ಉಲ್ಲಾಸ



ಕೆಲವು ಹಾಸ್ಯ ಧಾರಾವಾಹಿಗಳಲ್ಲಿ ಡೈಲಾಗ್ ಗಳು ಮುಖ್ಯವಾದ ಪಾತ್ರ ನಿರ್ವಹಿಸುತ್ತೇ. ಯಾಕೆಂದ್ರೆ ಅನೇಕ ಸಂದರ್ಭಗಳಲ್ಲಿ ಮಾತಿಗಿಂತ ಆಂಗಿಕ ಅಭಿನಯ ಉಲ್ಲಾಸ ನೀಡುತ್ತೆ. ಸಿನಿಮಾಗಳಲ್ಲಿ ಜಗ್ಗೇಶ್ ಡೈಲಾಗ್ -ಮ್ಯಾನರಿಸಂ ವಾವ್ ಅನ್ನೋ ಹಾಗೆ ಇರುತ್ತೆ. ನಾನು ಲೈಕ್ ಲೈಕ್ ಮಾಡೋ ಕಲಾವಿದರು ಅವ್ ಜಗ್ಗೇಶ್ :-) 

ಸೀರಿಯಲ್ ಗಳಲ್ಲಿ ಅದರಲ್ಲೂ ಹಾಸ್ಯ ಧಾರಾವಾಹಿಗಳಲ್ಲಿ ಪಂಚಿಂಗ್ ಡೈಲಾಗ್ ಸಕತ್ ಪ್ರಾಮುಖ್ಯತೆ ಪಡೆಯುತ್ತದೆ.ಒಮ್ಮೆ ಹಿರಿಯ ಹಾಸ್ಯ ಸಾಹಿತಿ-ಸಂಭಾಷಣೆಕಾರ ನರಸಿಂಹ ಮೂರ್ತಿ ಅವರು ಒಂದು ಮಾತು ಹೇಳಿದ್ರು, ಸಾಮಾನ್ಯವಾಗಿ  ಧಾರಾವಾಹಿಗಳಲ್ಲಿ ಪಾತ್ರ  ವೀಕ್ಷಕರ ಮನದಲ್ಲಿ ಉಳಿಯೋದು, ಮಾಡಿದ ವ್ಯಕ್ತಿ ಅಲ್ಲ . 
ಯಾಕೆ ಹೀಗೆ ಹೇಳಿದ್ರು ಅಂದ್ರೆ ಪಾಪ ಪಾಂಡು ವಿಷಯಕ್ಕೆ ಸಂಬಂಧಿಸಿದಂತೆ  ಮಾತನಾಡುತ್ತಿದ್ದಾಗ ಬದಲಾದ ಕಲಾವಿದನ ಬಗ್ಗೆ ಮಾತು ಬಂತು, ಆಗ ನಿಮಗೆ ಗಾಬರಿ-ತೊಂದರೆ ಆಗಲಿಲ್ವ ಅನ್ನುವ  ಪ್ರಶ್ನೆ ಕೇಳಿದ್ದಕ್ಕೆ ಎಂ ಎಸ್ ಎನ್  ಉತ್ತರಿಸಿದ್ದು ಮೇಲೆ ತಿಳಿಸಿದಂತೆ!ಅದು ಸರಿನೆ ಅನ್ನಿ ಆ ಚಿದಾನಂದ ಎಲ್ಲಿ ಹೋದರೋ ಗೊತ್ತಿಲ್ಲ , ಆದರೆ ಪಾಂಡು -ಪಾಂಡುರಂಗ ಆಗಿ ಗೆಲ್ತಾನೆ ಇದ್ದಾರೆ ಜನಗಳ ಮನವನ್ನು ಜಹಂಗೀರ್.

ಪಂಚಿಂಗ್ ಡೈಲಾಗ್  ವಿಷಯಕ್ಕೆ ಬಂದಾಗ ಹೇಳ ಬೇಕಾದ ಮತ್ತೊಂದು ಧಾರವಾಹಿ ಕಸ್ತೂರಿ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ವಾರ್   ವಾರ್ ಗಿತ್ತಿರು ಧಾರವಾಹಿ ಬಗ್ಗೆ. ಅಲ್ಲಿ ಹಿರಿಯ ಕಲಾವಿದೆ ಗಾಯಿತ್ರಿ ಪ್ರಭಾಕರ್ ಇದ್ದಾರೆ, ಹಾಸ್ಯ ಕಲಾವಿದ ಪ್ರತಿಭಾವಂತ ನಟ ವಿಶ್ವ ಸಹ ಇದಾರೆ. ವಿಶ್ವ  ಕನ್ನಡ ವೀಕ್ಷಕರಿಗೆ ಎಂದಿಗೂ ಬೋರ್ ಹೊಡಿಸದ ನಟ. ಡೈಲಾಗ್ ಗಳಿಗೆ  ಜೀವ ತುಂಬೋ ಪ್ರತಿಭೆ.
ಇತ್ತೀಚಿಗೆ ನಾನು ವೀಕ್ಷಿಸಿದ ಒಂದು ಎಪಿಸೋಡ್ ನಲ್ಲಿ  ಗಾಯಿತ್ರಿ ಪ್ರಭಾಕರ್  ವಿಶ್ವ ಅವರಿಗೆ ಚಿರಂಜೀವಿ ಆಗು ಅಂತ ಹಾರೈಸುತ್ತಾರೆ, ತಕ್ಷಣ ವಿಶ್ವ ರಜನಿಕಾಂತ್ ಆಗೋದು ಯಾವ ಅಂತ ಪ್ರಶ್ನಿಸುತ್ತಾರೆ. ಕಚಗುಳಿ ಇಡುವ ಸಂಭಾಷಣೆಗಳು.. ಕೀಪ್ ಇಟ್ ಅಪ್ ಬರೆದವರೆ -ನಟಿಸಿದವರೆ  :-) 

ಉದಯ ವಾಹಿನಿಯಲ್ಲಿ ಮತ್ತೊಮ್ಮೆ ಕುರಿ ಎಂಟ್ರಿ ಆಗಿದೆ.ಈಗ ಅದರ ಹೆಸರು ಕುರಿ ಬಾಂಡ್ . ಮೊದಲು ಈ ಕಾರ್ಯಕ್ರಮ ಉದಯ ವಾಹಿನಿಯಲ್ಲಿ ಪ್ರಸಾರ ಆಗ್ತಾ ಇತ್ತು. ಬಳಿಕ ಕಸ್ತೂರಿ ,ಈಗ  ಮತ್ತೆ ಉದಯ :-) .ಅದೇ ಕಣ್ರೀ ಸಾಮಾನ್ಯರನ್ನು ಯಾಮಾರಿಸೋದು,ಕುರಿ ಮಾಡೋದು ಬಳಿಕ ಬಹುಮಾನ ನೀಡೋದು .ಸ್ಮೈಲ್ ಸಾಗರ್ ಗ್ರೂಪ್ ಕಥೆ.ಈ ರೀತಿ ಯಾಮಾರೋ ಆಟ ಪೋಗೋ ಚಾನೆಲ್ ನಲ್ಲಿ ಪ್ರಸಾರ ಆಗುತ್ತೆ. ಅದೇ ಇಂಗ್ಲಿಶ್ ಆಟವನ್ನು ಕನ್ನಡದಲ್ಲಿ ಅಂದ್ರೆ ರಂಗಣ್ಣನ ಪಬ್ಲಿಕ್ ಟೀವಿ ಯಲ್ಲಿ ಚುರುಮುರಿ ಅನ್ನೋ ಹೆಸರಲ್ಲಿ ಪ್ರಸಾರಿಸುತ್ತಾರೆ.ಯಾವ ಟೆನ್ಶನ್ ಇಲ್ಲದೆ ಮನೆಮಂದಿಯಲ್ಲ ನಿರ್ಭಯವಾಗಿ ವೀಕ್ಷಿಸ ಬಲ್ಲ ಕಾರ್ಯಕ್ರಮ ಇದು :-)

No comments: