಗುತ್ತದೆ.
Image result for saffron flower

@ ನನ್ನನ್ನು ಅತಿ ಹೆಚ್ಚು ಸೆಳೆಯುವ ವಿದೇಶಿ ಚಾನೆಲ್ ಗಳಲ್ಲಿ Al Jazeera ಸಹ ಒಂದು.ಜೀವಪರತೆ ಇರುವ ಕಾರ್ಯಕ್ರಮಗಳು ಪ್ರಸಾರ ಆಗುವ ಈ ವಾಹಿನಿಯಲ್ಲಿ ಸಮಾಜದ ವಸ್ತುಸ್ಥಿತಿ ತೋರುವ ವಿಷಯಗಳನ್ನು ಸಹ ಜನರು ನೋಡ ಬಹುದು. ಕೆಲವು ದಿನಗಳ ಹಿಂದೆ   ಆ ವಾಹಿನಿಯಲ್ಲಿ  ವಿಶ್ವದ ಅತಿ ದೊಡ್ಡ ಮರುಭೂಮಿ ಸಹಾರ ಬಗ್ಗೆ, ಅಲ್ಲಿ ವಾಸಿಸುವ ಜನರು, ಅಲ್ಲಿನ ಚಳಿ, ಬಿಸಿಲು, ನೀರಿನ ಕೊರತೆ ಎಲ್ಲದರ ಬಗ್ಗೆ ಇರುವ ಕಾರ್ಯಕ್ರಮ ನೋಡಿದೆ. ತುಂಬಾ ವಿಶೇಷ ಅನ್ನಿಸಿದ್ದು ಅಲ್ಲಿನ ಗುರುಕುಲ. ಬೆಂಕಿಯನ್ನು ಹಚ್ಚಿ ಆ ಚಳಿಯಲ್ಲಿ ಮಕ್ಕಳು ಸ್ಲೇಟ್ ಹಿಡಿದು ಆಂಗ್ಲ ಭಾಷೆ ಸೇರಿದಂತೆ ಇನ್ನು ಅನೇಕ ಸಂಗತಿಗಳನ್ನು ಕಲಿಯುತ್ತಿದ್ದರು. ಓದು ಕಂಡು ಹಿಡಿದ ಮನುಷ್ಯ ಹೀಗೆ ಜಗತ್ತನ್ನು ಒಂದು ಮಾಡಿದ್ದಾನೆ. ತುಂಬಾ ಆಸಕ್ತಿ ನೀಡಿದ ಸಂಗತಿಗಳು ಆ ಕಾರ್ಯಕ್ರಮದಲ್ಲಿತ್ತು.