Posts

Showing posts from March 24, 2013

ಒಳ್ಳೆ ಯದು..

Image
ನನಗೆ ತುಂಬಾ ವಿಸ್ಮಯ ಅನ್ನಿಸೋದು ಅಡುಗೆ ವಿಷಯದ  ರಿಯಾಲಿಟಿ ಷೋ ಅಡುಗೆ  ಮಾಡುವ, ಕಾರ್ಯಕ್ರಮ ನೋಡುವ ವಿಷಯ ಅಂದ್ರೆ ಮೂಗು ಮುರಿಯುವ ಮಂದಿ ಅನೇಕ. ಅಂತಹುದರಲ್ಲಿ ಅದಕ್ಕಾಗಿ ಅಷ್ಟೆಲ್ಲ  ಖರ್ಚು ಮಾಡೋದು ಅಂದ್ರೆ . ಸ್ಟಾರ್ ವಾಹಿನಿಯಲ್ಲಿ ಪ್ರಸಾರ ಆಗ್ತ ಇರುವ ಮಾಸ್ಟರ್  ಶೆಫ್ . ಅನೇಕಾನೇಕ ಎಲೆಮರೆ ಕಾಯಿ, ಬಡತನದಿಂದ ಮೇಲೆ ಬರಲಾಗದೆ ನರಳುವ ಪ್ರತಿಭೆಗಳಿಗೆ ಒಳ್ಳೆಯ ವೇದಿಕೆ . ದೇಶದ ಯಾವುದೋ ಮೂಲೆಯಲ್ಲಿ ಒಂದು ಪುಟ್ಟ ಹೋಟೆಲ್ ನಲ್ಲಿ ಅಡುಗೆ ಮಾಡುತ್ತಿರುವ ಪ್ರತಿಭೆ ಇಲ್ಲಿ ಅವಕಾಶ.ಜೋ ಜೀತ ವಹಿ ಸಿಕಂದರ್ . 


ಸಂಜೀವ್ ಕಪೂರ್ , ವಿಕಾಸ್ ಖನ್ನ, ಕುನಾಲ್ ಕಪೂರ್ ಇವರು ತೀರ್ಪುಗಾರರು. ಅಡುಗೆ ಮನೆ ಬದುಕಲ್ಲಿ ಅಷ್ಟೈಶ್ವರ್ಯ  ಮತ್ತು ಕೀರ್ತಿ ತಂದು ಕೊಡ ಬಲ್ಲದು. ಇವರುಗಳು ಆಸಕ್ತಿ ಇದ್ರೆ ವಿಶ್ವದಲ್ಲಿ ನೀವು ನಂಬರ್ ಒನ್ ಆಗ ಬಹುದು ಎಂದು ತೋರಿಸಿ ಕೊಟ್ಟವರು . ಚೆಫ್ ಸಂಜೀವ್ ಕಪೂರ್ ಒಂದು ರೀತಿ ನಮಗೆಲ್ಲ ಗುರು . ಅಂದ್ರೆ ಅವರ ಬಳಿ ನಾವೆಲ್ಲಾ ಏಕಲವ್ಯನಂತೆ ಅಡುಗೆ ಪಾಠ ಕಲಿತಿರೋದು. ಜೀ ವಾಹಿನಿಯಲ್ಲಿ ಖಾನ ಕಜಾನ ಪ್ರಸಾರ ಆಗುತ್ತಿದ್ದ ಸಮಯ ದಿಂದ ಹಿಡಿದು ಈ ವರೆಗೂ ಅವರು ಅಂದ್ರೆ ಅಡುಗೆ ಕಲಿಕೆ ಆಸಕ್ತಿ ಇರುವವರಿಗೆ ಗೌರವ, ಪ್ರೇಮ ಆದರ, ಆಪ್ಯಾಯ.    ಯಾರು ಗೆಲ್ಲುತ್ತಾರೆ ಅನ್ನುವುದಕ್ಕಿಂತ ಅದರಲ್ಲಿ ನಾವು ತಿಳಿಯುವ ಅನೇಕ ಸಂಗತಿಗಳಿವೆ.. ಸೊ ಇದೊ೦ದು ಒಳ್ಳೆಯ ಪಾಠ ಶಾಲೆ ನಮಗೆ.  ನಮ್ಮ ದೇಶದಲ್ಲಿ ತುತ್ತು ಅನ್ನಕ್ಕಾಗಿ ಒದ್ದಾಡುತ್ತಿರುವವರು ಹೇರಳ…

ಆ ಅಹಂಕಾರ!

Image
ಜನಶ್ರೀ ವಾಹಿನಿಯಲ್ಲಿ ಕಥೆಗಾರ ಅನ್ನುವ ಧಾರವಾಹಿ ಪ್ರಸಾರ  ಆಗ್ತಾ ಇದೆ ಬಹಳ ದಿನಗಳಿಂದ . ಕನ್ನಡ ವಾಹಿನಿಗಳಲ್ಲಿ ಕಾಣ ಸಿಗುವ ಸದಭಿರುಚಿಯ ಸುಂದರ ಕಾರ್ಯಕ್ರಮಗಳನ್ನು ನೀಡುವ ವಿಷಯದಲ್ಲಿ ಜನಶ್ರಿ ಒಂದು ಕೈ ಮುಂದೆ . ಮನೆಯವರೆಲ್ಲಒಟ್ಟಿಗೆ ನೋಡುವಂತಹ ಕಾರ್ಯಕ್ರಮಗಳನ್ನು ಇದು ಪ್ರಸಾರ ಮಾದೊದು. ಸ್ವಲ್ಪ ಜಾಸ್ತಿನೆ ಇಷ್ಟ ಪಟ್ಟು ನೋಡ್ತೀನಿ ಈ ವಾಹಿನಿ. ಕಥೆಗಾರ ಸಣ್ಣ ಕಥೆಗಳನ್ನು ದೃಶ್ಯೀಕರಿಸಿ  ವೀಕ್ಷಕರ ಮನಸ್ಸು ತಣಿಸುವಂತೆ ಮಾಡಿರುವ ಸುಂದರ ಪ್ರಯತ್ನ.   ನಿನ್ನೆ ಬೀಚಿ ಅವರ ತಿ೦ಮ್ಮ  ಪ್ರಸಾರ ಆಯ್ತು. ಬೀಚಿ ಬರಹದಷ್ಟು ಖುಷಿ ಕೊಡಲಿಲ್ಲ ಅದು, ಆದರೂ ಬೋರ್ ಹೊಡಿಸಲಿಲ್ಲ. ದೊಡ್ಡ ದೊಡ್ಡ ಕಲಾವಿದರೂ, ಅದೂ ಸಿಕ್ಕಾಪಟ್ಟೆ ಕೊಡಗೈ ದಾನಿಗಳು ಅನ್ನಿಸಿಕೊಂಡವರು ಸರ್ಕಾರ ನೀಡುವ ಜಾಮೀನಿಗಾಗಿ ಬಡಿದಾಡುತ್ತಾರೆ. ಆದರೆ ನಿಜಕ್ಕೂ ಸಿಗ ಬೇಕಾದವರಿಗೆ ಮಾತ್ರ ಸಿಗೋದೆ ಇಲ್ಲ .. ಹಳ್ಳದ ಕಡೆಗೆ ನೀರು ಹರಿಯೋದು ಅನ್ನುವಂತೆ . ಉದಯ ನ್ಯೂಸ್ ನಲ್ಲಿ ಹಿರಿಯ ಕಲಾವಿದರು ರಸ್ತೆ ಬದಿಯಲ್ಲಿ ಬದುಕ್ತಾ ಇರೋ ನ್ಯೂಸ್ ಪ್ರಸಾರ ಅಯ್ತು. ಬಿ.ಸರೊಜಾ ದೇವಿ ಇವರ ಸಿನಿಮಾದಲ್ಲಿ ಮೊದಲು ನಟಿಸಿದ್ದಂತೆ , ಹೀಗೆ ಅನೇಕ ಸಂಗತಿಗಳು ದಿನಪತ್ರಿಕೆಯಲ್ಲಿ ಪ್ರಕಟ ಆಗಿತ್ತು . ಆ ಸುದ್ದಿ ಓದಿದಾಗ ಕಸಿವಿಸಿ ಆಗಿತ್ತು, ಆದರೆ ದೃಶ್ಯ ಮೂಲಕ ಕಂಡಾಗ ಮತ್ತಷ್ಟು ಬೇಸರ ಆಯ್ತು. ಹಿರಿಯ ಕಲಾವಿದರೂ ಸಣ್ಣ-ಪುಟ್ಟ ಸೌಲಭ್ಯವಿಲ್ಲದೆ  ಬದುಕಿನ ಕೊನೆದಿನಗಳನ್ನು ಕಳೆಯುವ ಸಂಗತಿ ವೀಕ್ಷಿಸುವಾಗ ಮನಸ್…

ಡ್ರಾಮೆಬಾಜ್

Image
ಜೀ ಟೀವಿಯಲ್ಲಿ ಡ್ರಾಮೆಬಾಜ್  ರಿಯಾಲಿಟಿ ಷೋ ಕಳೆದ ಕೆಲವು ವಾರಗಳಿಂದ ಪ್ರಸಾರ ಆಗುತ್ತಿದೆ. ಮುಖ್ಯವಾಗಿ ನಾನು ಆ ಕಾರ್ಯಕ್ರಮದ ಆಡಿಶನ್ನಿಂದ ಕಾಡು ವೀಕ್ಷಿಸಿದೆ. ಬೊಂಬಾಟ್ .. ! ಪ್ರಸಿದ್ಧ ನಿರ್ದೇಶಕ ಅನುರಾಗ್ ಬಸು ಅವರ ಕಸೌಟಿ  ಜಿಂದಗಿ ಕಿ ಭಯಂಕರ ಇಷ್ಟ ಆದ ಧಾರಾವಾಹಿ ನನಗೆ ಮಾತ್ರವಲ್ಲ ಭಾರತ ಹೆಣ್ಣುಮಕ್ಕಳ ಹೃದಯ ಗೆದ್ದ ಧಾರವಾಹಿ . ಬಿಡಿ ಹಳೆ ಕಥೆ ಈಗ್ಯಾಕೆ ;-).ಈಗ  ಬರ್ಫಿ ಹಂಚಿ ಜನಮನ  ಗೆದ್ದಿದ್ದಾರೆ. 
ಮುಖ್ಯವಾಗಿ ಈ ಬರ್ಫಿ ನಿರ್ದೇಶಕ ಡ್ರಾಮೆ ಬಾಜ್ನಲ್ಲಿ ಮತ್ತೊಮ್ಮೆ ಮಗುವಾಗಿದ್ದಾರೆ.  ಯಾಕೆಂದ್ರೆ ಅಷ್ಟೊಂದು ಅದ್ಭುತ ಪ್ರತಿಭೆಗಳು ಅಲ್ಲಿವೆ. ಪುಟ್ಟ ಪುಟ್ಟ ಕೂಸುಗಳ   ಜೊತೆ ಮಗುವಾಗುವ ಅನುರಾಗ್ ಕೆಲವು ವಿಷಯಗಳು ಬಂದಾಗ ಎಮೋಷನಲ್  ಆಗ್ತಾ ಇರ್ತಾರೆ. ಆದರೆ ನಿನ್ನೆ ಪ್ರಸಾರವಾದ ಷೋನಲ್ಲಿ ಅನುರಾಗ್ ತುಂಬಾ ಭಾವೋದ್ವೇಗಕ್ಕೆ ಒಳಗಾದರು . ಅದು ಸಹಜ ಬಿಡಿ .  ಕ್ಯಾನ್ಸರ್ ಪೀಡಿತರ ವಿಷಯ. ತುಂಬಾ ಹೃದಯ ಸ್ಪರ್ಶಿ ವಿಷಯ.ಈ ಕಾಯಿಲೆಯಿಂದ ಬಳಲುತ್ತಿರುವವರು, ಅವರ ಮನೆಯವರು ಎಲ್ಲರಿಗೂ ಒಂದು ದೊಡ್ಡ ಸವಾಲಿದು.  ನಮ್ಮ ಮೇಡಂ ಅವರು ಈ ಕಾಯಿಲೆಯಿಂದ ಬಳಲುವಾಗ , ಅವರಿಗೆ ಅಪರೇಷನ್ ಆದಾಗ ನಂತರ ಅವರು ಮತ್ತೆ ಕೆಲ್ಸಕ್ಕೆ ಬಂದ  ಬಳಿಕ ಅವ್ರು  ಅನುಭವಿಸಿದ ಕಿರಿಕಿರಿ ,ಆತಂಕ ಎಂದಿಗೂ ಮರೆಯಲಾಗದ್ದು .   ಈ ರಿಯಾಲಿಟಿ ಷೋ ಸ್ಟ್ರಿಕ್ಟ್ ಜಡ್ಜ್ ಸೊನಾಲಿ  ಬೇಂದ್ರೆ ಮತ್ತು ನಮ್ಮೂರ ಅಳಿಯ ( ಕರ್ನಾಟಕದ) ವಿವೇಕ್ ಒಬೆರಾಯ್ ಅದೆಷ್ಟು ಕೈಂಡ್  ಹಾರ್ಟೆಡ್ …