ಪಾಪ!

 




ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಶ್ರೀ ರಸ್ತು ಶುಭ ಮಸ್ತು ಧಾರಾವಾಹಿಯ ಎಲ್ಲಾ ಪಾತ್ರಗಳು ಚೆನ್ನಾಗಿವೆ. ಹಾಗೆ ಹೇಳುವುದಕ್ಕಿಂತ ಕಲಾವಿದರು ಅತ್ಯಂತ ಸುಂದರವಾಗಿ ನಟಿಸಿದ್ದಾರೆ. ತುಳಸಿ , ಮಾಧವ, ಅವರ ಮಕ್ಕಳು, ಶ್ರಾವಣಿ ಆಕೆಯ ಮಗಳ ಪಾತ್ರಧಾರಿ ಜೊತೆಗೆ ಸಹಾಯಕರಾಗಿ ಕೆಲಸ ಮಾಡುತ್ತಿರುವವರು ಎಲ್ಲರು ನಟಿಸಿದ್ದಾರೆ ಇಷ್ಟ ಆಗುವಂತೆ. .. ದತ್ತ  ಮತ್ತು  ಅವರ ಮೊಮ್ಮಗಳ  ಪಾತ್ರ ಸ್ವಲ್ಪ ಜಾಸ್ತಿ ಅನ್ನಿಸಿದರೂ ದತ್ತನಂತಹ ಹಿರಿಯರು ಮನೆಯಲ್ಲಿ ಇದ್ದರೆ ಸಮಸ್ಯೆಗಳ ಪರಿಹಾರ ತ್ರಾಸ ವಿಲ್ಲದೆ  ಆಗುತ್ತದೆ. ಆದರೆ  ಒಂದು ಸಂಗತಿ ಅಸಹಜ ಅನ್ನಿಸಿರುವುದು ಎಂದರೆ ಕಥೆ ಮತ್ತು ಕಥೆ.....! ಸಿನಿಮಾ ಕಥೆ ಯಂತೆ ಧಾರಾವಾಹಿ ಸಾಗಿದೆ. ತುಳಸಿ ಮತ್ತು ಮಾಧವ ಮಾಡುವೆ ಇಷ್ಟು ತರಾತುರಿ ಯಲ್ಲಿ ಆಗಿರುವುದು   ಮತ್ತು ಮುಖ್ಯವಾಗಿ ಅವರಿಬ್ಬರೂ ಮಾಡುವೆ ಆಗಿರೋದೇ ಅಸಹಜ ಅಂಶ.ಜೊತೆಗೆ ಶ್ರಾವಣಿ ಮಾಡುವ ಅನ್ಯಾಯ.. ಇಷ್ಟೆಲ್ಲ ಆಳವಾಗಿ ನೋಡ್ತೀನಾ ಎಂದುಕೊಳ್ಳಬೇಡಿ.. ವೀಕ್ಷಕ ರು  ಹೆಚ್ಚು ಸೂಕ್ಷ್ಮವಾಗಿ ಗಮನಿಸುತ್ತಾರೆ ಸಣ್ಣಪುಟ್ಟ ಅಂಶ. ....! ಇನ್ನಾದ್ರೂ  ಶ್ರಾವಣಿ ಗಂಡ ನಡೆದು ಮಾತಾಡೋ ಹಾಗೆ ಮಾಡ್ರಿ ಪಾಪ!


10 ..೧೦

 





ಕನ್ನಡ ಬಿಗ್  ಬಾಸ್  ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಾ ಇದೆ. ಅದು ಎಲ್ಲರಿಗು ಗೊತ್ತಿದೆಯೋ ಇಲ್ಲವೋ ನಾನಂತೂ ತಪ್ಪದೆ ನೋಡ್ತಾ ಇರ್ತಿನಿ . ನನಗೆ ಸುದೀಪ  ಒಂದು ಆಕರ್ಷಣೆ ಆದರೆ ಮತ್ತೊಂದು ಈ ರಿಯಾಲಿಟಿ ಷೋ  ಬಗ್ಗೆ ಇರುವ ಆಸಕ್ತಿ. ಇದರ ಬಗ್ಗೆ ಸಾವಿರಾರು ಅಭಿಪ್ರಾಯಗಳು ಬಂದರು ತಪ್ಪದೆ ವೀಕ್ಷಿಸುತ್ತೀನಿ. ಕಳೆದ ವಾರ ಮಂಗಳೂರು, ಉಡುಪಿ, ಧರ್ಮಸ್ಥಳ, ಕಟೀಲು ಅಂತ ಒಂದಷ್ಟು ಕಡೆ ಓಡಾಡಿಕೊಂಡು ಬಂದ  ಕಾರಣ ಸರಿಯಾಗಿ ವೀಕ್ಷಣೆ ಮಾಡದೆ ಇದ್ದರು ಸ್ಪರ್ಧಿಗಳು, ಅವರ ಆಟ , ಅವರುಗಳ ಚತುರತೆ ಬಗ್ಗೆ ನೋಡಿ ನೋಡಿ ...!ಏನೇ ಆದರು ಈ ಬಾರಿ ನನ್ನನ್ನು ಆಕರ್ಷಿಸಿದ ಮತ್ತೊಂದು ಅಂಶ ಬಿಗ್ ಬಾಸ್ ಮನೆ ಬಾಗಿಲು ಮತ್ತು ಕಿಟಕಿ. ಕನ್ನಡ ಸಂಖ್ಯೆ ೧೦   ರೂಪದಲ್ಲಿ ರಚಿಸಿದ್ದಾರೆ. ನನಗೆ ಹಾಗೆ ಅನ್ನಿಸಿದೆಯೋ ಅಥವಾ ಸೀಜನ್ 10 ನ್ನು  ಈ ರೀತಿ ತೋರಿಸಿದ್ದಾರೋ ಗೊತ್ತಿಲ್ಲ. 

@ ಕಿಚ್ಚ ಸುದೀಪ ದಿನೇದಿನೇ ಯಂಗ್ ಆಗಿ ಕಾಣ್ತಾ  ಇರೋದು ಈ ಬಿಗ್ ಬಾಸ್ ನ ಮುಖ್ಯ ಅಂಶ ಜೊತೆಗೆ ಹೊಸಬಗೆಯ ಭಿನ್ನ ರೀತಿಯ ಆಟಗಳು ಮನಸ್ಸಿಗೆ ಖುಷಿ ಕೊಟ್ಟಿದೆ. ನಂಗೆ ಸ್ಪರ್ಧಿ ವಿನಯ್ ಹೆಚ್ಚು ಇಷ್ಟ ಆಗಿದ್ದಾರೆ ಆದರೆ  ಸಂಗೀತ ಅತಿ ಆಶ್ಚರ್ಯ ಉಂಟು ಮಾಡಿದ್ದಾರೆ. ಹೇಗೆ ಅಂದ್ರೆ  ಕೆಲವು ಮಂದಿ ಇರ್ತಾರೆ  ಅವರು ಹೇಗೆ ಅಂದ್ರೆ ಹಾಯ್ ಹವ್ ಆರ್ ಯು ಅಂತ ಕೇಳಿದೆವು ಅಂತ ಅಂದುಕೊಳ್ಳಿ  ತಕ್ಷಣ ನೋ ಇಂಗ್ಲಿಸ್  ದಿಸ್ ಈಸ್  ಕನ್ನಡ ಮಂತ್ ಓನ್ಲಿ ಕನ್ನಡ !!ಹಾಗೆ ಸಂಗೀತ ಸಹ ಆಕೆ ಮಾಡೋದು  ಒಂದಾದರೆ ಆಡೋದು  ಬೇರೆ !! ನನಗೆ ಆಶ್ಚರ್ಯ ತರಿಸಿದ್ದು ಆಕೆಯ ಗುಣ. ಸಾಮಾನ್ಯವಾಗಿ ಎಲ್ಲ ಸೀಜನ್ ಗಳಲ್ಲೂ ನಾನು ಕಂಡಂತೆ  ಸ್ನೇಹದ ವಿಷಯದಲ್ಲಿ ಪ್ರಾ ಮಾಣಿಕರಾಗಿ ಇರುತ್ತಿದ್ದರು ಮತ್ತು ಇದ್ದಾರೆ . ಆದರೆ ಈಕೆ ಮತ್ತು ತನಿಷಾ ಜೊತೆಗಿನ ಬಾಂಧವ್ಯ ನೋಡಿ ಒಳ್ಳೆಯ ಸ್ನೇಹ  ಅಂದುಕೊಳ್ಳುವಷ್ಟಲ್ಲಿ ... !

@ ಕೋಲಾರ ಅದರಲ್ಲೂ ಮುಳಬಾಗಿಲಿನ ಹುಡುಗ್ರು ಹೆಚ್ಚು ತೆಲುಗು ಸಿನಿಮಾ ಪ್ರಭಾವಿತರು .ನಮ್ಮ  ವರ್ತೂರು ಸಂತೋಷ್ ಇದಕ್ಕೆ ಹೊರತಲ್ಲ . ಕೋಲಾರದ ಕಡೆಯವರು ಮನೆಗಳಲ್ಲಿ ತಂದೆತಾಯಿ ತೆಲುಗು ಮಾತಾಡೋದು ಸಾಮಾನ್ಯ. ಆದರೆ ಮಕ್ಕಳ ಜೊತೆ ಕನ್ನಡಕನ್ನಡ  ಸವಿಗನ್ನಡ ,,!ಹುಲಿ ಉಗುರು ಮಾತ್ರವಲ್ಲ ತೆಲುಗು ಹೀರೋಗಳ ನಟನೆ, ಡ್ರೆಸ್, ಜಾಸ್ತಿನೇ ಅನುಕರಿಸುತ್ತಾರೆ. ನಾನು ಕಂಡಂಗೆ . ಆತನ ಬದುಕಲ್ಲಿ ನಡೆದ ಘಟನೆ ನಿಜಕ್ಕೂ ಖೇದಕರ. ಯಾಕೋ ತುಂಬಾ ಗ್ರಾಂಥಿಕವಾಗಿ ಬರೀತಾ ಇದ್ದೀನಿ . ಬಹುಶಃ ಇತ್ತೀಚೆಗೆ  ಮಂಗಳೂರಿಗೆ ಹೋದ ಪ್ರಭಾವ ಇರಬೇಕು :-)