ನಗೋದು ಮುಖ್ಯ..


ಹೆಚ್ಚು ಜನರು ನೋಡುವ ಕಾರ್ಯಕ್ರಮಗಳು ಅಂದ್ರೆ ಒಂದಷ್ಟು ಮಾತ್ರ ಇವೆ. ಅದರಲ್ಲಿ ಸಾಮಾನ್ಯವಾಗಿ ಅತಿ ಹೆಚ್ಚು ಮಂದಿ ವೀಕ್ಷಿಸುವ ಕಾರ್ಯಕ್ರಮ ಥಟ್ ಅಂತ ಹೇಳಿ. ಚಂದನ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಕಾರ್ಯಕ್ರಮ ಎವರ್ ಗ್ರೀನ್ ಅಂತಾನೆ ಹೇಳ ಬಹುದು. ಇದೆ ಕಾರ್ಯಕ್ರಮ ಬೇರೆ ವಾಹಿನಿಗಳಲ್ಲಿ ಪ್ರಸಾರ ಆಗ್ತಾ ಇದ್ದಿದ್ದರೆ ಸೀಸನ್ ಒಂದು ಎರಡು ಅಂತ ಮಾಡಿ ತಮ್ಮ ಬೆನ್ನು ತಾವು ತಟ್ಟಿ ಕೊಳ್ತಾ ಇದ್ರು, ಆದರೆ ಚಂದನ ವಾಹಿನಿ ತಂಗಾಳಿಯಂತೆ, ಅದು ತನ್ನ ಪ್ರಸಾರದ ಕಾರ್ಯಕ್ರಮದಲ್ಲಿ ಇಂತಹ ಯಾವುದೇ ಬಗೆಯ ಅಬ್ಬರಕ್ಕೆ ಆದ್ಯತೆ ನೀಡದು.ಆದ್ದರಿಂದಲೇ ಈ ವಾಹಿನಿಯು ತನ್ನದೇ ಆದ ರೀತಿಯಲ್ಲಿ ಜನಪ್ರಿಯತೆ ಪಡೆದಿದೆ. ಡಾ. ನಾ ಸೋಮೇಶ್ವರ್ ಅವರ ನಿರೂಪಣೆ ಸಹ ಹೆಚ್ಚು ಖುಷಿ ಕೊಡುತ್ತದೆ. ಈಗ ಪ್ರಾಯಶ 2500  ಸಂಚಿಕೆ ಪೂರೈಸಿದೆ ಅಂತಾ ಕಾಣುತ್ತೆ. ಅದಕ್ಕೆಂದು ವಿಶೇಷ ಕಾರ್ಯಕ್ರಮ  ಪ್ರಸಾರ ಆಗ್ತಾ ಇದೆ. ತುಂಬಾ ವಿಶೇಷವಾಗಿದೆ..



@ ಇದೆ ವಾಹಿನಿಯಲ್ಲಿ ಪ್ರಸಾರ ಆಗುವ ಅಡಚಣೆಗಾಗಿ ಕ್ಷಮಿಸಿ ಒಂದೊಳ್ಳೆ ಹಾಸ್ಯ ಕಾರ್ಯಕ್ರಮ. ಇಲ್ಲಿ ಇರುವವರು ಅತಿಯಾದ ಅಲಂಕಾರ , ಅತಿ ಮಾತುಕತೆ ಇರುವ ಪಾತ್ರಗಳು ಅಲ್ಲ, ಗಂಡ ಹೆಂಡತಿ ಅವರಿಬ್ಬರಿಗೆ ಸಂಬಂಧ ಪಟ್ಟವರು, ಕಡಿಮೆ ಅವಧಿಯಲ್ಲಿ ಇದು ಪ್ರಸಾರ ಆದರು ಪ್ರತಿದಿನ ಒಂದೊಂದು   ಹೊಸ ವಿಷಯವನ್ನು ಹಾಸ್ಯದ ಮುಖಾಂತರ ಪ್ರಸಾರಿಸುತ್ತದೆ..ಇಲ್ಲಿ ಗ್ಲಾಮಿಯಾಗಿರೋ ಕಲಾವಿದರು ಇಲ್ಲ, ಪ್ರತಿಭಾವಂತ ಹಿರಿಯ ಕಲಾವಿದರ ದಂಡೆ ಇದೆ.. ವೀಕ್ಷಕರಿಗೆ ಅದರಲ್ಲೂ ಹಿರಿಯ ವೀಕ್ಷಕ ವೃಂದಕ್ಕೆ ಇಷ್ಟ ಆಗೋ ಟೀಮ್ ಇದೆ. ನೋಡಿ ಖುಷಿ ಪಡೋ ವಿಷಗಳು ಆ ಧಾರವಾಹಿಯಲ್ಲಿದೆ..!  


@@ ಹಾಸ್ಯ ಎಂದೊಡನೆ ನೆನಪಿಗೆ ಬರುವ ಕಾರ್ಯಕ್ರಮಗಳಲ್ಲಿ ಈ ಟೀವಿ ಕನ್ನಡ ವಾಹಿನಿಯಲ್ಲಿ ಮರು ಪ್ರಸಾರ ಆಗುತ್ತಿರುವಂತಹ ಸಿಲ್ಲಿ ಲಲ್ಲಿ. ಹಾಸ್ಯವನ್ನು ಭಿನ್ನವಾಗಿ ತೋರಿಸುವ , ಪಾತ್ರಗಳ ಇನ್ವಾಲ್ ಮೆಂಟ್ ಹೆಚ್ಚು ಖುಷಿ ಕೊಡುತ್ತದೆ. ಇದು ಮರು ಪ್ರಸಾರದ ಧಾರವಾಹಿ ಗಳಾದರೂ ಬೇಸರ ಅನ್ನಿಸಲ್ಲ ವೀಕ್ಷಣೆ ಮಾಡಲು..ಸಂಜೆ  ಖುಷಿಯಾಗಿ ಕಳೆಯೋಕೆ ಈ ಕಾರ್ಯಕ್ರಮ ಸಹಾಯ ಮಾಡುತ್ತದೆ ಟೀವಿ ಆಸಕ್ತರಿಗೆ.. ನಾನು ಸಮಯ ಸಿಕ್ರೆ ನೋಡ್ತೀನಿ ಈದನ್ನು ಇಷ್ಟ ಪಟ್ಟು.. ನಗೋದು ಮುಖ್ಯ.. ನಗುವಿಂದ ಆರೋಗ್ಯಾ.. :-)

ಫೇಮಸ್ ...ಫೇಮಸ್ ..!


ಬಿಗ್ ಬಾಸ್ ನಲ್ಲಿ ಅತ್ಯಂತ ಹೆಚ್ಚು ಖುಷಿ ಕೊಟ್ಟ ಸಂಗತಿ ಅಂದ್ರೆ ಕ್ರೇಜಿಸ್ಟಾರ್   ರವಿಚಂದ್ರನ್ ಅವರ ಆಗಮನ. ಅತಿ ಹೆಚ್ಚು ಇಷ್ಟ ಆಗುವುದು ರವಿ ಮಾಮನಹೊಸತನಗಳಿಂದ. ಏನೇ ಆದರು ಕನ್ನಡದಲ್ಲಿ ಹೊಸ ಆಯಾಮ ತಂದ ವಿಶಿಷ್ಟ ಪ್ರತಿಭೆ.ಆ ಕಾರ್ಯಕ್ರಮದಲ್ಲಿ ಅದರಲ್ಲೂ ರವಿಚಂದ್ರನ್ ಅವರ ಮಾತುಗಳು ಮನಸ್ಪರ್ಶಿ ಆಗಿತ್ತು. ಅತ್ತಿತ್ತ ಅಲುಗಾಡದೆ ಅವರ ಮಾತುಗಳನ್ನು ಕೇಳುವಂತಾಯಿತು.

@ಜೀ ಹಿಂದಿ ವಾಹಿನಿಯಲ್ಲಿ ಈಗ  ಸಿನೆ ಸ್ಟಾರ್ ಕಿ  ಖೋಜ್ ಎನ್ನುವ ಟ್ಯಾಲೆಂಟ್ ಹಂಟ್ ಕಾರ್ಯಕ್ರಮ  ಪ್ರಸಾರ ಆಗ್ತಾ ಇದೆ .ಸಾಮಾನ್ಯವಾಗಿ ನನಗೆ ಯಾವುದೇ ಕಾರ್ಯಕ್ರಮ ಆಗಿರಲಿ ಆಡಿಶನ್ ನೋಡೊಕೆ ಇಷ್ಟ ಆಗುತ್ತೆ..ಯಾಕೆ ಅಂದ್ರೆ ಅಲ್ಲಿ ಅಪ್ಪಟ ಪ್ರತಿಭೆಗಳು, ಕನಸು ಹೊತ್ತ ಪ್ರತಿಭೆಗಳು ಅವರ ಕಾತುರ ಎಲ್ಲವು ಇಷ್ಟ ಆಗುತ್ತೆ!
ಸೊನಾಲಿ ಬೇಂದ್ರೆ, ಪರಿಣಿತಿ ಚೋಪ್ರ, ಚಂದ ಇದೆ. ನಿಜಕ್ಕೂ ಚಂದ ಇದೆ.. ನೋಡುವ ಹಾಗು ನೋಡಬಹುದಾದ ಕಾರ್ಯಕ್ರಮ ಇದು!
@ ಸುವರ್ಣ ವಾಹಿನಿಯಲ್ಲಿ ಅವನು ಮತ್ತೆ ಶ್ರಾವಣಿ ಧಾರಾವಾಹಿಯಲ್ಲಿ ಜಯಲಕ್ಷ್ಮಿ ನಟನೆ ನೋಡುವಾಗ  ಆಕೆಯ ಮುಂದೆ ಹಿರಿಯ ಕಲಾವಿದ ನಾಗರಾಜ್ ಮೂರ್ತಿ ಅವರು ಸಪ್ಪೆ ಆಗಿ ಬಿಟ್ಟಿದ್ದಾರೆ. ಈ ಬಗ್ಗೆ ಅವರ ಧರ್ಮಪತ್ನಿ ಮತ್ತು ನಮ್ಮ ಮೇಡಂ  ಅವರು ನೋಡೆಮಾ ನಾಗರಾಜ್ ಮೂರ್ತಿ ಜಯಲಕ್ಷ್ಮಿಯಿಂದ ಫೇಮಸ್ ಆದರು ಅಂತ ನಕ್ರು ಇತ್ತೀಚಿಗೆ  ಮಾತನಾಡುವಾಗ ನಕ್ಕು ಹೇಳಿದ್ರು.ಭದ್ರ ಮೇಡಂ ಅಂತ ಹೇಳೋಕೆ ಮುನ್ನವೇ ಅವರೆತಮ್ಮ ಪತಿಯನ್ನು ರೇಗಿಸಿದ ಕಥೆ ಸಹ ಹೇಳಿನಕ್ರು. ಹೀಗೆ ಆ ಧಾರಾವಾಹಿಯಲ್ಲಿ ಕಥೆಗಿಂತ ಇಂತಹ ಅನೇಕ ಸಂಗತಿಗಳು  ಬರುತ್ತೆ. 

ಇತ್ತೀಚಿಗೆ ಅನೇಕ ಕಾರಣಗಳಿಂದ ಬ್ಲಾಗ್ ಬರೆಯೋಕೆ ಪುರುಸೊತ್ತು ಆಗ್ತಾ ಇತ್ತ. ನನ್ನ ಎಪ್ಭಿ ಮಿತ್ರರಾದ ಗುರುಮೂರ್ತಿ ಅವರು ವಾರಕ್ಕೊಮ್ಮೆ ಆದರು ಬರೀರಿ ಬ್ಲಾಗ್ ನಲ್ಲಿ ಓದೋಕೆ ಇಷ್ಟ ಎನ್ನುವ ಮಾತನ್ನು ಹೇಳಿದರು ... ಬಿಡುವು ಮಾಡಿಕೊಂಡು  ಬರೆಯುವ ಉತ್ಸಾಹದಲ್ಲಿ ಕೂತಿದ್ದೇನೆ...
ನಾನು ಬರೆದದ್ದು ಆಸಕ್ತಿಯಿಂದ  ಓದುವ ಎಲ್ಲರಿಗು ಥ್ಯಾಂಕ್ಸ್.. ಇನ್ನೇನು ತಾನೇ ಹೇಳೋಕೆ ಸಾಧ್ಯ :-) 



ಅವ್ .. ಸೋ ಮೆನಿ!



ಬಿಗ್ ಬಾಸ್ ಮತ್ತೆ ಆರಂಭ ಆಗಿದೆ. ಸಾಮಾನ್ಯವಾಗಿ ಯಾವುದೇ ಬಗೆಯ ರಿಯಾಲಿಟಿ ಷೋ ಇರಲಿ ಅದನ್ನು ಆನಂದಿಸದೇ ಮನಸ್ಸಿನೊಳಕ್ಕೆ ಹಾಗು ಬದುಕಿನೊಳಕ್ಕೆ ಇಳಿಸಿಕೊಳ್ಳಲು ಹೋಗುತ್ತಾರೆ ನಮ್ಮವರು ಅದೇ ತಪ್ಪಗೋದು.. ಏನೇ ಹೇಳಿ ಈ ಬಿಗ್ ಬಾಸ್ ನಿಂದ ಏನ್ ಪ್ರಯೋಜನ, ಅದನ್ನು ಯಾಕೆ ನೋಡ ಬೇಕು, ಏನ್ ಥೀಮ್ ಇದೆ, ಇದರಲ್ಲಿ ಎಂತಹ ಮೆಸೇಜ್ ಇದೆ ?
ಈ ರೀತಿಯ ಪ್ರಶ್ನೆಗಳನ್ನು ಒಳಗೊಂಡ ಲೇಖನಗಳು ಬರ್ತಾ ಇವೆ. ಆದರೆ ಇಂತಹ ರಿಯಾಲಿಟಿ ಶೋಗೆ ಥೀಮ್ , ಮೆಸೇಜ್ ಯಾಕೆ ಬೇಕೋ ಗೊತ್ತಿಲ್ಲ. ಬಿಗ್ ಬಾಸ್  ಸೋತ ಅನೇಕ ಪ್ರತಿಭೆಗಳಿಗೆ ವೇದಿಕೆ. ಕನಿಷ್ಠ ಹಾಗಾದ್ರೂ ಒಂದಷ್ಟು ಕನಸುಗಳು ನನಸಾಗಲು ಮಾಡಲು ಅವಕಾಶ ಇದೆ.



ಕಿಚ್ಚ ಸುದೀಪ್ ಅವರು ಅಗೇನ್ ಇಷ್ಟ ಆಗೋ ರೀತಿಯಲ್ಲಿ ಬಂದಿದ್ದಾರೆ. ಒಬ್ಬ ಹೀರೋ ಅದರಲ್ಲೂ ದಕ್ಷಿಣದ ಹೀರೋಗಳು ಅಂದ್ರೆ ಅಷ್ಟಕಷ್ಟೇ  ಬಾಲಿವುಡ್ ಮಂದಿಗೆ.. ಅವರೆಲ್ಲರೂ ನೋಡುವಂತೆ ಕನ್ನಡ ಕಿಚ್ಚ ಕಿಚ್ಚು ಹತ್ತಿಸೋ ಪ್ರಯತ್ನ ಮಾಡಿದ್ದಾರೆ.. ಜಾಸ್ತಿ ಲೈಕ್ ಆಯ್ತು. ತುಂಬಾ ಕಾಲದಿಂದ ಇಷ್ಟ ಆಗಿರೋ ಕೆಲವು ನಟರಲ್ಲಿ ಕಿಚ್ಚ ಸಹ ಒಬ್ರು.. ನಾನು ಮಾತ್ರ ಅಲ್ಲ ಸಾಕಷ್ಟು ಜನ ಪತ್ರಕರ್ತರಿಗೆ ಇವರ ಬಗ್ಗೆ ಸ್ವಲ್ಪ ಜಾಸ್ತಿನೆ ಪ್ರೀತಿ. ಅವರ ಹೆಸರು ಹೇಳಲ್ಲ ಸಾರಿ ! ಒಬ್ಬ ಕಲಾವಿದನ ಬಗ್ಗೆ ನಾವು ತೋರೋ ಅಭಿಮಾನ ಇನ್ನು ಹೇಗ್ ತಾನೇ ಇರುತ್ತೆ ಹೇಳಿ...ನಮ್ಮ ಮೇಡಂ ಯಾವಾಗ ಕಿಚ್ಚನ ವಿಷ್ಯ ಹೇಳಿದ್ರು ಬರೆಯೇಮ್ಮ ಜನರಿಗೆ ಇಷ್ಟ ಅಂತಾರೆ.. ಕಿಚ್ಚನ ಹೊಸ ಏನೇ ಸುದ್ದಿ ಸಿಕ್ರು ನಾನು ಬರೀತೀನಿ !


@ ಮೊದಲು ಎಲಿಮಿನೆಟ್ ಆದ  ಅನಿತಾ ಭಟ್ ಬಗ್ಗೆ ಆರಂಭಿಕ ಹಂತದಲ್ಲಿ ಅಂದ್ರೆ ಆಕೆ ಸೈಕೋ ಚಿತ್ರದಲ್ಲಿ ನಟಿಸಿದ  ಬಳಿಕ ನಮ್ಮ ಆಫೀಸ್ ಗೆ ಬಂದಿದ್ರು. ನಾನು ಆಕೆಯನ್ನು ಸಂದರ್ಶನ ಮಾಡುವಾಗ ಊರು ಹೀಗೆ ಎಲ್ಲ ಸಂಗತಿ ಕೇಳಿದೆ.. ಹೆಸರು ಆಗ ಅನಿತಾ ಅಂತಾನೆ ಗೊತ್ತಿತ್ತು.. ಭಟ್ ಸೇರಿಸ ಬಹುದಲ್ವ ಇದು ವಿಶೇಷವಾಗಿರುತ್ತೆ ಎಂದು ಹೇಳಿದ್ದೆ ನಾನಾಗ .. ಆಗ ಆರಂಭ ಆಯ್ತು ಭಟ್ಟರ ಪುರಾಣ. ಸಿನಿಮಾ ಬಗ್ಗೆ ಸಾಕಷ್ಟು ಇಷ್ಟ ಇರೋ ಹೆಣ್ಣು ಮಗಳು. ಆದರೆ ಅವಕಾಶಗಳು ಇಲ್ಲ. ಮುಖ್ಯವಾಗಿ ಆರಂಭದಲ್ಲಿ ಆಕೆಯು ನನಗೆ ಎಫ್ಬಿಯಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದರು.ನನ್ನ ಲಿಸ್ಟ್ನಲ್ಲಿ ಇದ್ದ ಈ ಹೆಣ್ಣುಮಗಳು ಸ್ವಲ್ಪ ದಿನಗಳಾದ ಮೇಲೆ ನಾಪತ್ತೆ.. ನೋಡಿದ್ರೆ ಲೈಕ್ ಪೇಜ್ ಆಗಿತ್ತು. ಸ್ವಲ್ಪ ಗ್ಲಾಮರ್ ಚಿತ್ರಗಳನ್ನು ಅಪ್ ಲೋಡ್ ಮಾಡ್ತಾ ತನ್ನದೊಂದು ಸಮೂಹ ಕಟ್ಟಿಕೊಳ್ಳುವ ಪ್ರಯತ್ನದಲ್ಲಿ ಇದ್ದರು ಈಕೆ.. ನಿಜ ಹೇಳ್ತೀನಿ ಪಾಪ ಅಂತ ಅನ್ನಿಸಿತ್ತು  ಹಾಗೂ ಅನ್ನಿಸಿದೆ.. ಬೇಗ ಹೊರಗೆ ಹೋಗಿದ್ದು ಸಕತ್ ಒಂಥರಾ ಆಯ್ತು! 



@ ರೋಹಿತ್  ದಿ ರಾಕ್ಸ್ಟಾರ್...ಬಾಳ ಇಷ್ಟಾ ಆಗೋ ಮಾತಿನ ಶಾಲಿ.. ನಿಜ ಹರೆಯದ ಬಡ್ಡಿ ! ಸೊ ಜಾಸ್ತಿ ದಾರಿ ತಪ್ಪಿದೆ ಮಾತುಗಳು ರೆಡಿಯೋದಲ್ಲಿ ಮಾತಾಡುವಾಗ. ಆದರೆ ತುಂಬಾ ಚೆನ್ನಾಗಿ ಹುಡುಗೀರನ್ನು ಸೆಳೆಯುವ ಜಾಣ....ಡಾರ್ಲಿಂಗ್ಸ್ ಅಂತ ಕರೆಯೋದಲ್ಲದೇ  ಮಾತು ಸಹ!!!! ಒಮ್ಮೆ ಹೀಗೆ ಗುರುಕಿರಣ್ ಅವರ ಸಂಗೀತ ನಿರ್ದೇಶನ ಮತ್ತು ಹಾಡಿದ್ದ ಮುತ್ತಿನ ಹಾಡು ಪ್ರಸಾರ ಮಾಡಿದ ಬಳಿಕ ಸೊ ಮೆನಿ ಕಿಸಸ್ ಎನ್ನುವ ಮಾತು ಹೇಳಿದ್ದರು .. ಯಾಕೆ ಈ ಮಾತು ಅಂದ್ರೆ ನಮ್ ಕಿಚ್ಚ ಯಾರಿಗೆ ಮುತ್ತು ತೋರಿಸಿ... ಥ್ರೋ ಮಾಡ್ತಾ ಇದ್ದಾರೆ..ಜಗ್ಗೇಶ್  ಮತ್ತು ಕಿಶೋರ್ ಅವರ ಭಾಷೆಯಲ್ಲಿ ಅವ್ ಕಿಚ್ಚ... ಸೊ ಮೆನಿ ಕಿಸಸ್ ...