ಅನ್ನಮಯ್ಯ



ತಿರುಪತಿಯಲ್ಲಿ ನೆಲೆಸಿರುವ ಏಳು ಬೆಟ್ಟಗಳ ಒಡೆಯನ ದರುಶನ ಭಕ್ತ ಬದುಕಿನ ಬಹುದೊಡ್ಡ ಸಾರ್ಥಕತೆ. ಯಾತ್ರಾ ಸ್ಥಳವಾಗಿರುವುದರಿಂದ ಅಲ್ಲಿ ಭಾಷೆ ಸಮಸ್ಯೆ ಆಗದು. ಅಲ್ಲಿ ನಮ್ಮದೇ ಭಾಷೆ ಇದ್ದರೂ ಅದು ಅರ್ಥವಾಗುವವರಿಗೆ ಮಾತ್ರ ತಿಳಿಯುತ್ತದೆ. ಅದಕ್ಕೆ ಉದಾಹರಣೆ ಈ ಬೋರ್ಡ್ :-).. ಆ ವಿಷಯ ಪಕ್ಕಕ್ಕೆ ಇಡೋಣ, 
Image result for jasmine flower garland images
ಈಗ ಹೇಳ ಹೊರಟಿರುವ ಸಂಗತಿ ಏನೆಂದರೆ, 
ಶ್ರೀನಿವಾಸ, ಬಾಲಾಜಿ, ವೆಂಕಟರಮಣ  ದೇವನಿಗೆ- ಅಮ್ಮನವರಿಗೆ ತಿರುಪತಿಯಲ್ಲಿ      ನಡೆಯುವ ಹಾಗೂ ಅಮ್ಮನವರು ನೆಲೆ ನಿಂತಿರುವ ತಿರುಚಾಯನೂರಿನಲ್ಲಿ ನಡೆಯುವ ಭಗವದ್ ಕಾರ್ಯಕ್ರಮಗಳು ಮಾತ್ರವಲ್ಲ ಸ್ಥಳೀಯ  ಮತ್ತು  ಕರ್ನಾಟಕ, ತಮಿಳು ನಾಡಿನ ದೇವಳಗಳಲ್ಲಿ ನಡೆಯುವ ದೇವತಾ ಕೆಲಸಗಳನ್ನು ವೀಕ್ಷಕರ ಬಳಿ ತರುವ ಮಹೋನ್ನತ ಕೆಲಸವನ್ನು ಎಸ್ವಿಬಿಸಿ (Sri Venkateswara Bhakti Channel)ವಾಹಿನಿ ಮಾಡುತ್ತಿದೆ. ಜೊತೆಗೆ ಭಜನೆ,  ಶಾಸ್ತ್ರೀಯ  ಸಂಗೀತ, ಪ್ರವಚನದಂತಹ  ಕಾರ್ಯಕ್ರಮಗಳಿಂದ  ಸಹಿತ ವೀಕ್ಷಕರನ್ನು ಆಕರ್ಷಿಸಿದೆ. ಅನ್ನಮಯ್ಯ ಪಾಟಕು ಪಟ್ಟಾಭಿಷೇಕಂ ಎನ್ನುವ ಹೆಸರಿನ ಹಾಡಿನ ರಿಯಾಲಿಟಿ ಷೋ ಎಸ್ವಿಬಿಸಿ ವಾಹಿನಿಯಲ್ಲಿ   ಪ್ರಸಾರವಾಗ್ತಾಯಿದೆ. ವಾಗ್ಗೇಯಕಾರ  ಅನ್ನಮಯ್ಯ  ಅವರ ರಚನೆಗಳು ಕೇಳಲು ಬಲು ಇಂಪು. ಅವರ ಸಮಕಾಲೀನರಾದ ಕರ್ನಾಟಕದ ಶ್ರೀಪಾದ ರಾಯರ (ರಾಜರು) ರಚನೆಗಳು ಸಹಿತ ತುಂಬಾ ಚಂದ ಚಂದ. 
ಕರ್ನಾಟಕದಲ್ಲಿ ಶ್ರೀಪಾದರಾಜರ ರಚನೆಗಳ ಕುರಿತಾದ ರಿಯಾಲಿಟಿ ಷೋ ಆರಂಭವಾಗುತ್ತೋ ಇಲ್ಲವೋ ಗೊತ್ತಿಲ್ಲ, ಆದರೆ ತೆಲುಗು ಭಾಷಿಗರು ಆ ಕೆಲಸವನ್ನು  ಮಾಡಿದ್ದಾರೆ. ಅನ್ನಮಯ್ಯನವರ ರಚನೆಯನ್ನು ಇಂತಹ ರಿಯಾಲಿಟಿ ಶೋಗಳ ಮೂಲಕ ಟಿಟಿಡಿ (  ಎಸ್ವಿಬಿಸಿ ) ಚಾನೆಲ್  ಯಶಸ್ವಿಯಾಗಿ ಸಂಗೀತಾಸಕ್ತರ ಮುಂದಿಡುತ್ತಿದ್ದಾರೆ.ಟಿಟಿಡಿ ಟ್ರಸ್ಟ್  ಬೋರ್ಡ್ನ ಸದಸ್ಯರಾಗಿರುವ ಪ್ರಸಿದ್ಧ ಸಿನಿಮಾ ನಿರ್ದೇಶಕ ಡಾ. ರಾಘವೇಂದ್ರ ರಾವು ಅವರು ಈ ಕಾರ್ಯಕ್ರಮದ ತೀರ್ಪುಗಾರರಲ್ಲಿ ಒಬ್ಬರಾಗಿದ್ದಾರೆ. 

ಥರಥರ

ಹಿಂದಿನ ಗುರುವಾರ ನಮ್ಮ ಮಾಲಿಕ್ ಆಜ್ಞೆ ಮಾಡಿದ್ರು ಅಂತ ಅವರ  ದರುಶನಕ್ಕೆ ಹೋಗಿದ್ದೆ. ಶಿರ್ಡಿ ಸಾಯಿ ಬಾಬಾ ಭಕ್ತಳು ನಾನು, ಅವರು ನನ್ನ ಮಾಲಿಕ್ . ಕಳೆದ ವಾರ ಹೆಚ್ಚು ಕಡಿಮೆ  ಶಿರ್ಡಿ, ನಾಸಿಕ್, ತ್ರಯಂಬಕೇಶ್ವರ ಅಂತ ಭಗವದ್ ದರುಶನದಲ್ಲಿ ಇದ್ದೆ. ಸಕತ್ ಖುಷಿ ಆಯ್ತ ಮಾಲಿಕ್ ದರುಶನದಿಂದ.
Image result for red flower
@ ಕಲರ್   ಸೂಪರ್ ವಾಹಿನಿಯಲ್ಲಿ ಈಗ ಬಿಗ್ ಬಾಸ್  ಫಿನಾಲೆ ವೀಕ್. ಜಾಸ್ತಿ  ಕುತೂಹಲದಿಂದ ಕಾಯುವ ವಾರ ಇದು. ಸಾಮಾನ್ಯವಾಗಿ ನಾನು ಬಿಗ್ ಬಾಸ್ ನ್ನು ಹೆಚ್ಚು ಆಸಕ್ತಿಯಿಂದ ವೀಕ್ಷಿಸುತ್ತೇನೆ. ಅದಕ್ಕೆ ಮುಖ್ಯ ಕಾರಣ  ಕಿಚ್ಚ ಸುದೀಪಾ ಮತ್ತು ರಿಯಾಲಿಟಿ ಷೋ ನಲ್ಲಿರುವ ಸ್ಫರ್ಧಿಗಳು. ಪ್ರತಿಬಾರಿ ಸಹ ಹೊಸಹೊಸದಾಗಿ ವೀಕ್ಷಕರ ಮುಂದೆ ಬರುವ ಈ ರಿಯಾಲಿಟಿ ಷೋ ಬಗ್ಗೆ ನನಗೆ ಮೊದಲಿಂದಲೂ ಒಲವು. ಅದೇರೀತಿ ಮಿತ್ರ ಕಿಚ್ಚ ಸುದೀಪಾ ಅವರ ನಿರೂಪಣೆ ಸಹ ಮನಕ್ಕೆ ಆಹಾ ಒಂಥರಾ ಥರ ಆಪ್ತ :-).ಸುದೀಪಾ ನಿಮ್ಮನ್ನು ಹೆಚ್ಚು ಹೊಗಳಿದರೆ ಬಕೆಟ್ ಅಂದು ಕೊಳ್ತಾರೆ ಮಂದಿ. ಅದಕ್ಕೆ ನನ್ನ ಮನದಲ್ಲಿರುವ ಗೌರವ ವಿಶ್ವಾಸ ಹಾಗೆ ಇಟ್ಟುಕೊಂಡು ಕಡಿಮೆ ಬರೆದಿದ್ದೇನೆ.
ಇನ್ನು ಈ ವಾರವಾದ ಬಳಿಕ ಕಿಚ್ಚನ್ನ ನೋಡಲು ವರ್ಷ ಕಾಯಬೇಕು. ಸಿನಿಮಾಗಳಲ್ಲಿ ಅವರು ಪಾತ್ರವಾಗಿರುತ್ತಾರೆ, ಆದರೆ ಇದರಲ್ಲಿ ಅವರು  ಅವರೇ ಆಗಿರುತ್ತಾರೆ, ಅದೇ ವ್ಯತ್ಯಾಸ. ಎಲ್ಲಾ  ಸ್ಪರ್ಧಿಗಳಿಗೂ ಗುಡ್ಲಕ್. ಅದೃಷ್ಟದೇವತೆ ಯಾರಿಗೆ ಒಲೀತಾರೋ  ಅವರಿಗೆ ಕಂಗ್ರಾಟ್ಸ್.