Posts

Showing posts from December 30, 2012

ಶಂಕರ

Image
ಕೆಲವು ಚಾನೆಲ್ಗಳು ತುಂಬಾ ಫೈಟಿಂಗ್ mood ್ಲಿ ಇರುತ್ತೆ ಹರೆಯದ ಹುಡುಗರ ರೀತಿ. ಆದರೆ ಒಂದಷ್ಟು ಚಾನೆಲ್ಗಳು ತಮ್ಮ ಪಾಡಿಗೆ ತಾವು ಶಾಂತ ರೀತಿಯಲ್ಲಿ ಕೆಲಸ ಮುಂದು ವರೆಸುತ್ತಾ  ಇರುತ್ತದೆ ಮಧ್ಯಮ ವರ್ಗದ ಗೃಹಿಣಿಯಂತೆ ! ಮಾಡುವ ಕೆಲಸ ಒಪ್ಪವಾಗಿ, ಶಾಂತವಾಗಿ ,ತನ್ನ ಪಾಡಿಗೆ ತಾನು ಯಾರ ಸಹಾಯ ಬಯಸದೆ ... ಲಿಸ್ಟ್ ದೊಡ್ಡದು ಆಕೆಯ  ಕೆಲಸಗಳದ್ದು ...
ಅಂತಹ ಮನೋಭಾವ ಕಾಣೋದು ಸಂಸ್ಕಾರ್  ಮತ್ತು ಶಂಕರ  ವಾಹಿನಿಗಳಲ್ಲಿ.ದೇವರ ಬಗ್ಗೆ ನಂಬಿಕೆ ಇರದವರು ಇಲ್ಲ ನಾನು ಸಂಸ್ಕಾರ್ ಲೈಕ್ ಮಾಡಲ್ಲ ಅನ್ನ ಬಹುದು,ಆದರೆ ಶಂಕರ ಚಾನೆಲ್ ಎಲ್ಲ ಇಂತಹ ವಾಹಿನಿಗಳಿ ಗಿಂತ ಭಿನ್ನ. ಇಲ್ಲಿ ದೇವರು, ಆಚರಣೆ, ಸಂಸ್ಕಾರ, ಭವಿಷ್ಯ ಹೀಗೆ ಎಲ್ಲದರ ಜೊತೆಗೆ ಎಲ್ಲ ವರ್ಗದವರು ಆಸಕ್ತಿಯಿಂದ ವೀಕ್ಷಿಸುವ ಕಾರ್ಯಕ್ರಮಗಳನ್ನು ಪ್ರಸಾರಿಸುತ್ತೆ. ಕನ್ನಡದ ಜೊತೆಗೆ ತಮಿಳು ತಿಳಿದಿದ್ರೆ ಈ ಚಾನೆಲ್ ಇನ್ನು ಹೆಚ್ಚು ಇಷ್ಟ ಆಗುತ್ತೆ 
ಭಾಷೆಗಳ ಬಗ್ಗೆ ಹೇಳುವುದಕ್ಕಿಂತ ವೆರೈಟಿ ಬಗ್ಗೆ ಹೇಳೋದಾದ್ರೆ ತುಂಬಾ ಚೆನ್ನಾಗಿರುತ್ತೆ. ಅಂದ್ರೆ ದೈವ ಭಕ್ತರಿಗೆ ಹೆಚ್ಚು ಖುಷಿ  ಕೊಡುವ ಪಕ್ಕಾ  ದೇವರ ಚಾನೆಲ್.ಮತ್ತೊಂದು ಸಂಗತಿ ಅಂದ್ರೆ ಇಲ್ಲಿ ಮುದ್ದಾದ ನಿರೂಪಕಿಯರು ಇದ್ದಾರೆ. ನಿರೂಪಕಿಯರ ಬಗ್ಗೆ ಅಂದ್ರೆ ಮತ್ತಷ್ಟು ಉತ್ತಮ ನಿರೂಪಕಿಯರು ಎಲ್ಲ ವಿಧದಲ್ಲೂ ಪರ್ಫೆಕ್ಟ್ ಆಗಿರುವವರ ಬಗ್ಗೆ ಗಮನ ಕೊಟ್ರೆ .. ಇನ್ನು ಹೆಚ್ಚು ಜನಕ್ಕೆ ಇಷ್ಟ ಆಗುತ್ತೆ.  ಮುಖ್ಯವಾಗಿ ಇಲ್ಲಿ ದೇವರ ಬಗ್ಗೆ ಭಯ ಹುತ್ತಿಸಲ್ಲ.. …

ಉಲ್ಲಾಸ

Image
ಕೆಲವು ಹಾಸ್ಯ ಧಾರಾವಾಹಿಗಳಲ್ಲಿ ಡೈಲಾಗ್ ಗಳು ಮುಖ್ಯವಾದ ಪಾತ್ರ ನಿರ್ವಹಿಸುತ್ತೇ. ಯಾಕೆಂದ್ರೆ ಅನೇಕ ಸಂದರ್ಭಗಳಲ್ಲಿ ಮಾತಿಗಿಂತ ಆಂಗಿಕ ಅಭಿನಯ ಉಲ್ಲಾಸ ನೀಡುತ್ತೆ. ಸಿನಿಮಾಗಳಲ್ಲಿ ಜಗ್ಗೇಶ್ಡೈಲಾಗ್ -ಮ್ಯಾನರಿಸಂ ವಾವ್ ಅನ್ನೋ ಹಾಗೆ ಇರುತ್ತೆ. ನಾನು ಲೈಕ್ ಲೈಕ್ ಮಾಡೋ ಕಲಾವಿದರು ಅವ್ ಜಗ್ಗೇಶ್ :-) 

ಸೀರಿಯಲ್ ಗಳಲ್ಲಿ ಅದರಲ್ಲೂ ಹಾಸ್ಯ ಧಾರಾವಾಹಿಗಳಲ್ಲಿ ಪಂಚಿಂಗ್ ಡೈಲಾಗ್ ಸಕತ್ ಪ್ರಾಮುಖ್ಯತೆ ಪಡೆಯುತ್ತದೆ.ಒಮ್ಮೆ ಹಿರಿಯ ಹಾಸ್ಯ ಸಾಹಿತಿ-ಸಂಭಾಷಣೆಕಾರ ನರಸಿಂಹ ಮೂರ್ತಿ ಅವರು ಒಂದು ಮಾತು ಹೇಳಿದ್ರು, ಸಾಮಾನ್ಯವಾಗಿ  ಧಾರಾವಾಹಿಗಳಲ್ಲಿ ಪಾತ್ರ  ವೀಕ್ಷಕರ ಮನದಲ್ಲಿ ಉಳಿಯೋದು, ಮಾಡಿದ ವ್ಯಕ್ತಿ ಅಲ್ಲ .  ಯಾಕೆ ಹೀಗೆ ಹೇಳಿದ್ರು ಅಂದ್ರೆ ಪಾಪ ಪಾಂಡು ವಿಷಯಕ್ಕೆ ಸಂಬಂಧಿಸಿದಂತೆ  ಮಾತನಾಡುತ್ತಿದ್ದಾಗ ಬದಲಾದ ಕಲಾವಿದನ ಬಗ್ಗೆ ಮಾತು ಬಂತು, ಆಗ ನಿಮಗೆ ಗಾಬರಿ-ತೊಂದರೆ ಆಗಲಿಲ್ವ ಅನ್ನುವ  ಪ್ರಶ್ನೆ ಕೇಳಿದ್ದಕ್ಕೆ ಎಂ ಎಸ್ ಎನ್  ಉತ್ತರಿಸಿದ್ದು ಮೇಲೆ ತಿಳಿಸಿದಂತೆ!ಅದು ಸರಿನೆ ಅನ್ನಿ ಆ ಚಿದಾನಂದ ಎಲ್ಲಿ ಹೋದರೋ ಗೊತ್ತಿಲ್ಲ , ಆದರೆ ಪಾಂಡು -ಪಾಂಡುರಂಗ ಆಗಿ ಗೆಲ್ತಾನೆ ಇದ್ದಾರೆ ಜನಗಳ ಮನವನ್ನು ಜಹಂಗೀರ್.
ಪಂಚಿಂಗ್ ಡೈಲಾಗ್  ವಿಷಯಕ್ಕೆ ಬಂದಾಗ ಹೇಳ ಬೇಕಾದ ಮತ್ತೊಂದು ಧಾರವಾಹಿ ಕಸ್ತೂರಿ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ವಾರ್   ವಾರ್ ಗಿತ್ತಿರು ಧಾರವಾಹಿ ಬಗ್ಗೆ. ಅಲ್ಲಿ ಹಿರಿಯ ಕಲಾವಿದೆ ಗಾಯಿತ್ರಿ ಪ್ರಭಾಕರ್ ಇದ್ದಾರೆ, ಹಾಸ್ಯ ಕಲಾವಿದ ಪ್ರ…

ಎರಡು

Image
ಬಹಳಷ್ಟು  ಜನಕ್ಕೆ ಕೆಲವು  ಸತ್ಯಗಳ ಅರಿವು ಇರೋದೇ ಇಲ್ಲ ಅಂತ ಕಾಣುತ್ತೆ. ಯಾಕೆಂದ್ರೆ ಬೇರೊಬ್ಬರ ಯಶಸ್ಸು ನಮ್ಮಿಂದ ಅನ್ನುವ ಹುಂಬ ನಿರ್ಧಾರಕ್ಕೆ ಬಂದು ಬಿಡ್ತಾರೆ ಅದರಲ್ಲೂ ಟೀವಿ ಪರದೆ ಮೇಲೆ ಕಾಣೋ ಅನೇಕ ಮಂದಿ ತಾವು ವಿಶೇಷ ವ್ಯಕ್ತಿತ್ವ, ತಮ್ಮನ್ನು ಕಂಡ್ರೆ ಜನ ಪ್ರಾಣ ಬಿಡ್ತಾರೆ ಅನ್ನುವ ಒಂದು ಬಗೆಯ ಸುಳ್ಳು ಲೋಕದಲ್ಲಿ ವಿಹರಿಸ್ತಾ ಇರ್ತಾರೆ. ಅಂತಹವರನ್ನು ಕಂಡ್ರೆ ನನಗೆ ಆಗುವ ಆಶ್ಚರ್ಯ ಅಷ್ಟಿಷ್ಟಲ್ಲ.

ನಾನು ಈ ಬ್ಲಾಗ್ ಬರೆಯಲು ಆರಂಭಿಸಿದ ಎರಡೆನೇ ವರ್ಷದಲ್ಲಿ ನನಗೊಂದು ಕಾಮೆಂಟ್ ಬಂದಿತ್ತು. ಅದರಲ್ಲಿ ಇದ್ದಿದ್ದು, ನನ್ನ ಈ ಬ್ಲಾಗ್ ಯಾರೂ ಓದಲ್ಲ ,ಸೊ ಅದನ್ನು ಬೆಳೆಸುವುದಕ್ಕಿಂತ, ಈಗಲೇ ಡಿಲೀಟ್  ಮಾಡಿ ಅಂತ. ಗೊತ್ತಿಲ್ಲ ಯಾರು ಆ ಮಹನೀಯರು ಈ ಮಾತು ಹೇಳಿದ್ದೋ, ಈ ಬ್ಲಾಗ್ ಓದಲ್ಲ ಎಂದು ಹೇಳಿದ ವ್ಯಕ್ತಿಯೇ ಕಾಮೆಂಟ್ ಹಾಕಿದ್ದಾರೆ ಅಂದ್ರೆ ನಿನ್ನ ಬರಹ  ತಪ್ಪದೆ ಓದುತ್ತಾರೆ ಬರಿ ಅಂತ ಹುರುದುಂಬಿಸಿದ್ದು ಅಮ್ಮ-ಅಣ್ಣ ಮತ್ತು ನನ್ನ ಕಲೀಗ್ಸ್ .
ಈ ಬ್ಲಾಗ್ ಕೇವಲ ನನ್ನ ಖುಷಿಗೆ ಬರಿತಾ ಇಲ್ಲ, ಮುಖ್ಯವಾಗಿ ನಾನು ನನ್ನ ವಯುಕ್ತಿಕ ಸಂಗತಿಗಳ ಬಗ್ಗೆ  ನಾನು  ಇಲ್ಲ. ಮಾಧ್ಯಮದ ಕಾರ್ಯಕ್ರಮಗಳ  ನಾನು ವೀಕ್ಷಿಸಿದ್ದು, ನನಗೆ ಇಷ್ಟವಾದ ಸಂಗತಿ ಇವೆಲ್ಲ ಬರೀತಾ ಹೋದಂತೆ ನನಗೆ ನನ್ನದೇ ಆದ ಓದುಗ ಬಳಗ ಬೆಳೆಯಿತು. ವಿಶೇಷ ಅಂದ್ರೆ ಸಾಕಷ್ಟು ಜನ ನಾನು ಬರೆಯಲೇ ಬೇಕೆಂಬ ಒಂದು ಬಗೆ ವಾತಾವರಣ ಕಲ್ಪಿಸಿದರು. ಓದುಗರಿಗಾಗಿ ಬರೆದೆ, ಇಲ್ಲಿ ನಾನು ತಿಳಿಸುವ  …

ಲಿಸ್ಟ್

Image
ಹೊಸವರ್ಷದ ಹಾರ್ದಿಕ ಶುಭಾಶಯಗಳು..ನಿಮ್ಮ ಬದುಕಲ್ಲಿ ಸದಾ ಹರುಷ ಜೊತೆಗಿರಲಿ.. ಕಷ್ಟಗಳನ್ನು ಎದುರಿಸುವ ಛಲ ನಿಮ್ಮದಾಗಿರಲಿ ..


ಆದಷ್ಟು ಒಳ್ಳೆಯ ನ್ಯೂಸ್ ಗಳಿಗೆ ಆದ್ಯತೆ ನೀಡಿ ಪಾ .. ಮಾಧ್ಯಮಗಳು ಅಂದ್ರೆ  ವೀಕ್ಷಕರು ಧೈರ್ಯದಿಂದ ಸಮಸ್ಯೆ ಹೇಳಿಕೊಳ್ಳುವಂತೆ ನಿಮ್ಮ ವರ್ತನೆ  ಇರಲಿ.. ಟಿ ಆರ್ ಪಿ ಮುಖ್ಯ .. ಹಾಗಂತ ಇಲ್ಲದ್ದು ಸಲ್ಲದ್ದು ಹೇಳಿ ಮನಸ್ಸಿನ ಸ್ವಾಸ್ಥ್ಯ ಕೆಡಿಸಿದರೆ ಸಾಮಾನ್ಯ ಮುಗ್ಧ ವೀಕ್ಷಕರು ಮುಂದೆ ನಿಮ್ಮ ಚಾನೆಲ್ ಗಳ ಕಡೆ ನಿಗಾ ಇದಲ್ಲ ಗೊತ್ತಿರಲಿ.. ವೀಕ್ಷಕರಲ್ಲಿ ಯೂತ್ ಗ್ರೂಪ್ ಹೆಚ್ಚು ನೋಡೋದು ಹಾಡುಗಳು, ಸಿನಿಮಾ, ಸ್ಪೋರ್ಟ್ಸ್ ...! ಆದರೆ ಜೊತೆಗೆ ಹೆಣ್ಣುಮಕ್ಕಳು ಆಂಕರ್ ಹೆಣ್ಣುಮಕ್ಕಳ ಕಡೆಗೂ ಗಮನ ಕೊಡ್ತಾರೆ.. ಅದರಲ್ಲೂ ಸ್ಟೈಲಿಶ್, ಸ್ಮೈಲಿಶ್, ಹೀಗೆ ಹಲವಾರು ಕಾರಣಗಳಿಗೆ ಅವರ ಮತ.


ನಾನು ಸುವರ್ಣ ನ್ಯೂಸ್  ಸಹನಾ ಭಟ್ ಬಗ್ಗೆ ಹೇಳಿದಾಗ ಆಕೆಯ ಬಗ್ಗೆ ಓಕೆ ಅಂದ ಹೆಣ್ಣುಮಕ್ಕಳು ಭಾವನಗೂ ಮಾರ್ಕ್ಸ್ ಕೊಟ್ಟಿದ್ದಾರೆ.  ಕ್ಯೂಟ್ ಕ್ಯೂಟ್  :-) ಶ್ವೇತ ನಗು ಅವರಿಗೆ ಇಷ್ಟ ಆಗಿದೆ,ಸೊ ಜಾಸ್ತಿ ನಗ  ಬ್ಯಾಡಮ್ಮ  ಇದೆ ವಿಷಯಕ್ಕೆ ಮುನಿದು ಬಿಟ್ಟಾರು ;-) ಜನಶ್ರಿ ಸೌಮ್ಯ ಕಂಡ್ರೆ ತುಂಬಾ ಇಷ್ಟವಂತೆ, ವೀಣಾಗೂ  ಮಾರ್ಕ್ಸ್ ಬಿದ್ದಿದೆ.ಟೀವಿ ನೈನ್ ಶೀತಲ್ ,ಉಷಾ, ಹೇಮಾ..ಗುಳಿ ಗಲ್ಲದ ಚಲುವೆ (ಸಾರಿ ಹೆಸರು ಗೊತ್ತಿಲ್ಲ ) ,ಪಬ್ಲಿಕ್ ಟೀವಿಯಲ್ಲಿ ದಿವ್ಯ..ಇನ್ನು ಲಿಸ್ಟ್ ಇದೆ.. ಮುಂದೆ ಹೇಳ್ತೀನಿ ಅಲ್ಲಿವರೆಗೂ ಎಲ್ಲರಿಗೂ ಹ್ಯಾಪಿ ನ್ಯೂ ಇ…

ಮಿಸ್ಸಿಂಗ್..

Image
ಕನ್ನಡ ಕಿರುತೆರೆ ಲೋಕದಲ್ಲಿ ಅತ್ಯಂತ ಜನಪ್ರಿಯ ವಾಹಿನಿಗಳು  ಯಾವುದು ಅಂತ ಈಗ ಕೇಳಿದ್ರೆ ಎಲ್ಲವೂ ಅನ್ನೋ ಉತ್ರ ಸಿಗುತ್ತೆ. ಯಾಕೆ ಅಂದ್ರೆ ಎಲ್ಲರೂ ಎಲ್ಲವನ್ನೂ  ವೀಕ್ಷಿಸುತ್ತಾರೆ.
ಆದರೆ ಹೆಣ್ಣುಮಕ್ಕಳು ತಪ್ಪದೆ ವೀಕ್ಷಿಸುವ ವಾಹಿನಿಗಳು ಎಲ್ಲವೂ ಆದರೂ ಸಹ ಅವರ  ಮೆಚ್ಚಿನ ಧಾರಾವಾಹಿಗಳು ಪ್ರಸಾರ ಆಗೋದು ಉದಯ, ಈ ಟೀವಿ ಕನ್ನಡ, ಸುವರ್ಣ, ಜೀ ಕನ್ನಡ, ಕಸ್ತೂರಿ,ಚಂದನ ವಾಹಿನಿಗಳಲ್ಲಿ .
ಉದಯ ವಾಹಿನಿಯು  ಏಕಾಂಗಿಯಾಗಿ ರಾಜ್ಯಭಾರ ಮಾಡುತ್ತಿದ್ದ ಕಾಲದಲ್ಲಿ ಅದಕ್ಕೆ ಎದುರಾಳಿ ಆಗಿ ಬಂದ  ವಾಹಿನಿ ಈ ಟೀವಿ ಕನ್ನಡ.ಅದನ್ನು  ಬಲಶಾಲಿ ಮಾಡಿದ್ದು ಅದರಲ್ಲಿ ಪ್ರಸಾರ ಆಗುತ್ತಿದ್ದ ಕಾರ್ಯಕ್ರಮಗಳು.ಅಂತಹ ಕಾರ್ಯಕ್ರಮಗಳನ್ನು ವೀಕ್ಷಕರ ಮನಸ್ಸಿಗೆ ತಲಪುವಂತೆ ಮಾಡಿದ್ದು ಅನೇಕ ಮಂದಿ. ಈ ಟೀವಿ -ಮುಖ್ಯವಾಗಿಎಸ್ .ಪಿ. ಬಾಲ ಸುಬ್ರಮಣ್ಯಮ್ ,ಟಿ.ಎನ್ . ಸೀತಾರಾಮ್, ಬಾಲ ಕೃಷ್ಣ ಕಾಕತ್ಕರ್, ಸಿಹಿಕಹಿ ಚಂದ್ರು,ರವಿ ಬೆಳಗೆರೆ...!ಮತ್ತೆ ಆ ಕಂಪನಿಯಲ್ಲಿ ಇದ್ದ ಅನೇಕಾನೇಕ ಮಂದಿ. ಹಾಡಿನ ರಿಯಾಲಿಟಿ ಷೋಗೆ ಹೊಸ ಆಯಾಮ ದೊರಕಿಸಿ ಕೊಟ್ಟ ಎಸ್ಪಿಬಿ  ಈ ಕಾರ್ಯಕ್ರಮದಲ್ಲಿ ತಾವು ಭಾಗಿ ಆಗ ಬೇಕು ಎಂದು ನಾನು ಕಂಡಂತೆ ಅನೇಕಾನೇಕ ಉದಯೋನ್ಮುಖ  ಕಲಾವಿದರು ಕಾಯುತ್ತಿದ್ದರು .ಚಂದನ ವಾಹಿನಿಯ ಥಟ್ ಅಂತ ಹೇಳಿ ಮತ್ತು, ಮಧುರ ಮಧುರ ವೀ.. ಕಾರ್ಯಕ್ರಮದ ರೀತಿ ಎಸ್  ಪಿ ಬಿ ಅವರ ಎದೆ ತುಂಬಿ ಹಾಡಿದೆನು ಹೆಚ್ಚು ಕಾಲ ಉಳಿದ,ಜನರ ಮೆಚ್ಚಿನ ಕಾರ್ಯಕ್ರಮ. ಆದ್ರೆ ಈಗ ಅದು ಮಿಸ್ಸಿಂಗ್..
ಕ್ರೈ…