ಜೀ ಕನ್ನಡ ದಲ್ಲಿ ಪ್ರಸಾರ ಆಗುವ ಎಲ್ಲಾ ಧಾರವಾಹಿಗಳನ್ನು ನ್ನ ಆಂಟಿ ಒಬ್ಬರು ತಪ್ಪದೇ ನೋಡ್ತಾ ಇದ್ದರು. ಎರಡು ತಿಂಗಳ ಹಿಂದೆ ಅವರು ಇಹಲೋಕ ತ್ಯಾಜಿಸಿದರು. ಅವರ ವಿಷಯ ಗೊತ್ತಾದಾಗ ಅಯ್ಯೋ ಜೀ ಕನ್ನಡ.. ಅಂದಿದ್ದೇ ಎಲ್ರೂ.. ಆ ವಾಹಿನಿಯನ್ನು ಮಾತ್ರ ಅವರು ನೋಡ್ತಾ ಇದ್ದದ್ದು.. ಮಗಳು- ಅಳಿಯ ಇಬ್ಬರೂ ಸರ್ಜನ್ ಗಳು..ಅವರ ಡಾಕ್ಟ್ರು ಮಗಳು ತಪ್ಪದೇ ನೋಡುವ ಸೀ ರಿಯಲ್ ಸೀತಾರಾಮ. ಅದು ಬಿಟ್ಟು ಮತ್ತಿನ್ಯಾವುದೂ ನೋಡಲ್ಲ. ಹೀಗೆ ಇರ್ತಾರೆ ಅಭಿಮಾನಿಗಳು..
ಇದರಲ್ಲಿ ಪ್ರಸಾರ ಆಗುವ ಅಮೃತಧಾರೆ ಧಾರವಾಹಿಯ ಮುಖ್ಯಪಾತ್ರಧಾರಿ ರಾಜೇಶ್ ಮತ್ತು ಛಾಯಾ ಸಿಂಗ್ ಅಲ್ಲದೇ ಇಡೀ ಟೀಮ್ ಬಗ್ಗೆ ಹೇಳುವಷ್ಟಿಲ್ಲ. ಛಾಯಾ ಸಿಂಗ್ ಅವರ ನಟನೆ ನೋಡ್ತಾ ಇದ್ದರೆ ನನಗೆ ಮಿನುಗುತಾರೆ ಕಲ್ಪನಾ ಅವರ ನೆನಪಾಗುತ್ತದೆ. ಆ ಹಾವಭಾವ, ನಗು, ಪಾತ್ರದಲ್ಲಿ ಇನ್ವಾಲ್ ಆಗುವ ಅಂಶ ಎಲ್ಲವೂ ಅದ್ಭುತ. ಕೆಟ್ಟ ಕನ್ನಡದಲ್ಲಿ ಮಾತನಾಡುವ, ಅ ಕಾರ ಹ ಕಾರ, ಅಲ್ಪಪ್ರಾಣ ಮಹಾಪ್ರಾಣದ ಬಗ್ಗೆ ವ್ಯತ್ಯಾಸ ತಿಳಿಯದವರ ಮಧ್ಯೆ ಸ್ಪಷ್ಟ ಕನ್ನಡದ ಸುಂದರ ನಟಿಯ ಬಗ್ಗೆ ಖುಷಿ ಆಗುತ್ತದೆ..
ವನಿತಾವಾಸು, ಚಿತ್ರಾ ಶೆಣೈ, ಸಿಹಿಕಹಿ ಚಂದ್ರು, ಆನಂದ್ ಅವರ ನಟನೆ ಅದ್ಭುತ. ಆದರೆ ಚಿತ್ರಾ ಅವರ ದ್ದು ತುಂಬಾ ಉಲ್ಲಾಸ ಹಾಗೂ ವಿಶೇಷ.... ಪರ್ಫೆಕ್ಟ್ ಮಾಡ್ರನ್ ಅಮ್ಮ